AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರೇನ್ ದುರಂತದಲ್ಲಿ ಕಾಜಲ್ ಜಸ್ಟ್ ಮಿಸ್; ಘಟನೆ ಬಳಿಕ ದೈವ ಭಕ್ತೆಯಾದ ನಟಿ

2020ರಲ್ಲಿ ನಡೆದ ‘ಇಂಡಿಯನ್ 2’ ಸಿನಿಮಾ ಶೂಟಿಂಗ್‌ನ ಭೀಕರ ಕ್ರೇನ್ ದುರಂತವನ್ನು ನಟಿ ಕಾಜಲ್ ಅಗರ್ವಾಲ್ ಮತ್ತೆ ನೆನಪಿಸಿಕೊಂಡಿದ್ದಾರೆ. 100 ಅಡಿ ಎತ್ತರದ ಕ್ರೇನ್ ತಮ್ಮ ಪಕ್ಕದಲ್ಲೇ ಬಿದ್ದಾಗ ಸಾವಿನಿಂದ ಪಾರಾದ ಕ್ಷಣವನ್ನು ಅವರು ವಿವರಿಸಿದ್ದಾರೆ. ದೈವಿಕ ಶಕ್ತಿಯೇ ಅಂದು ನನ್ನನ್ನು ಉಳಿಸಿತು ಎಂದಿದ್ದಾರೆ.

ಕ್ರೇನ್ ದುರಂತದಲ್ಲಿ ಕಾಜಲ್ ಜಸ್ಟ್ ಮಿಸ್; ಘಟನೆ ಬಳಿಕ ದೈವ ಭಕ್ತೆಯಾದ ನಟಿ
ಕಾಜಲ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Nov 13, 2026 | 8:01 AM

Share

ಕಮಲ್ ಹಾಸನ್ ನಟನೆಯ ‘ಇಂಡಿಯನ್ 2’ ಸಿನಿಮಾದ ಶೂಟಿಂಗ್ ವೇಳೆ ನಡೆದ ಭೀಕರ ದುರಂತವನ್ನು ನಟಿ ಕಾಜಲ್ ಅಗರ್ವಾಲ್ ಮತ್ತೆ ನೆನಪಿಸಿಕೊಂಡಿದ್ದಾರೆ. 2020ರ ಫೆಬ್ರವರಿಯಲ್ಲಿ ಚೆನ್ನೈನ ಫಿಲ್ಮ್ ಸಿಟಿಯಲ್ಲಿ ಬೃಹತ್ ಕ್ರೇನ್ ಕುಸಿದು ಮೂವರು ಮೃತಪಟ್ಟಿದ್ದರು. ಆ ಕರಾಳ ರಾತ್ರಿಯಲ್ಲಿ ತಾವು ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾದ ಭಯಾನಕ ಅನುಭವವನ್ನು ಕಾಜಲ್ ಈಗ ಬಿಚ್ಚಿಟ್ಟಿದ್ದಾರೆ. ದೈವಿಕ ಶಕ್ತಿಯೇ ಅಂದು ತಮ್ಮ ಪ್ರಾಣ ಉಳಿಸಿತು ಎಂದು ಅವರು ಭಾವುಕರಾಗಿದ್ದಾರೆ.

ಸಿಂಗಾಪುರದ ಮೇಡಮ್ ಟುಸ್ಸಾಡ್ಸ್‌ನಲ್ಲಿ ತಮ್ಮ ಮೇಣದ ಪ್ರತಿಮೆ ಅನಾವರಣಗೊಂಡ ಕೆಲವೇ ದಿನಗಳಲ್ಲಿ ಈ ದುರಂತ ನಡೆದಿತ್ತು. ಆ ದಿನ 80 ವರ್ಷದ ವೃದ್ಧೆಯ ಪಾತ್ರಕ್ಕಾಗಿ ಕಾಜಲ್ ಪ್ರಾಸ್ತೆಟಿಕ್ ಮೇಕಪ್ ಹಾಕಿಕೊಂಡಿದ್ದರು. ಆಕ್ಷನ್ ದೃಶ್ಯದ ಚಿತ್ರೀಕರಣದ ವೇಳೆ ಎಲ್ಲರೂ ಮಾನಿಟರ್ ಸುತ್ತ ಕುಳಿತಿದ್ದರು. ಏಕಾಏಕಿ ಗದ್ದಲ ಶುರುವಾದಾಗ ಎಲ್ಲರಂತೆ ಕಾಜಲ್ ಕೂಡ ಓಡಲು ಶುರು ಮಾಡಿದರು. ಆಗ ಟೇಬಲ್‌ಗೆ ತಾಗಿ ಕೆಳಗೆ ಬಿದ್ದ ಅವರಿಗೆ ಸಾವು ಕಣ್ಣಮುಂದೆಯೇ ಕಂಡಿತ್ತು.

ಹಿಂದಿರುಗಿ ನೋಡಿದಾಗ 100 ಅಡಿ ಎತ್ತರದ ಬೃಹತ್ ಕ್ರೇನ್ ನೇರವಾಗಿ ತಮ್ಮತ್ತಲೇ ಬೀಳುತ್ತಿರುವುದನ್ನು ಕಾಜಲ್ ಕಂಡರು. ಆ ಕ್ಷಣದಲ್ಲಿ ಅವರಿಗೆ ಏನು ಮಾಡಬೇಕೆಂದೇ ತೋಚದೆ ದಿಗ್ಭ್ರಮೆಯಾಗಿ ನಿಂತಿದ್ದರು. ಆಗ ಯಾರೋ ಕೈ ಹಿಡಿದು ತಮ್ಮನ್ನು ಪಕ್ಕಕ್ಕೆ ಎಳೆದಂತೆ ಅವರಿಗೆ ಭಾಸವಾಯಿತು. ಕ್ರೇನ್ ಅವರ ಪಕ್ಕದಲ್ಲೇ ಬಿದ್ದಿದ್ದು ಕಾಜಲ್ ಅಕ್ಷರಶಃ ನಡುಗಿ ಹೋಗಿದ್ದರು. ಆ ಘಟನೆಯ ನಂತರ ತಾವು ಶ್ರೀಕೃಷ್ಣನ ಪರಮ ಭಕ್ತೆಯಾದೆ ಎಂದು ಅವರು ಹೇಳಿಕೊಂಡಿದ್ದಾರೆ.

ಈ ದುರಂತದಲ್ಲಿ ಚಿತ್ರತಂಡದ ಕೃಷ್ಣ, ಚಂದ್ರನ್ ಮತ್ತು ಮಧು ಎಂಬ ಮೂವರು ಪ್ರಾಣ ಕಳೆದುಕೊಂಡಿದ್ದರು. ನಟ ಕಮಲ್ ಹಾಸನ್ ಕೂಡ ಕೆಲವೇ ಮೀಟರ್ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದರು. ಘಟನೆಯ ಕೆಲ ತಿಂಗಳ ಬಳಿಕ ನಿರ್ದೇಶಕ ಶಂಕರ್, ಕಮಲ್ ಹಾಸನ್ ಮತ್ತು ಲೈಕಾ ಪ್ರೊಡಕ್ಷನ್ಸ್ ಮೃತರ ಕುಟುಂಬಗಳಿಗೆ ತಲಾ ಒಂದು ಕೋಟಿ ರೂಪಾಯಿ ಪರಿಹಾರ ನೀಡಿದ್ದರು. ಗಾಯಾಳುಗಳ ಚಿಕಿತ್ಸೆಗೂ ಚಿತ್ರತಂಡ ನೆರವಾಗಿತ್ತು.

ಇದನ್ನೂ ಓದಿ: ‘ರಾಮಾಯಣ’ದಲ್ಲಿ ಕಾಜಲ್ ಅಗರ್ವಾಲ್ ಪಾತ್ರದ ಮೇಕಪ್ ವಸ್ತ್ರಾಲಂಕಾರ ನೋಡಿ: ವಿಡಿಯೋ

ಕೊರೊನಾ ಲಾಕ್‌ಡೌನ್‌ಗೂ ಮುನ್ನ ನಡೆದ ಈ ಘಟನೆ ಇಡೀ ಚಿತ್ರರಂಗವನ್ನೇ ಬೆಚ್ಚಿಬೀಳಿಸಿತ್ತು. ಆ ಕರಾಳ ದಿನವನ್ನು ನೆನೆದರೆ ಈಗಲೂ ಮೈ ಜುಮ್ ಎನ್ನುತ್ತದೆ ಎಂದು ಕಾಜಲ್ ಸಂದರ್ಶನದಲ್ಲಿ ತಿಳಿಸಿದ್ದಾರೆ. ನಾನು ಇನ್ನೂ ಹೇಗೆ ಬದುಕಿದ್ದೇನೆ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿತ್ತು ಎಂದಿದ್ದಾರೆ. ಅಂದಹಾಗೆ ಹಲವು ವಿಘ್ನಗಳ ಬಳಿಕ 2024ರಲ್ಲಿ ತೆರೆಕಂಡ ‘ಇಂಡಿಯನ್ 2’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೀನಾಯವಾಗಿ ಸೋಲು ಕಂಡಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
 ಶ್ರೀಲಕ್ಷ್ಮೀ ಎಚ್
ಶ್ರೀಲಕ್ಷ್ಮೀ ಎಚ್

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ಇಂದು ಈ ರಾಶಿಯವರು ಅತಿಯಾಗಿ ನಂಬಿದವರಿಂದ ಮೋಸ ಹೋಗುವ ಸಾಧ್ಯತೆ
ಇಂದು ಈ ರಾಶಿಯವರು ಅತಿಯಾಗಿ ನಂಬಿದವರಿಂದ ಮೋಸ ಹೋಗುವ ಸಾಧ್ಯತೆ
ಡಾ.ರಮ್ಯಾ ಬರೆದಿರುವ ‘ಚಲಿಸುವ ಬಂಡೆ’ ಪುಸ್ತಕದಲ್ಲಿ ಯಾವೆಲ್ಲಾ ವಿಚಾರಗಳಿವೆ?
ಡಾ.ರಮ್ಯಾ ಬರೆದಿರುವ ‘ಚಲಿಸುವ ಬಂಡೆ’ ಪುಸ್ತಕದಲ್ಲಿ ಯಾವೆಲ್ಲಾ ವಿಚಾರಗಳಿವೆ?
ಲೀಲಾವತಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ವಿನೋದ್ ರಾಜ್ ಬೇಸರ
ಲೀಲಾವತಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ವಿನೋದ್ ರಾಜ್ ಬೇಸರ
ಸರ್ಕಾರಿ ಶಾಲಾ ಮಕ್ಕಳಿಗೆ ಇನ್ಮುಂದೆ ಹೊಸ ವಿನ್ಯಾಸದ ಸಮವಸ್ತ್ರ?
ಸರ್ಕಾರಿ ಶಾಲಾ ಮಕ್ಕಳಿಗೆ ಇನ್ಮುಂದೆ ಹೊಸ ವಿನ್ಯಾಸದ ಸಮವಸ್ತ್ರ?
ಬೆಂಗಳೂರಿನ ಮನಮೋಹಕ ತಾಣ ನಲ್ಲಿಗುಡ್ಡೆ ಅಭಿವೃದ್ಧಿಗೆ ಸರ್ಕಾರದ ಒತ್ತು
ಬೆಂಗಳೂರಿನ ಮನಮೋಹಕ ತಾಣ ನಲ್ಲಿಗುಡ್ಡೆ ಅಭಿವೃದ್ಧಿಗೆ ಸರ್ಕಾರದ ಒತ್ತು
‘ಹವಾಮಾನ ವರದಿ’ ಸಿನಿಮಾ ಬಗ್ಗೆ ನಾಯಕಿ ನಿರೀಕ್ಷಾ ರಾವ್ ಮಾತು: ವಿಡಿಯೋ
‘ಹವಾಮಾನ ವರದಿ’ ಸಿನಿಮಾ ಬಗ್ಗೆ ನಾಯಕಿ ನಿರೀಕ್ಷಾ ರಾವ್ ಮಾತು: ವಿಡಿಯೋ
'ಮೈಲೇಜ್ ಕುಸಿತಕ್ಕೆ ಎಥೆನಾಲ್ ಅಲ್ಲ, ಗುಂಡಿ ಬಿದ್ದ ರಸ್ತೆಗಳೇ ಕಾರಣ': ಅಶೋಕ್
'ಮೈಲೇಜ್ ಕುಸಿತಕ್ಕೆ ಎಥೆನಾಲ್ ಅಲ್ಲ, ಗುಂಡಿ ಬಿದ್ದ ರಸ್ತೆಗಳೇ ಕಾರಣ': ಅಶೋಕ್
ವಾಯುವ್ಯ ಕರ್ನಾಟಕ ಸಾರಿಗೆ ಹೆಸರು ಬದಲಾವಣೆಗೆ ಸರ್ಕಾರ ಆದೇಶ
ವಾಯುವ್ಯ ಕರ್ನಾಟಕ ಸಾರಿಗೆ ಹೆಸರು ಬದಲಾವಣೆಗೆ ಸರ್ಕಾರ ಆದೇಶ
‘ವರ್ಷ 70 ಆದರೂ ನಾನು ತಾಯಿ ರೀತಿ ಕಾಣಲ್ಲ’; ಅನು ಪ್ರಭಾಕರ್
‘ವರ್ಷ 70 ಆದರೂ ನಾನು ತಾಯಿ ರೀತಿ ಕಾಣಲ್ಲ’; ಅನು ಪ್ರಭಾಕರ್
ಯಶಸ್ ವಿರುದ್ಧ ತಿರುಗಿ ಬಿದ್ದ ಆಸಿಯಾ: ಸ್ನೇಹ ಅಂತ್ಯ, ಪೈಪೋಟಿ ಶುರು
ಯಶಸ್ ವಿರುದ್ಧ ತಿರುಗಿ ಬಿದ್ದ ಆಸಿಯಾ: ಸ್ನೇಹ ಅಂತ್ಯ, ಪೈಪೋಟಿ ಶುರು