
ಜಾನ್ ಅಬ್ರಹಾಂ (John Abraham) ಎಂದಾಕ್ಷಣ ನೆನಪಿಗೆ ಬರೋದು ಕಟ್ಟುಮಸ್ತಾದ ದೇಹ, ಸಿಕ್ಸ್ ಪ್ಯಾಕ್. ಅವರು ಆ್ಯಕ್ಷನ್ ಸಿನಿಮಾಗಳನ್ನು ಮಾಡಿ ಫೇಮಸ್ ಆಗಿದ್ದಾರೆ. ಜಾನ್ ಅಬ್ರಹಾಂ ಅವರು ಫಿಟ್ನೆಸ್ಗೆ ಹೆಸರು ವಾಸಿ. ಏನೇ ಮರೆತರೂ ಅವರು ಜಿಮ್ನಲ್ಲಿ ವರ್ಕೌಟ್ ಮಾಡೋದನ್ನು ಮರೆಯಲ್ಲ. ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ನಟನ ಫಿಟ್ನೆಸ್ಗೆ ಮೆಚ್ಚುಗೆ ಸೂಚಿಸುತ್ತಾರೆ. ಅದೇ ರೀತಿ ಸಿಹಿಯನ್ನು ಮುಟ್ಟಲ್ಲ. ಅವರು ತಮ್ಮಿಷ್ಟದ ಸಿಹಿ ತಿನ್ನದೇ ಅದೆಷ್ಟೋ ವರ್ಷಗಳು ಕಳೆದಿವೆ. ಈಗ ಅವರ ಹೊಸ ಲುಕ್ ಅನೇಕರಿಗೆ ಭಯ ಮೂಡಿಸಿದೆ.
ಜಾನ್ ಅಬ್ರಹಾಂ ಅವರಿಗೆ ಈಗ 53 ವರ್ಷ. ಈ ವಯಸ್ಸಲ್ಲೂ ಅವರು ಸಾಕಷ್ಟು ಫಿಟ್ ಆಗಿದ್ದಾರೆ. ಅವರು ಸಿಹಿ ಪದಾರ್ಥ ತಿನ್ನದೆ 25 ವರ್ಷಗಳೇ ಕಳೆದು ಹೋಗಿವೆ ಎಂದರೆ ನೀವು ನಂಬೇಲೇಬೇಕು. ಅವರು ಫಿಟ್ನೆಸ್ಗೆ ಹಾಗೂ ಆರೋಗ್ಯಕ್ಕೆ ಕೊಡುವ ಪ್ರಾಮುಖ್ಯತೆ ಇದು ಸಿಹಿ ಪದಾರ್ಥ ಎಂದರೆ ಎಲ್ಲರೂ ತಿನ್ನಲು ಮುಂದೆ ಬರುತ್ತಾರೆ. ಹಬ್ಬ-ಹರಿದಿನಗಳಲ್ಲಿ ಸಿಹಿ ತಿನ್ನುತ್ತಾರೆ. ಕೆಲವು ಸೆಲೆಬ್ರಿಟಿಗಳು ಸಿಹಿಯಿಂದ ದೂರ ಇರುತ್ತಾರೆ. ಜಾನ್ ಅಬ್ರಹಾಂ ಮಾತ್ರ ಈ ರೀತಿ ಅಲ್ಲ. ಈಗಲೂ ಫಿಟ್ನೆಸ್ ಬಗ್ಗೆ ಗಮನ ನೀಡುವ ಅವರು, ಇದಕ್ಕೆ ತಕ್ಕಂತೆ ಆಹಾರ ಕ್ರಮ ಫಾಲೋ ಮಾಡುತ್ತಾರೆ.
ನಟಿ ಆಲಿ ಖಾನ್ ಅವರು ಜಾನ್ ಅಬ್ರಹಾಂ ಅವರ ಬಗ್ಗೆ, ಅವರ ಆಹಾರ ಕ್ರಮದ ಬಗ್ಗೆ ಮಾತನಾಡಿದ್ದರು. ‘ಜಾನ್ ಅಬ್ರಹಾಂ ಅವರು ಈ ಕಾಲದಲ್ಲೂ ಸಖತ್ ಫಿಟ್ ಆಗಿದ್ದಾರೆ. ಅದಕ್ಕೆ ಕಾರಣ ಅವರು ಕಳೆದ 25 ವರ್ಷಗಳಿಂದ ಸಿಹಿ ಪದಾರ್ಥ ಸೇವನೆ ಮಾಡೇ ಇಲ್ಲ’ ಎಂದಿದ್ದರು. ಇದನ್ನು ಕೇಳಿ ಅನೇಕರು ಅಚ್ಚರಿ ಹೊರಹಾಕಿದ್ದರು.
ಸೆಲೆಬ್ರಿಟಿಗಳು ಸಿಹಿ ಪದಾರ್ಥಗಳಿಂದ ದೂರ ಇರಲು ಪ್ರಯತ್ನಿಸುತ್ತಾರೆ. ಇದರಿಂದ ದೇಹದ ತೂಕ ನಿಯಂತ್ರಿಸಬಹುದು. ಡಯಾಬಿಟಿಸ್ ನಿಂದ ದೂರ ಆಗಬಹುದು. ಅಲ್ಲದೆ ಕೊಲೆಸ್ಟ್ರಾಲ್ ಲೆವೆಲನ್ ನಿಯಂತ್ರಣದಲ್ಲಿ ಇಡಬಹುದು. ಕೊಲೆಸ್ಟ್ರಾಲ್ ಇಲ್ಲ ಎಂದರೆ ಹೃದಯದ ಸಮಸ್ಯೆ ಇಲ್ಲ. ಹೊಟ್ಟೆಯ ಆರೋಗ್ಯವೂ ಉತ್ತಮವಾಗಿರುತ್ತದೆ ಎಂದು ವೈದ್ಯರು ಹೇಳುತ್ತಾರೆ.
#JohnAbraham surprises fans as he ditches his beard and debuts a clean-shaven look.#MissMalini pic.twitter.com/5fnPpw43ZQ
— MissMalini (@MissMalini) January 29, 2026
ಜಾನ್ ಅಬ್ರಹಾಂ ಅವರು ಇಷ್ಟೊಂದು ಒಳ್ಳೆಯ ಬಾಡಿ ಮಾಡಿದ್ದಾರೆ ಎಂದ ಮಾತ್ರಕ್ಕೆ ಅವರು ನಾನ್ವೆಜ್ ತಿನ್ನುತ್ತಾರೆ ಎಂದು ಎಲ್ಲರೂ ಅಂದುಕೊಳ್ಳಬಹುದು. ಆದರೆ, ಅದು ಸುಳ್ಳು. ಅವರು ಸಸ್ಯಾಹಾರಿ. ಸಸ್ಯಾಹಾರ ಸೇವನೆಯಿಂದ ಇಷ್ಟು ಒಳ್ಳೆಯ ಬಾಡಿ ಮಾಡಿದ್ದಾರೆ. ಇದನ್ನು ಕೂಡ ಅವರು ಈ ಮೊದಲು ಹೇಳಿದ್ದರು.
ಇದನ್ನೂ ಓದಿ: ಗುರುತು ಸಿಗದಂತೆ ಬದಲಾದ ಜಾನ್ ಅಬ್ರಾಹಂ; ಆರೋಗ್ಯದ ಬಗ್ಗೆ ಮೂಡಿದೆ ಅನುಮಾನ
ಜಾನ್ ಅಬ್ರಹಾಂ ಅವರು ಹೀರೋ ಆಗಿ ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿಲ್ಲ. ಅವರು ಬಾಲಿವುಡ್ನಲ್ಲಿ ವಿಲನ್ ಆಗಿಯೂ ಹೆಸರು ಮಾಡಿದ್ದಾರೆ. ಅವರ ಜನಪ್ರಿಯತೆ ಹೆಚ್ಚುತ್ತಿದೆ. ಅವರು ಇತ್ತೀಚೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಆರೋಗ್ಯದ ಬಗ್ಗೆ ಅಚ್ಚರಿ ಮೂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.