AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಧುರಂಧರ್’ ಫಲಿತಾಂಶದ ಮೇಲೆ ನಿರ್ಧಾರವಾಗಲಿದೆ ‘ಡಾನ್ 3’ ಸಿನಿಮಾ ಭವಿಷ್ಯ

ರಣವೀರ್ ಸಿಂಗ್ ಅವರ ಇತ್ತೀಚಿನ ಚಿತ್ರಗಳ ಸೋಲು 'ಡಾನ್ 3' ನಿರ್ಮಾಣವನ್ನು ವಿಳಂಬಗೊಳಿಸಿದೆ. ಶಾರುಖ್ ಖಾನ್ ಬದಲಿಗೆ ರಣವೀರ್ ಅವರನ್ನು ಆಯ್ಕೆ ಮಾಡಿದ್ದರೂ, ನಿರ್ದೇಶಕ ಫರ್ಹಾನ್ ಅಖ್ತರ್ 'ಧುರಂಧರ್' ಸಿನಿಮಾದ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ರಣವೀರ್ ಅವರ ಜನಪ್ರಿಯತೆ ಎಷ್ಟಿದೆ ಎಂಬುದನ್ನು 'ಧುರಂಧರ್' ಫಲಿತಾಂಶ ನಿರ್ಧರಿಸಲಿದೆ.

‘ಧುರಂಧರ್’ ಫಲಿತಾಂಶದ ಮೇಲೆ ನಿರ್ಧಾರವಾಗಲಿದೆ ‘ಡಾನ್ 3’ ಸಿನಿಮಾ ಭವಿಷ್ಯ
ರಣವೀರ್
ರಾಜೇಶ್ ದುಗ್ಗುಮನೆ
|

Updated on: Dec 03, 2025 | 3:09 PM

Share

‘ಡಾನ್’ ಹಾಗೂ ‘ಡಾನ್ 2’ ಚಿತ್ರಗಳಲ್ಲಿ ಶಾರುಖ್ ಖಾನ್ ನಟಿಸಿದ್ದರು. ‘ಡಾನ್ 3’ ಚಿತ್ರಕ್ಕೆ ರಣವೀರ್ ಸಿಂಗ್ (Ranveer Singh) ಅವರನ್ನು ನಿರ್ದೇಶಕ ಫರ್ಹಾನ್ ಅಖ್ತರ್ ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ, ಇನ್ನೂ ಸಿನಿಮಾದ ಶೂಟ್ ಆರಂಭ ಆಗಿಲ್ಲ. ಈಗ ರಣವೀರ್ ಅವರ ‘ಧುರಂಧರ್’ ಸಿನಿಮಾದ ಫಲಿತಾಂಶ ಆಧರಿಸಿ ಈ ಸಿನಿಮಾನ ಮಾಡಬೇಕೋ ಅಥವಾ ಬೇಡವೋ ಎಂದು ನಿರ್ಧರಿಸಲಾಗುತ್ತದೆ ಎಂದು ಹೇಳಲಾಗುತ್ತಾ ಇದೆ.

ರಣವೀರ್ ಸಿಂಗ್ ಅವರು ಕೆಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಆದರೆ, ಇತ್ತೀಚೆಗೆ ಅವರು ಫ್ಲಾಪ್ ಸಿನಿಮಾಗಳನ್ನು ನೀಡಿದ್ದೇ ಹೆಚ್ಚು. ಒಂದಕ್ಕಿಂತ ಒಂದು ಚಿತ್ರಗಳು ಹೀನಾಯವಾಗಿ ಸೋತಿವೆ. ಈ ಕಾರಣದಿಂದ ನಿರ್ಮಾಪಕರು ಹೆಚ್ಚು ಹಣ ಹೂಡಲು ಮುಂದೆ ಬರುತ್ತಿಲ್ಲ. ‘ಡಾನ್ 3’ ಘೋಷಣೆ ಆಗಿ ಸಾಕಷ್ಟು ಸಮಯ ಆದರೂ ಚಿತ್ರದ ಶೂಟಿಂಗ್ ಇನ್ನೂ ಆರಂಭ ಆಗಿಲ್ಲ. ರಣವೀರ್ ಸಿಂಗ್ ಮೇಲಿನ ನಂಬಿಕೆ ಕೊರೆತೆಯೇ ಇದಕ್ಕೆ ಕಾರಣ ಎಂಬ ಗುಲ್ಲು ಬಾಲಿವುಡ್ ಅಂಗಳದಲ್ಲಿ ಹರಿದಾಡಿದೆ.

ರಣವೀರ್ ಸಿಂಗ್ ನಟನೆಯ ‘ಧರುಂಧರ್’ ಸಿನಿಮಾ ಡಿಸೆಂಬರ್ 5ರಂದು ತೆರೆಗೆ ಬರುತ್ತಿದೆ. ಈ ಸಿನಿಮಾ ಬಗ್ಗೆ ಹೆಚ್ಚಿನ ನಿರೀಕ್ಷೆಗಳೂ ಉಳಿದುಕೊಂಡಿಲ್ಲ. ಸಿನಿಮಾದ ನಾಲ್ಕು ನಿಮಿಷದ ಟ್ರೇಲರ್ ಗಮನ ಸೆಳೆಯುವಲ್ಲಿ ವಿಫಲವಾಗಿದೆ. ಚಿತ್ರಕ್ಕೆ ಎ ಪ್ರಮಾಣಪತ್ರ ಸಿಕ್ಕಿದ್ದು, ಸಿನಿಮಾದ ಅವಧಿ 3 ಗಂಟೆ 36 ನಿಮಿಷ ಇದೆ. ಇದರ ಜೊತೆಗೆ ದೈವದ ಅವಮಾನ ಮಾಡಿ ರಣವೀರ್ ಟೀಕೆಗೆ ಗುರಿಯಾಗಿದ್ದಾರೆ. ಇದೆಲ್ಲ ವಿಷಯಗಳು ಚಿತ್ರಕ್ಕೆ ಹಿನ್ನಡೆ ಆಗಿವೆ.

ಇದನ್ನೂ ಓದಿ: ದೈವಕ್ಕೆ ಅವಮಾನ ಮಾಡಿದ ಆರೋಪ; ಬೇಷರತ್ ಕ್ಷಮೆ ಕೇಳಿದ ರಣವೀರ್ ಸಿಂಗ್

ಫರ್ಹಾನ್ ಅಖ್ತರ್ ಅವರು ‘ಡಾನ್ 3’ ಕೆಲಸ ಮಾಡುವುದಕ್ಕೂ ಮೊದಲು ‘ಧುರಂಧರ್’ ಚಿತ್ರದ ಫಲಿತಾಂಶಕ್ಕೆ ಕಾದಿದ್ದಾರೆ. ರಣವೀರ್ ಸಿಂಗ್​ಗೆ ಮೊದಲಿನಷ್ಟು ಅಭಿಮಾನಿಗಳನ್ನು ಕರೆತರುವ ತಾಕತ್ತು ಉಳಿದುಕೊಂಡಿದೆಯೋ ಅಥವಾ ಇಲ್ಲವೋ ಎಂಬುದನ್ನು ಪರೀಕ್ಷಿಸಲಿದ್ದಾರೆ. ಆ ಬಳಿಕವೇ ಅವರು ‘ಡಾನ್ 3’ ಆರಂಭಿಸಬೇಕಿದೆ. ಈ ಚಿತ್ರ ದೊಡ್ಡ ಬಜೆಟ್ ಕೇಳುತ್ತದೆ. ಹೀಗಾಗಿ, ಫರ್ಹಾನ್ ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ರೆಡಿ ಇಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ