Kriti Sanon: ಟ್ರೋಲ್​ಗಳ ನಡುವೆಯೂ ಶಾಲೆ ಮಕ್ಕಳಿಗೆ ಉಚಿತವಾಗಿ ‘ಆದಿಪುರುಷ್​’ ಚಿತ್ರ ತೋರಿಸಲು ಮುಂದಾದ ಕೃತಿ ಸನೋನ್​

|

Updated on: Jun 21, 2023 | 4:17 PM

Adipurush Controversy: ‘ಆದಿಪುರುಷ್​’ ಸಿನಿಮಾವನ್ನು ಮಕ್ಕಳು ಸಖತ್​ ಎಂಜಾಯ್​ ಮಾಡುತ್ತಾರೆ ಎಂಬುದು ಕೃತಿ ಸನೋನ್​ ನಂಬಿಕೆ. ಹಾಗಾಗಿ ತಾವು ಓದಿದ ಶಾಲೆಯ ಮಕ್ಕಳಿಗೆ ಈ ಚಿತ್ರವನ್ನು ತೋರಿಸಲು ಅವರು ಮುಂದಾಗಿದ್ದಾರೆ.

Kriti Sanon: ಟ್ರೋಲ್​ಗಳ ನಡುವೆಯೂ ಶಾಲೆ ಮಕ್ಕಳಿಗೆ ಉಚಿತವಾಗಿ ‘ಆದಿಪುರುಷ್​’ ಚಿತ್ರ ತೋರಿಸಲು ಮುಂದಾದ ಕೃತಿ ಸನೋನ್​
ಕೃತಿ ಸನೋನ್
Follow us on

ನಟಿ ಕೃತಿ ಸನೋನ್​ (Kriti Sanon) ಅವರ ಅಭಿಮಾನಿಗಳು ‘ಆದಿಪುರುಷ್​’ ಸಿನಿಮಾ ಮೇಲೆ ಸಖತ್​ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಅಂದುಕೊಂಡ ರೀತಿಯಲ್ಲಿ ಸಿನಿಮಾ ಮೂಡಿಬಂದಿಲ್ಲ ಎಂಬ ಕಾರಣಕ್ಕೆ ಈ ಚಿತ್ರವನ್ನು ಎಲ್ಲರೂ ಟ್ರೋಲ್​ ಮಾಡುತ್ತಿದ್ದಾರೆ. ರಾಮಾಯಣದ (Ramayana) ಕಥೆಯನ್ನು ಆಧರಿಸಿದ ಈ ಸಿನಿಮಾದಲ್ಲಿ ಕೃತಿ ಸನೋನ್​ ಅವರು ಸೀತೆಯ ಪಾತ್ರ ಮಾಡಿದ್ದಾರೆ. ಯಾರು ಎಷ್ಟೇ ಟೀಕಿಸಿದರೂ ಕೃತಿ ಸನೋನ್ ಅವರಿಗೆ ತಮ್ಮ ಸಿನಿಮಾ ಮೇಲಿನ ಹೆಮ್ಮೆಯ ಭಾವನೆ ಕುಗ್ಗಿಲ್ಲ. ‘ಆದಿಪುರುಷ್​’ (Adipurush Movie) ಚಿತ್ರವನ್ನು ಶಾಲೆಯ ಮಕ್ಕಳಿಗೆ ತೋರಿಸಲು ಅವರು ನಿರ್ಧರಿಸಿದ್ದಾರೆ. ಕೃತಿ ಸನೋನ್​ ಅವರು ಓದಿದ್ದು ದೆಹಲಿ ಪಬ್ಲಿಕ್​ ಸ್ಕೂಲ್​ನಲ್ಲಿ. ಆ ಶಾಲೆಯ ಮಕ್ಕಳಿಗಾಗಿ ಅವರು ದೆಹಲಿಯ ಮಲ್ಟಿಪ್ಲೆಕ್ಸ್​ನಲ್ಲಿ ಒಂದು ಪೂರ್ತಿ ಶೋನ ಟಿಕೆಟ್​ ಬುಕ್​ ಮಾಡಿದ್ದಾರೆ ಎಂದು ವರದಿ ಆಗಿದೆ.

‘ಆದಿಪುರುಷ್​’ ಸಿನಿಮಾವನ್ನು ಮಕ್ಕಳು ಸಖತ್​ ಎಂಜಾಯ್​ ಮಾಡುತ್ತಾರೆ ಎಂಬುದು ಕೃತಿ ಸನೋನ್​ ನಂಬಿಕೆ. ಹಾಗಾಗಿ ತಾವು ಓದಿದ ಶಾಲೆಯ ಮಕ್ಕಳಿಗೆ ಈ ಚಿತ್ರವನ್ನು ತೋರಿಸಲು ಅವರು ಮುಂದಾಗಿದ್ದಾರೆ. ಈ ವೇಳೆ ಅವರು ಕೂಡ ಮಕ್ಕಳ ಜೊತೆ ಕುಳಿತು ಸಿನಿಮಾ ವೀಕ್ಷಿಸಲಿದ್ದಾರೆ. ಆ ಬಳಿಕ ಅಲ್ಲಿಯೇ ಸಂವಾದ ಕೂಡ ನಡೆಸಲಿದ್ದಾರೆ. ಅದಕ್ಕಾಗಿ ಮಲ್ಟಿಪ್ಲೆಕ್ಸ್​ನಲ್ಲಿ ಸಕಲ ಸಿದ್ಧತೆ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ಸಿನಿಮಾಗೆ ಓಂ ರಾವತ್​ ಅವರು ನಿರ್ದೇಶನ ಮಾಡಿದ್ದಾರೆ. ರಾಮನ ಪಾತ್ರವನ್ನು ಪ್ರಭಾಸ್​ ಮಾಡಿದ್ದಾರೆ.

ಇದನ್ನೂ ಓದಿ: Kriti Sanon: ಸೀತೆ ಪಾತ್ರದಲ್ಲಿ ಗಮನ ಸೆಳೆದ ಕೃತಿ ಸನೋನ್​; ಆದರೂ ಆಭಿಮಾನಿಗಳಿಗೆ ಒಂದು ಬೇಸರ

ರಾಮಾಯಣವನ್ನು ಸರಿಯಾಗಿ ತೋರಿಸಿಲ್ಲ ಎಂಬ ಕಾರಣಕ್ಕೆ ‘ಆದಿಪುರುಷ್​’ ಸಿನಿಮಾವನ್ನು ಜನರು ಟ್ರೋಲ್​ ಮಾಡುತ್ತಿದ್ದಾರೆ. ಪ್ರತಿ ಪಾತ್ರದಲ್ಲೂ ತಪ್ಪು ಹುಡುಕಲಾಗುತ್ತಿದೆ. ಸಂಭಾಷಣೆ ಕೂಡ ಕಳಪೆ ಆಗಿದೆ ಎಂದು ಪ್ರೇಕ್ಷಕರು ಆರೋಪಿಸಿದ್ದಾರೆ. ಈ ಸಿನಿಮಾವನ್ನು ಬ್ಯಾನ್​ ಮಾಡಬೇಕು ಎಂದು ಸಹ ಕೆಲವರು ಒತ್ತಾಯಿಸಿದ್ದಾರೆ. ಇಷ್ಟೆಲ್ಲ ಟೀಕೆ ಎದುರಾದರೂ ಕೂಡ ಅವುಗಳ ಬಗ್ಗೆ ಕೃತಿ ಸನೋನ್​ ತಲೆ ಕೆಡಿಸಿಕೊಡಿಲ್ಲ. ಅವರು ಕೇವಲ ಪಾಸಿಟಿವ್​ ಪ್ರತಿಕ್ರಿಯೆಗಳ ಬಗ್ಗೆ ಮಾತ್ರ ಗಮನ ಹರಿಸುತ್ತಿದ್ದಾರೆ. ಜನರು ಚಿತ್ರಮಂದಿರದಲ್ಲಿ ಈ ಸಿನಿಮಾ ನೋಡಿ ಖುಷಿಪಡುತ್ತಿರುವ ಕೆಲವು ವಿಡಿಯೋ ತುಣುಕುಗಳನ್ನು ಕೃತಿ ಸನೋನ್​ ಅವರು ಇತ್ತೀಚೆಗೆ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಇದನ್ನೂ ಓದಿ: ದೇವಸ್ಥಾನದಲ್ಲೇ ಕೃತಿ ಸನೋನ್​ಗೆ ಕಿಸ್ ಮಾಡಿದ ನಿರ್ದೇಶಕ; ವ್ಯಕ್ತವಾಯಿತು ಟೀಕೆ

ಬಾಲಿವುಡ್​ನಲ್ಲಿ ಬಹುಬೇಡಿಕೆಯ ಹೀರೋಯಿನ್​ ಆಗಿ ಕೃತಿ ಸನೋನ್​ ಗುರುತಿಸಿಕೊಂಡಿದ್ದಾರೆ. ಅನೇಕ ಬಗೆಯ ಪಾತ್ರಗಳನ್ನು ಮಾಡಿ ಅವರು ಸೈ ಎನಿಸಿಕೊಂಡಿದ್ದಾರೆ. ‘ಆದಿಪುರುಷ್​’ ಚಿತ್ರದಲ್ಲಿ ಅವರಿಗೆ ಪೌರಾಣಿಕ ಪಾತ್ರಕ್ಕೆ ಬಣ್ಣ ಹಚ್ಚುವ ಅವಕಾಶ ಸಿಕ್ಕಿತು. ಜನರ ನಿರೀಕ್ಷೆಯಂತೆ ಸಿನಿಮಾ ಮೂಡಿಬಂದಿದ್ದರೆ ಕೃತಿ ಅವರ ಖ್ಯಾತಿ ಹೆಚ್ಚುತ್ತಿತ್ತು. ಆದರೆ ನಿರ್ದೇಶಕರು ಆಧುನಿಕ ಶೈಲಿಯಲ್ಲಿ ರಾಮಾಯಣದ ಕಥೆ ಹೇಳಲು ಪ್ರಯತ್ನಿಸಿರುವುದನ್ನು ಪ್ರೇಕ್ಷಕರು ವಿರೋಧಿಸುತ್ತಿದ್ದಾರೆ. ಕೃತಿ ಸನೋನ್​ ಅವರಿಗೆ ಈ ಚಿತ್ರದಲ್ಲಿ ಹೆಚ್ಚಿನ ಸ್ಕ್ರೀನ್​ ಸ್ಪೇಸ್ ಸಿಕ್ಕಿಲ್ಲ. ದಿನದಿಂದ ದಿನಕ್ಕೆ ‘ಆದಿಪುರುಷ್​’ ಕಲೆಕ್ಷನ್​ ತಗ್ಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.