AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಕ್ಸ್ ಆಫೀಸ್‌ನಲ್ಲಿ ‘ಧುರಂಧರ್ 2’ ಸುನಾಮಿ: 1500 ಕೋಟಿ ಕ್ಲಬ್ ಸೇರುತ್ತಾ ರಣವೀರ್ ಸಿಂಗ್ ಸಿನಿಮಾ?

‘ಧುರಂಧರ್ 2’ ಸಿನಿಮಾದ ಕ್ರೇಜ್ ಎಷ್ಟರಮಟ್ಟಿಗೆ ಇದೆ ಎಂದರೆ ಹಳೇ ದಾಖಲೆಗಳಲ್ಲ ಪುಡಿ ಆಗುತ್ತಿವೆ. ಭಾರತದ ಬಾಕ್ಸ್ ಆಫೀಸ್​ನಲ್ಲೇ ಈ ಸಿನಿಮಾ 1500 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ. ರಣವೀರ್ ಸಿಂಗ್ ವೃತ್ತಿಜೀವನದ ಅತಿ ದೊಡ್ಡ ಬ್ಲಾಕ್ ಬಸ್ಟರ್ ಚಿತ್ರವಾಗಿ ‘ಧುರಂಧರ್ 2’ ಹೊರಹೊಮ್ಮಿದೆ.

ಬಾಕ್ಸ್ ಆಫೀಸ್‌ನಲ್ಲಿ ‘ಧುರಂಧರ್ 2’ ಸುನಾಮಿ: 1500 ಕೋಟಿ ಕ್ಲಬ್ ಸೇರುತ್ತಾ ರಣವೀರ್ ಸಿಂಗ್ ಸಿನಿಮಾ?
ಧುರಂಧರ್ 2
ಮದನ್​ ಕುಮಾರ್​
|

Updated on: Mar 26, 2026 | 7:09 PM

Share

ಜಿಯೋ ಸ್ಟುಡಿಯೋಸ್ ಮತ್ತು ಬಿ62 ಸ್ಟುಡಿಯೋಸ್ ಸಂಸ್ಥೆಗಳು ಜಂಟಿಯಾಗಿ ನಿರ್ಮಾಣ ಮಾಡಿರುವ ‘ಧುರಂಧರ್: ದಿ ರಿವೆಂಜ್’ (Dhurandhar: The Revenge) ಚಿತ್ರದ ನಾಗಾಲೋಟಕ್ಕೆ ತಡೆ ಇಲ್ಲದಂತಾಗಿದೆ. ವಾರಾಂತ್ಯದ ನಂತರವೂ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ. ವಾರದ ದಿನಗಳಲ್ಲೂ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ಈ ಚಿತ್ರ, ಮಾರ್ಚ್ 23 (ಸೋಮವಾರ) ಮತ್ತು ಮಾರ್ಚ್ 24 (ಮಂಗಳವಾರ) ಕೂಡ ತಲಾ 50 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಎಲ್ಲರನ್ನೂ ಬೆರಗುಗೊಳಿಸಿದೆ.

2025ರಲ್ಲಿ ಬಿಡುಗಡೆಯಾಗಿದ್ದ ‘ಧುರಂಧರ್’ ಮೊದಲ ಭಾಗವು ಭಾರತದಲ್ಲಿ ಬರೋಬ್ಬರಿ 1000 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿ ದಾಖಲೆ ನಿರ್ಮಿಸಿತ್ತು. ಇದೀಗ ಅದರ ಸೀಕ್ವೆಲ್ ‘ಧುರಂಧರ್: ದಿ ರಿವೆಂಜ್’ ಚಿತ್ರವು ಹಳೇ ದಾಖಲೆಯನ್ನು ಅಳಿಸಿ ಹಾಕುವುದು ಮಾತ್ರವಲ್ಲದೆ, ಹೊಸ ಮೈಲಿಗಲ್ಲು ಸ್ಥಾಪಿಸುವತ್ತ ಮುನ್ನುಗ್ಗುತ್ತಿದೆ. ಭಾರತದ ಬಾಕ್ಸ್ ಆಫೀಸ್​ನಲ್ಲಿ ಈ ಸಿನಿಮಾ ಹೊಸ ಇತಿಹಾಸ ಬರೆಯುವ ಲಕ್ಷಣ ಕಾಣಿಸಿದೆ.

ರಣವೀರ್ ಸಿಂಗ್ ಅಭಿನಯದ ಈ ಚಿತ್ರವು ಆರಂಭದಲ್ಲಿ 1000 ಕೋಟಿ ರೂಪಾಯಿಗಳ ಗಡಿಯನ್ನು ದಾಟಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಪ್ರಸ್ತುತ ಚಿತ್ರಮಂದಿರಗಳಲ್ಲಿ ಕಂಡುಬರುತ್ತಿರುವ ಕ್ರೇಜ್ ನೋಡಿದರೆ ಈ ಚಿತ್ರವು ಕೇವಲ ದೇಶೀಯ ಮಾರುಕಟ್ಟೆಯಲ್ಲೇ 1500 ಕೋಟಿ ರೂಪಾಯಿಗಳ ಲೈಫ್ ಟೈಮ್ ಗಳಿಕೆ ಮಾಡುವ ಸಾಧ್ಯತೆ ದಟ್ಟವಾಗಿದೆ.

ರಣವೀರ್ ಸಿಂಗ್ ಅವರ ಅಭಿನಯ ಮತ್ತು ಅದ್ದೂರಿ ಮೇಕಿಂಗ್ ಈ ಸಿನಿಮಾದ ಯಶಸ್ಸಿಗೆ ಪ್ರಮುಖ ಕಾರಣಗಳಾಗಿವೆ. ದಿನದಿಂದ ದಿನಕ್ಕೆ ಚಿತ್ರದ ಜನಪ್ರಿಯತೆ ಹೆಚ್ಚುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ‘ಧುರಂಧರ್ 2’ ಅಬ್ಬರ ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಆದಿತ್ಯ ಧರ್ ಅವರ ನಿರ್ದೇಶನಕ್ಕೆ ಅನೇಕ ಸೆಲೆಬ್ರಿಟಿಗಳು ಭೇಷ್ ಎನ್ನುತ್ತಿದ್ದಾರೆ. ಎಲ್ಲ ಕಡೆಗಳಲ್ಲಿ ಈ ಸಿನಿಮಾ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ.

ಇದನ್ನೂ ಓದಿ: ‘ಧುರಂಧರ್’ ಯಶಸ್ಸಿನ ಬೆನ್ನಲ್ಲೇ ಸಂಜಯ್ ದತ್ ಹೊಸ ಸಿನಿಮಾ ‘ಆಖ್ರಿ ಸವಾಲ್’

‘ಧುರಂಧರ್ 2’ ಸಿನಿಮಾ ತೆರೆಕಂಡು ಒಂದು ವಾರ ಕಳೆದಿದೆ. ಅಷ್ಟರಲ್ಲೇ ಭಾರತದ ಬಾಕ್ಸ್ ಆಫೀಸ್​ನಲ್ಲಿ ಈ ಸಿನಿಮಾಗೆ 600 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಆಗಿದೆ. ವಿಶ್ವಾದ್ಯಂತ 1000 ಕೋಟಿ ರೂಪಾಯಿ ಮೀರಿದೆ. ಹಿಂದಿ ಮಾತ್ರವಲ್ಲದೇ ದಕ್ಷಿಣ ಭಾರತದ ಭಾಷೆಗಳಿಗೂ ಈ ಸಿನಿಮಾ ಡಬ್ ಆಗಿ ತೆರೆಕಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ನೀರಿಗಾಗಿ ಹಾಹಾಕಾರ: ಬೆಂಗಳೂರಿನ ವಿವಿಧೆಡೆ ಕುಡಿಯುವ ನೀರಿದ ದರ ಏರಿಕೆ
ನೀರಿಗಾಗಿ ಹಾಹಾಕಾರ: ಬೆಂಗಳೂರಿನ ವಿವಿಧೆಡೆ ಕುಡಿಯುವ ನೀರಿದ ದರ ಏರಿಕೆ
ಸಮುದ್ರದಾಳದಲ್ಲಿ ಪತ್ನಿಗೆ ಪ್ರಪೋಸ್ ಮಾಡಿದ ಧನರಾಜ್; ವಿಡಿಯೋ ವೈರಲ್
ಸಮುದ್ರದಾಳದಲ್ಲಿ ಪತ್ನಿಗೆ ಪ್ರಪೋಸ್ ಮಾಡಿದ ಧನರಾಜ್; ವಿಡಿಯೋ ವೈರಲ್
ಕೆಲಸ ಕಳೆದುಕೊಂಡ ಸ್ನೇಹಿತನಿಗೆ ತನ್ನ 37 ಲಕ್ಷ ರೂ. ಬೆಲೆಯ ಕಾರನ್ನೇ ಕೊಟ್ಟ
ಕೆಲಸ ಕಳೆದುಕೊಂಡ ಸ್ನೇಹಿತನಿಗೆ ತನ್ನ 37 ಲಕ್ಷ ರೂ. ಬೆಲೆಯ ಕಾರನ್ನೇ ಕೊಟ್ಟ
ದೇವರಂತಿರಬೇಕಾದ ವೈದ್ಯನಿಂದಲೇ ವೃದ್ಧ ರೋಗಿ ಮೇಲೆ ಮಾರಣಾಂತಿಕ ಹಲ್ಲೆ
ದೇವರಂತಿರಬೇಕಾದ ವೈದ್ಯನಿಂದಲೇ ವೃದ್ಧ ರೋಗಿ ಮೇಲೆ ಮಾರಣಾಂತಿಕ ಹಲ್ಲೆ
ಕೋಪವೇ ಮನುಷ್ಯನ ದಾರಿದ್ರ್ಯಕ್ಕೆ ಕಾರಣವಾ?
ಕೋಪವೇ ಮನುಷ್ಯನ ದಾರಿದ್ರ್ಯಕ್ಕೆ ಕಾರಣವಾ?
ಇಂದು ಈ ರಾಶಿಯವರು ಕಡಿಮೆ ಚರ್ಚೆ ಮಾಡಿದರೆ ಒಳಿತು
ಇಂದು ಈ ರಾಶಿಯವರು ಕಡಿಮೆ ಚರ್ಚೆ ಮಾಡಿದರೆ ಒಳಿತು
ಆಲ್ಕೋಹಾಲ್ ಸೇವಿಸುತ್ತಾ ಪ್ರಶ್ನೆ ಪತ್ರಿಕೆ ಪರಿಶೀಲಿಸುತ್ತಿರುವ ಶಿಕ್ಷಕ!
ಆಲ್ಕೋಹಾಲ್ ಸೇವಿಸುತ್ತಾ ಪ್ರಶ್ನೆ ಪತ್ರಿಕೆ ಪರಿಶೀಲಿಸುತ್ತಿರುವ ಶಿಕ್ಷಕ!
ಧ್ರುವ ಸರ್ಜಾ, ದರ್ಶನ್ ಮುನಿಸಿಗೆ ಕಾರಣ ಏನು? ಮಾಜಿ ಮ್ಯಾನೇಜರ್​ಗೆ ಪ್ರಶ್ನೆ
ಧ್ರುವ ಸರ್ಜಾ, ದರ್ಶನ್ ಮುನಿಸಿಗೆ ಕಾರಣ ಏನು? ಮಾಜಿ ಮ್ಯಾನೇಜರ್​ಗೆ ಪ್ರಶ್ನೆ
ಉಪಚುನಾವಣಾ ಫಲಿತಾಂಶದ ಬಗ್ಗೆ ಸಚಿವ ಜಮೀರ್​ ಎದುರು ಸಿಎಂ ಹೇಳಿದ್ದೇನು?
ಉಪಚುನಾವಣಾ ಫಲಿತಾಂಶದ ಬಗ್ಗೆ ಸಚಿವ ಜಮೀರ್​ ಎದುರು ಸಿಎಂ ಹೇಳಿದ್ದೇನು?
ಶ್ರೇಯಸ್ ಹಿಡಿದ ಕ್ಯಾಚ್ ನೋಡಿ ದಂಗಾದ ಮುಂಬೈ ಆಟಗಾರರು; ವಿಡಿಯೋ
ಶ್ರೇಯಸ್ ಹಿಡಿದ ಕ್ಯಾಚ್ ನೋಡಿ ದಂಗಾದ ಮುಂಬೈ ಆಟಗಾರರು; ವಿಡಿಯೋ