ಚಿತ್ರರಂಗದಲ್ಲಿ ಒಬ್ಬರ ಜೊತೆ ಇನ್ನೊಬ್ಬರ ಹೆಸರು ತಳುಕು ಹಾಕಿಕೊಳ್ಳುವುದು ಸಾಮಾನ್ಯ ಸಂಗತಿ. ದಕ್ಷಿಣ ಭಾರತಕ್ಕೆ ಹೋಲಿಸಿದರೆ ಬಾಲಿವುಡ್ನಲ್ಲೇ ಲವ್ವಿ-ಡವ್ವಿ ಸಮಾಚಾರಗಳು ಜಾಸ್ತಿ. ಬಣ್ಣದ ಲೋಕಕ್ಕೆ ಕಾಲಿಡುತ್ತಲೇ ಬಿ-ಟೌನ್ (Bollywood) ಸೆಲೆಬ್ರಿಟಿಗಳು ಡೇಟಿಂಗ್ ಶುರು ಮಾಡಿಕೊಳ್ಳುತ್ತಾರೆ. ನಟ ಇಶಾನ್ ಖಟ್ಟರ್ ಅವರು ‘ಧಡಕ್’ ಸಿನಿಮಾ ಮೂಲಕ ಭರ್ಜರಿ ಗೆಲುವು ಕಂಡಿದ್ದಾರೆ. ಫಿಲ್ಮೀ ಕುಟುಂಬದ ಹಿನ್ನೆಲೆಯಿಂದ ಬಂದಿದ್ದ ಅವರಿಗೆ ಆರಂಭದಲ್ಲಿಯೇ ಯಶಸ್ಸು ಸಿಕ್ಕಿತು. ಈಗ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ಈ ನಡುವೆ ಅವರು ನಟಿ ಅನನ್ಯಾ ಪಾಂಡೆ (Ananya Panday) ಜೊತೆಗಿನ ಒಡನಾಟದ ಕಾರಣದಿಂದ ಹೆಚ್ಚು ಸುದ್ದಿ ಆಗುತ್ತಿದ್ದಾರೆ. 2020ರಲ್ಲಿ ತೆರೆಕಂಡ ‘ಖಾಲಿ ಪೀಲಿ’ ಸಿನಿಮಾದಲ್ಲಿ ಇಶಾನ್ ಖಟ್ಟರ್ (Ishaan Khatter) ಮತ್ತು ಅನನ್ಯಾ ಪಾಂಡೆ ಜೊತೆಯಾಗಿ ನಟಿಸಿದರು. ಆ ಸಿನಿಮಾದ ಶೂಟಿಂಗ್ ವೇಳೆ ಇಬ್ಬರ ನಡುವೆ ಆಪ್ತತೆ ಬೆಳೆಯಿತು. ತಮ್ಮ ಸಂಬಂಧದ ಬಗ್ಗೆ ಈ ಜೋಡಿ ಬಹಿರಂಗವಾಗಿ ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ ಹಲವು ಬಾರಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದುಂಟು. ರಿಲೇಷನ್ಶಿಪ್ ಕುರಿತಂತೆ ಅಭಿಮಾನಿಗಳ ಕಡೆಯಿಂದ ಅನನ್ಯಾಗೆ ಇತ್ತೀಚೆಗೆ ಒಂದು ಪ್ರಶ್ನೆ ಎದುರಾಯಿತು. ಅದಕ್ಕೆ ಅವರು ಉತ್ತರ ನೀಡಿದ್ದಾರೆ.
ಅನನ್ಯಾ ಸಿಂಗಲ್ ಆಗಿದ್ದಾರಾ ಅಥವಾ ರಿಲೇಷನ್ಶಿಪ್ನಲ್ಲಿ ಇದ್ದಾರಾ ಎಂಬುದು ಅಭಿಮಾನಿಯ ಪ್ರಶ್ನೆ ಆಗಿತ್ತು. ಅದಕ್ಕೆ ನೇರವಾಗಿ ಉತ್ತರ ನೀಡುವ ಬದಲು ಅನನ್ಯಾ ಪಾಂಡೆ ಹಾರಿಕೆ ಉತ್ತರ ನೀಡಿದ್ದಾರೆ. ‘ನಾನು ಖುಷಿಯಾಗಿದ್ದೇನೆ’ ಎಂದು ಹೇಳುವ ಮೂಲಕ ಅವರು ಜಾರಿಕೊಂಡಿದ್ದಾರೆ. ಹಾಗಾದರೆ ನಿಮ್ಮ ಫೇವರಿಟ್ ನಟ ಯಾರು ಎಂದು ಕೇಳಲಾಯಿತು. ಅದಕ್ಕೆ ಅವರು ಇಶಾನ್ ಖಟ್ಟರ್ ಹೆಸರು ಹೇಳಿದರು. ಬಳಿಕ ತಮ್ಮ ಹೇಳಿಕೆಯನ್ನು ಕೊಂಚ ಬದಲಾಯಿಸಿಕೊಂಡರು. ‘ನನ್ನ ಜೊತೆ ಅಭಿನಯಿಸಿದ ಎಲ್ಲ ನಟರು ನನಗೆ ಇಷ್ಟ. ‘ಗೆಹರಾಯಿಯಾ’ ಬಳಿಕ ‘ಕೋ ಗಯೇ ಹಮ್ ಕಹಾ’ ಸಿನಿಮಾದಲ್ಲಿ ಸಿದ್ಧಾಂತ್ ಚತುರ್ವೇದಿ ಜೊತೆ ನಾನು ಮತ್ತೊಮ್ಮೆ ಕೆಲಸ ಮಾಡಲಿದ್ದೇನೆ’ ಎಂದು ಅನನ್ಯಾ ಪಾಂಡೆ ಹೇಳಿದರು.
ಸ್ಟಾರ್ ನಟ ಶಾಹಿದ್ ಕಪೂರ್ ಬರ್ತ್ಡೇ ಸಂದರ್ಭದಲ್ಲಿ ಸೆಲೆಬ್ರಿಟಿಗಳಿಗೆ ಪಾರ್ಟಿ ನೀಡಲಾಗಿತ್ತು. ಆ ಪಾರ್ಟಿಗೆ ಇಶಾನ್ ಖಟ್ಟರ್ ಮತ್ತು ಅನನ್ಯಾ ಪಾಂಡೆ ಜೊತೆಯಾಗಿ ಬಂದಿದ್ದರು. ಈ ವರ್ಷ ಹೊಸ ವರ್ಷವನ್ನು ಇವರಿಬ್ಬರು ಜೊತೆಯಾಗಿ ಆಚರಿಸಿದ್ದರು. ರಣತಂಬೋರ್ ರಾಷ್ಟ್ರೀಯ ಉದ್ಯಾನದಲ್ಲಿ ಅವರಿಬ್ಬರು ಹೊಸ ವರ್ಷವನ್ನು ಬರಮಾಡಿಕೊಂಡಿದ್ದರು ಎಂಬ ಅನುಮಾನಕ್ಕೆ ಸಾಕ್ಷಿ ಒದಗಿಸುವಂತಹ ಕೆಲವು ಫೋಟೋಗಳು ವೈರಲ್ ಆಗಿದ್ದವು.
ಇಶಾನ್ ಖಟ್ಟರ್ ಮತ್ತು ಅನನ್ಯಾ ಪಾಂಡೆ ಅವರು ಈಗ ಬಾಲಿವುಡ್ನಲ್ಲಿ ಸ್ಟಾರ್ ಕಲಾವಿದರಾಗಿ ಮಿಂಚುತ್ತಿದ್ದಾರೆ. ಇಶಾನ್ ಖಟ್ಟರ್ ನಟನೆಯ ‘ಫೋನ್ ಭೂತ್’ ಸಿನಿಮಾ ನಿರೀಕ್ಷೆ ಮೂಡಿಸಿದೆ. ಅದೇ ರೀತಿ ಅನನ್ಯಾ ಪಾಂಡೆ ಕೂಡ ಬ್ಯುಸಿ ಆಗಿದ್ದಾರೆ. ವಿಜಯ್ ದೇವಕೊಂಡ ಜೊತೆ ಅವರು ‘ಲೈಗರ್’ ಸಿನಿಮಾದಲ್ಲಿ ನಟಿಸಿದ್ದಾರೆ. ಬಹುಭಾಷೆಯಲ್ಲಿ ಆ ಚಿತ್ರ ಮೂಡಿಬರುತ್ತಿದೆ. ಆ ಸಿನಿಮಾದಿಂದ ಅನನ್ಯಾ ಪಾಂಡೆ ವೃತ್ತಿಜೀವನಕ್ಕೆ ಹೊಸ ಮೈಲೇಜ್ ಸಿಗುವ ನಿರೀಕ್ಷೆ ಇದೆ. ಈಗಾಗಲೇ ಬಿಡುಗಡೆ ಆಗಿರುವ ಫಸ್ಟ್ ಗ್ಲಿಂಪ್ಸ್ ಕಂಡು ಅಭಿಮಾನಿಗಳು ವಾವ್ ಎಂದಿದ್ದಾರೆ.
ಇದನ್ನೂ ಓದಿ:
Ananya Panday: ಬಿಕಿನಿ ಫೋಟೋಶೂಟ್ ಮೂಲಕ ಮತ್ತೆ ಸುದ್ದಿಯಾದ ಅನನ್ಯಾ ಪಾಂಡೆ; ಚಿತ್ರಗಳು ವೈರಲ್
‘ಗಂಡ ಹಗಲು-ರಾತ್ರಿ ಕುಡಿದು, ತಲೆಗೆ ಹೊಡಿತಿದ್ದ’; ಲಾಕಪ್ ಶೋನಲ್ಲಿ ಕಷ್ಟ ತೋಡಿಕೊಂಡ ಪೂನಂ ಪಾಂಡೆ