‘ಕುಚ್ ಕುಚ್ ಹೋತಾ ಹೈ’ ಸಿನಿಮಾದಲ್ಲಿ ಮಾಡಿರುವ ತಪ್ಪುಗಳ ಒಪ್ಪಿಕೊಂಡ ಕರಣ್ ಜೋಹರ್

|

Updated on: Oct 25, 2023 | 7:16 PM

Karan Johar: ಕರಣ್ ಜೋಹರ್ ನಿರ್ದೇಶನದ ಮೊದಲ ಸಿನಿಮಾ 'ಕುಚ್ ಕುಚ್ ಹೋತಾ ಹೈ' ಬಿಡುಗಡೆ ಆಗಿ 25 ವರ್ಷಗಳಾಗಿವೆ. ಆ ಸಿನಿಮಾದಲ್ಲಿ ತಾವು ಮಾಡಿದ ತಪ್ಪುಗಳ ಬಗ್ಗೆ ಕರಣ್ ಜೋಹರ್ ಮಾತನಾಡಿದ್ದಾರೆ.

ಕುಚ್ ಕುಚ್ ಹೋತಾ ಹೈ ಸಿನಿಮಾದಲ್ಲಿ ಮಾಡಿರುವ ತಪ್ಪುಗಳ ಒಪ್ಪಿಕೊಂಡ ಕರಣ್ ಜೋಹರ್
ಕರಣ್ ಜೋಹರ್
Follow us on

ಶಾರುಖ್ ಖಾನ್ (Shah Rukh Khan), ಕಾಜೊಲ್, ರಾಣಿ ಮುಖರ್ಜಿ ನಟನೆಯ ‘ಕುಚ್ ಕುಚ್ ಹೋತಾ ಹೈ’ ಸಿನಿಮಾ ಬಾಲಿವುಡ್​ನ ಕಲ್ಟ್ ಕ್ಲಾಸಿಕ್​ಗಳಲ್ಲಿ ಒಂದು. ಬಾಲಿವುಡ್​ನ ಅತ್ಯುತ್ತಮ ಪ್ರೇಮಕತೆಗಳಲ್ಲಿ ಒಂದು ಎಂದು ಆ ಸಿನಿಮಾವನ್ನು ಕರೆಯಲಾಗುತ್ತದೆ. ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್​ ನಿರ್ದೇಶನದ ಮೊದಲ ಸಿನಿಮಾ ಅದು. ಸಿನಿಮಾ ಬಿಡುಗಡೆ ಆಗಿ 25 ವರ್ಷಗಳಾಗಿವೆ. ಇದೇ ಸಂದರ್ಭದಲ್ಲಿ ಕರಣ್ ಜೋಹರ್ ‘ಕುಚ್​ ಕುಚ್ ಹೋತಾ ಹೈ’ ಸಿನಿಮಾದಲ್ಲಿ ಮಾಡಿದ ತಪ್ಪುಗಳ ಬಗ್ಗೆ ಮಾತನಾಡಿದ್ದಾರೆ. ಮತ್ತೊಮ್ಮೆ ‘ಕುಚ್ ಕುಚ್ ಹೋತಾ ಹೈ’ ಸಿನಿಮಾ ಮಾಡುವ ಅವಕಾಶ ಸಿಕ್ಕರೆ ಆ ತಪ್ಪುಗಳನ್ನು ಸರಿ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.

ಸಿನಿಮಾದಲ್ಲಿ ಎಂಟು ವರ್ಷದ ಮಗಳು ಅಪ್ಪನ ಲವ್ ಲೈಫ್​ ಬಗ್ಗೆ ನಿಜಕ್ಕೂ ಆಸಕ್ತಳಾಗಿರುತ್ತಾಳಾ, ಅಮ್ಮ ಬರೆದ ಪತ್ರಗಳನ್ನು ಅಷ್ಟು ಗಂಭೀರವಾಗಿ ಪರಿಗಣಿಸುತ್ತಾಳೆ ಎಂಬುದು ಅಸಾಧ್ಯ. ಎಂಟನೇ ವರ್ಷಕ್ಕೆ ಬರೆದ ಪತ್ರಕ್ಕಿಂತಲೂ ಮುಂಚಿನ ವರ್ಷ ಯಾವ ವಿಷಯಗಳ ಬಗ್ಗೆ ಅಮ್ಮ ತನ್ನ ಪತ್ರದಲ್ಲಿ ಬರೆದಿದ್ದಳು ಅದನ್ನು ಮಗಳು ಎಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾಳೆ ಎಂಬುದು ಸಹ ಮುಖ್ಯವಾಗಿರುತ್ತದೆ. ಅಲ್ಲದೆ, ಎಂಟು ವರ್ಷದ ಬಳಿಕವೂ ಕಾಜೊಲ್​ ಇನ್ನೂ ಮದುವೆಯಾಗದೆ ಇರುತ್ತಾಳೆ ಎಂಬುದು ರಾಣಿ ಮುಖರ್ಜಿಗೆ ಹೇಗೆ ತಿಳಿದುರುತ್ತದೆ? ಇದಕ್ಕೆಲ್ಲ ಲಾಜಿಕ್ ಇಲ್ಲ ಎಂದು ಸ್ವತಃ ಕರಣ್ ಜೋಹರ್ ಹೇಳಿದ್ದಾರೆ.

‘ಕುಚ್ ಕುಚ್ ಹೋತಾ ಹೈ’ ಸಿನಿಮಾದಲ್ಲಿ ಲಿಂಗ ತಾರತಮ್ಯ ಇದೆ. ಅದರ ಬಗ್ಗೆ ನನಗೆ ಸಹ ಬೇಸರವಿದೆ. ಆದರೆ ನಾನು ಆ ಸಿನಿಮಾ ಮಾಡುವ ಕಾಲಕ್ಕೆ ತರುಣ ನನಗೆ ಆಗ ಆ ವಿಷಯಗಳು ಗಮನಕ್ಕೆ ಬಂದಿರಲಿಲ್ಲ. ಹಾಗಾಗಿ ನಾನೂ ಸಹ ಆ ವಿಷಯಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ. ಕಾಜೊಲ್​ ಹೇರ್​ ಸ್ಟೈಲ್, ಬಟ್ಟೆ ಧರಿಸುವ ವಿಧಾನ ಬದಲಾಗುತ್ತಿದ್ದಂತೆ ಶಾರುಖ್ ಖಾನ್​ಗೆ ಆಕೆಯ ಮೇಲೆ ಲವ್ ಆಗಿಬಿಡುತ್ತದೆ ಎಂಬುದು ಸಹ ಒಪ್ಪಲು ಅಸಾಧ್ಯವಾದುದು ಆದರೆ ಈ ಪ್ರಶ್ನೆಗಳೆಲ್ಲ ಆಗ ನನ್ನ ಮನಸ್ಸಿಗೆ ಬಂದಿರಲಿಲ್ಲ. ಸೆಟ್​ನಲ್ಲಿ ಸಹ ಯಾರು ಈ ಪ್ರಶ್ನೆಗಳನ್ನು ಕೇಳಿರಲಿಲ್ಲ” ಎಂದಿದ್ದಾರೆ ಕರಣ್ ಜೋಹರ್.

ಇದನ್ನೂ ಓದಿ:ದಕ್ಷಿಣ ಭಾರತ ಚಿತ್ರರಂಗದಿಂದ ಬಾಲಿವುಡ್ ಹಾದಿ ತಪ್ಪುತ್ತಿದೆ: ಕರಣ್ ಜೋಹರ್

‘ಸಿನಿಮಾ ಬಿಡುಗಡೆ ಆದ ಬಳಿಕ ಶಬಾನಾ ಆಜ್ಮಿ ಕರೆ ಮಾಡಿ, ಕಾಜೋಲ್ ಚಿಕ್ಕ ತಲೆ ಗೂದಲು ಇಟ್ಟುಕೊಂಡಿದ್ದಕ್ಕೆ ಶಾರುಖ್ ಖಾನ್​ಗೆ ಅವಳ ಮೇಲೆ ಪ್ರೇಮ ಹುಟ್ಟಲಿಲ್ಲ, ಕೂದಲು ಉದ್ದ ಬಿಟ್ಟ ತಕ್ಷಣ ಪ್ರೇಮ ಹುಟ್ಟಿಬಿಟ್ಟಿತು, ಇದರ ಬಗ್ಗೆ ಏನು ಹೇಳುತ್ತೀಯ?” ಎಂದು ಕೇಳಿದ್ದರು, ಆಗ ನಾನು ನಿಮ್ಮ ಬಳಿ ಕ್ಷಮೆ ಕೇಳುವುದು ಬಿಟ್ಟು ನನಗೆ ಬೇರೇನೂ ಗೊತ್ತಿಲ್ಲ” ಎಂದಿದ್ದೆ ಎಂದು ಕರಣ್ ಹೇಳಿಕೊಂಡಿದ್ದಾರೆ.

‘ಕುಚ್ ಕುಚ್ ಹೋತಾ ಹೈ’ ಸಿನಿಮಾ ಅಕ್ಟೋಬರ್ 16, 1998 ರಲ್ಲಿ ಬಿಡುಗಡೆ ಆಗಿತ್ತು. ಆಗಿನ ಕಾಲಕ್ಕೆ ಅತ್ಯಂತ ಸ್ಟೈಲಿಷ್ ಸಿನಿಮಾ ಅದಾಗಿತ್ತು. ಸಿನಿಮಾದಲ್ಲಿ ತ್ರಿಕೋನ ಪ್ರೇಮಕತೆ ಇತ್ತು. ಸಿನಿಮಾದ ಹಾಡುಗಳು, ಡೈಲಾಗ್​ಗಳು, ಸಿನಿಮಾದ ಬಟ್ಟೆಗಳು ಸಹ ಭಾರಿ ಜನಪ್ರಿಯತೆ ಗಳಿಸಿದ್ದವು. ಆ ಸಿನಿಮಾದ ಬಳಿಕ ಹಲವರು ತಮ್ಮ ಮಕ್ಕಳಿಗೆ ರಾಜ್, ಸಿಮ್ರನ್ ಎಂದು ಹೆಸರಿಟ್ಟಿದ್ದರು. ಮಕ್ಕಳಿಗೆ ತಮ್ಮ ಪ್ರೇಮಿಗಳ ಹೆಸರಿಡುವ ಟ್ರೆಂಡ್ ಸಹ ಅದೇ ಸಿನಿಮಾದಿಂದ ಶುರುವಾಗಿತ್ತು. ಇದೀಗ ಸಿನಿಮಾ ಮರು ಬಿಡುಗಡೆ ಆಗಿದ್ದು ಹಲವೆಡೆ ತುಂಬಿದ ಗೃಹಗಳ ಪ್ರದರ್ಶನ ಕಾಣುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ