AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾರುಖ್ ಸ್ಟೈಲ್​ನ ಅನುಕರಣೆ ಮಾಡಿದ ನಟಿ ಕಾಜೋಲ್; ಎಷ್ಟು ಕ್ಯೂಟ್ ನೋಡಿ

ಶಾರುಖ್ ಖಾನ್ ಅವರು ಮೆಟ್ ಗಾಲಾದಲ್ಲಿ ಸಬ್ಯಸಾಚಿ ಉಡುಪಿನಲ್ಲಿ ಮಿಂಚಿದ್ದು, ಆ ಲುಕ್ ಅನ್ನು ಕಾಜೋಲ್ ಅವರು ಅನುಕರಿಸಿದ್ದಾರೆ. ಇಬ್ಬರ ಫೋಟೋಗಳನ್ನು ಕಾಜೋಲ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದು ಇಬ್ಬರ ನಡುವಿನ ಬಲವಾದ ಬಾಂಧವ್ಯವನ್ನು ತೋರಿಸುತ್ತದೆ. ಶಾರುಖ್ ಅವರನ್ನು ವಿದೇಶಿ ಮಾಧ್ಯಮ ಪ್ರತಿನಿಧಿಗಳು ಗುರುತಿಸದೆ ಇದ್ದ ವಿಡಿಯೋ ಕೂಡ ವೈರಲ್ ಆಗಿದೆ.

ಶಾರುಖ್ ಸ್ಟೈಲ್​ನ ಅನುಕರಣೆ ಮಾಡಿದ ನಟಿ ಕಾಜೋಲ್; ಎಷ್ಟು ಕ್ಯೂಟ್ ನೋಡಿ
ಕಾಜೋಲ್-ಶಾರುಖ್
ರಾಜೇಶ್ ದುಗ್ಗುಮನೆ
|

Updated on:May 07, 2025 | 11:57 AM

Share

ನಟ ಶಾರುಖ್ ಖಾನ್ (Shah Rukh Khan) ಅವರು ಇದೇ ಮೊದಲ ಬಾರಿಗೆ ‘ಮೆಟ್ ಗಾಲಾ’ದಲ್ಲಿ ಭಾಗಿ ಆದರು. ಈ ವೇಳೆ ಸಬ್ಯಸಾಚಿ ತಯಾರಿಸಿದ ಉಡುಗೆಯಲ್ಲಿ ಅವರು ಮಿಂಚಿದ್ದಾರೆ. ಈಗ ಶಾರುಖ್ ಖಾನ್ ಸ್ಟೈಲ್​ನ ಅವರ ಕ್ಲೋಸ್ ಫ್ರೆಂಡ್ ಕಾಜೋಲ್ ಅವರು ಕಾಪಿ ಮಾಡಿದ್ದಾರೆ. ಈ ಸಂದರ್ಭದ ಫೋಟೋ ವೈರಲ್ ಆಗಿದೆ. ಸ್ವತಃ ಕಾಜೋಲ್ ಅವರು ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಗಮನ ಸೆಳೆದಿದ್ದಾರೆ. ಎರಡೂ ಫೋಟೋಗೆ ಸಾಕಷ್ಟು ಸಾಮ್ಯತೆ ಇದೆ ಎಂದು ಅನೇಕರು ಹೇಳಿದ್ದಾರೆ.

ಕಾಜೋಲ್ ಹಾಗೂ ಶಾರುಖ್ ಖಾನ್ ಮಧ್ಯೆ ಒಳ್ಳೆಯ ಗೆಳೆತನ ಇದೆ. ಇವರು ‘ಡಿಡಿಎಲ್​ಜೆ’, ‘ಕುಚ್ ಕುಚ್ ಹೋತಾ ಹೇ’, ‘ಕಭಿ ಖುಷಿ ಕಭಿ ಗಮ್’ ರೀತಿಯ ಸಿನಿಮಾಗಳನ್ನು ಮಾಡಿದ್ದಾರೆ. ಇವರ ಬಾಂಡ್ ಹೆಚ್ಚಲು ಇದು ಕೂಡ ಕಾರಣ. ಈ ಕಾರಣದಿಂದಲೇ ಗೆಳೆಯ ಹಾಕಿದ್ದ ಫೋಟೋ ಪೋಸ್ಟ್​ನ ಕಾಜೋಲ್ ಅವರು ಕಾಪಿ ಮಾಡಿದ್ದಾರೆ.

ಇದನ್ನೂ ಓದಿ
Image
ಆ ಒಂದು ಘಟನೆಯಿಂದ ಅಂಬಿಗೆ ಅಣ್ಣಾವ್ರ ಮೇಲಿನ ಗೌರವ ಹೆಚ್ಚಿತ್ತು
Image
‘ಎಲ್ಲರಿಗೂ ಒಂದೇ ರೀತಿಯ ಸಂಭಾವನೆ’; ಸಮಂತಾ ಹೊಸ ನಿಯಮ
Image
ಪಾಕ್ ಉಗ್ರ ನೆಲೆಗಳ ಮೇಲೆ ಭಾರತದ ಸರ್ಜಿಕಲ್ ಸ್ಟ್ರೈಕ್; ಉಘೇ ಎಂದ ಬಾಲಿವುಡ್
Image
ರಣಬೀರ್-ರಣವೀರ್​ನ ತಂದೆ ತಾಯಿಗೆ ಹೋಲಿಸಿದ್ದ ದೀಪಿಕಾ ಪಡುಕೋಣೆ
View this post on Instagram

A post shared by Kajol Devgan (@kajol)

ಶಾರುಖ್ ಖಾನ್ ಅವರು ಮೆಟ್​ ಗಾಲಾದಲ್ಲಿ ಹೋಗುವಾಗ ಕಪ್ಪು ಬಣ್ಣದ ಬಟ್ಟೆ ಧರಿಸಿ ಕತ್ತಿಗೆ ಸಾಕಷ್ಟು ಚೈನ್​ಗಳನ್ನು ಧರಿಸಿದ್ದರು. ಕೈಗೆ ಚಿತ್ರ ವಿಚಿತ್ರ ಕಡಗ, ಬೆರಳಿಗೆ ಉಂಗುರಗಳನ್ನು ಹಾಕಿದ್ದರು. ಇದನ್ನು ಕಾಜೋಲ್ ಅನುಕರಿಸಿದ್ದಾರೆ. ‘ಹಮ್.. ವ್ಯತ್ಯಾಸ ಹುಡುಕಿ’ ಎಂದು ಹೇಳಿದ್ದಾರೆ. ‘ರಾಹುಲ್ ಹಾಗೂ ಅಂಜಲಿಯದ್ದು ಮ್ಯಾಚಿಂಗ್’ ಎಂದಿದ್ದಾರೆ ಕೆಲವರು. ‘ಕಭಿ ಖುಷಿ ಕಭಿ ಗಮ್’ ಹಾಗೂ ‘ಕುಚ್ ಕುಚ್ ಹೋತಾ ಹೇ’ ಚಿತ್ರದಲ್ಲಿ ಶಾರುಖ್ ಅವರು ರಾಹುಲ್ ಹೆಸರಿನ ಪಾತ್ರ ಮಾಡಿದರೆ, ಅಂಜಲಿ ಪಾತ್ರದಲ್ಲಿ ಕಾಜೋಲ್ ನಟಿಸಿದ್ದರು.

ಇದನ್ನೂ ಓದಿ: 21 ಕೋಟಿ ರೂ. ಬೆಲೆಯ ವಾಚ್ ಧರಿಸಿ ಎಲ್ಲರನ್ನೂ ದಂಗುಬಡಿಸಿದ ಶಾರುಖ್ ಖಾನ್

ಶಾರುಖ್ ಖಾನ್ ಅವರನ್ನು ಸಂದರ್ಶನ ಮಾಡುವಾಗ ವಿದೇಶಿ ಮೀಡಿಯಾದವರೊಬ್ಬರು ‘ನೀವು ಯಾರು’ ಎಂದು ಕೇಳಿದ ವಿಡಿಯೋ ವೈರಲ್ ಆಗಿದೆ. ಇದನ್ನು ಶಾರುಖ್ ವಿರೋಧಿಗಳು ಟೀಕೆ ಮಾಡಿದ್ದಾರೆ. ‘ಭಾರತದಲ್ಲಿ ಮಾತ್ರ ಶಾರುಖ್ ಖಾನ್ ಹವಾ. ದೇಶದ ಹೊರಗೆ ಅವರು ಯಾರೆಂಬ ಪರಿಚಯವೇ ಇಲ್ಲ’ ಎನ್ನುವ ಮಾತನ್ನು ಕೆಲವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:48 am, Wed, 7 May 25

ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ