ಬಾಲಿವುಡ್ನ ಖ್ಯಾತ ನಟಿ ಆಲಿಯಾ ಭಟ್ ಕಾಣಿಸಿಕೊಂಡಿರುವ ಜಾಹಿರಾತೊಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಹುಟ್ಟುಹಾಕಿದೆ. ‘ಕನ್ಯಾದಾನ’ದ ವಿಷಯವನ್ನು ಆಧಾರವಾಗಿಟ್ಟುಕೊಂಡು ಜಾಹಿರಾತನ್ನು ನಿರ್ಮಿಸಲಾಗಿದ್ದು, ವಧುವನ್ನು ದಾನ ಮಾಡಲು ವಸ್ತುವೇ? ಎಂಬ ಪ್ರಶ್ನೆಯನ್ನು ಜಾಹಿರಾತು ಎತ್ತುತ್ತದೆ. ಈ ವಿಷಯವನ್ನು ಆಧಾರವಾಗಿಟ್ಟುಕೊಂಡು, ಪರ ವಿರೋಧದ ಚರ್ಚೆ ನಡೆಯುತ್ತಿದ್ದು, ಇದೀಗ ನಟಿ ಕಂಗನಾ ರಣಾವತ್, ಆಲಿಯಾ ಹಾಗೂ ಜಾಹಿರಾತು ನಿರ್ಮಾಣ ಮಾಡಿದವರ ವಿರುದ್ಧ ಕಿಡಿಕಾರಿದ್ದಾರೆ. ನಿಷ್ಕಪಟ ಗ್ರಾಹಕರನ್ನು ಸೆಳೆಯಲು ಧರ್ಮವನ್ನು ಎಳೆದು ತರಬೇಡಿ ಎಂದು ಅವರು ಬ್ರ್ಯಾಂಡ್ಗಳಲ್ಲಿ ಮನವಿ ಮಾಡಿದ್ದಾರೆ.
ಜಾಹಿರಾತಿನ ಕುರಿತು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಕಂಗನಾ ಅದರಲ್ಲಿ ಆಲಿಯಾ ಅವರನ್ನು ನೇರವಾಗಿಯೇ ಉಲ್ಲೇಖಿಸಿದ್ದಾರೆ. ಇದರೊಂದಿಗೆ ‘ಕನ್ಯಾದಾನ’ದ ಕುರಿತಂತೆ ವಿವರಣೆಯನ್ನೂ, ಸಮರ್ಥನೆಯನ್ನೂ ನೀಡಿದ್ದಾರೆ. ಧರ್ಮಗ್ರಂಥಗಳಲ್ಲಿ ಮಹಿಳೆಯರನ್ನು ಪೂಜಿಸಲಾಗುತ್ತದೆ. ಅವರನ್ನು ‘ಅಸ್ತಿತ್ವದ ಅಮೂಲ್ಯ ಮೂಲ’ ಎಂಬ ಪರಿಕಲ್ಪನೆಯಲ್ಲಿ ನೋಡುವುದರಿಂದ ಯಾವುದೇ ಹಾನಿ ಇಲ್ಲ ಎಂದು ಕಂಗನಾ ಸುದೀರ್ಘವಾದ ಪೋಸ್ಟ್ ಬರೆದಿದ್ದಾರೆ.
“ಎಲ್ಲಾ ಬ್ರಾಂಡ್‌ಗಳಿಗೆ ವಿನಮ್ರ ವಿನಂತಿ. ಧರ್ಮ, ಅಲ್ಪಸಂಖ್ಯಾತ, ಬಹುಸಂಖ್ಯಾತ ರಾಜಕೀಯವನ್ನು ಲಾಭದ ಉದ್ದೇಶಕ್ಕಾಗಿ ಬಳಸಬೇಡಿ. ನಿಷ್ಕಪಟ ಗ್ರಾಹಕರನ್ನು ಒಡೆದು ಇಂತಹ ವಸ್ತುಗಳನ್ನು ಮಾರಾಟ ಮಾಡುವ ವಿಧಾನವನ್ನು ಕೈಬಿಡಿ” ಎಂದು ಕಂಗನಾ ಪೋಸ್ಟ್ನ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ. ನಂತರ ಪೋಸ್ಟ್ನಲ್ಲಿ ಕನ್ಯಾದಾನದ ಕುರಿತು ಬರೆದಿರುವ ಕಂಗನಾ, ಹಿಂದೂ ಆಚರಣೆಗಳನ್ನು ಅಣಕಿಸಬೇಡಿ ಎಂದು ಮನವಿ ಮಾಡಿದ್ದಾರೆ. ‘‘ಟಿವಿಯಲ್ಲಿ ಬರುವ ಕಾರ್ಯಕ್ರಮದಲ್ಲಿ ಕೂಡ ಗಡಿಯಲ್ಲಿ ಹೋರಾಡುತ್ತಾ, ಮಗನನ್ನು ಕಳೆದುಕೊಂಡ ಒಬ್ಬ ತಂದೆ- ಚಿಂತಿಸಬೇಡಿ, ತನಗೆ ಮತ್ತೊಬ್ಬ ಮಗನಿದ್ದಾನೆ. ಆತನನ್ನೂ ಈ ಮಣ್ಣಿಗೆ ತ್ಯಾಗ ಮಾಡಬಲ್ಲೆ ಎಂದು ಘರ್ಜಿಸುತ್ತಾರೆ. ಅಂತೆಯೇ ನಮ್ಮ ಸಮಾಜವು ತ್ಯಾಗದ ಪರಿಕಲ್ಪನೆಯನ್ನು ನೋಡುವ ವಿಧಾನವು ಅದರ ಮೌಲ್ಯಾಧಾರಿತ ವ್ಯವಸ್ಥೆಯನ್ನು ತೋರಿಸುತ್ತದೆ. ಅದನ್ನು ಅಣಕ ಮಾಡಬೇಡಿ’’ ಎಂದು ಅವರು ಬರೆದಿದ್ದಾರೆ.
ಕಂಗನಾ ಹಂಚಿಕೊಂಡ ಪೋಸ್ಟ್:
ಜಾಹಿರಾತಿನಲ್ಲೇನಿದೆ?
ಜಾಹೀರಾತಿನಲ್ಲಿ, ತನ್ನ ಪತಿಯೊಂದಿಗೆ ಮಂಟಪದಲ್ಲಿ ಕುಳಿತಿದ್ದಾಗ, ಆಲಿಯಾ ತನ್ನ ಕುಟುಂಬದ ಪ್ರತಿಯೊಬ್ಬರೂ- ಅಜ್ಜಿ, ತಂದೆ ಮತ್ತು ತಾಯಿ- ಅವಳನ್ನು ಎಷ್ಟು ಪ್ರೀತಿಸುತ್ತಾರೆ ಎಂದು ಉಲ್ಲೇಖಿಸಿದ್ದಾರೆ. ಆದಾಗ್ಯೂ, ಮದುವೆಗಳಲ್ಲಿ ಕನ್ಯಾದಾನದ ವಿರುದ್ಧ ಆಕ್ಷೇಪಿಸುತ್ತಾಳೆ. ಅವಳನ್ನು ತುಂಬಾ ಪ್ರೀತಿಸುತ್ತಿದ್ದರೂ ಕೂಡ ಕುಟುಂಬದಿಂದ ಕಳಚಿಕೊಳ್ಳುವ ಒಂದು ಭಾಗ ಎಂದು ಏಕೆ ಪರಿಗಣಿಸಲಾಗಿದೆ ಎಂಬ ಪ್ರಶ್ನೆಯನ್ನು ಆಕೆ ಎತ್ತುತ್ತಾಳೆ. “ನಾನು ದಾನ ಮಾಡಬೇಕಾದ ವಿಷಯವೇ? ಏಕೆ ಕನ್ಯಾದಾನ್ ಮಾತ್ರ?” ಎಂದು ಆಕೆ ಸ್ವಗತದಲ್ಲಿ ಕೇಳಿಕೊಳ್ಳುತ್ತಾಳೆ.
ಅಂತಿಮವಾಗಿ ಅವಳ ಅತ್ತೆ ಮತ್ತು ಮಾವ ತಮ್ಮ ಮಗನನ್ನೂ ಕೂಡ ನೀಡಲು ಕೈ ಜೋಡಿಸುವುದರೊಂದಿಗೆ ಆಧುನಿಕ ಪರಿಕಲ್ಪನೆಯನ್ನು ಜಾಹಿರಾತಿನಲ್ಲಿ ನೀಡಲಾಗಿದೆ. ಇದಕ್ಕೆ ‘ಕನ್ಯಾಮಾನ್’ ಎಂದು ಹೇಳುವುದರೊಂದಿಗೆ ಜಾಹಿರಾತು ಮುಕ್ತಾಯವಾಗುತ್ತದೆ. ಕೊನೆಯಲ್ಲಿ ಎಲ್ಲರೂ ನಗುತ್ತಾರೆ, ದಂಪತಿಗಳು ಮದುವೆಯಾಗುತ್ತಾರೆ. ಇದನ್ನು ಆಧುನಿಕ ಪರಿಕಲ್ಪನೆ ಮತ್ತು ಮಹಿಳಾ ಸಬಲೀಕರಣದ ಬಲವಾದ ಸಂದೇಶ ಎಂದು ಹಲವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲ ನೆಟ್ಟಿಗರು ಕಂಗನಾ ಅವರ ಮಾತಿಗೆ ಸಹಮತ ವ್ಯಕ್ತಪಡಿಸಿದ್ದು, ಜಾಹಿರಾತಿಗೆ ಟೀಕೆ ವ್ಯಕ್ತಪಡಿಸಿದ್ದಾರೆ.
ಈ ಜಾಹಿರಾತನ್ನು ‘2 ಸ್ಟೇಟ್ಸ್’, ‘ಕಳಂಕ್’ ಮೊದಲಾದ ಚಿತ್ರಗಳನ್ನು ನಿರ್ದೇಶಿಸಿದ್ದ ಅಭಿಷೇಕ್ ವರ್ಮನ್ ನಿರ್ದೇಶಿಸಿದ್ದಾರೆ. ಕಂಗನಾ ಆಲಿಯಾರನ್ನು ಟೀಕಿಸುವುದು ಇದೇ ಮೊದಲೇನಲ್ಲ. ಈ ಹಿಂದೆ ಕಂಗನಾ ‘ಆಲಿಯಾ ಕರಣ್ ಜೋಹರ್ ಅವರ ಕೈ ಗೊಂಬೆ’ ಎಂದು ವಿವಾದ ಹುಟ್ಟುಹಾಕಿದ್ದರು. ಮತ್ತು ಆಲಿಯಾರ ನಟನೆಯನ್ನು ಟೀಕೆ ಮಾಡಿದ್ದ ಅವರು ‘ನೆಪೋ ಗ್ಯಾಗ್’ನ ಸದಸ್ಯರು ಎಂದು ಹೇಳಿದ್ದರು.
ಇದನ್ನೂ ಓದಿ:
ಕನ್ನಡ ಸಿನಿಮಾ ಮಾಡೋಕೆ ಈಗ ಟೈಮ್ ಇಲ್ಲ; ರಶ್ಮಿಕಾ ಮಂದಣ್ಣ ನೇರ ಉತ್ತರ
ಬಿಗ್ ಬಾಸ್ ಬಳಿಕ ಸಾಯುವ ಯೋಚನೆ ಮಾಡಿದ ಸ್ಪರ್ಧಿ; ಪರಪುರುಷನ ಜತೆ ಲವ್ವಿ-ಡವ್ವಿಯೇ ಇದಕ್ಕೆ ಕಾರಣ
(Kangana criticizes Alia and team for making wrong interpretation of Kanyadan)