ರಿಲೀಸ್ಗೂ ಮುನ್ನವೇ ರಣವೀರ ಸಿಂಗ್ ನಟೆನೆಯ 83 ಸಿನಿಮಾ ಸಂಕಷ್ಟದಲ್ಲಿ ಸಿಲುಕಿದೆ. ಯುನೈಟೆಡ್ ಅರಬ್ಎಮಿರೆಟ್ಸ್ ಮೂಲದ ಪೈನಾನ್ಸ್ ಕಂಪನಿಯೊಂದು 83 ಚಿತ್ರದ ನಿರ್ಮಾಪಕರ ವಿರುದ್ಧ ವಂಚನೆ ದೂರು ಸಲ್ಲಿಸಿದೆ. ದೀಪಿಕಾ ಪಡುಕೋಣೆ, ಸಾಜಿದ್ ನಾಡಿಯಾಡ್ವಾಲಾ, ಮತ್ತು ಕಬೀರ್ ಖಾನ್ ಚಿತ್ರದ ನಿರ್ಮಾಪಕರಾಗಿ ಕೆಲಸ ಮಾಡಿದ್ದರು. ಪೈನಾನ್ಸ್ ಕಂಪನಿಯು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಂಚನೆಯ ದೂರು ದಾಖಲಿಸಿದೆ. ಚಿತ್ರದ ಹಕ್ಕುಗಳನ್ನು ಮಾರಾಟ ಮಾಡುವಲ್ಲಿ ನಿರ್ಮಾಪಕರಿಗೆ ಚಿತ್ರತಂಡ ವಂಚನೆ ಮಾಡುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ದೂರಿನಲ್ಲಿ ವಿಬ್ರಿ ಮೀಡಿಯಾ ಮತ್ತು ಚಿತ್ರದ ನಿರ್ದೇಶಕರ ಹೆಸರನ್ನು ಉಲ್ಲೇಖಿಸಿ ಚಿತ್ರತಂಡವು 16 ಕೋಟಿ ರೂಗಳನ್ನು ಹೂಡಿಕೆ ಮಾಡಿ ಉತ್ತಮ ಆದಾಯಗಳಿಸಿಕೊಡುವುದಾಗಿ ಹೇಳಿತ್ತು. ಆದರೆ ಇದೀಗ ಚಿತ್ರದ ಹಕ್ಕುಗಳನ್ನು ಮಾರಾಟ ಮಾಡುವ ವೇಳೆ ವಂಚನೆ ಮಾಡುತ್ತಿದ್ದಾರೆ ಎಂದು ಮುಂಬೈನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ದಾಖಲಿಸಿಲಾಗಿದೆ. ವಂಚನೆ ಮತ್ತು ಕ್ರಿಮಿನಲ್ ಪ್ರಕರಣಗಳ ಅಡಿಯಲ್ಲಿ ವಕೀಲ ರಿಜ್ವಾನ್ ಸಿದ್ದಿಕಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ದೂರನ್ನು ದಾಖಲಿಸಲಾಗಿದೆ.
83 ಚಿತ್ರವು ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಅವರ ನಾಯಕತ್ವದಲ್ಲಿ ಬಾರತೀಯ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದ ಕಥಾಹಂದರ ಹೊಂದಿದ್ದು, ಡಿಸೆಂಬರ್ 24ರಂದು ಚಿತ್ರ ತೆರೆಗೆ ಬರಲು ರೆಡಿಯಾಗಿದೆ. 83 ಚಿತ್ರವು ಹಿಂದಿ, ತಮಿಳ, ತೆಲುಗು, ಮಲಯಾಳಂ ಹಾಗೂ ಕನ್ನಡ ಭಾಷೆಗಳಲ್ಲಿ ತೆರೆಕಾಣುತ್ತಿದೆ. ಚಿತ್ರವನ್ನು ಕಬೀರ್ ಖಾನ್ ನಿರ್ದೇಶಿಸಿದ್ದು ದೀಪಿಕಾ ಪಡುಕೋಣೆ ಕೂಡ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 1983 ರಲ್ಲಿ ಭಾರತ ಕ್ರಿಕೆಟ್ ತಂಡ್ ವಿಶ್ವಕಪ್ ಗೆದ್ದ ಕಥೆಯನ್ನು ಚಿತ್ರದಲ್ಲಿ ಹೆಣೆಯಲಾಗಿದೆ. ನಟ ರಣವೀರ್ ಸಿಂಗ್ ಕಪೀಲ್ ದೇವ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ:
RRR ಸುದ್ದಿಗೋಷ್ಠಿ: ಕರುನಾಡಿಗೆ ಬಂದ ರಾಜಮೌಳಿ, ಆಲಿಯಾ, ರಾಮ್ ಚರಣ್, ಜ್ಯೂ. ಎನ್ಟಿಆರ್ ಹೇಳಿದ್ದೇನು?
ಯಶ್ ಜತೆಗಿನ ಸೆಲ್ಫಿಗಾಗಿ ರಾಧಿಕಾ ಇಷ್ಟು ಕಷ್ಟಪಡಬೇಕಾ? ಇಲ್ಲಿವೆ ಫನ್ನಿ ಫೋಟೋಗಳು