ಒಂದೇ ಹೀರೋ ಮೇಲೆ ಹಲವು ನಟಿಯರಿಗೆ ಪ್ರೀತಿ.. ಇಲ್ಲಿದೆ ಬಾಲಿವುಡ್ ಪ್ರೇಮ ಕಹಾನಿ..

| Updated By: ಮದನ್​ ಕುಮಾರ್​

Updated on: Jan 14, 2024 | 10:39 AM

ಒಬ್ಬರ ಜೊತೆ ಬ್ರೇಕಪ್ ಆದ ಬಳಿಕ ಮತ್ತೊಬ್ಬರ ಜೊತೆ ಓಡಾಡಿ ಸುದ್ದಿ ಆದ ಅನೇಕ ಸೆಲೆಬ್ರಿಟಿಗಳಿದ್ದಾರೆ. ಆ ಬಗ್ಗೆ ಸಾಕಷ್ಟು ಸುದ್ದಿ ಆಗಿತ್ತು. ಜಾನ್ವಿ ಕಪೂರ್, ಕತ್ರಿನಾ ಕೈಫ್, ಆಲಿಯಾ ಭಟ್, ಹೃತಿಕ್ ರೋಷನ್, ಅಮಿತಾಭ್ ಬಚ್ಚನ್, ರೇಖಾ, ಜಯಾ ಬಚ್ಚನ್, ಶಾಹಿದ್ ಕಪೂರ್, ಕರೀನಾ ಕಪೂರ್ ಮುಂತಾದವರು ಈ ಪಟ್ಟಿಯಲ್ಲಿದ್ದಾರೆ.

ಒಂದೇ ಹೀರೋ ಮೇಲೆ ಹಲವು ನಟಿಯರಿಗೆ ಪ್ರೀತಿ.. ಇಲ್ಲಿದೆ ಬಾಲಿವುಡ್ ಪ್ರೇಮ ಕಹಾನಿ..
Follow us on

ಸೆಲೆಬ್ರಿಟಿಗಳ ಮಧ್ಯೆ ಪ್ರಿತಿ-ಪ್ರೇಮ ಕಾಮನ್. ಹಲವು ಪ್ರೇಮ ಕಥೆಗಳು ಮದುವೆವರೆಗೆ ಹೋಗಿದೆ. ಇನ್ನೂ ಕೆಲವು ಅರ್ಧದಲ್ಲೇ ಕೊನೆ ಆಗಿದೆ. ಇತ್ತೀಚೆಗೆ ಜಾನ್ವಿ ಕಪೂರ್ ಹಾಗೂ ಅನನ್ಯಾ ಪಾಂಡೆ (Ananya Pandey) ಅವರು ಕಾರ್ತಿಕ್ ಆರ್ಯನ್​ನ ಒಟ್ಟೊಟ್ಟಿಗೆ ಇಷ್ಟಪಡುತ್ತಿದ್ದರು ಎನ್ನುವ ವಿಚಾರ ರಿವೀಲ್ ಆಗಿತ್ತು. ಈ ರೀತಿ ಅನೇಕ ಘಟನೆಗಳು ಬಾಲಿವುಡ್​ನಲ್ಲಿ (Bollywood) ನಡೆದಿವೆ. ಒಬ್ಬರ ಜೊತೆ ಬ್ರೇಕಪ್ ಆದ ಬಳಿಕ ಮತ್ತೊಬ್ಬರ ಜೊತೆ ಓಡಾಡಿ ಸುದ್ದಿ ಆದ ಅನೇಕ ಸೆಲೆಬ್ರಿಟಿಗಳಿದ್ದಾರೆ. ಆ ಬಗ್ಗೆ ಸಾಕಷ್ಟು ಸುದ್ದಿ ಆಗಿತ್ತು. ಆ ಬಗ್ಗೆ ಇಲ್ಲಿದೆ ವಿವರ.

ಜಾನ್ವಿ ಕಪೂರ್-ಸಾರಾ ತೆಂಡೂಲ್ಕರ್: ಜಾನ್ವಿ ಕಪೂರ್ ಹಾಗೂ ಶಿಖರ್ ಪಹರಿಯಾ ಪ್ರೀತಿಸುತ್ತಿದ್ದಾರೆ. ಇಬ್ಬರೂ ಶೀಘ್ರವೇ ಮದುವೆ ಆಗಲಿದ್ದಾರೆ ಎಂದು ಹೇಳಲಾಗಿದೆ. ಇತ್ತೀಚೆಗೆ ತಿರುಪತಿಗೆ ಇಬ್ಬರೂ ಒಟ್ಟಾಗಿ ತೆರಳಿದ್ದರು. ಇದರಿಂದ ಇವರ ಮದುವೆ ವಿಚಾರ ಹುಟ್ಟಿಕೊಂಡಿದೆ. ಈಗ ಜಾನ್ವಿ ಕಪೂರ್ ಅವರು ಸಾರಾ ತೆಂಡೂಲ್ಕರ್​ನ ಅನ್​ಫಾಲೋ ಮಾಡಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಸಾರಾ ಹಾಗೂ ಶಿಖರ್ ಗೆಳೆತನ. ಈ ಮೊದಲು ಇಬ್ಬರೂ ಆತ್ಮೀಯವಾಗಿದ್ದರು ಎನ್ನಲಾಗಿದೆ.

ಕತ್ರಿನಾ ಕೈಫ್-ಆಲಿಯಾ ಭಟ್: ಕತ್ರಿನಾ ಕಪೂರ್ ಹಾಗೂ ರಣಬೀರ್ ಕಪೂರ್ ಇಬ್ಬರೂ ಹಲವು ವರ್ಷಗಳ ಕಾಲ ಡೇಟಿಂಗ್ ಮಾಡುತ್ತಿದ್ದರು. ಆದರೆ, ಇಬ್ಬರೂ ಬೇರೆ ಆದರು. ಆ ಬಳಿಕ ರಣಬೀರ್ ಅವರು ಆಲಿಯಾ ಜೊತೆ ಡೇಟ್ ಮಾಡಿದರು. ಇಬ್ಬರೂ ನಂತರ ಮದುವೆ ಆದರು. ಆಲಿಯಾ ಹಾಗೂ ಕತ್ರಿನಾ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ.

ಇದನ್ನೂ ಓದಿ: ದೀಪಿಕಾ, ಆಲಿಯಾ, ಕತ್ರಿನಾ ಹಾದಿಯಲ್ಲಿ ಕೃತಿ ಸೆನನ್​: ಕೋಟ್ಯಂತರ ಹಣ ಹೂಡಿಕೆ

ಕಂಗನಾ, ಸುಸಾನೆ ಖಾನ್: ಹೃತಿಕ್ ರೋಷನ್ ಅವರು ಸುಸಾನೆ ಖಾನ್ ಅವರನ್ನು ಪ್ರೀತಿಸಿ ಮದುವೆ ಆದರು. ಇಬ್ಬರೂ ಒಟ್ಟಿಗೆ ಇರುವಾಗಲೇ ಹೃತಿಕ್ ಅವರು ಕಂಗನಾ ಜೊತೆ ಡೇಟಿಂಗ್ ಮಾಡಿದ್ದರು ಎನ್ನಲಾಗಿದೆ. ಈ ವಿಚಾರ ಸಾಕಷ್ಟು ಸುದ್ದಿ ಆಯಿತು. ಈಗ ಹೃತಿಕ್ ಅವರು ಸಬಾ ಆಜಾದ್​ನ ಪ್ರೀತಿಸುತ್ತಿದ್ದಾರೆ.

ಶಿಲ್ಪಾ ಶೆಟ್ಟಿ ಹಾಗೂ ಟ್ವಿಂಕಲ್ ಖನ್ನಾ: ರವೀನಾ ಟಂಡನ್ ಹಾಗೂ ಅಕ್ಷಯ್ ಕುಮಾರ್ ಪ್ರೀತಿಸುತ್ತಿದ್ದರು. ಆದರೆ, ಇವರ ಸಂಬಂಧ ಮದುವೆವರೆಗೆ ಹೋಗಿಲ್ಲ. ಇಬ್ಬರೂ ಸಂಬಂಧ ಮುರಿದುಕೊಂಡರು. ಆ ಬಳಿಕ ಶಿಲ್ಪಾ ಶೆಟ್ಟಿ ಜೊತೆ ಡೇಟಿಂಗ್ ಮಾಡುತ್ತಿದ್ದರು. ಅಕ್ಷಯ್ ಕುಮಾರ್​ಗೆ ಟ್ವಿಂಕಲ್ ಖನ್ನಾ ಮೇಲೆ ಮನಸ್ಸಿತ್ತು. ಆ ಬಳಿಕ ಶಿಲ್ಪಾ ದೂರ ಆದರು. ಟ್ವಿಂಕಲ್ ಖನ್ನಾ ಹಾಗೂ ಅಕ್ಷಯ್ ಮದುವೆ ಆದರು.

ಇದನ್ನೂ ಓದಿ: ಹುಡುಗರು ಜಾನ್ವಿನ ​ನೋಡಿದಾಕ್ಷಣ ಮೊದಲು ಗಮನಿಸೋದೇನು? ಮುಚ್ಚುಮರೆ ಇಲ್ಲದೆ ಉತ್ತರಿಸಿದ ನಟಿ  

ರೇಖಾ-ಜಯಾ: ಅಮಿತಾಭ್ ಬಚ್ಚನ್, ರೇಖಾ ಹಾಗೂ ಜಯಾ ಬಚ್ಚನ್ ಟ್ರಯಾಂಗಲ್ ಲವ್​ ಸ್ಟೋರಿ ಸಾಕಷ್ಟು ಸುದ್ದಿ ಆಗಿತ್ತು. ಅಮಿತಾಭ್ ಬಚ್ಚನ್ ಹಾಗೂ ಜಯಾ ಮದುವೆ ಆದರು. ಆ ಬಳಿಕ ರೇಖಾ ಜೊತೆ ಅಮಿತಾಭ್ ಪ್ರೀತಿಯಲ್ಲಿ ಬಿದ್ದರು ಎನ್ನಲಾಗಿತ್ತು. ಆದರೆ, ಜಯಾ ಅವರು ಪರಿಸ್ಥಿತಿಯನ್ನು ಉತ್ತಮವಾಗಿ ಹ್ಯಾಂಡಲ್ ಮಾಡಿದರು. ಆ ಬಳಿಕ ಅಮಿತಾಭ್ ಅವರಿಂದ ರೇಖಾ ದೂರ ಆದರು.

ಪ್ರಿಯಾಂಕಾ ಹಾಗೂ ಕರೀನಾ: ಶಾಹಿದ್ ಕಪೂರ್ ಹಾಗೂ ಕರೀನಾ ಕಪೂರ್ ಡೇಟಿಂಗ್ ಮಾಡುತ್ತಿದ್ದರು. ಆ ಬಳಿಕ ಇಬ್ಬರೂ ದೂರ ಆದರು. ಶಾಹಿದ್ ಅವರು ನಂತರ ಪ್ರಿಯಾಂಕಾ ಚೋಪ್ರಾ ಜೊತೆ ಡೇಟಿಂಗ್ ಶುರು ಮಾಡಿದರು.

ಅಮೃತಾ ಸಿಂಗ್, ಕರೀನಾ ಕಪೂರ್: ಸೈಫ್ ಅಲಿ ಖಾನ್ ಹಾಗೂ ಅಮೃತಾ ಸಿಂಗ್ ಹಾಯಾಗಿ ಜೀವನ ನಡೆಸುತ್ತಿದ್ದರು. ಆ ಬಳಿಕ ಇಬ್ಬರೂ ವಿಚ್ಛೇದನ ಪಡೆದರು. ಇದಕ್ಕೆ ಕಾರಣ ನೀಡಿಲ್ಲ. ಆ ಬಳಿಕ ಸೈಫ್ ಅವರು ಕರೀನಾ ಕಪೂರ್ ಜೊತೆ ವಿವಾಹ ಆದರು. ಇವರಿಗೆ ತೈಮೂರ್ ಹಾಗೂ ಜೇ ಹೆಸರಿನ ಮಕ್ಕಳಿದ್ದಾರೆ.

ದೀಪಿಕಾ ಪಡುಕೋಣೆ ಹಾಗೂ ಕತ್ರಿನಾ ಕೈಫ್​: ದೀಪಿಕಾ ಪಡುಕೋಣೆ ಹಾಗೂ ರಣಬೀರ್ ಕಪೂರ್ ರಿಲೇಶನ್​ಶಿಪ್​ನಲ್ಲಿದ್ದರು. ಆ ಬಳಿಕ ರಣಬೀರ್ ಹಾಗೂ ದೀಪಿಕಾ ಬೇರೆ ಆದರು. ನಂತರ ಅವರ ಬಾಳಲ್ಲಿ ಕತ್ರಿನಾ ಬಂದರು. ನಂತರ ಇವರ ಸಂಬಂಧವೂ ಮುರಿದು ಬಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ