ಸೋನಾಕ್ಷಿ ಜೊತೆಗಿನ ಲವ್ ವಿಚಾರ ಖಚಿತಪಡಿಸಿದ ಜಹೀರ್ ಇಕ್ಬಾಲ್; ಹುಟ್ಟುಹಬ್ಬದ ದಿನ ಪ್ರಪೋಸ್
Sonakshi Sinha: ನಟಿಯ ಜೊತೆ ಕಳೆದ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ ಜಹೀರ್. ಈ ಫೋಟೋಗೆ ಕ್ಯಾಪ್ಶನ್ ನೀಡಿರುವ ಅವರು ಸಾಕಷ್ಟು ವಿಚಾರಗಳ ಬಗ್ಗೆ ಬರೆದುಕೊಂಡಿದ್ದಾರೆ. ಕ್ಯಾಪ್ಶನ್ನ ಕೊನೆಯಲ್ಲಿ ಅವರು ಐ ಲವ್ ಯೂ ಎಂದಿದ್ದಾರೆ.
ಬಾಲಿವುಡ್ನಲ್ಲಿ ಸೋನಾಕ್ಷಿ ಸಿನ್ಹಾಗೆ (Sonakshi Sinha) ಮೊದಲಿನಷ್ಟು ಬೇಡಿಕೆ ಇಲ್ಲ. ಅಲ್ಲೊಂದು ಇಲ್ಲೊಂದು ಸಿನಿಮಾ ಮಾಡಿಕೊಂಡು ಅವರಿದ್ದಾರೆ. ವೆಬ್ ಸೀರಿಸ್ನಲ್ಲಿ ನಟಿಸುವ ಮೂಲಕ ಅವರ ಖ್ಯಾತಿ ಹೆಚ್ಚಿದೆ. ಸ್ಟಾರ್ ಕಿಡ್ ಆದ ಹೊರತಾಗಿಯೂ ಸೋನಾಕ್ಷಿಗೆ ದೊಡ್ಡ ಆಫರ್ಗಳು ಬರುತ್ತಿಲ್ಲ. ಇದರ ಜೊತೆಗೆ ಸೋನಾಕ್ಷಿ ಅವರು ಪ್ರೀತಿ ವಿಚಾರಕ್ಕೆ ಆಗಾಗ ಸುದ್ದಿ ಆಗುತ್ತಾರೆ. ನಟ ಜಹೀರ್ ಇಕ್ಬಾಲ್ (Zaheer Iqbal) ಜತೆ ಅವರು ಡೇಟಿಂಗ್ ನಡೆಸುತ್ತಿದ್ದಾರೆ ಎನ್ನಲಾಗಿತ್ತು. ಈಗ ಸೋನಾಕ್ಷಿ ಜನ್ಮದಿನದಂದು (ಜೂನ್ 2) ಜಹೀರ್ ಅವರು ಪೋಸ್ಟ್ ಒಂದನ್ನು ಹಾಕಿದ್ದು, ನಟಿಗೆ ಐ ಲವ್ ಯೂ ಎಂದಿದ್ದಾರೆ.
ನಟಿಯ ಜೊತೆ ಕಳೆದ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ ಜಹೀರ್. ಈ ಫೋಟೋಗೆ ಕ್ಯಾಪ್ಶನ್ ನೀಡಿರುವ ಅವರು ಸಾಕಷ್ಟು ವಿಚಾರಗಳ ಬಗ್ಗೆ ಬರೆದುಕೊಂಡಿದ್ದಾರೆ. ಕ್ಯಾಪ್ಶನ್ನ ಕೊನೆಯಲ್ಲಿ ಅವರು ಐ ಲವ್ ಯೂ ಎಂದಿದ್ದಾರೆ. ಈ ಮೂಲಕ ಅವರು ಪ್ರೀತಿ ವಿಚಾರವನ್ನು ಖಚಿತಪಡಿಸಿದ್ದಾರೆ.
ಜಹೀರ್ ಜನ್ಮದಿನಕ್ಕೂ ಸೋನಾಕ್ಷಿ ಈ ಮೊದಲು ವಿಶ್ ಮಾಡಿದ್ದರು. ಈ ವೇಳೆ ಸೋನಾಕ್ಷಿ ಉದ್ದನೆಯ ಸಾಲುಗಳನ್ನು ಬರೆದು ಬರ್ತ್ಡೇ ವಿಶ್ ಮಾಡಿದ್ದರು. ಅಲ್ಲದೆ, ಬೆಸ್ಟ್ ಫ್ರೆಂಡ್ ಎನ್ನುವ ವಿಚಾರವನ್ನು ಒತ್ತಿ ಹೇಳಿದ್ದರು. ಇದಕ್ಕೆ ಕಮೆಂಟ್ ಮಾಡಿದ್ದ ಜಹೀರ್, ‘ನಿಮ್ಮನ್ನು ನನ್ನ ನಾಯಕಿ ಎಂದು ಅಧಿಕೃತವಾಗಿ ಕರೆಯಬಹುದೇ’ ಎಂದಿದ್ದರು. ಇದು ಕೂಡ ಚರ್ಚೆ ಹುಟ್ಟುಹಾಕಿತ್ತು.
View this post on Instagram
ನಟ ಶತ್ರುಘ್ನ ಸಿನ್ಹಾ ಹಾಗೂ ಪೂನಮ್ ಸಿನ್ಹಾ ಮಗಳು ಸೋನಾಕ್ಷಿ. ಸಲ್ಮಾನ್ ಖಾನ್ ನಟನೆಯ ‘ದಬಾಂಗ್’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸಿದ ಅವರಿಗೆ ಸಾಲುಸಾಲು ಚಿತ್ರಗಳು ಸಿಕ್ಕವು. ಆದರೆ, ಇತ್ತೀಚೆಗೆ ಅವರು ನಟಿಸಿದ ಸಿನಿಮಾಗಳು ಫ್ಲಾಪ್ ಆಗುತ್ತಿವೆ. ಹೀಗಾಗಿ, ನಿರ್ಮಾಪಕರು ಅವರ ಮನೆಯ ಕದ ತಟ್ಟುತ್ತಿಲ್ಲ. ಅವರಿಗೆ ಆರ್ಥಿಕವಾಗಿ ಯಾವುದೇ ಸಮಸ್ಯೆ ಇಲ್ಲ. ಆದರೆ, ಸಾಲುಸಾಲು ಸಿನಿಮಾಗಳು ಫ್ಲಾಪ್ ಆಗುತ್ತಿರುವುದಕ್ಕೆ ವೃತ್ತಿ ಜೀವನಕ್ಕೆ ಹಿನ್ನಡೆ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ