ಡಿಪ್​ಫೇಕ್​ ವಿಡಿಯೋಗಳಿಂದ ಸಮಸ್ಯೆಗೆ ಒಳಗಾದ ಸೆಲೆಬ್ರಿಟಿಗಳು ಇವರೇ ನೋಡಿ

ತಂತ್ರಜ್ಞಾನ ಮುಂದುವರಿದಂತೆ ಈ ರೀತಿಯ ಸಮಸ್ಯೆಗಳು ಎದುರಾಗುತ್ತಲೇ ಇರುತ್ತವೆ. ರಶ್ಮಿಕಾ ರೀತಿಯೇ ಈ ಮೊದಲು ಅನೇಕ ಸೆಲೆಬ್ರಿಟಿಗಳು ಈ ರೀತಿಯ ತೊಂದರೆ ಅನುಭವಿಸಿದ್ದರು. ಈ ಸಾಲಿನಲ್ಲಿ ಕತ್ರಿನಾ ಕೈಫ್ ಸೇರಿ ಅನೇಕರಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಡಿಪ್​ಫೇಕ್​ ವಿಡಿಯೋಗಳಿಂದ ಸಮಸ್ಯೆಗೆ ಒಳಗಾದ ಸೆಲೆಬ್ರಿಟಿಗಳು ಇವರೇ ನೋಡಿ
ರಶ್ಮಿಕಾ ಮಂದಣ್ಣ ರೀತಿ ಎಡಿಟ್ ವಿಡಿಯೋಗಳಿಂದ ಸಮಸ್ಯೆಗೆ ಒಳಗಾದ ಸೆಲೆಬ್ರಿಟಿಗಳು ಇವರೇ ನೊಡಿ
Updated By: ರಾಜೇಶ್ ದುಗ್ಗುಮನೆ

Updated on: Nov 08, 2023 | 12:21 PM

ಇತ್ತೀಚೆಗೆ ರಶ್ಮಿಕಾ ಮಂದಣ್ಣ (Rashmika Mandanna) ಅವರು ಲಿಫ್ಟ್ ಏರುತ್ತಿರುವ ವಿಡಿಯೋ ವೈರಲ್ ಆಗಿದೆ. ಟೈಟ್ ಡ್ರೆಸ್ ಹಾಕಿ ಅವರು ಲಿಫ್ಟ್ ಏರಿದ್ದರು. ಅಸಲಿಗೆ ಇದು ರಶ್ಮಿಕಾ ಮಂದಣ್ಣ ಅವರ ವಿಡಿಯೋನೆ ಆಗಿರಲಿಲ್ಲ. ಜರಾ ಪಟೇಲ್ ಎಂಬ ಯುವತಿಯ ವಿಡಿಯೋನ ಎಡಿಟ್ ಮಾಡಲಾಗಿತ್ತು. ವಿಡಿಯೋನ ತಿರುಚಿ ಜರಾ ಪಟೇಲ್ ಮುಖಕ್ಕೆ ರಶ್ಮಿಕಾ ಅವರ ಫೋಟೋ ಹಾಕಲಾಗಿತ್ತು. ಇದು ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಅಮಿತಾಭ್ ಬಚ್ಚನ್ ಸೇರಿ ಅನೇಕರು ಈ ಬಗ್ಗೆ ಧ್ವನಿ ಎತ್ತಿದ್ದರು.

ತಂತ್ರಜ್ಞಾನ ಮುಂದುವರಿದಂತೆ ಈ ರೀತಿಯ ಸಮಸ್ಯೆಗಳು ಎದುರಾಗುತ್ತಲೇ ಇರುತ್ತವೆ. ರಶ್ಮಿಕಾ ರೀತಿಯೇ ಈ ಮೊದಲು ಅನೇಕ ಸೆಲೆಬ್ರಿಟಿಗಳು ಡಿಪ್​ಫೇಕ್​ ವಿಡಿಯೋಗಳಿಂದ ತೊಂದರೆ ಅನುಭವಿಸಿದ್ದರು. ಈ ಸಾಲಿನಲ್ಲಿ ಕತ್ರಿನಾ ಕೈಫ್ ಸೇರಿ ಅನೇಕರಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಕತ್ರಿನಾ ಕೈಫ್

ಬಾಲಿವುಡ್​ನ ಬೇಡಿಕೆಯ ನಟಿ ಕತ್ರಿನಾ ಕೈಫ್ ಅವರು ಈ ರೀತಿಯ ಸಮಸ್ಯೆಯನ್ನು 9 ವರ್ಷಗಳ ಹಿಂದೆಯೇ ಅನುಭವಿಸಿದ್ದರು. ಅದು 2014ರ ಸಮಯ. ಕತ್ರಿನಾ ಕೈಫ್ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಒಂದು ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ಇರುವವರು ಕತ್ರಿನಾ ಕೈಫ್ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಅದು ನಕಲಿ ಅನ್ನೋದು ನಂತರ ಗೊತ್ತಾಯಿತು.

ಅಕ್ಷರಾ ಸಿಂಗ್

ಭೋಜ್​ಪುರಿ ನಟಿ ಅಕ್ಷರಾ ಸಿಂಗ್ ಕೂಡ ಇದೇ ರೀತಿಯ ತೊಂದರೆ ಅನುಭವಿಸಿದ್ದರು. ವಿಡಿಯೋ ವೈರಲ್ ಆದ ಬಳಿಕ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದರು. ತಮಗೂ ಈ ವಿಡಿಯೋಗೂ ಸಂಬಂಧ ಇಲ್ಲ ಎಂದು ಅವರು ಹೇಳಿಕೊಂಡಿದ್ದರು. ಆದಾಗ್ಯೂ ಅನೇಕರು ಇದನ್ನು ನಂಬಲೇ ಇಲ್ಲ.

ತಮನ್ನಾ ಭಾಟಿಯಾ

ನಟಿ ತಮನ್ನಾ ಭಾಟಿಯಾ ಕೂಡ ಎಡಿಟ್ ಮಾಡಿದ ವಿಡಿಯೋದಿಂದ ತೊಂದರೆ ಅನುಭವಿಸಿದ್ದರು. ಅಶ್ಲೀಲ ವಿಡಿಯೋ ಒಂದರಲ್ಲಿ ತಮನ್ನಾ ಕಾಣಿಸಿಕೊಂಡಿದ್ದಾರೆ ಎಂದು ವಿಡಿಯೋ ವೈರಲ್ ಮಾಡಲಾಗಿತ್ತು. ಆ ಬಳಿಕ ಇದು ಫೇಕ್ ಅನ್ನೋದು ಗೊತ್ತಾಯಿತು.

ಪ್ರೀತಿ ಜಿಂಟಾ

ನಟಿ ಪ್ರೀತಿ ಜಿಂಟಾ ಅವರು ಚಿತ್ರರಂಗದಿಂದ ದೂರ ಇದ್ದಾರೆ. ಸದ್ಯ ಅವರು ಕೌಟುಂಬಿಕ ಜೀವನ ಹಾಗೂ ತಮ್ಮ ಒಡೆತನದ ಐಪಿಎಲ್ ತಂಡ ಪಂಜಾಬ್ ಕಿಂಗ್ಸ್ ಕಡೆ ಗಮನ ಹರಿಸುತ್ತಿದ್ದಾರೆ. ಅವರ ಎಂಎಂಎಸ್ ವಿಡಿಯೋ ಲೀಕ್ ಆಗಿದೆ ಎನ್ನಲಾಗಿತ್ತು. ಅವರು ಯಾರದ್ದೋ ಜೊತೆ ಲಿಪ್ ಲಾಕ್ ಮಾಡುತ್ತಿರುವ ವಿಡಿಯೋ ಇದಾಗಿತ್ತು. ಆದರೆ, ಇದು ಫೇಕ್ ಅನ್ನೋದು ಬಳಿಕ ಗೊತ್ತಾಯಿತು.

ಸೋನಾಕ್ಷಿ ಸಿನ್ಹಾ

ಸೋನಾಕ್ಷಿ ಸಿನ್ಹಾ ಅವರು ಸಿನಿಮಾ ಆಯ್ಕೆಯಲ್ಲಿ ಚ್ಯೂಸಿ ಆಗಿದ್ದಾರೆ. ಅವರ ಖಾಸಗಿ ವಿಡಿಯೋ ಒಂದು ವೈರಲ್ ಆಗಿದೆ ಎಂದು ಹೇಳಲಾಗಿತ್ತು. ಆದರೆ, ಇದು ಎಡಿಟ್ ಮಾಡಿದ ವಿಡಿಯೋ ಅನ್ನೋದು ಬಳಿಕ ಗೊತ್ತಾಯಿತು.

ಇದನ್ನೂ ಓದಿ: ಸೋನಾಕ್ಷಿ ಜೊತೆಗಿನ ಲವ್ ವಿಚಾರ ಖಚಿತಪಡಿಸಿದ ಜಹೀರ್ ಇಕ್ಬಾಲ್; ಹುಟ್ಟುಹಬ್ಬದ ದಿನ ಪ್ರಪೋಸ್

ಮೋನಾ ಸಿಂಗ್

ಮೋನಾ ಸಿಂಗ್ ಅವರು ಬೆತ್ತಲಾಗಿ ಇರುವ ವಿಡಿಯೋ ಲೀಕ್ ಆಗಿತ್ತು. ಆದರೆ ಇದು ಫೇಕ್ ಎಂಬುದು ನಂತರ ತಿಳಿಯಿತು. ಈ ಘಟನೆಯಿಂದ ಮೋನಾ ಸಿಂಗ್ ನೊಂದಿದ್ದರು.

ಅಂಜಲಿ ಅರೋರಾ

‘ಕಚ್ಚಾ ಬಾದಾಮ್..’ ಹಾಡಿಗೆ ಡ್ಯಾನ್ಸ್ ಮಾಡಿ ಫೇಮಸ್ ಆದವರು ಅಂಜಲಿ ಅರೋರಾ. ಈ ಹಾಡಿಗೆ ಡ್ಯಾನ್ಸ್ ಮಾಡಿ ವೈರಲ್ ಆಗಿದ್ದರು. ಅವರು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡ ವಿಡಿಯೋ ವೈರಲ್ ಆಗಿತ್ತು. ಇದು ಫೇಕ್ ವಿಡಿಯೋ ಎಂದು ಅವರು ಬಳಿಕ ಸ್ಪಷ್ಟನೆ ನೀಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:39 am, Wed, 8 November 23