‘ಸಂಸತ್ತಿನಲ್ಲಿ ಶೂಟ್ ಮಾಡೋಕೆ ಅವಕಾಶ ನೀಡಿ; ‘ಎಮರ್ಜೆನ್ಸಿ’ಗಾಗಿ ಹೊಸ ಬೇಡಿಕೆ ಇಟ್ಟ ಕಂಗನಾ

| Updated By: ರಾಜೇಶ್ ದುಗ್ಗುಮನೆ

Updated on: Dec 19, 2022 | 7:18 AM

ಗ್ಲಾಮರ್ ಪಾತ್ರಗಳನ್ನು ಬದಿಗಿಟ್ಟು ಮಹಿಳಾ ಪ್ರಧಾನ ಪಾತ್ರಗಳನ್ನು ಮಾಡಲು ಅವರು ಹೆಚ್ಚು ಆಸಕ್ತಿ ತೋರುತ್ತಾರೆ. ಈಗ ಕಂಗನಾ ಆಯ್ಕೆ ಮಾಡಿಕೊಂಡಿರುವ ‘ಎಮರ್ಜೆನ್ಸಿ’ ಸಿನಿಮಾ ಮೇಲೆ ಸಿನಿಪ್ರಿಯರಿಗೆ ಹೆಚ್ಚು ನಿರೀಕ್ಷೆ ಸೃಷ್ಟಿ ಆಗಿದೆ.

‘ಸಂಸತ್ತಿನಲ್ಲಿ ಶೂಟ್ ಮಾಡೋಕೆ ಅವಕಾಶ ನೀಡಿ; ‘ಎಮರ್ಜೆನ್ಸಿ’ಗಾಗಿ ಹೊಸ ಬೇಡಿಕೆ ಇಟ್ಟ ಕಂಗನಾ
ಕಂಗನಾ
Follow us on

ಕಂಗನಾ ರಣಾವತ್ (Kangana Ranaut) ಅವರು ಹಲವು ವಿಚಾರಕ್ಕೆ ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಅವರು ನಿರ್ದೇಶಿಸಿ, ನಟಿಸುತ್ತಿರುವ ‘ಎಮರ್ಜೆನ್ಸಿ’ ಸಿನಿಮಾ (Emergency Movie) ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಇದು ಇಂದಿರಾ ಗಾಂಧಿ ಅವರ ಬಯೋಪಿಕ್ ಆಗಿರುವುದರಿಂದ ಸಹಜವಾಗಿಯೇ ರಾಜಕೀಯ ವಲಯದಲ್ಲೂ ಚರ್ಚೆ ಹುಟ್ಟು ಹಾಕಿದೆ. 1975ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ (Indiara Gandhi) ಹೇರಿದ್ದ ತುರ್ತು ಪರಿಸ್ಥಿತಿ ಹಾಗೂ ಅದರ ಸುತ್ತಲ ವಿಚಾರ ಇಟ್ಟುಕೊಂಡು ಈ ಸಿನಿಮಾ ತಯಾರಾಗುತ್ತಿದೆ. ನಿತ್ಯ ಹೊಸ ಹೊಸ ಕಲಾವಿದರು ಚಿತ್ರತಂಡಕ್ಕೆ ಸೇರ್ಪಡೆ ಆಗುತ್ತಿದ್ದಾರೆ. ಈಗ ಕಂಗನಾ ಈ ಚಿತ್ರವನ್ನು ಸಂಸತ್ತಿನಲ್ಲಿ ಶೂಟ್ ಮಾಡಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಅವರು ಲೋಕಸಭೆಯ ಸೆಕ್ರೆಟರಿಯೇಟ್ ಅವರ ಬಳಿ ಮನವಿ ಸಲ್ಲಿಕೆ ಮಾಡಿದ್ದಾರೆ. ಈ ಮನವಿ ರಿಜೆಕ್ಟ್ ಆಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.

ಕಂಗನಾ ರಣಾವತ್ ವಿವಾದಗಳ ಮೂಲಕ ಎಷ್ಟೇ ಸುದ್ದಿ ಆದರೂ ಸಿನಿಮಾ ಆಯ್ಕೆ ವಿಚಾರದಲ್ಲಿ ಅವರು ಸಾಕಷ್ಟು ಮಂದಿಗೆ ಇಷ್ಟವಾಗುತ್ತಾರೆ. ಗ್ಲಾಮರ್ ಪಾತ್ರಗಳನ್ನು ಬದಿಗಿಟ್ಟು ಮಹಿಳಾ ಪ್ರಧಾನ ಪಾತ್ರಗಳನ್ನು ಮಾಡಲು ಅವರು ಹೆಚ್ಚು ಆಸಕ್ತಿ ತೋರುತ್ತಾರೆ. ಈಗ ಕಂಗನಾ ಆಯ್ಕೆ ಮಾಡಿಕೊಂಡಿರುವ ‘ಎಮರ್ಜೆನ್ಸಿ’ ಸಿನಿಮಾ ಮೇಲೆ ಸಿನಿಪ್ರಿಯರಿಗೆ ಹೆಚ್ಚು ನಿರೀಕ್ಷೆ ಸೃಷ್ಟಿ ಆಗಿದೆ.

‘ಸಂಸತ್ತಿನ ಆವರಣದಲ್ಲಿ, ಸಂಸತ್ತಿನ ಒಳಭಾಗದಲ್ಲಿ ನಮ್ಮ ಎಮರ್ಜೆನ್ಸಿ ಸಿನಿಮಾ ಶೂಟ್ ಮಾಡಲು ಅವಕಾಶ ನೀಡಬೇಕು’ ಎಂದು ಕಂಗನಾ ಬೇಡಿಕೆ ಇಟ್ಟಿದ್ದಾರೆ ಎಂಬುದಾಗಿ ಪಿಟಿಐ ವರದಿ ಮಾಡಿದೆ. ಸಾಮಾನ್ಯವಾಗಿ ಸಿನಿಮಾ ಶೂಟಿಂಗ್​ಗೆ ಇಲ್ಲಿ ಅವಕಾಶ ನೀಡುವುದಿಲ್ಲ. ದೂರದರ್ಶನ್ ಹಾಗೂ ಸಂಸದ್ ಟಿವಿಗೆ ಮಾತ್ರ ಸಂಸತ್ತಿನಲ್ಲಿ ಚಿತ್ರೀಕರಿಸುವ ಅವಕಾಶವಿದೆ. ಒಂದೊಮ್ಮೆ ಕಂಗನಾಗೆ ಅವಕಾಶ ನೀಡಿದರೆ ನಾಳೆ ಮತ್ತಷ್ಟು ಮಂದಿ ಬಂದು ಅವಕಾಶ ಕೇಳಬಹುದು. ಈ ಕಾರಣಕ್ಕೆ ಒಪ್ಪಿಗೆ ನೀಡುವುದು ಅನುಮಾನ ಎನ್ನಲಾಗುತ್ತಿದೆ.

ಇದನ್ನೂ ಓದಿ
Nora Fatehi: 200 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಇಡಿ ತನಿಖೆಗೆ ಹಾಜರಾದ ನಟಿ ನೋರಾ ಫತೇಹಿ
‘ಸಿನಿಮಾ ಅಂದ್ರೆ ಇದು’; ‘ಕಾಂತಾರ’ ನೋಡಿ ಹ್ಯಾಂಗೋವರ್​ಗೆ ಹೋದ ನಟಿ ಕಂಗನಾ ರಣಾವತ್  
ಕಂಗನಾ ರಣಾವತ್ ‘ಎಮರ್ಜೆನ್ಸಿ’ಗೆ ಮಿಲಿಂದ್ ಸೋಮನ್ ಸೇರ್ಪಡೆ; ಅವರ ಪಾತ್ರ ಏನು?

ಇದನ್ನೂ ಓದಿ: ‘ಸಿನಿಮಾ ಅಂದ್ರೆ ಇದು’; ‘ಕಾಂತಾರ’ ನೋಡಿ ಹ್ಯಾಂಗೋವರ್​ಗೆ ಹೋದ ನಟಿ ಕಂಗನಾ ರಣಾವತ್  

ಕಂಗನಾ ರಣಾವತ್​ ಅವರ ವೃತ್ತಿಜೀವನದಲ್ಲಿ ‘ಎಮರ್ಜೆನ್ಸಿ’ ಸಿನಿಮಾ ಬಹುಮುಖ್ಯ ಆಗಲಿದೆ. ಅದಕ್ಕಾಗಿ ಅವರು ಸಖತ್​ ತಯಾರಿ ಮಾಡಿಕೊಂಡು ಶೂಟಿಂಗ್​ ಆರಂಭಿಸಿದ್ದಾರೆ. ಈಗಾಗಲೇ ಕೆಲವು ಸಿನಿಮಾಗಳಲ್ಲಿ ಇಂದಿರಾ ಗಾಂಧಿ ಅವರ ಪಾತ್ರವನ್ನು ಬೇರೆ ನಟಿಯರು ಮಾಡಿದ್ದಾರೆ. ಆದರೆ ಅವರೆಲ್ಲರಿಗಿಂತಲೂ ಕಂಗನಾ ರಣಾವತ್​ ಅವರ ಲುಕ್​ ಹೆಚ್ಚು ಗಮನ ಸೆಳೆಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ