AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಲಿವುಡ್​ನ​ ಈ ಹೀರೋ ಈಗಲೂ ನನ್ನನ್ನು ಮಗುವಿನಂತೆ ಕಾಣುತ್ತಾರೆ ಎಂದ ಆಲಿಯಾ ಭಟ್​

ಸಿದ್ದಾರ್ಥ್​ ಕಣ್ಣನ್​ ಅವರ ಯೂಟ್ಯೂಬ್​ ಚಾನೆಲ್​ಗೆ ಆಲಿಯಾ ಸಂದರ್ಶನ ನೀಡಿದ್ದಾರೆ. ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರದಲ್ಲಿ ಅಜಯ್​​ ದೇವಗನ್​ ಕಾಣಿಸಿಕೊಂಡಿದ್ದಾರೆ. ಅವರ ಜತೆಗಿನ ಗೆಳೆತನದ ಬಗ್ಗೆ ಆಲಿಯಾ ಮಾತನಾಡಿದ್ದಾರೆ.

ಬಾಲಿವುಡ್​ನ​ ಈ ಹೀರೋ ಈಗಲೂ ನನ್ನನ್ನು ಮಗುವಿನಂತೆ ಕಾಣುತ್ತಾರೆ ಎಂದ ಆಲಿಯಾ ಭಟ್​
ಆಲಿಯಾ ಭಟ್
TV9 Web
| Edited By: |

Updated on: Feb 14, 2022 | 2:24 PM

Share

ಆಲಿಯಾ ಭಟ್​ (Alia Bhatt) ಬಾಲಿವುಡ್​ನಲ್ಲಿ ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಸ್ಟಾರ್​ ಕಿಡ್ ಆದ ಹೊರತಾಗಿಯೂ ಅವರು ತಮ್ಮದೇ ಆದ ಹೆಸರು ಮಾಡಿದ್ದಾರೆ. ಬಾಲಿವುಡ್​ನಲ್ಲಿ ಯಾರೂ ಅವರನ್ನು ನಿರ್ದೇಶಕ ಮಹೇಶ್​ ಭಟ್​ ಅವರ ಮಗಳು ಎಂದು ಗುರುತಿಸುವುದಿಲ್ಲ. ಬದಲಿಗೆ ಆಲಿಯಾ ಭಟ್​ ಎಂದೇ ಗುರುತಿಸಿಕೊಳ್ಳುತ್ತಾರೆ. ಅಷ್ಟರ ಮಟ್ಟಿಗೆ ಅವರು ಹೆಸರು ಮಾಡಿದ್ದಾರೆ. ಅನೇಕ ಸ್ಟಾರ್​ ನಟರ ಜತೆ ಆಲಿಯಾ ಒಳ್ಳೆಯ ಗೆಳೆತನ ಹೊಂದಿದ್ದಾರೆ. ಸದ್ಯ ಅವರು ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ (Gangubai Kathiawadi Movie) ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಈ ವೇಳೆ ಹಲವು ವಿಚಾರಗಳ ಬಗ್ಗೆ ಅವರು ಮಾತನಾಡಿದ್ದಾರೆ.  

ಸಿದ್ದಾರ್ಥ್​ ಕಣ್ಣನ್​ ಅವರ ಯೂಟ್ಯೂಬ್​ ಚಾನೆಲ್​ಗೆ ಆಲಿಯಾ ಸಂದರ್ಶನ ನೀಡಿದ್ದಾರೆ. ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರದಲ್ಲಿ ಅಜಯ್​​ ದೇವಗನ್​ ಕಾಣಿಸಿಕೊಂಡಿದ್ದಾರೆ. ಅವರ ಜತೆಗಿನ ಗೆಳೆತನದ ಬಗ್ಗೆ ಆಲಿಯಾ ಮಾತನಾಡಿದ್ದಾರೆ.‘ಅಜಯ್ ದೇವಗನ್​ ಜತೆ ಹೆಚ್ಚು ಸಮಯ ಕಳೆದಿಲ್ಲ. ನಮ್ಮ ನಡುವೆ ಸ್ನೇಹ ಬೆಳೆಯುವಷ್ಟು ಸಮಯ ಸಿಗಲೇ ಇಲ್ಲ’ ಎಂದಿದ್ದಾರೆ ಆಲಿಯಾ.

‘ಡಿಯರ್​ ಜಿಂದಗಿ’ ಚಿತ್ರದಲ್ಲಿ ಶಾರುಖ್​ ಹಾಗೂ ಆಲಿಯಾ ಒಟ್ಟಾಗಿ ನಟಿಸಿದ್ದರು. ಈ ಸಿನಿಮಾ ಹಿಟ್​ ಆಗಿತ್ತು. ಈ ಚಿತ್ರದ ಪ್ರಚಾರದಲ್ಲಿ ಆಲಿಯಾ ಹಾಗೂ ಶಾರುಖ್ ಸಾಕಷ್ಟು ಕಡೆಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಹೀಗಾಗಿ, ಶಾರುಖ್​ ಜತೆ ಆಲಿಯಾಗೆ ಒಳ್ಳೆಯ ಗೆಳೆತನ ಬೆಳೆದಿದೆ. ‘ಶಾರುಖ್​ ಅವರು ನಿಜಕ್ಕೂ ಭಿನ್ನ. ನಾವು ಸಾಕಷ್ಟು ಸಮಯವನ್ನು ಒಟ್ಟಾಗಿ ಕಳೆದಿದ್ದೇವೆ. ನಾನು ಅವರ ಜತೆ ತುಂಬಾನೇ ಕಂಫರ್ಟೆಬಲ್​ ಫೀಲ್ ಎನಿಸುತ್ತದೆ. ಅವರು ನನ್ನ ಫ್ರೆಂಡ್​ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ’ ಎಂದರು ಆಲಿಯಾ.

ಸಂಜಯ್​ ದತ್​ ಅವರು ಆಲಿಯಾ ಅವರನ್ನು ಮಗಳಂತೆ ಕಾಣುತ್ತಾರೆ. ಈ ಬಗ್ಗೆ ಆಲಿಯಾ ಹೇಳಿಕೊಂಡಿದ್ದಾರೆ. ‘ಸಡಕ್​ 2’ ಚಿತ್ರದಲ್ಲಿ ಆಲಿಯಾ ಹಾಗೂ ಸಂಜಯ್​ ದತ್​ ಒಟ್ಟಿಗೆ ತೆರೆ ಹಂಚಿಕೊಂಡಿದ್ದರು. ಈ ಚಿತ್ರಕ್ಕೆ ಆಲಿಯಾ ತಂದೆ ಮಹೇಶ್​ ಭಟ್​ ನಿರ್ದೇಶನ ಮಾಡಿದ್ದಾರೆ. ‘ಸಂಜಯ್​ ದತ್​ ನನ್ನನ್ನು ಮಗುವಿನಂತೆ ಟ್ರೀಟ್​ ಮಾಡುತ್ತಾರೆ. ನನ್ನ ತಂದೆ ಜತೆಗೆ ಅವರಿಗೆ ಒಳ್ಳೆಯ ಗೆಳೆತನವಿದೆ. ಈ ಕಾರಣಕ್ಕೆ ಅವರು ನನ್ನ ತಂದೆ ಸ್ಥಾನದಲ್ಲಿ ನಿಲ್ಲುತ್ತಾರೆ. ನನ್ನನ್ನು ಚಾಚು ಎಂದು ಕರೆಯಬೇಕು ಎನ್ನುತ್ತಿರುತ್ತಾರೆ’ ಎಂದಿದ್ದಾರೆ ಆಲಿಯಾ.

ಸಂಜಯ್​ ಲೀಲಾ ಬನ್ಸಾಲಿ ನಿರ್ದೇಶನದ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ  ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಈ ಸಿನಿಮಾದಲ್ಲಿ ಗಂಗೂಬಾಯಿ ಆಗಿ ಆಲಿಯಾ ಭಟ್​ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ರಿಲೀಸ್​ ಆದ ಚಿತ್ರದ ಟ್ರೇಲರ್ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಆಲಿಯಾ ಭಟ್​ ಅವರ ನಟನೆ ಕಂಡು ಎಲ್ಲರೂ ಪ್ರಶಂಸೆಯ ಮಾತುಗಳನ್ನು ಆಡುತ್ತಿದ್ದಾರೆ.

ಇದನ್ನೂ ಓದಿ: ಟಿವಿ9 ಜತೆ ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾ ಬಗ್ಗೆ ಮಾತನಾಡಿದ ಆಲಿಯಾ ಭಟ್​; ಇಲ್ಲಿದೆ ವಿಡಿಯೋ

Samantha: ಸಮಂತಾ ಜತೆ ಆ್ಯಕ್ಷನ್ ಚಿತ್ರದಲ್ಲಿ ನಟಿಸಬೇಕು; ಆಲಿಯಾ ಭಟ್​ಗೆ ಹೀಗೊಂದು ಆಸೆ

ವಿದ್ಯಾರ್ಥಿಗಳ ಕೈಯಲ್ಲಿ ಕಾರು ತೊಳೆಸಿದ ಶಿಕ್ಷಕ
ವಿದ್ಯಾರ್ಥಿಗಳ ಕೈಯಲ್ಲಿ ಕಾರು ತೊಳೆಸಿದ ಶಿಕ್ಷಕ
ತೆಲಂಗಾಣದ ಹಾಸ್ಟೆಲ್​ನಲ್ಲಿ ವಿದ್ಯಾರ್ಥಿನಿಯ ಮೇಲೆ ವಾರ್ಡನ್ ದರ್ಪ
ತೆಲಂಗಾಣದ ಹಾಸ್ಟೆಲ್​ನಲ್ಲಿ ವಿದ್ಯಾರ್ಥಿನಿಯ ಮೇಲೆ ವಾರ್ಡನ್ ದರ್ಪ
ಹೊಸ ವರ್ಷಕ್ಕೆ ಶುಭಸುದ್ದಿ: ಫಲಾನುಭವಿಗಳ ಖಾತೆಗೆ ಬಂದ ಗೃಹಲಕ್ಷ್ಮಿ
ಹೊಸ ವರ್ಷಕ್ಕೆ ಶುಭಸುದ್ದಿ: ಫಲಾನುಭವಿಗಳ ಖಾತೆಗೆ ಬಂದ ಗೃಹಲಕ್ಷ್ಮಿ
ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ವಿಷ್ಣುವರ್ಧನ್ 16ನೇ ವರ್ಷದ ಪುಣ್ಯತಿಥಿ; ವಿಶೇಷ ಪೂಜೆ ನಡೆದಿದ್ದು ಎಲ್ಲಿ?
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​