ಕರೀನಾ ಕಡೆಯಿಂದ ಸೈಫ್​ಗೆ ಬಂತು ಕಟ್ಟುನಿಟ್ಟಿನ ಆದೇಶ; ಇದನ್ನು ಅವರು ಪಾಲಿಸಲೇಬೇಕು

| Updated By: ರಾಜೇಶ್ ದುಗ್ಗುಮನೆ

Updated on: Sep 05, 2021 | 2:42 PM

ಕರೀನಾ ಕಪೂರ್​ ಹಾಗೂ ಸೈಫ್​ ಅಲಿ ಖಾನ್​ ಸಾಕಷ್ಟು ಬಾರಿ ಟ್ರೋಲ್​ಗಳಿಗೆ ಆಹಾರವಾಗಿದ್ದಾರೆ. ಮದುವೆ ವಿಚಾರ, ಅವರ ಸಂಭಾವನೆ ವಿಚಾರ, ಕೊನೆಗೆ ಮಕ್ಕಳ ವಿಚಾರದಲ್ಲೂ ಈ ದಂಪತಿ ಟ್ರೋಲ್​ಗೆ ಒಳಗಾಗಿದ್ದಾರೆ.

ಕರೀನಾ ಕಡೆಯಿಂದ ಸೈಫ್​ಗೆ ಬಂತು ಕಟ್ಟುನಿಟ್ಟಿನ ಆದೇಶ; ಇದನ್ನು ಅವರು ಪಾಲಿಸಲೇಬೇಕು
ಕರೀನಾ ಕಡೆಯಿಂದ ಸೈಫ್​ಗೆ ಬಂತು ಕಟ್ಟುನಿಟ್ಟಿನ ಆದೇಶ; ಇದನ್ನು ಅವರು ಪಾಲಿಸಲೇಬೇಕು
Follow us on

ಕರೀನಾ ಕಪೂರ್​ ಹಾಗೂ ಸೈಫ್​ ಅಲಿ ಖಾನ್​ ಮದುವೆ ಆಗಿ ಅನೇಕ ವರ್ಷಗಳು ಕಳೆದಿವೆ. ಕರೀನಾಗೆ ಇಬ್ಬರು ಮಕ್ಕಳು ಜನಿಸಿದ್ದು, ಹಾಯಾಗಿ ಕುಟುಂಬ ನಡೆಸಿಕೊಂಡು ಹೋಗುತ್ತಿದ್ದಾರೆ. ಮೊದಲಿಗೆ ಹೋಲಿಕೆ ಮಾಡಿದರೆ ಕರೀನಾ ಚಿತ್ರರಂಗದಲ್ಲಿ ಅಷ್ಟಾಗಿ ಆ್ಯಕ್ಟೀವ್​ ಆಗಿಲ್ಲ. ಮಕ್ಕಳ ಲಾಲನೆ-ಪಾಲನೆಯಲ್ಲಿ ಬ್ಯುಸಿಯಾಗಿರುವ ಅವರು, ಸಿನಿಮಾದಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿಲ್ಲ. ಈ ಮಧ್ಯೆ ಸೈಫ್​ಗೆ ಕರೀನಾ ಕಡೆಯಿಂದ ಕಟ್ಟುನಿಟ್ಟಿನ ಆದೇಶವೊಂದು ಬಂದಿದೆ. ಇದನ್ನು ಅವರು ಈಗ ಪಾಲಿಸಲೇಬೇಕಾಗಿದೆ. ಅಷ್ಟಕ್ಕೂ ಏನಿದು ಆದೇಶ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಕರೀನಾ ಕಪೂರ್​ ಹಾಗೂ ಸೈಫ್​ ಅಲಿ ಖಾನ್​ ಸಾಕಷ್ಟು ಬಾರಿ ಟ್ರೋಲ್​ಗಳಿಗೆ ಆಹಾರವಾಗಿದ್ದಾರೆ. ಮದುವೆ ವಿಚಾರ, ಅವರ ಸಂಭಾವನೆ ವಿಚಾರ, ಕೊನೆಗೆ ಮಕ್ಕಳ ವಿಚಾರದಲ್ಲೂ ಈ ದಂಪತಿ ಟ್ರೋಲ್​ಗೆ ಒಳಗಾಗಿದ್ದಾರೆ. ನಿರಂತರವಾಗಿ ಟೀಕೆಗೆ ಒಳಗಾಗುತ್ತಿದ್ದರೆ ಮಾನಸಿಕವಾಗಿ ಕುಗ್ಗುವ ಸಾಧ್ಯತೆ ಇರುತ್ತದೆ. ಈ ಕಾರಣಕ್ಕೆ ಸೈಫ್​ಗೆ ಟ್ರೋಲ್​ಗಳನ್ನು ನೋಡದಂತೆ ಹಾಗೂ ತಮ್ಮ ಬಗ್ಗೆ ತಾವೇ ಗೂಗಲ್​ನಲ್ಲಿ ಸರ್ಚ್​ ಮಾಡದಂತೆ ಸೂಚಿಸಿದ್ದಾರೆ ಕರೀನಾ. ಈ ವಿಚಾರವನ್ನು ಸೈಫ್​ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

‘ನಾನು ಟ್ರೋಲ್​ ಹಾಗೂ ಕಮೆಂಟ್​ಗಳನ್ನು ಓದುವುದಿಲ್ಲ. ಹಾಗೆ ಓದದೇ ಇದ್ದರೆ ತುಂಬಾನೇ ಕೂಲ್​​ ಆಗಿ ಇರಬಹುದು. ಜತೆಗೆ ಒಂದು ವಿಚಾರದ ಬಗ್ಗೆ ಫೋಕಸ್​ ಆಗಿ ಇರಬಹುದು. ನನ್ನ ಬಗ್ಗೆ ನಾನೇ ಗೂಗಲ್​ನಲ್ಲಿ ಸರ್ಚ್​ ಮಾಡಿ ನೋಡಿಕೊಳ್ಳಬಹುದು. ಆದರೆ, ಕೆಲ ವಿಚಾರಗಳು ನನಗೆ ಇಷ್ಟವಾಗುವುದಿಲ್ಲ. ಅದು ನನ್ನ ಮೂಡ್​ ಹಾಳು ಮಾಡಬಹುದು’ ಎಂದಿದ್ದಾರೆ ಅವರು.

‘ಸೋಶಿಯಲ್​ ಮೀಡಿಯಾ ತುಂಬಾನೇ ಡೇಂಜರ್​. ಅಲ್ಲಿ ಬೇಡದ ವಿಚಾರಗಳು ಸಾಕಷ್ಟು ಸಿಗುತ್ತವೆ. ಈ ಕಾರಣಕ್ಕೆ ಕರೀನಾ ನನಗೆ ನನ್ನ ಬಗ್ಗೆ ಗೂಗಲ್​ನಲ್ಲಿ ಸರ್ಚ್​ ಮಾಡಬೇಡಿ ಎಂದು ಕಟ್ಟುನಿಟ್ಟಾಗಿ ಸೂಚಿಸಿದ್ದಾಳೆ’ ಎಂದಿದ್ದಾರೆ ಸೈಫ್.

ಸೈಫ್​ ಸೋಶಿಯಲ್​ ಮೀಡಿಯಾದಲ್ಲಿ ಇಲ್ಲ. ಕರೀನಾ 2020ರಲ್ಲಿ ಇನ್​ಸ್ಟಾಗ್ರಾಮ್​ಗೆ ಎಂಟ್ರಿ ಕೊಟ್ಟಿದ್ದರು. ನಂತರ ಅವರು ಆಗೊಂದು ಈಗೊಂದು ಪೋಸ್ಟ್​ ಮಾಡುತ್ತಲೇ ಇರುತ್ತಾರೆ. ಸೈಫ್​ ಸದ್ಯ, ಭೂತ್​ ಪೊಲೀಸ್​ ಸಿನಿಮಾದಲ್ಲಿ ಬ್ಯುಸಿಯಿದ್ದಾರೆ. ಕರೀನಾ ಎರಡನೇ ಮಗು ಜನಿಸಿದ ನಂತರದಲ್ಲಿ ಪುಸ್ತಕ ಕೂಡ ಬರೆದಿದ್ದಾರೆ.

ಇದನ್ನೂ ಓದಿ: Kareena Kapoor: ಮಕ್ಕಳನ್ನು ಕರೆದುಕೊಂಡು ತಂದೆಯ ಮನೆಗೆ ಹೊರಟ ಕರೀನಾ; ಏನು ವಿಶೇಷ?

‘ಕೂದಲು ಮುಟ್ಟಿದ್ರೆ ಕರೀನಾ ನನ್ನ ಕೊಂದುಬಿಡ್ತಾಳೆ’; ಸಂಸಾರದ ಗುಟ್ಟು ತೆರೆದಿಟ್ಟ ಸೈಫ್​ ಅಲಿ ಖಾನ್​