ನಟಿ ಮಲೈಕಾ ಅರೋರಾ (Malaika Arora) ಅವರಿಗೆ ಈಗ 50 ವರ್ಷ. 1973ರಲ್ಲಿ ಜನಿಸಿದ ಅವರು ಈಗಲೂ ಫಿಟ್ನೆಸ್ ಕಾಯ್ದುಕೊಂಡಿದ್ದಾರೆ. ಅವರ ಫಿಟ್ನೆಸ್ ನೋಡಿ ಅನೇಕರು ಮೆಚ್ಚಿಕೊಂಡಿದ್ದೂ ಇದೆ. ಮಲೈಕಾ ಅರೋರಾ ಅವರ ಹೊಸ ಫೋಟೋ ಹಾಗೂ ವಿಡಿಯೋಗಳು ಆಗಾಗ ವೈರಲ್ ಆಗುತ್ತವೆ. ಅವರು ಹಾಕೋ ಉಡುಗೆ ಗಮನ ಸೆಳೆಯುತ್ತದೆ. ಈಗ ಅವರ ಹೊಸ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಹಲ್ಚಲ್ ಸೃಷ್ಟಿ ಮಾಡಿದೆ. ಈ ವಿಡಿಯೋದಲ್ಲಿ ಅವರು ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
ಮಲೈಕಾ ಅರೋರಾ ಅವರು ಫಿಟ್ನೆಸ್ಗೆ ಸಾಕಷ್ಟು ಪ್ರಾಮುಖ್ಯತೆ ಕೊಡುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಮಲೈಕಾ ನಿತ್ಯ ಜಿಮ್ ಮಾಡುತ್ತಾರೆ. ಇದರ ಜೊತೆಗೆ ಒಂದಷ್ಟು ಸಮಯ ಅವರು ಯೋಗಾಸನ ಕೂಡ ಮಾಡುತ್ತಾರೆ. ಇದೆಲ್ಲದರ ಜೊತೆಗೆ ಅವರು ಕಟ್ಟುನಿಟ್ಟಿನ ಆಹಾರ ಕ್ರಮ ಅನುಸರಿಸುತ್ತಾರೆ. ಹೀಗಾಗಿ ಮಲೈಕಾ ಗ್ಲಾಮರ್ ಹಾಳಾಗಿಲ್ಲ.
ಇದನ್ನೂ ಓದಿ: ಅರ್ಬಾಜ್ ಖಾನ್ನಿಂದ ಪಡೆದ ಜೀವನಾಂಶದಿಂದ ದುಬಾರಿ ಬಟ್ಟೆಗಳನ್ನು ಖರೀದಿಸಿದ್ದರಾ ಮಲೈಕಾ?
ಮಲೈಕಾ ಅ
ಭಾನುವಾರ (ಏಪ್ರಿಲ್ 8) ಮಲೈಕಾ ಅವರು ಒಂದು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ವಿಶ್ವ ಆರೋಗ್ಯ ದಿನ ಎನ್ನುವ ಕಾರಣಕ್ಕೆ ಅವರು ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಅವರು ಯೋಗಾಸನ ಮಾಡುತ್ತಿದ್ದಾರೆ. ವಿವಿಧ ಆಸನಗಳನ್ನು ಅವರು ಪ್ರಯತ್ನಿಸಿದ್ದಾರೆ. ಈ ವಿಡಿಯೋ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ.
ವರು ಡ್ಯಾನ್ಸರ್ ಆಗಿ, ನಿರ್ಮಾಪಕಿ ಆಗಿ, ನಟಿಯಾಗಿ ಹಾಗೂ ಕಿರುತೆರೆ ರಿಯಾಲಿಟಿ ಶೋಗಳ ಹೋಸ್ಟ್ ಆಗಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಅವರು ದೊಡ್ಡ ಪರದೆಮೇಲೆ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ನಿತ್ಯ ಅವರು ಜಿಮ್ ಹಾಗೂ ಯೋಗಾಸನಕ್ಕೆ ತೆರಳೋ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗುತ್ತಾ ಇರುತ್ತವೆ. ಅವರು ನಟ ಅರ್ಜುನ್ ಕಪೂರ್ ಜೊತೆ ಪ್ರೀತಿಯಲ್ಲಿ ಇದ್ದಾರೆ. ಇವರು ಆಗಾಗ ಸುತ್ತಾಟ ನಡೆಸೋ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗುತ್ತವೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ