AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಕ್ಷಿಣ ಭಾರತ ಚಿತ್ರರಂಗದಿಂದ ಬಾಲಿವುಡ್ ಹಾದಿ ತಪ್ಪುತ್ತಿದೆ: ಕರಣ್ ಜೋಹರ್

Karan Johar: ಅತಿಯಾದ ಪುರುಷ ಅಹಂಕಾರ, ಪುರುಷ ಪ್ರಾಧಾನ್ಯತೆಯನ್ನು ಸಿನಿಮಾಗಳಲ್ಲಿ ತೋರಿಸುವುದು ಬಾಲಿವುಡ್​ನ ಜಾಯಮಾನವನ್ನು, ನಾವು ಅದನ್ನು ದಕ್ಷಿಣ ಚಿತ್ರರಂಗದಿಂದ ಎರವಲು ಪಡೆದಿದ್ದೇವೆ. 'ಕೆಜಿಎಫ್', 'ಪುಷ್ಪ' ಸಿನಿಮಾಗಳು ಹಿಟ್ ಆದ ಬಳಿಕ ಇದು ಹೆಚ್ಚಾಗಿದೆ ಎಂದಿದ್ದಾರೆ ಕರಣ್.

ದಕ್ಷಿಣ ಭಾರತ ಚಿತ್ರರಂಗದಿಂದ ಬಾಲಿವುಡ್ ಹಾದಿ ತಪ್ಪುತ್ತಿದೆ: ಕರಣ್ ಜೋಹರ್
ಮಂಜುನಾಥ ಸಿ.
|

Updated on: Oct 25, 2023 | 4:30 PM

Share

ದಕ್ಷಿಣ ಭಾರತದ ಸಿನಿಮಾಗಳು (South Indian Movie Industry) ವಿಶ್ವದೆಲ್ಲೆಡೆ ಕಮಾಲ್ ಮಾಡುತ್ತಿವೆ. ಹಿಂದಿ ಸಿನಿಮಾಗಳ ಪಾರುಪತ್ಯ ಇದ್ದ ಪ್ರದೇಶಗಳನ್ನೂ ಸಹ ದಕ್ಷಿಣ ಭಾರತದ ಸಿನಿಮಾಗಳು ಇತ್ತೀಚೆಗಿನ ಕೆಲ ವರ್ಷಗಳಲ್ಲಿ ಆಕ್ರಮಿಸಿಕೊಂಡಿವೆ. ಉತ್ತರ ಭಾರತದಲ್ಲಿ ದಕ್ಷಿಣ ಭಾರತದ ಸಿನಿಮಾಗಳಿಗೆ ಭಾರಿ ಬೇಡಿಕೆ ಇದ್ದು, ಕರಣ್ ಜೋಹರ್ ಸೇರಿದಂತೆ ಹಲವು ಬಾಲಿವುಡ್​ನ ಪ್ರಮುಖ ನಿರ್ಮಾಪಕರು, ವಿತರಕರು ಇದರ ಲಾಭ ಪಡೆದುಕೊಳ್ಳುತ್ತಿದ್ದಾರೆ. ಆದರೆ ಇದೀಗ ಕರಣ್ ಜೋಹರ್, ‘ದಕ್ಷಿಣ ಭಾರತದ ಸಿನಿಮಾಗಳಿಂದಾಗಿ ಬಾಲಿವುಡ್​ ತಪ್ಪು ಹಾದಿ ಹಿಡಿಯುತ್ತಿದೆ’ ಎಂಬರ್ಥದ ಮಾತುಗಳನ್ನಾಡಿದ್ದಾರೆ.

ಸಿನಿಮಾಗಳಲ್ಲಿ ಪುರುಷ ಪ್ರಾಧಾನ್ಯತೆ ಅಥವಾ ‘ಹೀರೋಯಿಸಂ’ ಅನ್ನು ತೋರಿಸುವುದು ಇಂದು ನಿನ್ನೆಯದಲ್ಲ. ಅದು ಎಲ್ಲ ಚಿತ್ರರಂಗಗಳಲ್ಲಿಯೂ ಅತ್ಯಂತ ಸಾಮಾನ್ಯ ಅಂಶ. ಆದರೆ ಈ ವಿಷಯವಾಗಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್, ”ದಕ್ಷಿಣ ಭಾರತದ ಸಿನಿಮಾಗಳಿಂದ ‘ಕೆಟ್ಟ ಹೀರೋಯಿಸಂ’ ಅನ್ನು ಬಾಲಿವುಡ್ ಎರವಲು ಪಡೆದುಕೊಂಡಿದೆ” ಎಂದಿದ್ದಾರೆ.

‘ವಿ ಆರ್ ಯುವ’ ಹೆಸರಿನ ಯೂಟ್ಯೂಬ್ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಕರಣ್ ಜೋಹರ್, ”ಕೆಟ್ಟ ಹೀರೋಯಿಸಂ’, ಅಥವಾ ಅತಿಯಾದ ಪುರುಷ ಪ್ರಾಧಾನ್ಯತೆಯುಳ್ಳ ಸಿನಿಮಾಗಳನ್ನು ಮಾಡುವುದು ಬಾಲಿವುಡ್​ನ ನಿಜವಾದ ಜಾಯಮಾನವಲ್ಲ. ಇದನ್ನು ನಾವು ದಕ್ಷಿಣ ಭಾರತ ಚಿತ್ರರಂಗದಿಂದ ಎರವಲು ಪಡೆದಿದ್ದೇವೆ. ‘ಕೆಜಿಎಫ್’, ‘ಪುಷ್ಪ’ ಮಾದರಿಯ ಸಿನಿಮಾಗಳು ಸೂಪರ್ ಹಿಟ್ ಆದ ಬೆನ್ನಲ್ಲೆ ಇಲ್ಲಿಯೂ ಅದೇ ಮಾದರಿಗಳನ್ನು ನಿರ್ಮಿಸುವ ಪ್ರಯತ್ನಗಳು ನಡೆಯುತ್ತಿವೆ. ಆದರೆ ಬಾಲಿವುಡ್​ನವರು ಅದನ್ನು ಕೆಟ್ಟ ರೀತಿಯಾಗಿ ನಕಲು ಮಾಡುತ್ತಿದ್ದಾರೆ” ಎಂದಿದ್ದಾರೆ.

ಇದನ್ನೂ ಓದಿ:ಲೈಂಗಿಕ ಜೀವನ, ನೆಪೋಟಿಸಂ ವಿಚಾರದಲ್ಲಿ ತಮ್ಮನ್ನೇ ಟ್ರೋಲ್ ಮಾಡಿಕೊಂಡ ಕರಣ್ ಜೋಹರ್

”ಹಿಂದಿ ಸಿನಿಮಾ ರಂಗ ಒಂದು ಸಮೂಹ ಮನಸ್ಥಿತಿಯಲ್ಲಿ ಸಿಲುಕಿಕೊಂಡಿದೆ. ಸಿದ್ಧ ಮಾದರಿಗಳಿಗೆ ಅದು ಜೋತು ಬಿದ್ದಿದೆ” ಎಂದಿರುವ ಕರಣ್ ಜೋಹರ್, ”ಜನರೂ ಸಹ ನಾಯಕನನ್ನು ಸರ್ವಶಕ್ತನ ರೀತಿ, ಕೊರತೆಗಳೇ ಇಲ್ಲದ ವ್ಯಕ್ತಿಯಾಗಿ, ಅಸಾಮಾನ್ಯ ಶಕ್ತಿಯುಳ್ಳ ವ್ಯಕ್ತಿಯಾಗಲೇ ನೋಡಲು ಇಷ್ಟಪಡುತ್ತಿದ್ದಾರೆ” ಎಂದಿದ್ದಾರೆ.

ಇದೇ ಚರ್ಚೆಯಲ್ಲಿ ‘ಅರ್ಜುನ್ ರೆಡ್ಡಿ’ ಸಿನಿಮಾದ ಉದಾಹರಣೆಯನ್ನೂ ನೀಡಿರುವ ಕರಣ್ ಜೋಹರ್, ‘ನಮ್ಮವರು ಪುರುಷತ್ವವನ್ನು, ಪುರುಷ ಅಂಹಾಕರವನ್ನು ಪ್ರದರ್ಶಿಸುವಲ್ಲಿ ಸರಿಯಾದ ಹಾದಿಯಲ್ಲಿ ತೋರಿಸಲು ಎಡವುತ್ತಿದ್ದಾರೆ. ಆದರೆ ದಕ್ಷಿಣದವರು ಅದನ್ನು ಸೂಕ್ತವಾಗಿ ನಿಭಾಯಿಸುತ್ತಿದ್ದಾರೆ ‘ಅರ್ಜುನ್ ರೆಡ್ಡಿ’ ಇದಕ್ಕೆ ಒಂದು ಉದಾಹರಣೆ. ‘ಕಬೀರ್ ಸಿಂಗ್​’ ಅನ್ನು ಬಾಲಿವುಡ್ ಪ್ರೇಕ್ಷಕರು ಇಷ್ಟಪಟ್ಟರು ಆದರೆ ಅದು ಒರಿಜಿನಲ್ ಸಿನಿಮಾ ಅಲ್ಲ” ಎಂದಿದ್ದಾರೆ ಕರಣ್ ಜೋಹರ್.

ಅಂದಹಾಗೆ ಕರಣ್ ಜೋಹರ್, ಕನ್ನಡದ ‘ಕೆಜಿಎಫ್’ ಸಿನಿಮಾದ ವಿತರಕರಲ್ಲಿ ಒಬ್ಬರಾಗಿದ್ದರು. ತೆಲುಗಿನ ಬ್ಲಾಕ್​ ಬಸ್ಟರ್ ಸಿನಿಮಾ ‘ಬಾಹುಬಲಿ’ಗೂ ಅವರು ಹಿಂದಿ ವಿತರಕರಾಗಿದ್ದರು. ಹಲವು ದಕ್ಷಿಣದ ಸಿನಿಮಾಗಳ ಹಿಂದಿ ಡಬ್ ಅನ್ನು ವಿತರಣೆ ಮಾಡಿದ್ದಾರೆ. ಸಹ ನಿರ್ಮಾಣ ಸಹ ಮಾಡಿದ್ದಾರೆ ಕರಣ್ ಜೋಹರ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ