‘‘ರೆಸ್ಟೋರೆಂಟ್ನ ಟೇಬಲ್ಗಳಿಗಿಂತಲೂ ಹೆಚ್ಚು ಸಂಖ್ಯೆಯ ನಟರು ಆ ನಿರ್ದೇಶಕಿಯ ಕತೆಯನ್ನು ಒಲ್ಲೆ ಎಂದಿದ್ದರು’’
Karan Johar: ಆಕೆ ನಟರಿಗೆ ಕತೆ ಹೇಳಿದ ರೆಸ್ಟೋರೆಂಟ್ನಲ್ಲಿ ಇದ್ದ ಟೇಬಲ್ಗಳ ಸಂಖ್ಯೆಗಿಂತಲೂ ಹೆಚ್ಚು ಜನ ನಟರು ಆಕೆಯ ಸಿನಿಮಾದಲ್ಲಿ ನಟಿಸಲು ಒಲ್ಲೆ ಎಂದಿದ್ದರು, ಕರಣ್ ಜೋಹರ್ ಈ ಮಾತು ಹೇಳಿದ್ದು ಯಾರಿಗೆ?
![‘‘ರೆಸ್ಟೋರೆಂಟ್ನ ಟೇಬಲ್ಗಳಿಗಿಂತಲೂ ಹೆಚ್ಚು ಸಂಖ್ಯೆಯ ನಟರು ಆ ನಿರ್ದೇಶಕಿಯ ಕತೆಯನ್ನು ಒಲ್ಲೆ ಎಂದಿದ್ದರು’’](https://images.tv9kannada.com/wp-content/uploads/2023/11/karan-zoya.jpg?w=1280)
”ಆಕೆ ಕತೆ ಹೇಳಿದ ರೆಸ್ಟೋರೆಂಟ್ನಲ್ಲಿ ಇದ್ದ ಟೇಬಲ್ಗಳ ಸಂಖ್ಯೆಗಿಂತಲೂ ಹೆಚ್ಚಿನ ಸಂಖ್ಯೆಯ ನಟರು ಆ ನಿರ್ದೇಶಕಿಯ ಸಿನಿಮಾದಲ್ಲಿ ನಟಿಸಲು ಒಲ್ಲೆ ಎಂದಿದ್ದರು” ಬಾಲಿವುಡ್ನ ಜನಪ್ರಿಯ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ (Karan Johar) ಈ ಮಾತು ಹೇಳಿರುವುದು ಬಾಲಿವುಡ್ನ ಅತ್ಯಂತ ಪ್ರತಿಭಾವಂತ ನಿರ್ದೇಶಕಿ ಜೋಯಾ ಅಖ್ತರ್ (Zoya Akhtar) ಕುರಿತು. ಜೋಯಾ ಅಖ್ತರ್ ಸಿನಿಮಾ ಹಿನ್ನೆಲೆಯುಳ್ಳ ಕುಟುಂಬದವರೇ ಆದರೆ ಮಹಿಳೆ ಆಗಿರುವ ಏಕೈಕ ಕಾರಣಕ್ಕೆ ಸಿನಿಮಾ ನಿರ್ದೇಶಿಸಲು ಆಕೆ ಪಟ್ಟ ಕಷ್ಟಗಳು ಎಂಥಹವು ಎಂಬುದನ್ನು ಕರಣ್ ಜೋಹರ್ ತಮ್ಮ ಉದ್ದನೆಯ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ವಿವರಿಸಿದ್ದಾರೆ.
”ನಾನು ಹಾಗೂ ಜೋಯಾ ಅಖ್ತರ್ ಒಟ್ಟಿಗೆ ಬೆಳೆದೆವು. ಆಕೆ ಬಹಳ ಬುದ್ಧಿವಂತೆ ಆಗಿದ್ದಳು, ಈಗಲೂ ಕೂಡ. ಆದರೆ ಆಕೆ ತನ್ನ ಮೊದಲ ಸಿನಿಮಾ ಮಾಡಲು ಬರೋಬ್ಬರಿ ಏಳು ವರ್ಷಗಳ ಕಾಲ ಒದ್ದಾಡಬೇಕಾಯ್ತು. ಆಕೆಯೂ ಸಹ ಸಿನಿಮಾ ಹಿನ್ನೆಲೆಯುಳ್ಳ ಕುಟುಂಬದವಳಾಗಿಯೂ ಸಹ ಆಕೆ ಹಲವು ಕಷ್ಟಗಳನ್ನು ಪಡಬೇಕಾಯ್ತು. ಆಕೆ ನಟರಿಗೆ ಕತೆ ಹೇಳಿದ ರೆಸ್ಟೋರೆಂಟ್ನಲ್ಲಿದ್ದ ಟೇಬಲ್ಗಳ ಸಂಖ್ಯೆಗಿಂತಲೂ ಹೆಚ್ಚು ಮಂದಿ ನಟರು ಆಕೆಯೊಟ್ಟಿಗೆ ಸಿನಿಮಾ ಮಾಡಲು ನಿರಾಕರಿಸಿದ್ದರು” ಎಂದು ಬರೆದಿದ್ದಾರೆ ಕರಣ್.
ಇದನ್ನೂ ಓದಿ:ಅನನ್ಯಾ ಪಾಂಡೆ ಪ್ರೀತಿಸುತ್ತಿರುವುದು ಇಶಾನ್ ಅನ್ನೋ ಕಾರ್ತಿಕ್ ಅನ್ನೋ: ಕರಣ್ ಜೋಹರ್ಗೆ ಸಿಕ್ತಾ ಉತ್ತರ?
”ಆದರೆ ಆಕೆ ತನ್ನ ಮೇಲೆ ನಂಬಿಕೆ ಕಳೆದುಕೊಳ್ಳಲಿಲ್ಲ, ‘ಲಕ್ ಬೈ ಚಾನ್ಸ್’ ಸಿನಿಮಾ ಮಾಡಿದಳು, ಆ ಸಿನಿಮಾ ಆ ವರ್ಷದ ಅತ್ಯುತ್ತಮ ವಿಮರ್ಶೆ ಗಳಿಸಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಯ್ತಾದರೂ ಬಾಕ್ಸ್ ಆಫೀಸ್ನಲ್ಲಿ ಅವಳಿಗೆ ಲಕ್ ಸಿಗಲಿಲ್ಲ. ಅದರ ನಂತರ ಮಾಡಿದ್ದು ಜೋಯಾ ನಿರ್ದೇಶನದ ನನ್ನ ಅತ್ಯಂತ ಮೆಚ್ಚಿನ ಸಿನಿಮಾ ‘ಜಿಂದಗಿ ನಾ ಮಿಲೇಗಿ ದುಬಾರಾ’. ಆ ಸಿನಿಮಾ ನೋಡಿದವರು, ಸಿನಿಮಾದ ಕೆಲವು ಭಾಗಗಳನ್ನು ಕತ್ತರಿಸಲು ಹೇಳಿದರು, ರೋಡ್ ಟ್ರಿಪ್ನ ಶಾಟ್ಗಳನ್ನು, ಕಾರಿನಲ್ಲಿ ನಡೆಯುವ ದೃಶ್ಯಗಳನ್ನು ಕತ್ತರಿಸಿ ಒಂದು ಐಟಂ ಹಾಡನ್ನು ಸೇರಿಸಲು ಹೇಳಿದ್ದರು. ಆದರೆ ಜೋಯಾ ಯಾವುದಕ್ಕೂ ಸೊಪ್ಪು ಹಾಕಲಿಲ್ಲ. ತನ್ನ ಸಿನಿಮಾ ಮೇಲೆ ನಂಬಿಕೆ ಇಟ್ಟಳು. ಆ ಸಿನಿಮಾ ಸೂಪರ್-ಡೂಪರ್ ಹಿಟ್ ಮಾತ್ರವಲ್ಲ ಪ್ರಶಸ್ತಿಗಳನ್ನು ಸಹ ದೋಚಿತು. ಬಾಕ್ಸ್ ಆಫೀಸ್ನಲ್ಲಿಯೂ ಹಿಟ್ ಆಗಿ ವಿಮರ್ಶಕರಿಂದಲೂ ಮೆಚ್ಚುಗೆ ಗಳಿಸಿ, ಪ್ರಶಸ್ತಿ ಗೆಲ್ಲುವ ನಿರ್ದೇಶಕರು ಜೋಯಾ ಬಿಟ್ಟರೆ ಯಾರಿದ್ದಾರೆ” ಎಂದಿದ್ದಾರೆ ಕರಣ್.
”ಎಲ್ಲರಿಗೂ ಒಂದೊಂದು ಪ್ರಯಾಣ ಇರುತ್ತದೆ, ಜೋಯಾಳದ್ದೂ ಒಂದು ಪ್ರಯಾಣ, ಆಕೆ ನಿರ್ದೇಶಿಸಿದ ‘ಗಲ್ಲಿ ಬಾಯ್’ ಸಿನಿಮಾ ಸೂಪರ್ ಡೂಪರ್ ಹಿಟ್ ಆದ ಬಳಿಕ ಆಕೆ ಯಾವ ದೊಡ್ಡ ಸೂಪರ್ ಸ್ಟಾರ್ ಜೊತೆಗೆ ಬೇಕಿದ್ದರೂ ಸಿನಿಮಾ ಮಾಡಬಹುದಾಗಿತ್ತು. ಆದರೆ ಆಕೆಯ ನಂಬಿಕೆ ಆಕೆಯನ್ನು ಆಕೆ ಬಾಲ್ಯದಲ್ಲಿ ಓದಿ ಇಷ್ಟಪಟ್ಟಿದ್ದ ಕಾಮಿಕ್ಸ್ ಕಡೆಗೆ ಕೊಂಡೊಯ್ಯಿತು. ಈಗ ‘ದಿ ಆರ್ಚೀಸ್’ ಸಿನಿಮಾ ಮಾಡಿದ್ದಾಳೆ. ಜೋಯಾ ಸಿನಿಮಾದ ಟ್ರೈಲರ್ ಅತ್ಯುದ್ಭುತವಾಗಿದೆ. ಸಿನಿಮಾದಲ್ಲಿ ನಟಿಸಿರುವ ಏಳು ಯುವ ನಟರು ಅದೃಷ್ಟವಂತರು, ಅವರಿಗೆ ನಿನ್ನ ಮಾರ್ಗದರ್ಶಿನದಲ್ಲಿ ನಟಿಸಲು ಅವಕಾಶ ಸಿಕ್ಕಿರುವುದು ಅವರ ಪುಣ್ಯ” ಎಂದಿದ್ದಾರೆ ಕರಣ್.
ಜೋಯಾ ಅಖ್ತರ್, ಬಾಲಿವುಡ್ನ ಜನಪ್ರಿಯ ಸಿನಿಮಾ ಸಾಹಿತಿ ಜಾವೇದ್ ಅಖ್ತರ್ ಪುತ್ರಿ, ಜೋಯಾರ ಸಹೋದರ ಫರ್ಹಾನ್ ಅಖ್ತರ್ ಸಹ ನಿರ್ದೇಶಕ ಹಾಗೂ ನಟ. ಜೋಯಾ ಅಖ್ತರ್ ಬಾಲಿವುಡ್ನ ಅತ್ಯಂತ ಪ್ರತಿಭಾನ್ವಿತ ನಿರ್ದೇಶಕರಲ್ಲಿ ಒಬ್ಬರು. ಅವರ ನಿರ್ದೇಶನದ ‘ದಿ ಆರ್ಚೀಸ್’ ಸಿನಿಮಾದ ಟ್ರೈಲರ್ ಇಂದು ಬಿಡುಗಡೆ ಆಗಿದ್ದು, ಸಿನಿಮಾ ಡಿಸೆಂಬರ್ 7ರಂದು ಬಿಡುಗಡೆ ಆಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ