ಝಹೀರ್​ ಇಖ್ಬಾಲ್ ಜತೆ ಮದುವೆ ಆದ ಸೋನಾಕ್ಷಿಯನ್ನು ಕುಟುಂಬದಿಂದ ಹೊರಗಿಟ್ಟ ಸಹೋದರ?

|

Updated on: Jul 09, 2024 | 10:31 PM

ಕೆಲವೇ ದಿನಗಳ ಹಿಂದೆ ನಟಿ ಸೋನಾಕ್ಷಿ ಸಿನ್ಹಾ ಅವರು ಝಹೀರ್​ ಇಖ್ಬಾಲ್​ ಜೊತೆ ಮದುವೆ ಆದರು. ಅವರ ಮದುವೆ ಬಗ್ಗೆ ಕುಟುಂಬದವರಿಗೆ ಅಸಮಾಧಾನ ಇದೆ ಎಂಬ ಮಾತು ಕೇಳಿಬಂದಿದೆ. ಅದಕ್ಕೆ ಸಾಕ್ಷಿ ಒದಗಿಸುವ ರೀತಿಯಲ್ಲಿ ಸೋನಾಕ್ಷಿ ಸಿನ್ಹಾ ಸಹೋದರ ಲವ್​ ಸಿನ್ಹಾ ಅವರು ಈಗ ಒಂದು ಪೋಸ್ಟ್​ ಮಾಡಿದ್ದಾರೆ. ಈ ಬಗ್ಗೆ ನೆಟ್ಟಿಗರು ಸಖತ್​ ಚರ್ಚೆ ಮಾಡುತ್ತಿದ್ದಾರೆ.

ಝಹೀರ್​ ಇಖ್ಬಾಲ್ ಜತೆ ಮದುವೆ ಆದ ಸೋನಾಕ್ಷಿಯನ್ನು ಕುಟುಂಬದಿಂದ ಹೊರಗಿಟ್ಟ ಸಹೋದರ?
ಶತ್ರುಘ್ನ ಸಿನ್ಹಾ ಕುಟುಂಬ, ಸೋನಾಕ್ಷಿ ಸಿನ್ಹಾ
Follow us on

ಬಾಲಿವುಡ್​ನ ಖ್ಯಾತ ನಟಿ ಸೋನಾಕ್ಷಿ ಸಿನ್ಹಾ ಅವರ ಮದುವೆ ವಿಚಾರ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ. ಮದುವೆ ನಡೆದು ಕೆಲವು ದಿನಗಳು ಕಳೆದಿದ್ದರೂ ಕೂಡ ಅದರ ಬಗೆಗಿನ ಅಂತೆ-ಕಂತೆಗಳು ಇನ್ನೂ ಹರಿದಾಡುತ್ತಲೇ ಇವೆ. ಸೋನಾಕ್ಷಿ ಸಿನ್ಹಾ ಅವರು ಬಹುಕಾಲದ ಗೆಳೆಯ ಝಹೀರ್​ ಇಖ್ಬಾಲ್​ ಜೊತೆ ಮದುವೆ ಆದರು. ಈ ವಿವಾಹಕ್ಕೆ ನಟಿಯ ಕುಟುಂಬದ ಕೆಲವರು ಸಂಪೂರ್ಣವಾಗಿ ಒಪ್ಪಿಗೆ ಸೂಚಿಸಿರಲಿಲ್ಲ ಎಂಬ ಗಾಸಿಪ್​ ಇದೆ. ಅದಕ್ಕೆ ಪೂರಕವಾಗಿ ಕೆಲವು ಘಟನೆಗಳು ನಡೆದಿವೆ. ನಟಿಯ ಸಹೋದರ ಲವ್​ ಸಿನ್ಹಾ ನಡೆ ಕೆಲವು ಅನುಮಾನಕ್ಕೆ ಕಾರಣ ಆಗಿದೆ.

ಕುಟುಂಬದವರು ಮತ್ತು ಆಪ್ತರ ಸಮ್ಮುಖದಲ್ಲಿ ಸೋನಾಕ್ಷಿ ಸಿನ್ಹಾ-ಝಹೀರ್​ ಇಖ್ಬಾಲ್​ ಶಾದಿ ನೆರವೇರಿತು. ಈ ಮದುವೆಗೆ ಸೋನಾಕ್ಷಿ ತಂದೆ ಶತ್ರುಘ್ನ ಸಿನ್ಹಾ, ಪೂನಂ ಸಿನ್ಹಾ, ಸಹೋದರ ಖುಷ್​ ಸಿನ್ಹಾ ಸಾಕ್ಷಿಯಾಗಿದ್ದರು. ಆದರೆ ಅಣ್ಣ ಲವ್​ ಸಿನ್ಹಾ ಮಾತ್ರ ಮದುವೆಗೆ ಬಂದಿರಲಿಲ್ಲ. ಝಹೀರ್​ ಇಖ್ಬಾಲ್​ ಅವರನ್ನು ಸೋನಾಕ್ಷಿ ಮದುವೆ ಆಗುತ್ತಿರುವುದು ಲವ್​ ಸಿನ್ಹಾಗೆ ಇಷ್ಟ ಇರಲಿಲ್ಲ ಎಂದು ಹೇಳಲಾಗುತ್ತಿದೆ. ತಂಗಿಯ ಮೇಲೆ ಅವರು ಮುನಿಸಿಕೊಂಡಿದ್ದಾರೆ ಎಂಬುದಕ್ಕೆ ಈಗ ಇನ್ನೊಂದು ಸಾಕ್ಷಿ ಸಿಕ್ಕಿದೆ.

ಇಂದು (ಜುಲೈ 9) ಲವ್​ ಸಿನ್ಹಾ ಅವರು ತಂದೆ-ತಾಯಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯ ತಿಳಿಸಿದ್ದಾರೆ. ತಂದೆ ಶತ್ರುಘ್ನ ಸಿನ್ಹಾ, ತಾಯಿ ಪೂನಂ ಸಿನ್ಹಾ ಜೊತೆ ತಾವು ಮತ್ತು ಖುಷ್​ ಸಿನ್ಹಾ ಇರುವ ಫೋಟೋವನ್ನು ಲವ್​ ಸಿನ್ಹಾ ಶೇರ್​ ಮಾಡಿಕೊಂಡಿದ್ದಾರೆ. ಇದು ಫ್ಯಾಮಿಲಿ ಫೋಟೋ ಆಗಿದ್ದರೂ ಕೂಡ ಇದರಲ್ಲಿ ಸೋನಾಕ್ಷಿ ಸಿನ್ಹಾ ಇಲ್ಲ! ಬೇಕಂತಲೇ ತಂಗಿ ಇಲ್ಲದ ಫೋಟೋವನ್ನು ಲವ್​ ಸಿನ್ಹಾ ಆಯ್ಕೆ ಮಾಡಿಕೊಂಡಿರಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಝಹೀರ್​ ಇಖ್ಬಾಲ್​ನನ್ನು ಮದುವೆ ಆಗಿದ್ದಕ್ಕೆ ಲವ್​ ಸಿನ್ಹಾ ಅವರು ತಂಗಿಯನ್ನು ಕುಟುಂಬದಿಂದಲೇ ಹೊರಗೆ ಇಟ್ಟಿದ್ದಾರಾ ಎಂಬ ಪ್ರಶ್ನೆ ಮೂಡಿದೆ.

ಇದನ್ನೂ ಓದಿ: ಝಹೀರ್​ ಜತೆ ಮದುವೆ ಆದ ಸೋನಾಕ್ಷಿಗೆ ಈಗ ಕಾಡುತ್ತಿದೆ ತಂದೆ-ತಾಯಿ ನೆನಪು

‘ನನ್ನ ಅದ್ಭುತ ತಂದೆ-ತಾಯಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು. ನಿಮ್ಮ ಮಕ್ಕಳಾಗಿ ಜನಿಸುವುದಕ್ಕೆ ನಾವು ಪುಣ್ಯ ಮಾಡಿದ್ದೆವು. ನಿಮ್ಮ ಜೊತೆ ಕಳೆಯುವ ಪ್ರತಿ ಕ್ಷಣಕ್ಕೂ ನಾವು ಋಣಿ ಆಗಿದ್ದೇವೆ’ ಎಂದು ಲವ್​ ಸಿನ್ಹಾ ಅವರು ಪಾಲಕರಿಗೆ ವೆಡ್ಡಿಂಗ್​ ಆ್ಯನಿವರ್ಸರಿ ಪ್ರಯುಕ್ತ ವಿಶ್​ ಮಾಡಿದ್ದಾರೆ. ತಂಗಿಯ ಜೊತೆ ಉಂಟಾಗಿರುವ ಮನಸ್ತಾಪದ ಬಗ್ಗೆ ಅವರಿನ್ನೂ ಸಾರ್ವಜನಿಕವಾಗಿ ಮಾತನಾಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.