ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು (ಸೆಪ್ಟೆಂಬರ್ 17) ಜನ್ಮದಿನ. ಅವರಿಗೆ ಬಾಲಿವುಡ್ನವರೂ ವಿಶ್ ಮಾಡುತ್ತಿದ್ದಾರೆ. ಈ ದಿನದಂದು ಬಾಲಿವುಡ್ ನಿರ್ಮಾಪಕ ಮಹಾವೀರ್ ಜೈನ್ ಅವರು ಒಂದು ದಿಟ್ಟ ನಿರ್ಧಾರ ಮಾಡಿದ್ದಾರೆ. ಸರಳ ಜೀವನ ನಡೆಸಲು ನಿರ್ಧರಿಸಿರೋ ಅವರು ಶೇ. 90 ಉಳಿತಾಯವನ್ನು ದಾನ ಮಾಡೋದಾಗಿ ಹೇಳಿದ್ದಾರೆ. ಕಷ್ಟದಲ್ಲಿ ಇರುವವರಿಗೆ ತಮ್ಮ ಹಣ ನೀಡಲು ನಿರ್ಧರಿಸಿದ್ದಾರೆ.
ಬಾಲಿವುಡ್ ಹಂಗಾಮಾಗೆ ನೀಡಿದ ಸಂದರ್ಶನದಲ್ಲಿ ಮಹಾವೀರ್ ಅವರು ಮಾತನಾಡಿದ್ದಾರೆ. ‘ಸ್ವಾಮಿ ವಿವೇಕಾನಂದರ ಒಂದು ತತ್ವಶಾಸ್ತ್ರವನ್ನು ನಮ್ಮ ಪ್ರಧಾನಿ ಅವರು ಅಳವಡಿಸಿಕೊಂಡಿದ್ದಾರೆ. ಯಾರು ಬೇರೆಯವರಿಗಾಗಿ ಬದುಕುತ್ತಾರೋ ಅವರು ಮಾತ್ರ ಬದುಕಲು ಸಾಧ್ಯ ಎಂಬ ಮಾತನ್ನು ಶಾಲಾ ವಿದ್ಯಾರ್ಥಿ ಇದ್ದಾಗಲೇ ಮೋದಿ ಅವರು ಪಾಲಿಸುತ್ತಾ ಬಂದಿದ್ದಾರೆ’ ಎಂದಿದ್ದಾರೆ ಅವರು.
ಮೋದಿ ನಮ್ಮ ದೇಶದ ಪ್ರಧಾನಿ ಆಗಿರುವುದಕ್ಕೆ ಮಹಾವೀರ್ ಅವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ‘ನಮ್ಮ ದೇಶಕ್ಕೆ ಮೋದಿ ಅವರಂಥ ನಾಯಕರು ಸಿಕ್ಕಿರುವುದಕ್ಕೆ ನನಗೆ ಪ್ರತಿ ದಿನ ಪ್ರತಿ ಕ್ಷಣ ಗೆಮ್ಮೆ ಆಗುತ್ತದೆ. ಇಡೀ ವಿಶ್ವ ಭಾರತವನ್ನು ಹೆಚ್ಚು ಗೌರವದಿಂದ ನೋಡುತ್ತಿದೆ. ಭಾರತೀಯನಾಗಿ ನಮಗೆ ಹೆಮ್ಮೆ ಇದೆ’ ಎಂದಿದ್ದಾರೆ ಮಹಾವೀರ್.
‘ನಮ್ಮ ಚಿತ್ರರಂಗದಲ್ಲಿ ಆಮಿರ್ ಖಾನ್, ರಾಜ್‌ಕುಮಾರ್ ಹಿರಾನಿ ರೀತಿಯವರು ಉತ್ತಮ ಕೆಲಸ ಮಾಡುವ ಮೂಲಕ ಉತ್ತಮ ಉದಾಹರಣೆ ಆಗಿದ್ದಾರೆ. ಅವರು ಈಗಲೂ ಅತ್ಯಂತ ಸರಳ, ಪ್ರಾಮಾಣಿಕ ಮತ್ತು ಅರ್ಥಪೂರ್ಣ ಜೀವನವನ್ನು ನಡೆಸುತ್ತಿದ್ದಾರೆ. ನಾನು ಯಾವಾಗಲೂ ಅವರನ್ನು ಮಾದರಿ ಆಗಿ ತೆಗೆದುಕೊಳ್ಳುತ್ತೇನೆ’ ಎಂದಿದ್ದಾರೆ ಅವರು.
ಇದನ್ನೂ ಓದಿ: ಬಿಜೆಪಿ ಸದಸ್ಯತಾ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
ಈಗ ಮಹಾವೀರ್ ಅವರು ತಮ್ಮ ಸೇವಿಂಗ್ಸ್ನಲ್ಲಿ ಶೇ. 90ರಷ್ಟನ್ನು ದಾನ ಮಾಡಲು ಮುಂದೆ ಬಂದಿದ್ದಾರೆ. 2011ರಲ್ಲಿ ರಿಲೀಸ್ ಆದ ‘ದೇಖ್ ಇಂಡಿಯನ್ ಸರ್ಕಸ್’ ಮೂಲಕ ನಿರ್ಮಾಪಕರಾದರು. ‘ಚಲೋ ಜೀತೀ ಹೇ’, ‘ಮಲಾಲ್’, ‘ಊಂಚಾಯಿ’, ‘ರಾಮ್ ಸೇತು’, ‘ಗುಡ್ ಲಕ್ ಜೆರ್ರಿ’ ರೀತಿಯ ಸಿನಿಮಾಗಳನ್ನು ಅವರು ನಿರ್ಮಾಣ ಮಾಡಿದ್ದಾರೆ. ಈ ಪೈಕಿ ಗೆದ್ದವು ಕಡಿಮೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.