ಅಕ್ಷಯ್ ಕುಮಾರ್ ಯಶಸ್ಸಿನ ಗುಟ್ಟು ಬಹಳ ಸರಳ: ನೀವೂ ಪಾಲಿಸಿ
Akshay Kumar films: ಅಕ್ಷಯ್ ಕುಮಾರ್ ಅನಾಯಾಸವಾಗಿ ಐದಾರು ಸಿನಿಮಾಗಳನ್ನು ಪ್ರತಿ ವರ್ಷ ತೆರೆಗೆ ತರುತ್ತಿರುತ್ತಾರೆ. ಸಿನಿಮಾಗಳು ಮಾತ್ರವೇ ಅಲ್ಲದೆ, ಖಾಸಗಿ ಕಾರ್ಯಕ್ರಮಗಳು ಇದೀಗ ಟಿವಿ ರಿಯಾಲಿಟಿ ಶೋ ಅನ್ನೂ ಸಹ ನಡೆಸಿಕೊಡುತ್ತಾರೆ. ಅಷ್ಟಕ್ಕೂ ಸಾಮಾನ್ಯ ಕರಾಟೆ ಶಿಕ್ಷಕ ಹಾಗೂ ಬಾಣಸಿಗ ಆಗಿದ್ದ ಅಕ್ಷಯ್ ಕುಮಾರ್ ಅವರಿಗೆ ಇಷ್ಟು ದೊಡ್ಡ ಯಶಸ್ಸು ದೊರೆತಿದ್ದು ಹೇಗೆ? ಅವರೇ ಆ ಗುಟ್ಟನ್ನು ರಟ್ಟು ಮಾಡಿದ್ದಾರೆ.

ಅಕ್ಷಯ್ ಕುಮಾರ್ (Akshay Kumar), ಭಾರತದ ಅತ್ಯಂತ ಬ್ಯುಸಿ ಸೂಪರ್ ಸ್ಟಾರ್. ಭಾರತದ ಇತರೆ ಸ್ಟಾರ್ ನಟರು ವರ್ಷಕ್ಕೆ ಒಂದು ಸಿನಿಮಾ ನೀಡಲು ಏದುಸಿರು ಬಿಡುತ್ತಿರುವಾಗ ಅಕ್ಷಯ್ ಕುಮಾರ್ ಅನಾಯಾಸವಾಗಿ ಐದಾರು ಸಿನಿಮಾಗಳನ್ನು ಪ್ರತಿ ವರ್ಷ ತೆರೆಗೆ ತರುತ್ತಿರುತ್ತಾರೆ. ಸಿನಿಮಾಗಳು ಮಾತ್ರವೇ ಅಲ್ಲದೆ, ಖಾಸಗಿ ಕಾರ್ಯಕ್ರಮಗಳು ಇದೀಗ ಟಿವಿ ರಿಯಾಲಿಟಿ ಶೋ ಅನ್ನೂ ಸಹ ನಡೆಸಿಕೊಡುತ್ತಾರೆ. ಅಷ್ಟಕ್ಕೂ ಸಾಮಾನ್ಯ ಕರಾಟೆ ಶಿಕ್ಷಕ ಹಾಗೂ ಬಾಣಸಿಗ ಆಗಿದ್ದ ಅಕ್ಷಯ್ ಕುಮಾರ್ ಅವರಿಗೆ ಇಷ್ಟು ದೊಡ್ಡ ಯಶಸ್ಸು ದೊರೆತಿದ್ದು ಹೇಗೆ? ಅವರೇ ಆ ಗುಟ್ಟನ್ನು ರಟ್ಟು ಮಾಡಿದ್ದಾರೆ.
ಅಕ್ಷಯ್ ಕುಮಾರ್, ಒಬ್ಬ ಸಮರ ಕಲೆ ಕಲಿಸುವ ಶಿಕ್ಷಕರಾಗಿದ್ದರು, ಅದಕ್ಕೂ ಮುಂಚೆ ಅವರೊಬ್ಬ ಬಾಣಸಿಗ ಆಗಿದ್ದರು. ಆದರೆ ಅವರ ಸತತ ಪರಿಶ್ರಮ ಅವರನ್ನು ಇಂದು ಭಾರತದ ಅತ್ಯಂತ ಬ್ಯುಸಿ ಸ್ಟಾರ್ ಮಾತ್ರವಲ್ಲ, ಭಾರತದ ಅತ್ಯಂತ ಶ್ರೀಮಂತ ನಟರಲ್ಲಿ ಒಬ್ಬರನ್ನಾಗಿ ಮಾಡಿದೆ. ಇದೀಗ ಅಕ್ಷಯ್ ಅವರು ‘ಇಂಡಿಯಾಸ್ ವೀಳ್ ಆಫ್ ಫಾರ್ಚ್ಯೂನ್’ ಟಿವಿ ರಿಯಾಲಿಟಿ ಶೋ ನಡೆಸಿಕೊಡುತ್ತಿದ್ದು, ಶೋನ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಆಯೋಜಿಸಲಾಗಿದ್ದ ಗೋಷ್ಠಿಯಲ್ಲಿ ತಮ್ಮ ಯಶಸ್ಸಿನ ಹಿಂದಿನ ಸರಳ ಸೂತ್ರದ ಬಗ್ಗೆ ಮಾತನಾಡಿದ್ದಾರೆ.
ಅಕ್ಷಯ್ ಹೇಳಿರುವಂತೆ, ಅವರ ಯಶಸ್ಸಿಗೆ ಮುಖ್ಯ ಕಾರಣ ಅವರ ಶಿಸ್ತು ಮತ್ತು ಸಮಯ ಪಾಲನೆ. ಅಕ್ಷಯ್ ಹೇಳಿರುವಂತೆ ಅವರು ಈ ವರೆಗೆ ಸಮಯ ಪಾಲನೆ ತಪ್ಪಿಸಿಲ್ಲವಂತೆ. ಇಂದೂ ಅಷ್ಟೆ ಆರಂಭದ ದಿನಗಳಲ್ಲೂ ಅಷ್ಟೆ. ನಿಮಗೆ ಅವಕಾಶಗಳು ಬೇಕಿದ್ದರೆ ಸಮಯಕ್ಕೆ ಸರಿಯಾಗಿ ನೀವು ಆ ಸ್ಥಳದಲ್ಲಿ ಇರಬೇಕು. ಇಲ್ಲವಾದರೆ ಆ ಅವಕಾಶ ಬೇರೆಯವರ ಪಾಲಾಗುತ್ತದೆ. ನಾನು ಸಮಯ ಪಾಲನೆ ಮೂಲಕ ಸರಿಯಾದ ಸಮಯದಲ್ಲಿ ಸರಿಯಾದ ಸ್ಥಳದಲ್ಲಿ ಇದ್ದೆ ಹಾಗಾಗಿ ನಾನು ಯಾವ ಅವಕಾಶಗಳನ್ನೂ ಸಹ ಮಿಸ್ ಮಾಡಿಕೊಳ್ಳಲಿಲ್ಲ’ ಎಂದಿದ್ದಾರೆ ಅಕ್ಷಯ್ ಕುಮಾರ್.
ಇದನ್ನೂ ಓದಿ:ತಮ್ಮ ಹೆಸರು ಬದಲಿಸಿದ್ದೇಕೆ ಅಕ್ಷಯ್ ಕುಮಾರ್? ಕಾರಣ ವಿವರಿಸಿದ ನಟ
‘ಯಾವುದೋ ಒಂದು ಸಂದರ್ಭ, ಒಂದು ಘಳಿಗೆ ನನ್ನ ಜೀವನವನ್ನು ಬದಲಾಯಿಸಲಿಲ್ಲ ಬದಲಿಗೆ ನನ್ನ ಯಶಸ್ಸು ಸತತ ಪ್ರಯತ್ನ, ಸತತ ಶಿಸ್ತು, ಸಮಯ ಪಾಲನೆ, ಸೂಕ್ತ ಆಯ್ಕೆಗಳಿಂದ ಬಂದಿದೆ. ಇದೆಲ್ಲದಕ್ಕಿಂತಲೂ ನಾನು ಆರಾಮದ ಬದಲಿಗೆ ಶ್ರಮವನ್ನು ಆಯ್ಕೆ ಮಾಡಿಕೊಂಡೆ ಅದಕ್ಕಾಗಿ ನನಗೆ ಈ ಯಶಸ್ಸು ದೊರಕಿದೆ. ನನಗೆ ಸಿಕ್ಕಿರುವ ಪ್ರತಿ ಅವಕಾಶವೂ ನನ್ನ ಸಮಯ ಪಾಲನೆ, ಶ್ರಮ ಮತ್ತು ನನ್ನ ಕಲೆಗೆ, ಪ್ರತಿಭೆಗೆ ನಾನು ನ್ಯಾಯ ಒದಗಿಸಿದ್ದರಿಂದಲೇ ದೊರೆತಿದೆ’ ಎಂದಿದ್ದಾರೆ ಅಕ್ಷಯ್ ಕುಮಾರ್.
2025 ರಲ್ಲಿ ಅಕ್ಷಯ್ ಕುಮಾರ್ ನಟಿಸಿರುವ ಐದು ಸಿನಿಮಾಗಳು ಬಿಡುಗಡೆ ಆಗಿದ್ದವು. 2026ರ ಮೊದಲ ತಿಂಗಳಲ್ಲೇ ಅವರ ಕೈಯಲ್ಲಿ ನಾಲ್ಕು ಸಿನಿಮಾಗಳಿವೆ. ಅವುಗಳಲ್ಲಿ ಎರಡು ಸಿನಿಮಾ ಚಿತ್ರೀಕರಣ ಬಹುತೇಕ ಮುಗಿದಿದೆ. ಇದೀಗ ಹೊಸ ರಿಯಾಲಿಟಿ ಶೋ ಅನ್ನು ಸಹ ನಡೆಸಿಕೊಡಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




