ಮಾಲ್ಡೀವ್ಸ್​ನಿಂದ ಮುಂಬೈಗೆ ಬಂದಿಳಿದ ಸೈಫ್ ಕುಟುಂಬ; ವಿಶೇಷ ದಿರಿಸಿನಿಂದ ಗಮನ ಸೆಳೆದ ಕರೀನಾ

| Updated By: shivaprasad.hs

Updated on: Aug 22, 2021 | 6:31 PM

ಮಾಲ್ಡೀವ್ಸ್​ಗೆ ತೆರಳಿದ್ದ ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ಕುಟುಂಬ ಇಂದು ಭಾರತಕ್ಕೆ ವಾಪಸ್ಸಾಗಿದೆ. ಈ ವೇಳೆ ಕರೀನಾ ಧರಿಸಿದ್ದ ವಿಭಿನ್ನ ಶೈಲಿಯ ಉಡುಪು ನೆಟ್ಟಿಗರ ಮನಗೆದ್ದಿದೆ.

ಮಾಲ್ಡೀವ್ಸ್​ನಿಂದ ಮುಂಬೈಗೆ ಬಂದಿಳಿದ ಸೈಫ್ ಕುಟುಂಬ; ವಿಶೇಷ ದಿರಿಸಿನಿಂದ ಗಮನ ಸೆಳೆದ ಕರೀನಾ
ಕ್ಯಾಮೆರಾದಲ್ಲಿ ಸೆರೆಯಾದ ಕರೀನಾ ಕಪೂರ್ ಹಾಗೂ ಕುಟುಂಬ
Follow us on

ಬಾಲಿವುಡ್​ನ ತಾರಾ ಜೋಡಿ ಕರೀನಾ ಕಪೂರ್ ಹಾಗೂ ಸೈಫ್ ಅಲಿ ಕಾನ್ ಕುಟುಂಬವು ಮಾಲ್ಡೀವ್ಸ್​ಗೆ ರಜಾ ದಿನಗಳನ್ನು ಕಳೆಯಲು ತೆರಳಿತ್ತು. ಅಲ್ಲಿಯೇ ಸೈಫ್ ಅಲಿ ಖಾನ್ ಜನ್ಮದಿನವನ್ನೂ ಆಚರಿಸಿದ್ದ ಕುಟುಂಬ ಸಂತಸದಿಂದ ದಿನಗಳನ್ನು ಕಳೆದಿತ್ತು. ಸೈಫ್- ಕರೀನಾರ ಎರಡನೇ ಪುತ್ರ ಜೇಹ್​ನ ಆರು ತಿಂಗಳ ಸಂಭ್ರಮವನ್ನೂ ಆಚರಿಸಿಕೊಂಡಿದ್ದ ಬಾಲಿವುಡ್ ತಾರಾ ಜೋಡಿ, ಈಗ ಮಾಲ್ಡೀವ್ಸ್​ನಿಂದ ಮರಳಿದೆ. ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿರುವ ಸೈಫ್ ಕುಟುಂಬವು ಅಲ್ಲಿಂದ ತಮ್ಮ ನಿವಾಸದತ್ತ ತೆರಳಿದೆ. ಈ ಸಂದರ್ಭದಲ್ಲಿ ಕರೀನಾ ಧರಿಸಿದ್ದ ವಿಶೇಷ ದಿರಿಸು ಎಲ್ಲರ ಗಮನ ಸೆಳೆದಿದೆ. ವಿಡಿಯೊಗಳು ಛಾಯಾಗ್ರಾಹಕರ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಮಾಲ್ಡೀವ್ಸ್​ನಿಂದ ಬಂದಿಳಿದ ಕರೀನಾ ಕುಟುಂಬ:

ಮಾಲ್ಡೀವ್ಸ್​ಗೆ ತೆರಳಿದ್ದ ಕರೀನಾ ಅಲ್ಲಿನ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಎರಡನೇ ಪುತ್ರ ಜೇಹ್​ನೊಂದಿಗಿನ ಚಿತ್ರವನ್ನೂ ಮಾಲ್ಡೀವ್ಸ್​ನಿಂದ ಹಂಚಿಕೊಂಡಿದ್ದ ಕರೀನಾ, ಅದಕ್ಕೂ ಮೊದಲು ಜೇಹ್​ನ ಮುಖವನ್ನು ಜಾಲತಾಣಗಳಲ್ಲಿ ಹಂಚಿಕೊಳ್ಳುವ ಕುರಿತು ತಾನಿನ್ನೂ ಯೋಚಿಸುತ್ತಿದ್ದೇನೆ ಎಂದಿದ್ದರು. ಆದರೆ ಅವರು ಬರೆದಿರುವ ‘ಪ್ರೆಗ್ನೆನ್ಸಿ ಬೈಬಲ್’ ಪುಸ್ತಕ ಬಿಡುಗಡೆಯ ನಂತರ ಅವರು ಜೇಹ್​ನ ಭಾವಚಿತ್ರವನ್ನು ಹಂಚಿಕೊಂಡಿದ್ದರು.

ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ದಂಪತಿಗೆ ಈರ್ವರು ಮಕ್ಕಳಿದ್ದು, ಮೊದಲನೆಯವನಿಗೆ ತೈಮೂರು ಅಲಿ ಖಾನ್ ಎಂದು ನಾಮಕರಣ ಮಾಡಿದ್ದಾರೆ. ಎರಡನೇ ಮಗುವಿಗೆ ಜಹಾಂಗೀರ್ ಅಲಿ ಖಾನ್ ಎಂದು ಹೆಸರಿಡಲಾಗಿದೆ. ಮಕ್ಕಳಿಗೆ ಈ ಹೆಸರನ್ನಿಟ್ಟಿರುವುದಕ್ಕೆ ದಂಪತಿಗಳು ವಿರೋಧ ಎದುರಿಸಿದ್ದರೂ ಕೂಡಾ ಕರೀನಾ ಇದಕ್ಕೆ ತಲೆ ಕೆಡಿಸಿಕೊಂಡಿಲ್ಲ. ಈ ವಿಷಯದಲ್ಲಿ ತಾನು ಸಾಧ್ಯವಾದಷ್ಟು ಧನಾತ್ಮಕವಾಗಿರುತ್ತೇನೆ. ಒಳ್ಳೆಯದಿರುವಲ್ಲಿ ಕೆಟ್ಟದ್ದೂ ಇರುತ್ತದೆ ಎಂದು ಕರೀನಾ ಸಂದರ್ಶನವೊಂದರಲ್ಲಿ ಹೇಳಿದ್ದರು. ಚಿತ್ರಗಳ ವಿಷಯಕ್ಕೆ ಬಂದರೆ ಕರೀನಾ ‘ಲಾಲ್ ಸಿಂಗ್ ಛಡ್ಡಾ’ ಚಿತ್ರದಲ್ಲಿ ಅಮೀರ್ ಖಾನ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಪತಿ ಸೈಫ್ ಅಲಿ ಖಾನ್ ಬತ್ತಳಿಕೆಯಲ್ಲೂ ಹಲವಾರು ಚಿತ್ರಗಳಿದ್ದು, ಪ್ರಭಾಸ್ ನಟನೆಯ ‘ಆದಿಪುರುಷ್’ ಸೇರಿದಂತೆ ಹಲವಾರು ಪ್ರಾಜೆಕ್ಟ್​ಗಳಲ್ಲಿ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ:

‘ಜೇಹ್​’ಗೆ ಆರು ತಿಂಗಳ ಸಂಭ್ರಮ; ಹಾರೈಕೆಗಳ ಮಹಾಪೂರ ಹರಿಸಿದ ಕರೀನಾ

Kareena Kapoor: ಮಾಲ್ಡೀವ್ಸ್​ನಿಂದ ಸೆಲ್ಫಿ ಸೀರೀಸ್ ಮುಂದುವರೆಸಿದ ಕರೀನಾ; ಫಿದಾಗೊಂಡ ಅಭಿಮಾನಿಗಳು

(Kareeena Kapoor and her family returns from Maldives)