ಎಷ್ಟು ಅದ್ದೂರಿಯಾಗಿದೆ ‘ವಾರ್ 2’ ಸಿನಿಮಾ? ಇಲ್ಲಿದೆ ಫಸ್ಟ್ ಹಾಫ್ ವಿಮರ್ಶೆ
ಭಾರಿ ನಿರೀಕ್ಷೆ ಮೂಡಿಸಿದ್ದ ‘ವಾರ್ 2’ ಸಿನಿಮಾ ಇಂದು (ಆಗಸ್ಟ್ 14) ಬಿಡುಗಡೆ ಆಗಿದೆ. ಜೂನಿಯರ್ ಎನ್‌ಟಿಆರ್, ಹೃತಿಕ್ ರೋಷನ್, ಕಿಯಾರಾ ಅಡ್ವಾಣಿ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಯಾನ್ ಮುಖರ್ಜಿ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದೆ. ‘ಯಶ್ ರಾಜ್ ಫಿಲ್ಮ್ಸ್’ ಸಂಸ್ಥೆಯು ‘ವಾರ್ 2’ ಚಿತ್ರವನ್ನು ನಿರ್ಮಾಣ ಮಾಡಿದೆ.
ಟಾಲಿವುಡ್ ನಟ ಜೂನಿಯರ್ ಎನ್‌ಟಿಆರ್ ಅವರು ‘ವಾರ್ 2’ (War 2) ಸಿನಿಮಾ ಮೂಲಕ ಬಾಲಿವುಡ್ಗೆ ಕಾಲಿಟ್ಟಿದ್ದಾರೆ. ಅವರ ಜೊತೆ ಹೃತಿಕ್ ರೋಷನ್ (Hrithik Roshan) ಅವರು ತೆರೆಹಂಚಿಕೊಂಡಿದ್ದಾರೆ. ನಾಯಕಿಯಾಗಿ ಕಿಯಾರಾ ಅಡ್ವಾಣಿ ಅವರು ಅಭಿನಯಿಸಿದ್ದಾರೆ. ಈ ಸಿನಿಮಾದ ಪ್ರತಿ ದೃಶ್ಯದಲ್ಲೂ ಅದ್ದೂರಿತನ ಕಾಣಿಸುತ್ತಿದೆ. ಇಂದು (ಆ.14) ವಿಶ್ವಾದ್ಯಂತ ಬಿಡುಗಡೆ ಆಗಿರುವ ‘ವಾರ್ 2’ ಸಿನಿಮಾ ಎಲ್ಲ ಕಡೆಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಸಿನಿಮಾದ ಫಸ್ಟ್ ಹಾಫ್ (War 2 First Half Review) ಹೇಗಿದೆ ಎಂಬುದರ ವಿವರ ಇಲ್ಲಿದೆ..
ಜಪಾನ್‌ನಲ್ಲಿ ಶುರು ಆಗುತ್ತದೆ ವಾರ್ 2 ಸಿನಿಮಾ ಕಥೆ. ರಗಡ್ ಗೆಟಪ್‌ನಲ್ಲಿ ಹೃತಿಕ್ ರೋಷನ್ ಎಂಟ್ರಿ ನೀಡುತ್ತಾರೆ. ಆರಂಭದಲ್ಲೇ ಆ್ಯಕ್ಷನ್ ಇದೆ.
ವಿಂಗ್ ಕಮಾಂಡರ್ ಪಾತ್ರದಲ್ಲಿ ಕಿಯಾರಾ ಅಡ್ವಾಣಿ ಕಾಣಿಸಿಕೊಂಡಿದ್ದಾರೆ. ಜೂ. ಎನ್‌ಟಿಆರ್ ಪಾತ್ರದ ಎಂಟ್ರಿಗೆ ಸ್ವಲ್ಪ ಕಾಯಬೇಕು.
ಅಬ್ಬರದ ಆ್ಯಕ್ಷನ್ ಮೂಲಕವೇ ಪ್ರೇಕ್ಷಕರ ಎದುರು ಬರುತ್ತಾರೆ ಜೂನಿಯರ್ ಎನ್‌ಟಿಆರ್. ಎಂಥ ಅಪಾಯವನ್ನೂ ಎದುರಿಸುವ ಸೈನಿಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಜೂನಿಯರ್ ಎನ್‌ಟಿಆರ್ ಮತ್ತು ಹೃತಿಕ್ ರೋಷನ್ ಮುಖಾಮುಖಿ ದೃಶ್ಯಗಳು ಪ್ರೇಕ್ಷಕರಿಗೆ ಥ್ರಿಲ್ ನೀಡುತ್ತವೆ. ಇಬ್ಬರ ನಡುವೆ ಸಖತ್ ಪೈಪೋಟಿ ಇದೆ.
ಸ್ಪೇನ್‌ನಲ್ಲಿನ ಕಾರ್ ಚೇಸಿಂಗ್ ದೃಶ್ಯ ಸಿಕ್ಕಾಪಟ್ಟೆ ರೋಚಕವಾಗಿದೆ. ತುಂಬಾ ಅದ್ದೂರಿಯಾಗಿ ಈ ಆ್ಯಕ್ಷನ್ ಸೀನ್ ಮೂಡಿಬಂದಿದೆ.
ಫ್ಯಾನ್ಸ್ ಕಾತರದಿಂದ ಕಾಯುವ ‘ಜನಾಬ್-ಏ-ಆಲಿ’ ಹಾಡು ಫಸ್ಟ್ ಹಾಫ್‌ನಲ್ಲೇ ಬರುತ್ತದೆ. ಡ್ಯಾನ್ಸ್ ಪ್ರಿಯರ ಕಣ್ಣಿಗೆ ಇದು ಹಬ್ಬ ನೀಡುತ್ತದೆ.
ವಿಮಾನ ಹೈಜಾಕ್ ದೃಶ್ಯ ಮೈನವಿರೇಳಿಸುವಂತಿದೆ. ಆ್ಯಕ್ಷನ್ ಬಯಸುವ ಪ್ರೇಕ್ಷಕರು ಎಂಜಾಯ್ ಮಾಡಲು ಬೇಕಾದ ಎಲ್ಲ ಅಂಶಗಳು ಮೊದಲಾರ್ಧದಲ್ಲಿ ಇವೆ.
ಫಸ್ಟ್ ಹಾಫ್‌ನ ಕೆಲವು ದೃಶ್ಯಗಳಲ್ಲಿ ಮಾತ್ರ ಕಿಯಾರಾ ಅಡ್ವಾಣಿ ಅವರು ಕಾಣಿಸಿಕೊಂಡಿದ್ದಾರೆ. ಆ್ಯಕ್ಷನ್ ಮೂಲಕವೂ ಅವರು ಮಿಂಚಿದ್ದಾರೆ.
ಮೊದಲಾರ್ಧದಲ್ಲಿ ಒಂದಷ್ಟು ಟ್ವಿಸ್ಟ್‌ಗಳು ಇವೆ. ಹೃತಿಕ್ ಮತ್ತು ಜೂನಿಯರ್ ಎನ್‌ಟಿಆರ್ ಪಾತ್ರಗಳಿಗೆ ನೆಗೆಟಿವ್ ಮತ್ತು ಪಾಸಿಟಿವ್ ಶೇಡ್ ಇದೆ.
ವೈಆರ್‌ಎಫ್ ಸ್ಪೈ ಯೂನಿವರ್ಸ್‌ಗೆ ಹೊಸದಾಗಿ ಬಂದಿರುವ ಜೂನಿಯರ್ ಎನ್‌ಟಿಆರ್ ಪಾತ್ರದ ಹಿನ್ನೆಲೆ ತಿಳಿಯಲು ಸೆಕೆಂಡ್ ಹಾಫ್‌ಗೆ ಕಾಯಬೇಕು.