AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಡುಗರು ಜಾನ್ವಿನ ​ನೋಡಿದಾಕ್ಷಣ ಮೊದಲು ಗಮನಿಸೋದೇನು? ಮುಚ್ಚುಮರೆ ಇಲ್ಲದೆ ಉತ್ತರಿಸಿದ ನಟಿ  

ಪ್ರಶ್ನೆ ವಿವಾದಾತ್ಮಕವಾಗಿ ಕಂಡರೆ ಸೆಲೆಬ್ರಿಟಿಗಳು ಉತ್ತರಿಸುವ ಗೋಜಿಗೆ ಹೋಗುವುದಿಲ್ಲ. ಆದರೆ, ಜಾನ್ವಿ ಆ ರೀತಿ ಮಾಡಿಲ್ಲ. ಮುಚ್ಚುಮರೆ ಇಲ್ಲದೆ ಉತ್ತರ ನೀಡಿದ್ದಾರೆ.

ಹುಡುಗರು ಜಾನ್ವಿನ ​ನೋಡಿದಾಕ್ಷಣ ಮೊದಲು ಗಮನಿಸೋದೇನು? ಮುಚ್ಚುಮರೆ ಇಲ್ಲದೆ ಉತ್ತರಿಸಿದ ನಟಿ  
ಜಾನ್ವಿ ಕಪೂರ್
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ|

Updated on: Jan 05, 2024 | 3:08 PM

Share

ನಟಿ ಜಾನ್ವಿ ಕಪೂರ್ ಹಾಗೂ ಅವರ ಸಹೋದರಿ ಖುಷಿ ಕಪೂರ್ (Kushi kapoor) ಅವರು ‘ಕಾಫಿ ವಿತ್ ಕರಣ್ ಸೀಸನ್ 8’ರ ಅತಿಥಿ ಆಗಿ ಆಗಮಿಸಿದ್ದರು. ಈ ವೇಳೆ ಅವರು ಸಾಕಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ವೃತ್ತಿ ಬದುಕು, ಮುಂಬರುವ ಸಿನಿಮಾಗಳ ಕುರಿತು ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಇದರ ಜೊತೆ ಅವರು ಹೇಳಿದ ಒಂದು ಮಾತು ಎಲ್ಲರ ಗಮನ ಸೆಳೆದಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

‘ಕಾಫಿ ವಿತ್ ಕರಣ್’ ಹಲವು ವಿವಾದಗಳನ್ನು ಹುಟ್ಟುಹಾಕಿದೆ. ಕರಣ್ ಜೋಹರ್ ಅವರು ನಡೆಸಿಕೊಡೋ ಈ ಶೋನಲ್ಲಿ ಹಲವು ಅಡಲ್ಟ್ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅನೇಕ ಸೆಲೆಬ್ರಿಟಿಗಳು ಇದಕ್ಕೆ ಮುಚ್ಚುಮರೆ ಇಲ್ಲದೆ ಉತ್ತರ ನೀಡುತ್ತಾರೆ. ಕೆಲವು ಸಂದರ್ಭಗಳಲ್ಲಿ ಸೆಲೆಬ್ರಿಟಿಗಳು ಪ್ರಶ್ನೆಗೆ ಉತ್ತರಿಸುವ ಗೋಜಿಗೆ ಹೋಗುವುದಿಲ್ಲ. ಆದರೆ, ಜಾನ್ವಿ ಆ ರೀತಿ ಮಾಡಿಲ್ಲ. ಮುಚ್ಚುಮರೆ ಇಲ್ಲದೆ ಉತ್ತರ ನೀಡಿದ್ದಾರೆ.

ಕರಣ್ ಜೋಹರ್ ಶೋನಲ್ಲಿ ರ‍್ಯಾಪಿಡ್ ಫೈರ್ ರೌಂಡ್ ಇರುತ್ತದೆ. ‘ಬಾಲಿವುಡ್ ನಟರಿಂದ ಬಂದ ಫ್ಲರ್ಟ್ ಮೆಸೇಜ್ ಬಗ್ಗೆ ಹೇಳಿ’ ಎಂದು ಜಾನ್ವಿ ಕಪೂರ್​ಗೆ ಕೇಳಿದರು ಕರಣ್ ಜೋಹರ್. ‘ನಾನು ನಿಮ್ಮ ಎಲ್ಲ ಸುಂದರ ಅಂಗಗಳನ್ನು ನೋಡಬಹುದೇ’ ಎಂದು ನಟನೋರ್ವ ಪ್ರಶ್ನೆ ಕೇಳಿದ್ದರಂತೆ. ಆದರೆ, ಇದನ್ನು ಕೇಳಿದ್ದು ಯಾರು ಎನ್ನುವ ವಿಚಾರ ರಿವೀಲ್ ಆಗಿಲ್ಲ.

ಈ ವೇಳೆ ಕರಣ್ ಅವರು, ‘ಹುಡುಗರು ನಿಮ್ಮನ್ನು ನೋಡಿದಾಗ ಮೊದಲು ಗಮನಿಸೋದು ಏನು’ ಎಂದು ಕೇಳಿದ್ದಾರೆ. ಇದಕ್ಕೆ ಜಾನ್ವಿ ಕಪೂರ್ ಅವರು ನೇರ ಉತ್ತರ ಕೊಟ್ಟಿದ್ದಾರೆ. ‘ನನ್ನ ಕಣ್ಣುಗಳನ್ನು ನೋಡುತ್ತೇನೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ, ಅವರು ಕಣ್ಣು ಬೇರೆ ಕಡೆ ಇರುತ್ತದೆ’ ಎಂದು ಜಾನ್ವಿ ಹೇಳಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: ದೀಪಿಕಾ-ರಣವೀರ್ ದಂಪತಿಯ ಟ್ರೋಲ್ ಮಾಡಿದವರಿಗೆ ಮಧ್ಯ ಬೆರಳು ತೋರಿಸಿದ ಕರಣ್ ಜೋಹರ್

ಶೋ ಆರಂಭದಲ್ಲೇ ಕರಣ್ ಜೋಹರ್ ಅವರು ಇವರ ಡೇಟಿಂಗ್ ವಿಚಾರ ಬಿಚ್ಚಿಟ್ಟರು. ‘ಜಾನ್ವಿ ಹಾಗೂ ಖುಷಿ ಇಬ್ಬರಿಗೂ ಬಾಯ್​ಫ್ರೆಂಡ್ ಇದ್ದಾರೆ’ ಎಂದಿದ್ದಾರೆ ಕರಣ್. ಜಾನ್ವಿ ಕಪೂರ್ ಅವರು ‘ದೇವರ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಸಿನಿಮಾದಲ್ಲಿ ಜೂನಿಯರ್ ಎನ್​ಟಿಆರ್​ಗೆ ಅವರು ಜೊತೆಯಾಗಿದ್ದಾರೆ. ಶೂಟಿಂಗ್ ಮಧ್ಯೆ ಅವರು ಇಂದು (ಜನವರಿ 5) ಅವರು ತಿರುಪತಿಗೆ ಭೇಟಿ ನೀಡಿ ವೆಂಕಟೇಶ್ವರನ ದರ್ಶನ ಪಡೆದಿದ್ದಾರೆ. ಖುಷಿ ಅವರು ‘ದಿ ಆರ್ಚೀಸ್’ ಸಿನಿಮಾ ಮೂಲಕ ಬಣ್ಣದ ಬದುಕು ಆರಂಭಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ