‘ಎಮರ್ಜೆನ್ಸಿ’ ಸಿನಿಮಾ ಜನವರಿ 17ರಂದು ರಿಲೀಸ್ ಆಯಿತು. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಸಿನಿಮಾಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪಾತ್ರದಲ್ಲಿ ಕಂಗನಾ ನಟಿಸಿ ಅವರು ಭೇಷ್ ಎನಿಸಿಕೊಂಡಿದ್ದಾರೆ. ಆದರೆ, ಸಿನಿಮಾ ಗಳಿಕೆ ಮಾತ್ರ ಹೀನಾಯ ಸ್ಥಿತಿ ತಲುಪಿದೆ. ಇದರಿಂದ ಕಂಗನಾ ಅವರು ಸಾಕಷ್ಟು ಬೇಸರ ಮಾಡಿಕೊಂಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
‘ಎಮರ್ಜೆನ್ಸಿ’ ಸಿನಿಮಾಗೆ ಕಂಗನಾ ರಣಾವತ್ ಅವರ ನಿರ್ದೇಶನ ಇದೆ. ಈ ಚಿತ್ರಕ್ಕೆ ಅವರು ನಿರ್ಮಾಪಕಿಯೂ ಹೌದು. ಜೀ ಸ್ಟುಡಿಯೋ ಜೊತೆ ಸೇರಿ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದ ಬಜೆಟ್ 25 ಕೋಟಿ ರೂಪಾಯಿ ಆಗಿದೆ. ಆದರೆ, ಸದ್ಯ ಸಿನಿಮಾದ ಗಳಿಕೆ ನೋಡಿದ ಅನೇಕರಿಗೆ ಶಾಕ್ ಆಗಿದೆ.
‘ಎಮರ್ಜೆನ್ಸಿ’ ಸಿನಿಮಾ ಮೊದಲ ದಿನ 2.5 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಶನಿವಾರ (ಜನವರಿ 18) ಚಿತ್ರ ಉತ್ತಮ ಗಳಿಕೆ ಮಾಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಆ ರೀತಿ ಆಗಿಲ್ಲ. ಸಿನಿಮಾ ಕೇವಲ 2.74 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಚಿತ್ರ ಮೂರನೇ ದಿನ ಅಂದರೆ ಭಾನುವಾರ (ಜನವರಿ 19) ಎಷ್ಟು ಕೋಟಿ ರೂಪಾಯಿ ಗಳಿಕೆ ಮಾಡುತ್ತದೆ ಎಂಬುದರ ಆಧಾರದ ಮೇಲೆ ಸಿನಿಮಾದ ಭವಿಷ್ಯ ನಿರ್ಧಾರ ಆಗಲಿದೆ.
ಇದನ್ನೂ ಓದಿ:ಪ್ರಿಯಾಂಕಾ ಗಾಂಧಿಯನ್ನು ಹಾಡಿ ಹೊಗಳಿದ ಕಂಗನಾ ರನೌತ್
‘ಎಮರ್ಜೆನ್ಸಿ’ ಚಿತ್ರದ ಬಜೆಟ್ 25 ಕೋಟಿ ರೂಪಾಯಿಗೂ ಅಧಿಕವಾಗಿದೆ. ಹೀಗಾಗಿ, ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಿದರೆ ಮಾತ್ರ ನಿರ್ಮಾಪಕಿ ಆಗಿ ಕಂಗನಾಗೆ ಲಾಭ ಆಗಲಿದೆ. ಈ ಮೊದಲು ಮಾತನಾಡಿದ್ದ ಕಂಗನಾ ಅವರು ತಾವು ದುಡಿದ ಹಣವನ್ನು ಈ ಚಿತ್ರ ಸುರಿದಿದ್ದಾಗಿ ಹೇಳಿದ್ದರು. ಸಿನಿಮಾ ನಷ್ಟ ಕಂಡರೆ ಅವರೂ ಸಂಕಷ್ಟ ಅನುಭವಿಸಲಿದ್ದಾರೆ.
ರಾಜಕೀಯ ವಿಚಾರಗಳನ್ನು ಇಟ್ಟುಕೊಂಡು ಸಿನಿಮಾಗಳನ್ನು ಮಾಡುವುದು ಕಷ್ಟ. ಕಂಗನಾಗೆ ಇದು ಗಮನಕ್ಕೆ ಬಂದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ರೀತಿಯ ಪ್ರಯತ್ನ ಮಾಡುವುದಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ‘ಎಮರ್ಜೆನ್ಸಿ’ ಸಿನಿಮಾದಲ್ಲಿ ಕಂಗನಾ ರಣಾವತ್, ಅನುಪಮ್ ಖೇರ್, ಶ್ರೇಯಸ್ ತಲ್ಪಡೆ, ಮಹಿಮಾ ಚೌಧರಿ, ಮಿಲಿಂದ್ ಸೋಮನ್ ಮೊದಲಾದವರು ನಟಿಸಿದ್ದಾರೆ. ಸೆನ್ಸಾರ್ ಮಂಡಳಿಯವರು ಹಾಕಿದ ಕಟ್ಗಳು ಚಿತ್ರಕ್ಕೆ ತೊಂದರೆ ಉಂಟು ಮಾಡಿದೆ ಎನ್ನಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ