ನಂದಲ್ಲಾರೀ, ಅಕ್ಷಯ್ ಕುಮಾರ್ ತಪ್ಪು; ‘ಹೇರಾ ಫೇರಿ 3’ ವಿಳಂಬಕ್ಕೆ ಕಾರಣ ಕೊಟ್ಟ ಪರೇಶ್
'ಹೇರಾ ಫೇರಿ 3' ಚಿತ್ರದ ವಿಳಂಬಕ್ಕೆ ತಾನು ಕಾರಣವಲ್ಲ ಎಂದು ಪರೇಶ್ ರಾವಲ್ ಸ್ಪಷ್ಟಪಡಿಸಿದ್ದಾರೆ. ಅಕ್ಷಯ್ ಕುಮಾರ್ ಜೊತೆಗಿನ ಹಿಂದಿನ ವಿವಾದವನ್ನು ತಳ್ಳಿಹಾಕಿದ್ದು, ಬಾಬುರಾವ್ ಪಾತ್ರವಿಲ್ಲದೆ ಚಿತ್ರವು ದುರಂತವಾಗಬಹುದು ಎಂದಿದ್ದಾರೆ. ಚಿತ್ರ ಸಿದ್ಧವಾಗಲಿದೆ ಎಂದು ಭರವಸೆ ನೀಡಿದ ಅವರು, ಫ್ಯಾನ್ಸ್ ಕಾತರದಿಂದ ಕಾಯುತ್ತಿರುವ ಈ ಬಹುನಿರೀಕ್ಷಿತ ಚಿತ್ರಕ್ಕೆ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ.

‘ಹೇರಾ ಫೇರಿ 3’ ಚಿತ್ರ ಘೋಷಣೆ ಆಗಿ ಬಹಳ ಸಮಯ ಕಳೆದಿದೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್, ಸುನೀಲ್ ಶೆಟ್ಟಿ ಹಾಗೂ ಪರೇಶ್ ರಾವಲ್ ನಟಿಸುತ್ತಿದ್ದಾರೆ. ಆದರೆ, ಮಧ್ಯದಲ್ಲಿ ಪರೇಶ್ ಅವರು ಸಿನಿಮಾದಿಂದ ಹೊರ ನಡೆದಿದ್ದರು. ಈಗ ಅವರು ಚಿತ್ರಕ್ಕೆ ಮರಳಿದ್ದಾರೆ. ಆದಾಗ್ಯೂ ಸಿನಿಮಾ ಸೆಟ್ಟೇರುತ್ತಿಲ್ಲ. ಇದಕ್ಕೆ ಪರೇಶ್ (Paresh Rawal) ಅವರೇ ಕಾರಣ ಎನ್ನಲಾಗಿತ್ತು. ಇದಕ್ಕೆ ಪರೇಶ್ ಉತ್ತರ ನೀಡಿದ್ದಾರೆ. ಪ್ರಕರಣದಲ್ಲಿ ಎಳೆದು ತರಬೇಡಿ ಎಂದು ಅವರು ಹೇಳಿದ್ದಾರೆ.
‘ಹೇರಾ ಫೇರಿ 3’ ಸೆಟ್ಟೇರೋದು ಅನುಮಾನ ಎಂಬ ಮಾತುಗಳು ಕೇಳಿ ಬಂದಿವೆ. ಇದಕ್ಕೆ ಉತ್ತರಿಸಿದ ಅವರು,‘ಖಂಡಿತವಾಗಿಯೂ ಹೇರಾ ಫೇರಿ 3 ಸಿನಿಮಾ ಸಿದ್ಧವಾಗುತ್ತದೆ. ಆ ಸಿನಿಮಾ ವಿಳಂಬ ಆಗುವುದಕ್ಕೆ ನಾನು ಕಾರಣ ಅಲ್ಲ’ ಎಂದು ಅವರು ಹೇಳಿದ್ದಾರೆ. ಈ ಮೂಲಕ ಎಲ್ಲಾ ವದಂತಿಗೆ ಸ್ಪಷ್ಟನೆ ಕೊಟ್ಟೊದ್ದಾರೆ.
‘ಅಕ್ಷಯ್ ಕುಮಾರ್ ಹಾಗೂ ಸಿನಿಮಾ ತಂಡದ ಮಧ್ಯೆ ಸಮಸ್ಯೆ ಆಗಿದೆ. ಸಿನಿಮಾಗೆ ಯಾವುದೇ ಕಾನೂನು ತೊಡಕು ಇಲ್ಲ. ಅಕ್ಷಯ್ ಕುಮಾರ್ ನನ್ನ ಮೇಲೆ 25 ಕೋಟಿ ರೂಪಾಯಿ ಕೇಸ್ ಹಾಕಿದ್ದರು ಎಂಬುದನ್ನು ಹೆಚ್ಚು ಉತ್ಪ್ರೇಕ್ಷಿಸಲಾಯಿತು’ ಎಂದು ಪರೇಶ್ ರಾವಲ್ ಹೇಳಿದ್ದಾರೆ.
Paresh Rawal : Hera Pheri 3 will definitely be made. There is a technical issue or disagreement between the producer and the other actor; not with me. If that gets resolved, we will sign the film.#PareshRawal#HeraPheri3 pic.twitter.com/nmkmMoa76U
— All The Names Are Mine ! (@SNMHH_) January 27, 2026
‘ಒಂದೊಮ್ಮೆ ಬಾಬುರಾವ್ ಪಾತ್ರ ಇಲ್ಲದೆ ಅವರು ಸಿನಿಮಾ ಮಾಡಲು ಮುಂದಾದರು ಎಂದಿಟ್ಟುಕೊಳ್ಳಿ, ಖಂಡಿತವಾಗಿಯೂ ಅದು ದುರಂತ ಆಗಲಿದೆ’ ಎಂದು ಭವಿಷ್ಯ ನುಡಿದಿದ್ದಾರೆ. ಇದು ಕೇವಲ ಪರೇಶ್ ರಾವಲ್ ಅವರ ಮಾತು ಮಾತ್ರವಲ್ಲ. ಬಹುತೇಕರು ಇದೇ ರೀತಿಯ ಅಭಿಪ್ರಾಯ ಹೊರಹಾಕಿದ್ದಾರೆ.
ಇದನ್ನೂ ಓದಿ: ‘ಪರೇಶ್ ರಾವಲ್ ಇಲ್ಲದೆಯೂ ಹೇರಾ ಫೇರಿ ಆಗುತ್ತೆ’; ಧಿಮಾಕಿನಿಂದ ಉತ್ತರಿಸಿದ ಅಕ್ಷಯ್ ಕುಮಾರ್
‘ರಾಮ್ಜಿ ರಾವ್ ಸ್ಪೀಕಿಂಗ್’ ಹೆಸರಿನ 1989ರ ಮಲಯಾಳಂ ಚಿತ್ರವನ್ನು ‘ಹೇರಾ ಫೇರಿ’ ಆಧರಿಸಿದೆ. ‘ಹೇರಾ ಫೇರಿ’, ‘ಫಿರ್ ಹೇರಾ ಫೇರಿ’ ಸಿನಿಮಾಗಳು ರಿಲೀಸ್ ಆಗಿ ಗಮನ ಸೆಳೆದವು. ‘ಹೇರಾ ಫೇರಿ 3’ ಚಿತ್ರಕ್ಕಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




