Kareena Kapoor: ಮಾಲ್ಡೀವ್ಸ್​ನಿಂದ ಸೆಲ್ಫಿ ಸೀರೀಸ್ ಮುಂದುವರೆಸಿದ ಕರೀನಾ; ಫಿದಾಗೊಂಡ ಅಭಿಮಾನಿಗಳು

ಪತಿ ಸೈಫ್ ಹಾಗೂ ಮಕ್ಕಳೊಂದಿಗೆ ಬಿಡುವಿನ ವೇಳೆಯನ್ನು ಕಳೆಯಲು ಮಾಲ್ಡೀವ್ಸ್​ಗೆ ತೆರಳಿರುವ ಕರೀನಾ ಕಪೂರ್ ಅಲ್ಲಿಂದ ಸಾಲು ಸಾಲು ಸೆಲ್ಫಿಗಳನ್ನು ಹಂಚಿಕೊಂಡಿದ್ದಾರೆ.

Kareena Kapoor: ಮಾಲ್ಡೀವ್ಸ್​ನಿಂದ ಸೆಲ್ಫಿ ಸೀರೀಸ್ ಮುಂದುವರೆಸಿದ ಕರೀನಾ; ಫಿದಾಗೊಂಡ ಅಭಿಮಾನಿಗಳು
ಕರೀನಾ ಹಂಚಿಕೊಂಡ ಸೆಲ್ಫಿ
Follow us
TV9 Web
| Updated By: shivaprasad.hs

Updated on: Aug 19, 2021 | 3:07 PM

ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಸದ್ಯ ಮಾಲ್ಡೀವ್ಸ್​ನಲ್ಲಿ ಕುಟುಂಬ ಸಮೇತ ಸಂತಸದಿಂದ ದಿನಗಳನ್ನು ಕಳೆಯುತ್ತಿದ್ದಾರೆ. ಪತಿ ಸೈಫ್ ಅಲಿ ಖಾನ್​ರ ಹುಟ್ಟುಹಬ್ಬವನ್ನೂ ಅಲ್ಲೇ ಆಚರಿಸಿರುವ ಕರೀನಾ, ಕುಟುಂಬದೊಂದಿಗೆ ತೆಗೆಸಿಕೊಂಡ ಚಿತ್ರಗಳನ್ನು ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ನಿನ್ನೆಯಷ್ಟೇ ಕರೀನಾ ಗಾಳಿಗೆ ಕೂದಲು ಹಾರುತ್ತಿರುವ, ಮೇಕಪ್ ಇಲ್ಲದ ಒಂದು ಸೆಲ್ಫಿಯನ್ನು ತೆಗೆದು ಹಂಚಿಕೊಂಡಿದ್ದರು. ಇಂದು ಅದರ ಮುಂದುವರೆದ ಭಾಗವೆಂಬಂತೆ ಮತ್ತೊಂದು ಸೆಲ್ಫಿಯನ್ನು ಕರೀನಾ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಕಪ್ಪು ಬಣ್ಣದ ಈಜುಡುಗೆಯಲ್ಲಿ ಮಿಂಚುತ್ತಿರುವ ಕರೀನಾ, ಬಿಸಿಲಿಗೆ ಮುಖ ಮಾಸಿರುವುದನ್ನೂ ಕಾಣಿಸುತ್ತಾ ಸೆಲ್ಫಿ ತೆಗೆದು ಹಂಚಿಕೊಂಡಿದ್ದಾರೆ. ಜೊತೆಗೆ ಅದಕ್ಕೆ ‘ಸೆಲ್ಫಿ ಸಿರೀಸ್ ಕಂಟಿನ್ಯೂಸ್’ ಎಂದು ಬರೆದುಕೊಂಡಿದ್ದಾರೆ. ಈ ಚಿತ್ರ ಸದ್ಯ ಅಂತರ್ಜಾಲದಲ್ಲಿ ವೈರಲ್ ಆಗಿದೆ. ಕರೀನಾ ಹಂಚಿಕೊಂಡಿರುವ ಚಿತ್ರವನ್ನು ಅವರ ಅಭಿಮಾನಿಗಳು ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.

ಕರೀನಾ ಹಂಚಿಕೊಂಡ ಚಿತ್ರ:

ಇತ್ತೀಚೆಗಷ್ಟೇ ಕರೀನಾ ತಾವು ಗರ್ಭಿಣಿಯಾದ ಸಂದರ್ಭದ ಅನುಭವಗಳನ್ನು ಆಧರಿಸಿ ‘ಪ್ರಗ್ನೆನ್ಸಿ ಬೈಬಲ್’ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದ್ದರು. ಈ ಪುಸ್ತಕದ ಮೂಲಕ ತಾರೆಯರು ಸಾಮಾನ್ಯವಾಗಿ ಬಹಿರಂಗವಾಗಿ ಹೇಳಿಕೊಳ್ಳಲು ಹಿಂಜರಿಯುವ ಬಹಳಷ್ಟು ಅಚ್ಚರಿಯ ವಿಚಾರಗಳನ್ನು ಅವರು ಹಂಚಿಕೊಂಡಿದ್ದರು. ಕರೀನಾ ಮತ್ತು ಸೈಫ್ ದಂಪತಿಗೆ 2016ರ ಡಿಸೆಂಬರ್​ನಲ್ಲಿ ಮೊದಲ ಮಗು ಜನಿಸಿದ್ದು, ಅದಕ್ಕೆ ತೈಮೂರ್ ಎಂದು ನಾಮಕರಣ ಮಾಡಿದ್ದಾರೆ. ಇತ್ತೀಚೆಗೆ ಎರಡನೇ ಮಗುವಿನ ತಾಯಿಯಾಗಿರುವ ಕರೀನಾ- ಸೈಫ್, ಅದಕ್ಕೆ ಜಹಾಂಗೀರ್ ಎಂದು ಹೆಸರಿಟ್ಟಿದ್ದಾರೆ. ಮಗುವಿನ ಮುಖವನ್ನು ಸೈಫ್ ಜನ್ಮದಿನದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಈ ದಂಪತಿ, ಮಕ್ಕಳ ಹೆಸರಿನ ಕುರಿತು ಸಾಕಷ್ಟು ಟೀಕೆಯನ್ನು ಎದುರಿಸಿದ್ದರು.

ಚಿತ್ರಗಳ ವಿಷಯಕ್ಕೆ ಬಂದರೆ ಕರೀನಾ ‘ಲಾಲ್ ಸಿಂಗ್ ಛಡ್ಡಾ’ ಚಿತ್ರದಲ್ಲಿ ಅಮೀರ್ ಖಾನ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಪತಿ ಸೈಫ್ ಅಲಿ ಖಾನ್ ಬತ್ತಳಿಕೆಯಲ್ಲೂ ಹಲವಾರು ಚಿತ್ರಗಳಿದ್ದು, ಅವರು ವೆಬ್ ಸಿರೀಸ್, ಚಿತ್ರಗಳು ಸೇರಿದಂತೆ ಹಲವಾರು ಪ್ರಾಜೆಕ್ಟ್​ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:

Kareena Kapoor: ಮಕ್ಕಳು ಫಿಲ್ಮ್ ಸ್ಟಾರ್ಸ್ ಆಗೋದು ತನಗಿಷ್ಟವಿಲ್ಲ ಎಂದ ಕರೀನಾ; ಹಾಗಾದರೆ ಕರೀನಾ ಕನಸೇನು?

ಮೇಘನಾ ರಾಜ್​ ಚಿರಂಜೀವಿ ಸರ್ಜಾ ಪುತ್ರ ಜ್ಯೂ. ಚಿರು ಜೊತೆ ಅರ್ಜುನ್​ ಸರ್ಜಾ ಫೋಟೋ ವೈರಲ್

(Kareena Kapoor continues posting of her beach selfie series from Maldives)

ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ