AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಹಾಯ ಮಾಡುವುದಾಗಿ ಭರವಸೆ ನೀಡಿದ ಶಾರುಖ್ ಮೊಬೈಲ್ ಈಗ ಸ್ವಿಚ್ ಆಫ್

Shah Rukh Khan: ಶಾರುಖ್ ಖಾನ್ ಗೆಳೆಯ ಆದೇಶ್ ಶ್ರೀವಾಸ್ತವ್ ಪತ್ನಿ, ತನ್ನ ಮಗನಿಗೆ ಸಹಾಯ ಮಾಡುವಂತೆ ಶಾರುಖ್ ಖಾನ್ ಅನ್ನು ಮನವಿ ಮಾಡಿಕೊಂಡಿದ್ದಾರೆ. ಸಹಾಯ ಮಾಡುವುದಾಗಿ ಹೇಳಿ ಶಾರುಖ್ ಖಾನ್ ಕೊಟ್ಟಿದ್ದ ಮೊಬೈಲ್ ನಂಬರ್ ಸ್ವಿಚ್ ಆಫ್ ಆಗಿದೆ ಎಂದಿದ್ದಾರೆ.

ಸಹಾಯ ಮಾಡುವುದಾಗಿ ಭರವಸೆ ನೀಡಿದ ಶಾರುಖ್ ಮೊಬೈಲ್ ಈಗ ಸ್ವಿಚ್ ಆಫ್
ಶಾರುಖ್ ಖಾನ್
 ಶ್ರೀಲಕ್ಷ್ಮೀ ಎಚ್
| Edited By: |

Updated on:Sep 21, 2024 | 10:35 PM

Share

ಗಾಯಕ ಆದೇಶ್ ಶ್ರೀವಾಸ್ತವ 2015ರಲ್ಲಿ ಕ್ಯಾನ್ಸರ್​ನಿಂದ ನಿಧನರಾದರು. ತಂದೆಯ ಮರಣದ ನಂತರ, ಅವರ ಮಗ ಅವಿತೇಶ್ ಇಂಡಸ್ಟ್ರಿಯಲ್ಲಿ ನೆಲೆ ಕಂಡುಕೊಳ್ಳಲು ಹೆಣಗಾಡುತ್ತಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಆದೇಶ್ ಪತ್ನಿ ಹಾಗೂ ನಟಿ ವಿಜಯತಾ ಪಂಡಿತ್ ತಮ್ಮ ಮಗನಿಗೆ ಸಹಾಯ ಮಾಡುವಂತೆ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರಿಗೆ ಮನವಿ ಮಾಡಿದ್ದಾರೆ. ಆದೇಶ್ ಜೀವನದ ಕೊನೆಯ ದಿನಗಳಲ್ಲಿ ಶಾರುಖ್ ಅವರಿಂದ ಒಂದು ಪ್ರಾಮಿಸ್ ಮಾಡಿದ್ದರು ಎಂದು ವಿಜಯತಾ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ.

ಇತ್ತೀಚೆಗೆ ನೀಡಿದ ಈ ಸಂದರ್ಶನದಲ್ಲಿ ವಿಜಯತಾ ಈ ಬಗ್ಗೆ ಮಾತನಾಡಿದ್ದಾರೆ. ‘ಆದೇಶ ಆಸ್ಪತ್ರೆಯಲ್ಲಿದ್ದಾಗ, ಶಾರುಖ್ ಖಾನ್ ನಮ್ಮನ್ನು ಭೇಟಿ ಮಾಡಲು ಬರುತ್ತಿದ್ದರು. ಅವರು ಕೊನೆಯುಸಿರೆಳೆಯುವ ಒಂದು ದಿನದ ಮೊದಲು, ಆದೇಶ್, ಶಾರುಖ್ ಅವರ ಕೈಯನ್ನು ಹಿಡಿದು ತಮ್ಮ ಮಗ ಅವಿತೇಶ್ ಕಡೆಗೆ ತೋರಿಸಿದರು. ಆ ಸಮಯದಲ್ಲಿ ಅವರು ಮಾತನಾಡಲು ಸಾಧ್ಯವಾಗಲಿಲ್ಲ. ಆದರೆ ಮಗನನ್ನು ನೋಡಿಕೊಳ್ಳುವಂತೆ ಶಾರುಖ್​ಗೆ ಸೂಚಿಸಿದರು. ಆದೇಶ್ ಸಾವಿನ ನಂತರ ಶಾರುಖ್ ಕುಟುಂಬದೊಂದಿಗೆ ಯಾವುದೇ ಸಂಪರ್ಕವನ್ನು ಇಟ್ಟುಕೊಂಡಿಲ್ಲ’ ಎಂದು ವಿಜಯತಾ ಹೇಳಿದ್ದಾರೆ.

ಇದನ್ನೂ ಓದಿ:ಜಪಾನ್​ನಲ್ಲಿ ಸದ್ದು ಮಾಡೋಕೆ ರೆಡಿ ಆದ ಶಾರುಖ್ ಖಾನ್ ಸಿನಿಮಾ

‘ಶಾರುಖ್ ಖಾನ್ ನಮಗೆ ನೀಡಿದ ಮೊಬೈಲ್ ಸಂಖ್ಯೆ ಈಗ ಸ್ವಿಚ್ ಆಫ್ ಆಗಿದೆ. ಶಾರುಖ್ ಅವರು ಆದೇಶ್ ಶ್ರೀವಾಸ್ತವ್ ಅವರ ಉತ್ತಮ ಸ್ನೇಹಿತರು. ಶಾರುಖ್ ಇದು ಸರಿಯಾದ ಸಮಯ. ನಮಗೆ ನೀವು ಬೇಕು, ನನ್ನ ಮಗನಿಗೆ ಸಹಾಯ ಮಾಡಿ. ಇದಕ್ಕೆ ಸ್ವಲ್ಪ ಬೆಂಬಲ ಬೇಕು. ರೆಡ್ ಚಿಲ್ಲೀಸ್ ಬ್ಯಾನರ್‌ನಲ್ಲಿ ಅವಿತೇಶ್ ಜೊತೆ ಸಿನಿಮಾ ಮಾಡಿ. ಅವರು ತುಂಬಾ ಒಳ್ಳೆಯ ನಟ” ಎಂದು ವಿಜಯತಾ ಮನವಿ ಮಾಡಿದರು. ಆದೇಶ್ ಅವರ ಪುತ್ರ ಅವಿತೇಶ್ ಅವರು ತಮ್ಮ ಮೊದಲ ಚಿತ್ರ ‘ಸಿರ್ಫ್ ಏಕ್ ಫ್ರೈಡೇ’ ಚಿತ್ರೀಕರಣದಲ್ಲಿದ್ದಾರೆ. ಈ ಸಂದರ್ಶನದಲ್ಲಿ, ಶಾರುಖ್ ಅವರ ವೃತ್ತಿಜೀವನದ ಆರಂಭದಲ್ಲಿ ತನ್ನ ಒಡಹುಟ್ಟಿದವರು ಹೇಗೆ ಸಹಾಯ ಮಾಡಿದರು ಎಂಬುದನ್ನು ಅವರು ನೆನಪಿಸಿಕೊಂಡರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:14 pm, Sat, 21 September 24

VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್