ಅರ್ಬಾಜ್ ​ಖಾನ್​​ನಿಂದ ಪಡೆದ ಜೀವನಾಂಶದಿಂದ ದುಬಾರಿ ಬಟ್ಟೆಗಳನ್ನು ಖರೀದಿಸಿದ್ದರಾ ಮಲೈಕಾ?

ಇತ್ತೀಚಿನ ಸಂದರ್ಶನವೊಂದರಲ್ಲಿ, ಮಲೈಕಾ ಅರೋರಾ ವಿಚ್ಛೇದನದ ನಂತರ ತಮ್ಮ ಜೀವನ ಹೇಗೆ ಬದಲಾಗಿದೆ ಎಂಬುದರ ಕುರಿತು ಮಾತನಾಡಿದ್ದಾರೆ. ‘ಮಲೈಕಾ ವಿಚ್ಛೇದನದ ನಂತರ ಅರ್ಬಾಜ್ ಖಾನ್ ಅವರಿಂದ ಪಡೆದ ಜೀವನಾಂಶದಿಂದಾಗಿ ದುಬಾರಿ ಬಟ್ಟೆಗಳನ್ನು ಧರಿಸಬಹುದು ಎಂದು ಸುದ್ದಿ ಬರೆಯಲಾಗಿತ್ತು.

ಅರ್ಬಾಜ್ ​ಖಾನ್​​ನಿಂದ ಪಡೆದ ಜೀವನಾಂಶದಿಂದ ದುಬಾರಿ ಬಟ್ಟೆಗಳನ್ನು ಖರೀದಿಸಿದ್ದರಾ ಮಲೈಕಾ?
ಮಲೈಕಾ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Mar 11, 2024 | 8:09 AM

ಬಾಲಿವುಡ್ ನಟಿ, ಮಾಡೆಲ್ ಮಲೈಕಾ ಅರೋರಾ (Malaika Arora) ಮತ್ತು ಸಲ್ಮಾನ್ ಖಾನ್ ಸಹೋದರ ಹಾಗೂ ನಟ ಅರ್ಬಾಜ್ ಖಾನ್ 2017ರಲ್ಲಿ ವಿಚ್ಛೇದನ ಪಡೆಯುವ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದರು. ಮಲೈಕಾ ಅರೋರಾ ಮತ್ತು ಅರ್ಬಾಜ್ 19 ವರ್ಷಗಳ ದಾಂಪತ್ಯ ನಡೆಸಿದ್ದರು. ನಂತರ ವಿಚ್ಛೇದನ ಪಡೆಯಲು ಇವರು ನಿರ್ಧರಿಸಿದರು. ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ ವಿಚ್ಛೇದನದ ಹಿಂದಿನ ನಿಖರವಾದ ಕಾರಣ ಇಂದಿಗೂ ರಿವೀಲ್ ಆಗಿಲ್ಲ. ಅರ್ಬಾಜ್ ಖಾನ್ ಅವರು ಈಗ ಶುರಾ ಖಾನ್ ಜೊತೆ ಮದುವೆ ಆಗಿದ್ದಾರೆ. ಮತ್ತೊಂದೆಡೆ, ಅರ್ಬಾಜ್ ಜೊತೆ ಮಲೈಕಾ ಬೇರೆ ಆದ ಬಳಿಕ ಅರ್ಜುನ್ ಕಪೂರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಇದೀಗ, ಬಹಳ ವರ್ಷಗಳ ನಂತರ ಮೊದಲ ಬಾರಿಗೆ ಮಲೈಕಾ ಅರೋರಾ ವಿಚ್ಛೇದನದ ಬಗ್ಗೆ ಮಾತನಾಡಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ, ಮಲೈಕಾ ಅರೋರಾ ವಿಚ್ಛೇದನದ ನಂತರ ತಮ್ಮ ಜೀವನ ಹೇಗೆ ಬದಲಾಗಿದೆ ಎಂಬುದರ ಕುರಿತು ಮಾತನಾಡಿದ್ದಾರೆ. ‘ಮಲೈಕಾ ವಿಚ್ಛೇದನದ ನಂತರ ಅರ್ಬಾಜ್ ಖಾನ್ ಅವರಿಂದ ಪಡೆದ ಜೀವನಾಂಶದಿಂದಾಗಿ ದುಬಾರಿ ಬಟ್ಟೆಗಳನ್ನು ಧರಿಸಬಹುದು ಎಂದು ಸುದ್ದಿ ಬರೆಯಲಾಗಿತ್ತು. ಇದು ನಿಜಕ್ಕೂ ತುಂಬಾ ಆಘಾತಕಾರಿಯಾಗಿತ್ತು’ ಎಂದಿದ್ದಾರೆ ಮಲೈಕಾ.

‘ಓರ್ವ ವ್ಯಕ್ತಿಯು ಕಷ್ಟಪಟ್ಟು ಕೆಲಸ ಮಾಡುವ ಮೂಲಕ ತನ್ನ ಸ್ಥಾನ ಗಳಿಸುತ್ತಾನೆ. ಆದರೆ ಈ ರೀತಿಯ ಕೆಲವು ವಿಷಯಗಳು ಮತ್ತು ಹೇಳಿಕೆಗಳು ಖಂಡಿತವಾಗಿಯೂ ಮಾನಸಿಕ ಆರೋಗ್ಯವನ್ನು ಹದಗೆಡಿಸುತ್ತವೆ. ತುಂಬಾ ಕೊಳಕು ಆರ್ಟಿಕಲ್​ಗಳನ್ನು ಪ್ರಕಟಿಸಲಾಗಿತ್ತು’ ಎಂದು ಮಲೈಕಾ ಹೇಳಿದ್ದಾರೆ.

‘ಈ ರೀತಿ ಆರ್ಟಿಕಲ್ ಓದಿ ನನಗೆ ಆಶ್ಚರ್ಯವಾಯಿತು. ನಾನು ನನ್ನ ಬೆಳವಣಿಗೆಗಾಗಿ ಡಿವೋರ್ಸ್ ಪಡೆದಿದ್ದೆ’ ಎಂದಿದ್ದಾರೆ ಅವರು. ಮಲೈಕಾ ಅರೋರಾ ಅವರು ವಿಚ್ಛೇದನದ ಬಳಿಕ ಸಾಕಷ್ಟು ಸುದ್ದಿ ಆದರು. ಜೀವನಾಂಶಕ್ಕಾಗಿಯೇ ಅವರು ಡಿವೋರ್ಸ್ ಪಡೆದರು ಎಂದು ಸುದ್ದಿ ಆಗಿತ್ತು. ಈ ವಿಚಾರದಿಂದ ಅವರಿಗೆ ಸಾಕಷ್ಟು ಬೇಸರ ಆಗಿತ್ತು. ಈ ಬಗ್ಗೆ ಅವರು ಈಗ ಮಾತನಾಡಿದ್ದಾರೆ.

ಇದನ್ನೂ ಓದಿ: ‘ನಾನು ಮದುವೆಗೆ ರೆಡಿ’; ರಿಯಾಲಿಟಿ ಶೋನಲ್ಲಿ ಗುಡ್ ನ್ಯೂಸ್ ಕೊಟ್ಟ ಮಲೈಕಾ ಅರೋರಾ

ಮಲೈಕಾ ಅರೋರಾ 25 ನೇ ವಯಸ್ಸಿನಲ್ಲಿ ಅರ್ಬಾಜ್ ಖಾನ್ ಅವರನ್ನು ವಿವಾಹವಾದರು. ಅರ್ಬಾಜ್ ಖಾನ್ ಮತ್ತು ಮಲೈಕಾ ಅರೋರಾ ಅವರಿಗೂ ಒಬ್ಬ ಮಗನಿದ್ದಾನೆ. ಮಗನ ಸಾಕುವ ಜವಾಬ್ದಾರಿಯನ್ನು ಇಬ್ಬರೂ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಅರ್ಬಾಜ್ ಖಾನ್ ಅವರು ಶುರಾ ಖಾನ್ ಮದುವೆ ಆಗಿದ್ದಾರೆ. ಈ ವಿಚಾರವನ್ನು ಅವರು ಸಲ್ಮಾನ್ ಖಾನ್ ಅವರಿಂದ ಮುಚ್ಚಿಟ್ಟಿದ್ದರು. ಮದುವೆ ಆಗುವ ನಿರ್ಧಾರ ತೆಗೆದುಕೊಂಡ ಬಳಿಕ ಅವರು ಲವ್ ವಿಚಾರ ರಿವೀಲ್ ಮಾಡಿದ್ದರು. ಇದು ಸಲ್ಮಾನ್ ಖಾನ್​ಗೆ ಅಚ್ಚರಿ ತರಿಸಿತ್ತು. ಆದರೆ, ಖುಷಿಯಿಂದಲೇ ಇದನ್ನು ಒಪ್ಪಿಕೊಂಡರು. ಮಲೈಕಾ ಅರೋರಾ ಅವರು ವಯಸ್ಸಿನಲ್ಲಿ ತಮಗಿಂತ ಸಣ್ಣವನಾದ ಅರ್ಜುನ್ ಕಪೂರ್​ನ ಮದುವೆ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 8:08 am, Mon, 11 March 24

Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
Video: ಕಜಾಕಿಸ್ತಾನ ವಿಮಾನ ಪತನದ ಮೊದಲು ಹಾಗೂ ನಂತರದ ಭಯಾನಕ ವಿಡಿಯೋ
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ