ಪ್ರಿಯಾಂಕಾ ಚೋಪ್ರಾ ಹಾಗೂ ಕರೀನಾ ಕಪೂರ್ ಮಧ್ಯೆ ಯಾವುದೂ ಸರಿ ಇಲ್ಲವಾ? ಹೀಗೊಂದು ಪ್ರಶ್ನೆಯನ್ನು ಅವರ ಅಭಿಮಾನಿಗಳು ಆಗಾಗ ಕೇಳುತ್ತಾ ಇರುತ್ತಾರೆ. ಇವರು ಅಕ್ಷಯ್ ಕುಮಾರ್ ನಟನೆಯ ‘ಐತ್ರಾಜ್’ ಹಾಗೂ ಶಾರುಖ್ ಖಾನ್ ನಟನೆಯ ‘ಡಾನ್’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಇವರ ಮಧ್ಯೆ ಕಿರಿಕ್ ಆಗೋಕೆ ಕೆಲವು ಕಾರಣಗಳು ಇದ್ದವು. ಆದರೆ, ಇವರು ಇದನ್ನು ಒಪ್ಪಿಕೊಂಡಿಲ್ಲ.
‘ಐತ್ರಾಜ್’ ಸನಿಮಾ ಶೂಟ್ ಸಂದರ್ಭದಲ್ಲಿ ಇವರ ಮಧ್ಯೆ ಕಿರಿಕ್ ಆಗಿತ್ತು ಎಲ್ಲಾಗಿದೆ. ಇಬ್ಬರ ಮಧ್ಯೆ ಯಾವುದೋ ವಿಚಾರಕ್ಕೆ ಜಗಳ ಆಗಿತ್ತು. ಅವರು ಕೈ ಕೈ ಮಿಲಾಯಿಸಿಕೊಳ್ಳುವ ಹಂತದವರೆಗೆ ಹೋಗಿತ್ತು ಎನ್ನಲಾಗಿದೆ. ಆದರೆ, ಇದನ್ನು ಕರೀನಾ ಹಾಗೂ ಪ್ರಿಯಾಂಕಾ ಇಬ್ಬರೂ ಅಲ್ಲಗಳೆದಿದ್ದರು.
‘ಕರೀನಾ ಹಾಗೂ ನಾನು ಯಾವಾಗಲೂ ಫ್ರೆಂಡ್ಸ್ ಆಗಲೇ ಇಲ್ಲ. ನಮಗೆ ಕಾಮನ್ ಫ್ರೆಂಡ್ಸ್ ಇದ್ದಾರೆ. ನಾವು ಒಟ್ಟಾಗಿ ಸುತ್ತಾಡಿದ್ದೇವೆ. ಕರೀನಾ ಈಗ ಅವರ ಲೈಫ್ನಲ್ಲಿ ಬ್ಯುಸಿ ಇದ್ದಾರೆ. ನನ್ನ ಲೈಫ್ನಲ್ಲಿ ನಾನು ಬ್ಯುಸಿ ಇದ್ದೇನೆ’ ಎಂದಿದ್ದರು ಪ್ರಿಯಾಂಕಾ ಚೋಪ್ರಾ. ಕರೀನಾ ಕಪೂರ್ ಕೂಡ ಈ ವಿಚಾರವನ್ನು ಅಲ್ಲಗಳೆದಿದ್ದರು.
‘ನಾವು ಮಾತನಾಡುತ್ತೇವೆ. ಆದರೆ, ವೃತ್ತಿಜೀವನ ಎಂಬುದು ಬಂದಾಗ ಎಲ್ಲರೂ ಅವರ ಜೀವನದಲ್ಲಿ ಬ್ಯುಸಿ ಇರುತ್ತಾರೆ. ಕೋ ಸ್ಟಾರ್ ಎನ್ನುವ ಕಾರಣಕ್ಕೆ ಅವರು ಬೆಸ್ಟ್ ಫ್ರೆಂಡ್ ಆಗಿರಲೇಬೇಕು ಎಂಬುದು ಇಲ್ಲ’ ಎಂದಿದ್ದರು ಅವರು.
ಕರೀನಾ ಕಪೂರ್ ಹಾಗೂ ಪ್ರಿಯಾಂಕಾ ಚೋಪ್ರಾ ‘ಕರಣ್ ಜೋಹರ್ ಅವರ ‘ಕಾಫಿ ವಿತ್ ಕರಣ್’ ಶೋನಲ್ಲಿ ಕಿತ್ತಾಡಿಕೊಂಡಿದ್ದರು. ಕರೀನಾ ಅವರು ಪ್ರಿಯಾಂಕಾ ಚೋಪ್ರಾ ಅವರ ಆ್ಯಕ್ಸೆಂಟ್ ಬಗ್ಗೆ ಟೀಕೆ ಮಾಡಿದ್ದರು. ಇದಕ್ಕೆ ಉತ್ತರಿಸಿದ್ದ ಪ್ರಿಯಾಂಕಾ ಅವರು, ‘ಸೈಫ್ ಅಲಿ ಖಾನ್ ಅವರು ನನ್ನ ಮೇಲೆ ಪ್ರಭಾವ ಬೀರಿರಬಹುದು’ ಎಂದು ನಕ್ಕಿದ್ದರು. ಆ ಸಂದರ್ಭದಲ್ಲಿ ಕರೀನಾ ಹಾಗೂ ಸೈಫ್ ಡೇಟಿಂಗ್ ಮಾಡುತ್ತಿದ್ದರು.
ಇದನ್ನೂ ಓದಿ: ಅಮ್ಮನ ಕೂದಲಿನೊಂದಿಗೆ ಆಟವಾಡುತ್ತಿದ್ದಾಳೆ ಪ್ರಿಯಾಂಕಾ ಚೋಪ್ರಾ ಪುತ್ರಿ
ಪ್ರಿಯಾಂಕಾ ಚೋಪ್ರಾ ಅವರು ಹಾಲಿವುಡ್ನಲ್ಲಿ ಮಿಂಚುತ್ತಿದ್ದಾರೆ. ಅವರು ಇಂಗ್ಲಿಷ್ ಸೀರಿಸ್ಗಳನ್ನು ಮಾಡುತ್ತಿದ್ದಾರೆ. ಇತ್ತೀಚೆಗೆ ಕರೀನಾಗೆ ಹಾಲಿವುಡ್ ಕನಸಿನ ಬಗ್ಗೆ ಕೇಳಲಾಗಿತ್ತು. ಅವರು ತಾವು ಹಾಲಿವುಡ್ ಚಿತ್ರಗಳನ್ನು ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.