‘ಕಳ್ಳರಿಗೆ ಕಾಂಗ್ರೆಸ್ ಇಷ್ಟವಾಗುತ್ತದೆ, ರಾಷ್ಟ್ರೀಯವಾದಿಗಳು ಬಿಜೆಪಿಗೆ ಮತ ಹಾಕುತ್ತಾರೆ’- ವಿವಾದ ಸೃಷ್ಟಿಸಿದ ಕಂಗನಾ ಹೇಳಿಕೆ

Kangana Ranaut: ಬಾಲಿವುಡ್ ನಟಿ ಕಂಗನಾ ರಣಾವತ್ ಕಾಂಗ್ರೆಸ್ ಹಾಗೂ ಬಿಜೆಪಿ ಬಗ್ಗೆ ಮಾತನಾಡಿದ್ದಾರೆ. ಅಲ್ಲದೇ ನಾಸ್ತಿಕರ ಬಗ್ಗೆಯೂ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದು ತೀವ್ರ ಚರ್ಚೆಗೆ ಕಾರಣವಾಗಿದೆ.

'ಕಳ್ಳರಿಗೆ ಕಾಂಗ್ರೆಸ್ ಇಷ್ಟವಾಗುತ್ತದೆ, ರಾಷ್ಟ್ರೀಯವಾದಿಗಳು ಬಿಜೆಪಿಗೆ ಮತ ಹಾಕುತ್ತಾರೆ'- ವಿವಾದ ಸೃಷ್ಟಿಸಿದ ಕಂಗನಾ ಹೇಳಿಕೆ
ಕಂಗನಾ ರಣಾವತ್Image Credit source: Kangana Ranaut/ Instagram
Follow us
TV9 Web
| Updated By: shivaprasad.hs

Updated on:Feb 15, 2022 | 8:32 AM

ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಮತ್ತೆ ಸುದ್ದಿಯಲ್ಲಿದ್ದಾರೆ. ತಮ್ಮ ಹೇಳಿಕೆಗಳ ಮೂಲಕ ಸದಾ ಸುದ್ದಿಯಾಗುವ ಅವರು, ಇದೀಗ ಕಾಂಗ್ರೆಸ್ ಹಾಗೂ ಬಿಜೆಪಿಗೆ ಯಾರು ಮತ ಹಾಕುತ್ತಾರೆ ಎಂಬುದರ ಕುರಿತು ತಮ್ಮದೇ ವಾದವನ್ನು ಮುಂದಿಟ್ಟಿದ್ದಾರೆ. ಅಲ್ಲದೇ ತಮ್ಮ ಹೇಳಿಕೆಗಳಿಗೆ ‘ಜೀವನದ 4 ಸೂತ್ರಗಳನ್ನು ನೆನಪಿಡಿ’ ಎಂದು ಶೀರ್ಷಿಕೆಯನ್ನೂ ನೀಡಿದ್ದಾರೆ. ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಈ ವಿಚಾರಗಳನ್ನು ಹಂಚಿಕೊಂಡಿರುವ ಕಂಗನಾ, ಪತ್ರಕರ್ತೆ ರಾಣಾ ಅಯ್ಯೂಬ್ (Rana Ayyub) ಪ್ರಕರಣವನ್ನು ಉಲ್ಲೇಖಿಸಿದ್ದಾರೆ. ಈ ಮೂಲಕ ಅವರು ನಾಲ್ಕು ಸೂತ್ರಗಳನ್ನು ನೆನಪಿಡಿ ಎಂದು ಬರೆದುಕೊಂಡು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮೊದಲ ಸೂತ್ರದಲ್ಲಿ ‘‘ಮೋಸಗಾರರು ಮತ್ತೋರ್ವ ಮೋಸಗಾರರಿಗೆ ಸಹಾಯ ಮಾಡುತ್ತಾರೆ’’ ಎಂದು ಕಂಗನಾ ಬರೆದುಕೊಂಡಿದ್ದಾರೆ.  ಎರಡನೇ ಸೂತ್ರದಲ್ಲಿ, ‘ಯಾರಿಗೆ ತಮ್ಮ ಕುರಿತು ನಂಬಿಕೆ ಇಲ್ಲವೋ ಅವರಿಗೆ ದೇವರು ಅಥವಾ ಮತ್ಯಾವುದರ ಕುರಿತೂ ನಂಬಿಕೆ ಇರುವುದಿಲ್ಲ’ ಎಂದು ನಟಿ ಬರೆದಿದ್ದಾರೆ.

ಮೂರನೇ ಅಂಶದಲ್ಲಿ ಗುರುವಿನ ಬಗ್ಗೆ ಕಂಗನಾ ಪ್ರಸ್ತಾಪ ಮಾಡಿದ್ದಾರೆ. ‘ಎಲ್ಲರಿಗೂ ಅವರೊಳಗಿನ ಮನಸ್ಥಿತಿಗೆ ತಕ್ಕಂತೆ ಗುರು ಸಿಗುತ್ತಾನೆ. ಒಳ್ಳೆಯವರಾಗಿದ್ದರೆ ಒಳ್ಳೆಯ ಗುರು ಹಾಗೂ ಕೆಟ್ಟವರಾಗಿದ್ದರೆ ವಂಚನೆಗಾರರು, ಮೋಸಗಾರ ಗುರು ಸಿಗುತ್ತಾರೆ ಎಂದು ನಟಿ ಹೇಳಿದ್ದಾರೆ.

ಕೊನೆಯ ಅಂಶದಲ್ಲಿ ಕಂಗನಾ ಕಾಂಗ್ರೆಸ್ ಹಾಗೂ ಬಿಜೆಪಿ ಕುರಿತು ಪ್ರಸ್ತಾಪಿಸಿದ್ದಾರೆ. ‘‘ನೀವು ಒಂದು ವೇಳೆ ಕಳ್ಳನಾಗಿದ್ದರೆ ನೀವು ಕಾಂಗ್ರೆಸ್ ಅನ್ನು ಇಷ್ಟಪಡುತ್ತೀರಿ. ಒಂದು ವೇಳೆ ನಿಜವಾದ ರಾಷ್ಟ್ರೀಯವಾದಿಯಾಗಿದ್ದರೆ ಬಿಜೆಪಿಗೆ ಮತ ಹಾಕುತ್ತೀರಿ’’ ಎಂದು ಅವರು ಬರೆದುಕೊಂಡಿದ್ದಾರೆ. ಕಂಗನಾ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ವಿವಾದ ಸೃಷ್ಟಿಸಿದ್ದು, ಪರ- ವಿರೋಧದ ಚರ್ಚೆಗಳು ನಡೆಯುತ್ತಿವೆ.

ಈ ಎಲ್ಲಾ ಅಂಶಗಳಿಗೆ ಕಂಗನಾ ಪತ್ರಕರ್ತೆ ರಾಣಾ ಅಯ್ಯುಬ್ ಪ್ರಕರಣವನ್ನು ಉಲ್ಲೇಖಿಸಿದ್ದಾರೆ. ರಾಣಾ ಅಯ್ಯುಬ್ ಸಾರ್ವಜನಿಕ ದೇಣಿಗೆ ಮೂಲಕ ಸಂಗ್ರಹಿಸಿದ ಹಣವನ್ನು ವೈಯಕ್ತಿಕ ಕಾರ್ಯಗಳಿಗೆ ಬಳಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಆರೋಪಿಸಿದೆ. ಆದರೆ ಇದನ್ನು ರಾಣಾ ನಿರಾಕರಿಸಿದ್ದಾರೆ.

Kangana post on rules of life

ಕಂಗನಾ ಹಂಚಿಕೊಂಡ ಪೋಸ್ಟ್

ಇತ್ತೀಚೆಗೆ ಕಂಗನಾ ಭಾರತೀಯ ಜನತಾ ಪಕ್ಷಕ್ಕೆ ನೇರವಾಗಿ ತಮ್ಮ ಬೆಂಬಲವನ್ನು ಸೂಚಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿ ಯೋಗಿ ಆದಿತ್ಯನಾಥ್​​ ಅವರಿಗೆ ಮತ ಹಾಕುವಂತೆ ಕಂಗನಾ ಕೋರಿಕೊಂಡಿದ್ದರು. ಈ ಕುರಿತ ತಮ್ಮ ಅಭಿಪ್ರಾಯಗಳನ್ನು ನಟಿ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು.

ಕಂಗನಾ ಈ ಮೊದಲು ಟ್ವಿಟರ್​ನಲ್ಲಿ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಟ್ವೀಟ್ ಮಾಡಿ, ತಮ್ಮ ಅನಿಸಿಕೆ ವ್ಯಕ್ತಪಡಿಸುತ್ತಿದ್ದರು. ಆದರೆ ಟ್ವಿಟರ್​ನಿಂದ ಬ್ಯಾನ್ ಆದ ನಂತರ ಅವರು ಇನ್​ಸ್ಟಾಗ್ರಾಂ ಸ್ಟೋರಿಗಳಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಸೋಮವಾರದಂದು ಕಂಗನಾ ದೀಪಿಕಾ ಪಡುಕೋಣೆ ನಟನೆಯ ‘ಗೆಹರಾಯಿಯಾ’ ಚಿತ್ರವನ್ನು ಟೀಕಿಸಿದ್ದರು. ಅಲ್ಲದೇ ಆಲಿಯಾ ಭಟ್ ನಟನೆಯ ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರದ ದೃಶ್ಯವೊಂದನ್ನು ಅನುಕರಿಸಿದ ಬಾಲಕಿಯೋರ್ವಳ ನಡೆಯನ್ನು ಪ್ರಶ್ನಿಸಿದ್ದರು.

ಇದನ್ನೂ ಓದಿ:

Rana Ayyub ಕೊವಿಡ್ ಮತ್ತು ಪ್ರವಾಹ ಸಂತ್ರಸ್ತರ ಪರಿಹಾರ ನಿಧಿ ದುರುಪಯೋಗ ಆರೋಪ: ಪತ್ರಕರ್ತೆ ರಾಣಾ ಅಯ್ಯೂಬ್ ವಿರುದ್ಧ ಪ್ರಕರಣ ದಾಖಲು

‘ಎಷ್ಟೇ ಮೈ ತೋರಿಸಿದರೂ ಈ ಕೆಟ್ಟ ಸಿನಿಮಾ ಗೆಲ್ಲಲ್ಲ’; ದೀಪಿಕಾ ಚಿತ್ರದ ಬಗ್ಗೆ ಕಂಗನಾ ಖಡಕ್​ ವಿಮರ್ಶೆ

Published On - 8:28 am, Tue, 15 February 22

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು