
ಬಾಲಿವುಡ್‌ನ ‘ಧಕ್ ಧಕ್ ಗರ್ಲ್’ ಎಂದೇ ಫೇಮಸ್ ಆದವರು ಮಾಧುರಿ ದೀಕ್ಷಿತ್. ಅವರ ಪರಿಚಯದ ಅಗತ್ಯವಿಲ್ಲ. ಮಾಧುರಿ ನಟಿ ಮಾತ್ರವಲ್ಲ, ತಮ್ಮ ನೃತ್ಯ ಕೌಶಲ್ಯದಿಂದ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಅವರ ಹೆಸರು ಕೇಳಿದಾಕ್ಷಣ ನೆನಪಿಗೆ ಬರೋದು ಅವರು ಹಾಕುತ್ತಿದ್ದ ಸ್ಟೆಪ್ಗಳು. ಅವರು ಮಾಡಿದ ಗ್ಲಾಮರಸ್ ಪಾತ್ರಗಳನ್ನು, ಅವರು ಹೆಜ್ಜೆ ಹಾಕಿದ ಹಾಡುಗಳನ್ನು ಫ್ಯಾನ್ಸ್ ಈಗಲೂ ನೆನಪಿಸಿಕೊಳ್ಳುತ್ತಾರೆ. ಈಗ ಅವರು ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ವೆಬ್ ಸರಣಿ ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ.
ಜಿಯೋ ಹಾಟ್ ಸ್ಟಾರ್ ಅಲ್ಲಿ ಡಿಸೆಂಬರ್ 19ರಂದು ಮಾಧುರಿ ದೀಕ್ಷಿತ್ ಅವರ ‘Mrs ದೇಶಪಾಂಡೆ’ ವೆಬ್ ಸರಣಿ ಪ್ರಸಾರ ಕಾಣಲಿದೆ. ಇದರ ಫಸ್ಟ್ ಲುಕ್ ಜೊತೆಗೆ ಟ್ರೇಲರ್ ಕೂಡ ತೆರೆಗೆ ಬಂದಿದೆ. ಒಂದು ನಿಮಿಷದ 47 ಸೆಕೆಂಡ್ ಇರುವ ಟ್ರೇಲರ್ನಲ್ಲಿ ಮಾಧುರಿ ದೀಕ್ಷಿತ್ ಅವರು ಸೀರಿಯಲ್ ಕಿಲ್ಲರ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಮೊದಲು ‘ಫೇಮ್ ಗೇಮ್’ ಹೆಸರಿನ ವೆಬ್ ಸರಣಿಯಲ್ಲಿ ಅವರು ನಟಿಸಿದ್ದರು. ಸಿನಿಮಾಗಳಿಂದ ಅವರು ವೆಬ್ ಲೋಕಕ್ಕೆ ಹೊರಳಿದ್ದಾರೆ.
ಟ್ರೇಲರ್ ಆರಂಭದಲ್ಲಿ ಫ್ಲ್ಯಾಶ್ಬ್ಯಾಕ್ ತೆರೆದುಕೊಳ್ಳುತ್ತದೆ. ಫ್ಲ್ಯಾಶ್ಬ್ಯಾಕ್ನಲ್ಲಿ ಮಾಧುರಿ ಕೊಲೆಗಳ್ನು ಮಾಡುತ್ತಿರುತ್ತಾರೆ. ಅವರ ಕೊಲೆ ಸ್ಟೈಲ್ ಒಂದೇ ರೀತಿ ಇರುತ್ತದೆ. ಹಗ್ಗದಿಂದಲೇ ಈ ಸರಣಿ ಕೊಲೆಗಳನ್ನು ಅವರು ಮಾಡುತ್ತಾ ಇರುತ್ತಾರೆ. ನಂತರ ನಗರಕ್ಕೆ ಬರೋ ಹೊಸ ಕೊಲೆಗಾರ ಇವರ ಸ್ಟೈಲ್ನ ಕಾಪಿ ಮಾಡೋಕೆ ಆರಂಭಿಸುತ್ತಾನೆ. ಈ ಸೀರಿಯಲ್ ಕಿಲ್ಲರ್ಗ ಮಾಧುರಿ ದೀಕ್ಷಿತ್ ಸಹಾಯ ಮಾಡುತ್ತಿದ್ದಾರಾ ಎಂಬ ಪ್ರಶ್ನೆ ಜೊತೆ ಟ್ರೇಲರ್ ಕೊನೆ ಆಗುತ್ತದೆ.
ಇದನ್ನೂ ಓದಿ: ‘ಮಾಧುರಿ ದೀಕ್ಷಿತ್ ಅಶ್ಲೀಲ ಡಾನ್ಸ್ ಮಾಡಿ ಪ್ರಶಸ್ತಿ ಪಡೆದರು’: ವಿವಾದದಲ್ಲಿ ಸಿಲುಕಿದ ಜಾನ್ವಿ ಕಪೂರ್
ಈ ಸರಣಿಯನ್ನು ನಾಗೇಶ್ ಕುಕುನೂರ್ ನಿರ್ದೇಶನ ಮಾಡಿದ್ದಾರೆ. ಅವರು ‘ಇಕ್ಬಾಲ್’, ‘ಡೋರ್’, ‘ದಿ ಹಂಟ್: ರಾಜೀವ್ ಗಾಧಿ ಅಸಾಸಿನೇಷನ್ ಕೇಸ್’, ‘ಸಿಟಿ ಆಫ್ ಡ್ರೀಮ್ ರೀತಿಯ ಸಿನಿಮಾ ಮಾಡಿದ್ದಾರೆ. ಈ ಸರಣಿ ‘ಲಾ ಮಾಂತೆ’ ಹೆಸರಿನ ಫ್ರೆಂಚ್ ಸರಣಿಯಿದ ಪ್ರೇರೇಪಿತವಾಗಿದೆ ಎನ್ನಲಾಗುತ್ತಿದೆ.ಡಿಸೆಂಬರ್ ವೇಳೆಗೆ ಸಾಲು ಸಾಲು ರಜೆಗಳು ಬರುತ್ತವೆ. ಆಗ ಮನೆಯಲ್ಲೇ ಕುಳಿತು ನೋಡಲು ಈ ಸರಣಿ ಒಳ್ಳೆಯ ಆಯ್ಕೆ ಆಗಬಹುದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:13 pm, Thu, 4 December 25