‘ನಾನು ಸತ್ತುಹೋದೆ ಎಂಬ ರೀತಿಯಲ್ಲಿ ಸಂತಾಪ ಸೂಚಿಸುತ್ತಿದ್ದೀರಲ್ಲ’; ಫ್ಯಾನ್ಸ್ ಬಗ್ಗೆ ಅಕ್ಷಯ್ ಗರಂ

ಅಕ್ಷಯ್ ಕುಮಾರ್ ಅವರ ಸಿನಿಮಾಗಳಿಗೆ ಬಂಡವಾಳ ಹೂಡಿದ ನಿರ್ಮಾಪಕರು ಸಂಕಷ್ಟದಲ್ಲಿ ಇದ್ದಾರೆ. ಆದರೆ, ಅಕ್ಷಯ್ ಸಂಭಾವನೆ ಕಡಿಮೆ ಮಾಡಿಕೊಳ್ಳಲು ಸಿದ್ಧರಿಲ್ಲ. ‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾ ಮೂಲಕ ಅಕ್ಷಯ್ ಕುಮಾರ್ ದೊಡ್ಡ ಫ್ಲಾಪ್ ಕಂಡರು. ‘ಸರ್ಫಿರಾ’ ಕೂಡ ಕಳಪೆ ಗಳಿಕೆ ಮಾಡಿತು.

‘ನಾನು ಸತ್ತುಹೋದೆ ಎಂಬ ರೀತಿಯಲ್ಲಿ ಸಂತಾಪ ಸೂಚಿಸುತ್ತಿದ್ದೀರಲ್ಲ’; ಫ್ಯಾನ್ಸ್ ಬಗ್ಗೆ ಅಕ್ಷಯ್ ಗರಂ
ಅಕ್ಷಯ್
Follow us
ರಾಜೇಶ್ ದುಗ್ಗುಮನೆ
|

Updated on: Aug 03, 2024 | 10:23 AM

ಕೊವಿಡ್ ಕಾಣಿಸಿಕೊಂಡ ಬಳಿಕ ಅಕ್ಷಯ್ ಕುಮಾರ್ ನಟನೆಯ 15 ಸಿನಿಮಾಗಳು ರಿಲೀಸ್ ಆಗಿವೆ. ಇದರಲ್ಲಿ ಯಶಸ್ಸು ಕಂಡಿದ್ದು 2-3 ಸಿನಿಮಾಗಳು ಮಾತ್ರ. ಅವರ ಅಭಿಮಾನಿಗಳು ಅಕ್ಷಯ್ ಕುಮಾರ್ ದೊಡ್ಡ ಕಂಬ್ಯಾಕ್ ಮಾಡಲಿ ಎಂದು ಬಯಸುತ್ತಿದ್ದಾರೆ. ಅಕ್ಷಯ್ ಸಿನಿಮಾ ಸೋತಿದ್ದಕ್ಕೆ ಸಂತಾಪ ಸೂಚಿಸುತ್ತಿದ್ದಾರೆ. ಇದಕ್ಕೆ ಅವರು ತಿರುಗೇಟು ಕೊಟ್ಟಿದ್ದಾರೆ. ಅವರನ್ನು ಟೀಕಿಸಿದವರು ಮುಟ್ಟಿ ನೋಡಿಕೊಳ್ಳುವಂತೆ ಅಕ್ಷಯ್ ಕುಮಾರ್ ಅವರು ಉತ್ತರ ನೀಡಿದ್ದಾರೆ.

ಅಕ್ಷಯ್ ಕುಮಾರ್ ಅವರ ಸಿನಿಮಾಗಳಿಗೆ ಬಂಡವಾಳ ಹೂಡಿದ ನಿರ್ಮಾಪಕರು ಸಂಕಷ್ಟದಲ್ಲಿ ಇದ್ದಾರೆ. ಆದರೆ, ಅಕ್ಷಯ್ ಸಂಭಾವನೆ ಕಡಿಮೆ ಮಾಡಿಕೊಳ್ಳಲು ಸಿದ್ಧರಿಲ್ಲ. ‘ಏನೇ ಆದರೂ ಒಳ್ಳೆಯದಕ್ಕೆ ಆಗೋದು. ನಾನು ಹೆಚ್ಚು ಆಲೋಚಿಸುವುದಿಲ್ಲ, ಒತ್ತಡ ತೆಗೆದುಕೊಳ್ಳುವುದಿಲ್ಲ. ನಾಲ್ಕೈದು ಸಿನಿಮಾ ಉತ್ತಮವಾಗಿ ಕೆಲಸ ಮಾಡಿಲ್ಲ ಎಂದ ಮಾತ್ರಕ್ಕೆ ನಾನು ಸತ್ತೇ ಹೋದ ಎಂಬ ರೀತಿಯಲ್ಲಿ ಸಂತಾಪದ ಸಂದೇಶ ಕಳಿಸುತ್ತಾರೆ’ ಎಂದಿದ್ದಾರೆ ಅಕ್ಷಯ್ ಕುಮಾರ್.

‘ಜನರು ನಾನು ಕಂಬ್ಯಾಕ್ ಮಾಡಲಿ ಎಂದು ಕಾಯುತ್ತಿದ್ದಾರೆ. ನಾನು ಎಲ್ಲಿಗೆ ಹೋಗಿದ್ದೇನೆ ಎಂದು ಕಂಬ್ಯಾಕ್ ಮಾಡಬೇಕು? ನಾನು ಯಾವಾಗಲೂ ಇಲ್ಲೇ ಇದ್ದೇನೆ. ನಿರಂತರವಾಗಿ ಕೆಲಸ ಮಾಡುತ್ತಿದ್ದೇನೆ. ನೀವು ಏನೇ ಹೇಳಿದರೂ ನನ್ನ ಕೆಲಸ ಮುಂದುವರಿಸುತ್ತೇನೆ. ನಾನು ಕಷ್ಟಪಟ್ಟು ಹಣ ಸಂಪಾದಿಸುತ್ತೇನೆಯೇ ಹೊರತು ಬೇಡಿಕೊಂಡಲ್ಲ. ನನ್ನ ಜೀವ ಇರೋವರೆಗೆ ನಾನು ಕೆಲಸ ಮಾಡುತ್ತೇನೆ’ ಎಂದಿದ್ದಾರೆ ಅಕ್ಷಯ್ ಕುಮಾರ್.

ಇದನ್ನೂ ಓದಿ: ‘ವಿಧಿ ಬದಲಿಸಲು ಸಾಧ್ಯವಿಲ್ಲ’; ಸಿನಿಮಾ ಸೋಲಿನ ಬಗ್ಗೆ ಅಕ್ಷಯ್ ಕುಮಾರ್ ಬೇಸರದ ಮಾತು

‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾ ಮೂಲಕ ಅಕ್ಷಯ್ ಕುಮಾರ್ ದೊಡ್ಡ ಫ್ಲಾಪ್ ಕಂಡರು. ‘ಸರ್ಫಿರಾ’ ಕೂಡ ಕಳಪೆ ಗಳಿಕೆ ಮಾಡಿತು. ಅವರ ನಟನೆಯ ‘ಸೆಲ್ಫಿ’, ‘ಮಿಷನ್ ರಾಣಿಗಂಜ್’ ಮೊದಲಾದ ಸಿನಿಮಾಗಳ ಕಥೆಯೂ ಇದೆ. ‘ಖೇಲ್ ಖೇಲ್ ಮೇ’ ಚಿತ್ರ ಆಗಸ್ಟ್ 15ರಂದು ಬಿಡುಗಡೆ ಆಗಲಿದೆ. ಇದನ್ನು ಹೊರತುಪಡಿಸಿ ಇನ್ನೂ ಎರಡು ಸಿನಿಮಾಗಳು ಈ ವರ್ಷ ರಿಲೀಸ್ ಆಗಲಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!