ಬಾಕ್ಸ್ ಆಫೀಸ್​ನಲ್ಲಿ ಅಂದುಕೊಂಡಂತೆ ಮೋಡಿ ಮಾಡಲೇ ಇಲ್ಲ ‘ಮಿಲಿ’; ಜಾನ್ವಿ ಸಿನಿಮಾ ಗಳಿಸಿದ್ದೆಷ್ಟು?

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 05, 2022 | 6:24 PM

ನಟಿ ಜಾನ್ವಿ ಕಪೂರ್ ಅವರು ತಮ್ಮ ವೃತ್ತಿ ಜೀವನದಲ್ಲಿ ಒಂದು ದೊಡ್ಡ ಗೆಲುವು ಕಾಣುವ ನಿರೀಕ್ಷೆಯಲ್ಲಿದ್ದಾರೆ. ಸ್ಟಾರ್ ಕಿಡ್ ಆಗಿ, ಚಿತ್ರರಂಗದಲ್ಲಿ ಇಷ್ಟು ವರ್ಷ ಶ್ರಮಿಸಿದ ಹೊರತಾಗಿಯೂ ಅವರಿಗೆ ಗೆಲುವು ಸಿಕ್ಕಿಲ್ಲ.

ಬಾಕ್ಸ್ ಆಫೀಸ್​ನಲ್ಲಿ ಅಂದುಕೊಂಡಂತೆ ಮೋಡಿ ಮಾಡಲೇ ಇಲ್ಲ ‘ಮಿಲಿ’; ಜಾನ್ವಿ ಸಿನಿಮಾ ಗಳಿಸಿದ್ದೆಷ್ಟು?
ಜಾನ್ವಿ ಕಪೂರ್
Follow us on

ಶುಕ್ರವಾರ (ನವೆಂಬರ್ 4) ರಿಲೀಸ್​ ಆದ ‘ಮಿಲಿ’ ಚಿತ್ರದ ಮೂಲಕ ಅವರು ಗೆಲ್ಲುವ ನಿರೀಕ್ಷೆಯಲ್ಲಿದ್ದರು. ವಿಮರ್ಶಕರಿಂದ ಚಿತ್ರಕ್ಕೆ ಮೆಚ್ಚುಗೆ ಸಿಕ್ಕಿದೆ. ಆದರೆ, ಬಾಕ್ಸ್​​ ಆಫೀಸ್​ನಲ್ಲಿ ಸಿನಿಮಾ ಹೇಳಿಕೊಳ್ಳುವಂತಹ ಮೋಡಿ ಮಾಡಲೇ ಇಲ್ಲ. ಈ ಚಿತ್ರ ಮೊದಲ ದಿನ 35-45 ಲಕ್ಷ ರೂಪಾಯಿ ಗಳಿಸಿಕೊಂಡಿದೆ. 2019ರಲ್ಲಿ ರಿಲೀಸ್ ಆದ ಮಲಯಾಳಂ ಚಿತ್ರ ‘ಹೆಲೆನ್’​ನ ರಿಮೇಕ್ ‘ಮಿಲಿ’. ಮೂಲ ಚಿತ್ರವನ್ನು ಮಾತುಕಟ್ಟಿ ಕ್ಸೇವಿಯರ್​ ಅವರು ನಿರ್ದೇಶನ ಮಾಡಿದ್ದರು. ಈಗ ಅವರೇ ಈ ಚಿತ್ರವನ್ನು ಹಿಂದಿಗೆ ರಿಮೇಕ್ ಮಾಡಿದ್ದಾರೆ. ಈ ಚಿತ್ರದಲ್ಲಿ ಸನ್ನಿ ಕೌಶಲ್​ ಹಾಗೂ ಮನೋಜ್​ ಪಹ್ವಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಎ.ಆರ್.​ ರೆಹಮಾನ್​ ಸಂಗೀತ ಸಂಯೋಜನೆ ಮಾಡಿರುವ ಈ ಚಿತ್ರಕ್ಕೆ ಜಾನ್ವಿ ತಂದೆ ಬೋನಿ ಕಪೂರ್ ಅವರೇ ಬಂಡವಾಳ ಹೂಡಿದ್ದಾರೆ. ಬರೋಬ್ಬರಿ 38 ಕೋಟಿ ರೂಪಾಯಿ ಬಜೆಟ್​ನಲ್ಲಿ ಈ ಚಿತ್ರ ಸಿದ್ಧಗೊಂಡಿದೆ. ಆದರೆ, ಈ ಚಿತ್ರ ಮಾಡುತ್ತಿರುವ ಗಳಿಕೆ ನೋಡಿದರೆ ಬೋನಿ ಕಪೂರ್​ ದೊಡ್ಡ ನಷ್ಟ ಅನುಭವಿಸಿದರೂ ಅಚ್ಚರಿ ಏನಿಲ್ಲ.

ಸಾವಿನ ದವಡೆಯಲ್ಲಿ ಸಿಲುಕಿದ ಯುವತಿ ಬದುಕಲು ಹೋರಾಡುವ ಯುವತಿಯೊಬ್ಬಳ ಕಥೆ ‘ಮಿಲಿ’. ದೊಡ್ಡ ಫ್ರೀಜರ್​ನಲ್ಲಿ ಸಿಕ್ಕಿ ಬೀಳುವ ಯುವತಿ, ರಾತ್ರಿ ಇಡೀ ಅಲ್ಲಿಯೇ ಕಳೆಯುತ್ತಾಳೆ. ಇದರಿಂದ ಆಕೆ ಹೇಗೆ ಹೊರ ಬರುತ್ತಾಳೆ ಅನ್ನೋದು ಸಿನಿಮಾದಲ್ಲಿದೆ. ಸಿನಿಮಾದಲ್ಲಿ ಜಾನ್ವಿ ಕಪೂರ್ ಅವರ ಪಾತ್ರದ ಬಗ್ಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಈ ಮೊದಲು ಜಾನ್ವಿ ಕಪೂರ್ ಅವರ ಸಿನಿಮಾಗಳಲ್ಲಿ ಅವರ ನಟನೆ ಬಗ್ಗೆ ಎಲ್ಲರಿಂದ ಟೀಕೆ ವ್ಯಕ್ತವಾಗಿತ್ತು. ಆದರೆ, ಈಗ ಅವರು ನಟನೆಯಲ್ಲಿ ಪ್ರಬುದ್ಧರಾಗುತ್ತಿದ್ದಾರೆ ಎಂದು ಪ್ರೇಕ್ಷಕರು ಮೆಚ್ಚುಗೆಯ ಮಾತನ್ನು ಆಡಿದ್ದಾರೆ.

ಇದನ್ನೂ ಓದಿ: Mili Twitter Review: ಜಾನ್ವಿ ಕಪೂರ್​ ಅಭಿನಯಕ್ಕೆ ಕೇಳಿಬರ್ತಿದೆ ಮೆಚ್ಚುಗೆ; ‘ಮಿಲಿ’ ನೋಡಿ ವಿಮರ್ಶೆ ತಿಳಿಸಿದ ಸಿನಿಪ್ರಿಯರು

‘ಮಿಲಿ’ ಸಿನಿಮಾದ ಜೊತೆಗೆ ಕತ್ರಿನಾ ಕೈಫ್​, ಇಶಾನ್​ ಖಟ್ಟರ್​ ಮತ್ತು ಸಿದ್ಧಾಂತ ಚತುರ್ವೇದಿ ನಟನೆಯ ‘ಪೋನ್ ​ಭೂತ್’​ ಚಿತ್ರ ವಿಮರ್ಶೆಯಲ್ಲಿ ಸೋತಿದೆ. ಆದಾಗ್ಯೂ ಈ ಸಿನಿಮಾ ಮೊದಲ ದಿನ 2 ಕೋಟಿ ರೂಪಾಯಿ ಗಳಿಸಿದೆ. ಹುಮಾ ಖುರೇಷಿ ಹಾಗೂ ಸೋನಾಕ್ಷಿ ಸಿನ್ಹಾ ಅವರ ‘ಡಬಲ್​ ಎಕ್ಸ್​ಎಲ್’​ ಸಿನಿಮಾ ಕೆಲವೇ ಲಕ್ಷಗಳ ಬಿಸ್ನೆಸ್ ಮಾಡಿದೆ.

ಮತ್ತಷ್ಟು ಮನರಂಜನೆ ಸುದ್ಧಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ