ಬಾಲಿವುಡ್​ನ ಅತೀ ಕೆಟ್ಟ ಚಿತ್ರಕ್ಕೆ ಸೀಕ್ವೆಲ್; ‘ಕೆಜಿಎಫ್ 2 ದಾಖಲೆಗಳು ಸಂಕಷ್ಟದಲ್ಲಿವೆ’ ಎಂದು ವ್ಯಂಗ್ಯವಾಡಿದ ನೆಟ್ಟಿಗರು

| Updated By: ರಾಜೇಶ್ ದುಗ್ಗುಮನೆ

Updated on: Apr 18, 2022 | 6:55 PM

‘ಕೆಜಿಎಫ್​: ಚಾಪ್ಟರ್​ 2’ ಅಂತಹ ಹಿಟ್ ಚಿತ್ರಗಳನ್ನು ಕಮಾಲ್​ ಟೀಕಿಸಿದ್ದಾರೆ. ಅನೇಕ ನಟರನ್ನು ಅವರು ಎದುರು ಹಾಕಿಕೊಂಡಿದ್ದಾರೆ. ಈ ವೇಳೆ ಫ್ಯಾನ್ಸ್, ‘ನೀವು ಸಿನಿಮಾ ಮಾಡಿ ತೋರಿಸಿ’ ಎಂದು ಹೇಳಿದ್ದುಂಟು. ಇದನ್ನು ಕಮಾಲ್ ಖಾನ್ ಗಂಭೀರವಾಗಿ ಪರಿಗಣಿಸಿದಂತಿದೆ.

ಬಾಲಿವುಡ್​ನ ಅತೀ ಕೆಟ್ಟ ಚಿತ್ರಕ್ಕೆ ಸೀಕ್ವೆಲ್; ‘ಕೆಜಿಎಫ್ 2 ದಾಖಲೆಗಳು ಸಂಕಷ್ಟದಲ್ಲಿವೆ ಎಂದು ವ್ಯಂಗ್ಯವಾಡಿದ ನೆಟ್ಟಿಗರು
ಯಶ್-ಕಮಾಲ್
Follow us on

ಒಂದು ಸಿನಿಮಾ ಹಿಟ್ ಆದರೆ, ಅದರ ಸೀಕ್ವೆಲ್ ಮಾಡಲು ನಿರ್ಮಾಪಕರು ಮನಸ್ಸು ಮಾಡುತ್ತಾರೆ. ಆದರೆ, ಮೊದಲ ಭಾಗ ಮಕಾಡೆ ಮಲಗಿದ ನಂತರವೂ ಎರಡನೇ ಪಾರ್ಟ್ ತರೋಕೆ ಮುಂದಾಗುತ್ತಾರೆ ಎಂದರೆ ಅದು ಹುಚ್ಚು ಸಾಹಸವೇ ಸರಿ. ‘ಬಾಲಿವುಡ್ ಇತಿಹಾಸದಲ್ಲೇ ಅತಿ ಕೆಟ್ಟ ಸಿನಿಮಾ’ ಎಂಬ ಕುಖ್ಯಾತಿ ಪಡೆದಿರುವ ‘ದೇಶದ್ರೋಹಿ’ ಸಿನಿಮಾಗೆ ಸೀಕ್ವೆಲ್ (Deshadroho 2) ರೆಡಿ ಆಗುತ್ತಿದೆ. ನಾನಾ ರೀತಿಯಲ್ಲಿ ಟ್ರೋಲ್ ಆಗುವ ಸ್ವಯಂ ಘೋಷಿತ ವಿಮರ್ಶಕ, ನಟ ಕಮಾಲ್ ಆರ್​.ಖಾನ್ (Kamaal R. Khan) ‘ದೇಶದ್ರೋಹಿ’ ಸಿನಿಮಾ ನಿರ್ಮಿಸಿ ನಟಿಸಿದ್ದರು. ಈಗ ಅವರು ‘ದೇಶದ್ರೋಹಿ 2’ ಮಾಡುತ್ತಿರುವ ಬಗ್ಗೆ ಘೋಷಣೆ ಮಾಡಿದ್ದಾರೆ.

‘ಕೆಜಿಎಫ್​: ಚಾಪ್ಟರ್​ 2’ ಅಂತಹ ಹಿಟ್ ಚಿತ್ರಗಳನ್ನು ಕಮಾಲ್​ ಟೀಕಿಸಿದ್ದಾರೆ. ಅನೇಕ ನಟರನ್ನು ಅವರು ಎದುರು ಹಾಕಿಕೊಂಡಿದ್ದಾರೆ. ಈ ವೇಳೆ ಫ್ಯಾನ್ಸ್, ‘ನೀವು ಸಿನಿಮಾ ಮಾಡಿ ತೋರಿಸಿ’ ಎಂದು ಹೇಳಿದ್ದುಂಟು. ಇದನ್ನು ಕಮಾಲ್ ಖಾನ್ ಗಂಭೀರವಾಗಿ ಪರಿಗಣಿಸಿದಂತಿದೆ. ಅವರು ‘ದೇಶದ್ರೋಹಿ 2’ ಸಿನಿಮಾ ಮಾಡುತ್ತಿರುವ ಬಗ್ಗೆ ಹಲವರಿಂದ ಟೀಕೆಗಳು ವ್ಯಕ್ತವಾಗಿದೆ.

ಕಮಾಲ್ ಅವರು ನಿರ್ಮಾಣದ ‘ದೇಶದ್ರೋಹಿ’ ಸಿನಿಮಾ 2008ರಲ್ಲಿ ತೆರೆಗೆ ಬಂದಿತ್ತು. ಈ ಚಿತ್ರವನ್ನು  ನಿರ್ಮಾಣ ಮಾಡಿದ್ದ ಅವರು, ಹೀರೋ ಆಗಿ ನಟಿಸಿದ್ದರು. ಜಗದೀಶ್ ಶರ್ಮಾ ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರು. ಈ ಸಿನಿಮಾ ಒಟ್ಟಾರೆ ಕಲೆಕ್ಷನ್ ಮಾಡಿದ್ದು ಕೇವಲ 80 ಲಕ್ಷ ರೂಪಾಯಿ. ಈಗ ಎರಡನೇ ಪಾರ್ಟ್ ತರುವ ಸಾಹಸಕ್ಕೆ ಕಮಾಲ್ ಮುಂದಾಗಿದ್ದಾರೆ.

ಕೈಯಲ್ಲಿ ಗನ್ ಹಿಡಿದು ನಿಂತಿರುವ ಫೋಟೋ ಪೋಸ್ಟರ್ ಹಂಚಿಕೊಂಡಿರುವ ಕಮಾಲ್ ಅವರು, ‘ಬಾಹುಬಲಿ’ ಚಿತ್ರಕ್ಕಿಂತ ದೊಡ್ಡ ಸಿನಿಮಾ ಎಂದು ಹೇಳಿಕೊಂಡಿದ್ದಾರೆ. ಈ ಚಿತ್ರಕ್ಕೆ ಶೀಘ್ರದಲ್ಲೇ ಶೂಟಿಂಗ್ ಆರಂಭಗೊಳ್ಳಲಿದೆ. ಈ ಟ್ವೀಟ್​ಗೆ ನಾನಾ ರೀತಿಯ ಕಮೆಂಟ್​ಗಳು ಬರುತ್ತಿವೆ.

‘ಕಾಮಿಡಿ ಸಿನಿಮಾ ಒಂದು ಶೀಘ್ರವೇ ಸಿದ್ಧಗೊಳ್ಳಲಿದೆ’ ಎಂದು ಕೆಲವರು ಬರೆದುಕೊಂಡಿದ್ದಾರೆ. ‘ಆಸ್ಕರ್​ ಲೆವೆಲ್ ನಟನೆ ನೋಡಲು ರೆಡಿ ಆಗಿ’ ಎಂದು ಇನ್ನೂ ಕೆಲವರು ಟೀಕಿಸಿದ್ದಾರೆ. ‘ಕೆಜಿಎಫ್ ಚಾಪ್ಟರ್ 2’ ಸಿನಿಮಾದ ದಾಖಲೆಗೆ ಸಂಕಷ್ಟ ಎದುರಾಗಲಿದೆ’ ಎಂದು ಕೆಲವರು ಕಾಲೆಳೆದಿದ್ದಾರೆ.

‘ಕೆಜಿಎಫ್ 2’ಗೆ ಕೆಟ್ಟ ಸಿನಿಮಾ ಎಂಬ ವಿಮರ್ಶೆ:

‘ಕೆಜಿಎಫ್​ 2 ಸಿನಿಮಾ ಮೂರು ಗಂಟೆಗಳ ಟಾಪ್​ ಕ್ಲಾಸ್​ ಟಾರ್ಚರ್​. ಫಿಲ್ಮ್​ ಮೇಕಿಂಗ್​ ಹೆಸರಿನಲ್ಲಿ ಹಣ ಮತ್ತು ಸಮಯ ವೇಸ್ಟ್​ ಆಗಿದೆ. ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಗೆದ್ದರೆ ಬಾಲಿವುಡ್​ ಅಂತ್ಯವಾದಂತೆ. ಯಾಕೆಂದರೆ, ಬಾಲಿವುಡ್​ನವರು ಈ ರೀತಿ ಸಿನಿಮಾ ಮಾಡಿದರೆ ಖಂಡಿತಾ ಡಿಸಾಸ್ಟರ್​ ಆಗಲಿದೆ. ರೇಟಿಂಗ್​ ಆ ಥೂ’ ಎಂದು ಕಮಾಲ್​ ಆರ್​. ಖಾನ್​ ಟ್ವೀಟ್​ ಮಾಡಿದ್ದರು.

ಇದನ್ನೂ ಓದಿ: KGF 2 Collection: ಯಶ್​ ಅಬ್ಬರಕ್ಕೆ ಹಿಂದಿ ಮಾರ್ಕೆಟ್​ ಕಂಗಾಲು; 4 ದಿನಕ್ಕೆ ಬಾಲಿವುಡ್​ನಲ್ಲಿ 193 ಕೋಟಿ ರೂ. ಗಳಿಸಿದ ‘ಕೆಜಿಎಫ್​ 2’

ರೆಕಾರ್ಡ್​..ರೆಕಾರ್ಡ್​..ರೆಕಾರ್ಡ್​..; ನಾಲ್ಕೇ ದಿನದಲ್ಲಿ 29 ದಾಖಲೆ ಬರೆದ ‘ಕೆಜಿಎಫ್ ಚಾಪ್ಟರ್​ 2’