ನಮಗೆ ರಸ್ತೆ ಇಲ್ಲ, 500 ಕೋಟಿ ರೂ. ಕೊಡಿ: ‘ಧುರಂಧರ್ 2’ ತಂಡಕ್ಕೆ ಪಾಕಿಸ್ತಾನಿಗಳ ಮನವಿ

ಪಾಕಿಸ್ತಾನದ ಲಿಯಾರಿ ಪಟ್ಟಣದಲ್ಲೇ ‘ಧುರಂಧರ್ 2’ ಸಿನಿಮಾದಲ್ಲಿ ಬಹುತೇಕ ಕಥೆ ನಡೆಯುತ್ತದೆ. ಹಾಗಾಗಿ ತಮಗೆ ಈ ಸಿನಿಮಾದಿಂದ ಬಂದ ಕಲೆಕ್ಷನ್​​ನಲ್ಲಿ ಪಾಲು ಬೇಕು ಎಂದು ಅಲ್ಲಿನ ಜನ ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದ್ದು, ಅದನ್ನು ಕಂಡು ನೆಟ್ಟಿಗರು ನಗುತ್ತಿದ್ದಾರೆ.

ನಮಗೆ ರಸ್ತೆ ಇಲ್ಲ, 500 ಕೋಟಿ ರೂ. ಕೊಡಿ: ‘ಧುರಂಧರ್ 2’ ತಂಡಕ್ಕೆ ಪಾಕಿಸ್ತಾನಿಗಳ ಮನವಿ
Lyari Locals, Ranveer Singh

Updated on: Mar 27, 2026 | 3:48 PM

ಆದಿತ್ಯ ಧರ್ (Aditya Dhar) ನಿರ್ದೇಶನ ಮಾಡಿರುವ ‘ಧುರಂಧರ್ 2’ ಸಿನಿಮಾ ಸೂಪರ್ ಹಿಟ್ ಆಗಿದೆ. ಮೊದಲ ಭಾಗದ ರೀತಿಯೇ ಈ ಸೀಕ್ವೆಲ್ ಕೂಡ ಧೂಳೆಬ್ಬಿಸುತ್ತಿದೆ. ವಿಶ್ವಾದ್ಯಂತ ಬಾಕ್ಸ್ ಆಫೀಸ್​​ನಲ್ಲಿ ಈ ಸಿನಿಮಾ ಈಗಾಗಲೇ ಸಾವಿರ ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಪಾಕಿಸ್ತಾನದಲ್ಲಿ ‘ಧುರಂಧರ್ 2’ (Dhurandhar 2) ಸಿನಿಮಾ ಬಿಡುಗಡೆ ಆಗಿಲ್ಲ. ಹಾಗಿದ್ದರೂ ಕೂಡ ಅಲ್ಲಿನ ಜನರು ಈ ಸಿನಿಮಾ ಬಗ್ಗೆ ಮಾತನಾಡುತ್ತಿದ್ದಾರೆ. ಯಾಕೆಂದರೆ, ಈ ಚಿತ್ರದ ಕಥೆ ನಡೆಯುವುದೇ ಪಾಕಿಸ್ತಾನದಲ್ಲಿ. ಈಗ ಪಾಕ್ (Pakistan) ಮಂದಿ ಒಂದು ಬೇಡಿಕೆ ಇಟ್ಟಿದ್ದಾರೆ. ಸಿನಿಮಾದ ಕಲೆಕ್ಷನ್​ನಲ್ಲಿ ಪಾಲು ಕೇಳುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ವೈರಲ್ ಆಗಿದೆ. ಪಾಕಿಸ್ತಾನದ ಲಿಯಾರಿ ನಗರದ ಕೆಲವು ಯುವಕರು ಮಾಧ್ಯಮವೊಂದಕ್ಕೆ ಈ ರೀತಿ ಹೇಳಿಕೆ ನೀಡಿದ್ದಾರೆ. ‘ಲಿಯಾರಿಗೆ 2 ಅಥವಾ 3 ಕೋಟಿ ರೂಪಾಯಿ ಸಿಗಬೇಕು. ಇಲ್ಲಿನ ರಸ್ತೆ ಸರಿ ಮಾಡಲು ಹಣ ಬೇಕು’ ಎಂದು ಯುವಕನೊಬ್ಬ ಹೇಳಿದ್ದಾನೆ. ಆದರೆ ಇನ್ನೊಬ್ಬ ಯುವಕ 500 ಕೋಟಿ ರೂಪಾಯಿ ಬೇಕು ಎಂದಿದ್ದಾನೆ.

‘ಧುರಂಧರ್ 2 ಸಿನಿಮಾಗೆ ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದರೆ ಲಿಯಾರಿ ಜನರಿಗೆ 500 ಕೋಟಿ ರೂಪಾಯಿ ನೀಡಿ. ಅರ್ಧ ಕಲೆಕ್ಷನ್ ಆದಿತ್ಯ ಧರ್ ಇಟ್ಟುಕೊಳ್ಳಲಿ. ಅವರು ನಮಗೆ ಕೊಡುವ ಹಣದಲ್ಲಿ ನಮ್ಮ ರಸ್ತೆ ನಿರ್ಮಾಣ ಆಗಲಿ’ ಎಂದು ಲಿಯಾರಿ ಯುವಕ ಹೇಳಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ನೋಡಿದ ನೆಟ್ಟಿಗರು ಬಿದ್ದು ಬಿದ್ದು ನಗುತ್ತಿದ್ದಾರೆ.

ರಣವೀರ್ ಸಿಂಗ್, ಸಾರಾ ಅರ್ಜುನ್, ಸಂಜಯ್ ದತ್, ಅರ್ಜುನ್ ರಾಮ್​ಪಾಲ್, ರಾಕೇಶ್ ಬೇಡಿ, ಆರ್. ಮಾಧವನ್ ಮುಂತಾದವರು ‘ಧುರಂಧರ್ 2’ ಸಿನಿಮಾದಲ್ಲಿ ನಟಿಸಿದ್ದಾರೆ. ಲಿಯಾರಿ ಪಟ್ಟಣದಲ್ಲಿ ಇದ್ದ ಮಾಫಿಯಾ ಮತ್ತು ಭಯೋತ್ಪಾದಕ ಚಟುವಟಿಕೆಗಳ ಬಗ್ಗೆ ಈ ಸಿನಿಮಾದಲ್ಲಿ ತೋರಿಸಲಾಗಿದೆ. ಹಾಗಾಗಿ ಪಾಕಿಸ್ತಾನದ ಮಂದಿ ಈ ಸಿನಿಮಾ ಬಗ್ಗೆ ಮಾತನಾಡುತ್ತಿದ್ದಾರೆ.

ಇದನ್ನೂ ಓದಿ: ‘ಧುರಂಧರ್ 2’ ನೋಡದಿದ್ದರೂ ಚಿತ್ರತಂಡದ ಸಾಧನೆಗೆ ಭೇಷ್ ಎಂದ ಆಮಿರ್ ಖಾನ್

ಪಾಕಿಸ್ತಾನ ಹಾಗೂ ಮಧ್ಯಪ್ರಾಚ್ಯ ದೇಶಗಳಲ್ಲಿ ‘ಧುರಂಧರ್ 2’ ಸಿನಿಮಾ ಬಿಡುಗಡೆ ಆಗಿಲ್ಲ. ಇನ್ನುಳಿದ ಕಡೆಗಳಲ್ಲಿ ಈ ಸಿನಿಮಾ ತೆರೆಕಂಡು ಭರ್ಜರಿ ಕಮಾಯಿ ಮಾಡುತ್ತಿದೆ. ಭಾರತದ ಬಾಕ್ಸ್ ಆಫೀಸ್​ನಲ್ಲಿ ಈ ಸಿನಿಮಾ ಒಟ್ಟು 1500 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ. ಎರಡನೇ ವೀಕೆಂಡ್​ನಲ್ಲಿ ಈ ಸಿನಿಮಾದ ಗಳಿಕೆ ಸಖತ್ ಹೆಚ್ಚಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us