ಬರಿಗಾಲಿನಲ್ಲಿ 450 ಕಿ.ಮೀ. ಓಡಿದ ನಂತರ ಪ್ರಧಾನಿ ಮೋದಿ ಭೇಟಿ ಮಾಡಿದ ನಟ ಮಿಲಿಂದ್

| Updated By: ರಾಜೇಶ್ ದುಗ್ಗುಮನೆ

Updated on: Aug 24, 2022 | 2:40 PM

ಭಾರತಕ್ಕೆ ಸ್ವತಂತ್ರ ಬಂದು 75 ವರ್ಷ ಕಳೆದಿದೆ. ಈ ಕಾರಣಕ್ಕೆ ಆಗಸ್ಟ್​ 15ರಂದು ಆಜಾದಿ ಕಾ ಅಮೃತ ಮಹೋತ್ಸವ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಿಲಿಂದ್ 450 ಕಿ.ಮೀ ಮ್ಯಾರಾಥನ್​ನಲ್ಲಿ ಭಾಗವಹಿಸಿದ್ದರು.

ಬರಿಗಾಲಿನಲ್ಲಿ 450 ಕಿ.ಮೀ. ಓಡಿದ ನಂತರ ಪ್ರಧಾನಿ ಮೋದಿ ಭೇಟಿ ಮಾಡಿದ ನಟ ಮಿಲಿಂದ್
Follow us on

ಬಾಲಿವುಡ್ ನಟ ಮಿಲಿಂದ್ ಸೋಮನ್ (Milind Soman) ಅವರು ಫಿಟ್​ನೆಸ್​ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಜಿಮ್ ಹಾಗೂ ಯೋಗದ ಬಗ್ಗೆ ಒಲವು ಹೊಂದಿದ್ದಾರೆ. ಅನೇಕರಿಗೆ ಯೋಗ ಮಾಡುವಂತೆ ಅವರು ಸ್ಫೂರ್ತಿ ನೀಡುತ್ತಾರೆ. ವೈಯಕ್ತಿಕ ವಿಚಾರದಿಂದಲೂ ಅವರು ಆಗಾಗ ಸುದ್ದಿ ಆಗುತ್ತಾರೆ. ಈಗ ಮಿಲಿಂದ್ ಅವರು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರನ್ನು ಭೇಟಿ ಮಾಡಿದ್ದಾರೆ. ದೆಹಲಿಯ ಪ್ರಧಾನ ಮಂತ್ರಿ ಕಚೇರಿಯಲ್ಲಿ ಈ ಭೇಟಿ ನಡೆದಿದೆ. ಇಬ್ಬರ ಭೇಟಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಭಾರತಕ್ಕೆ ಸ್ವತಂತ್ರ ಬಂದು 75 ವರ್ಷ ಕಳೆದಿದೆ. ಈ ಕಾರಣಕ್ಕೆ ಆಗಸ್ಟ್​ 15ರಂದು ಆಜಾದಿ ಕಾ ಅಮೃತ ಮಹೋತ್ಸವ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಿಲಿಂದ್ 450 ಕಿ.ಮೀ ಮ್ಯಾರಾಥನ್​ನಲ್ಲಿ ಭಾಗವಹಿಸಿದ್ದರು. ಝಾನ್ಸಿಯಿಂದ ದೆಹಲಿಯವರೆಗೆ ಬರಿಗಾಲಲ್ಲಿ ಓಡಿದ್ದರು ಮಿಲಿಂದ್. ಝಾನ್ಸಿಯಿಂದ ಓಟ ಆರಂಭಿಸಿದ ಮಿಲಿಂದ್ ಅವರು, ದೆಹಲಿಯ ಕೆಂಪುಕೋಟೆಯಲ್ಲಿ ಈ ಮ್ಯಾರಥಾನ್​ ಅಂತ್ಯ ಮಾಡಿದ್ದರು. ಇದಕ್ಕೆ ‘ಯುನಿಟಿ ರನ್’ ಎಂಬ ಟೈಟಲ್​ ಇಟ್ಟಿದ್ದರು.

ಇದನ್ನೂ ಓದಿ
ಫಿಟ್ನೆಸ್ ಫ್ರೀಕ್​ಗಳಾಗಿರುವ ಮಿಲಿಂದ್ ಸೋಮನ್ ಮತ್ತು ಅಂಕಿತಾ ಕೊನ್ವರ್ ದಂಪತಿಗಳಾಗಿಯೂ ಗಮನ ಸೆಳೆಯುತ್ತಿದ್ದಾರೆ!
ರಸ್ತೆ ಮಧ್ಯೆ ಕೂತು ಸ್ನಾನ ಮಾಡಿದ ನಟ ಮಿಲಿಂದ್​ ಸೋಮನ್​; ವಿಡಿಯೋ ವೈರಲ್
55 ವರ್ಷದ ಮಿಲಿಂದ್​ ಜೊತೆ 29ರ ಬೆಡಗಿಯ ಸುಖ ಸಂಸಾರ; ಗುಟ್ಟು ತೆರೆದಿಟ್ಟ ಅಂಕಿತಾ

‘ಯುನಿಟಿ ರನ್​ನ ನಂತರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದು ಖುಷಿ ನೀಡಿದೆ. ಯೋಗ ಮತ್ತು ಆಯುರ್ವೇದದ ಬಗ್ಗೆ ಜನರಲ್ಲಿ ಆಸಕ್ತಿ ಹುಟ್ಟುವಂತೆ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ’ ಎಂದು ಮಿಲಿಂದ್ ಅವರು ಟ್ವಿಟರ್​ನಲ್ಲಿ ಫೋಟೋ ಪೋಸ್ಟ್ ಮಾಡಿದ್ದಾರೆ.

ಮಿಲಿಂದ್ ಅವರು ಲವ್​ ಲೈಫ್ ವಿಚಾರದಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅಂಕಿತಾ ಕೊನ್ವರ್ ಅವರನ್ನು ಮಿಲಿಂದ್ ಮದುವೆ ಆಗಿದ್ದಾರೆ. ಅಂಕಿತಾಗೆ ಕೇವಲ 30 ವರ್ಷ ವಯಸ್ಸು. ಮಿಲಿಂದ್​ ಸೋಮನ್​ಗೆ 56 ವರ್ಷ ವಯಸ್ಸು. ಇಬ್ಬರ ನಡುವೆ ಬರೋಬ್ಬರಿ 26 ವರ್ಷಗಳ ಅಂತರ ಇದೆ. ಆದರೂ ಈ ಜೋಡಿ ಸುಖವಾಗಿ ಸಂಸಾರ ಮಾಡಿಕೊಂಡಿದೆ. ಈ ವಿಚಾರದ ಬಗ್ಗೆ ಹಲವು ಬಾರಿ ಜನರಿಂದ ಅಂಕಿತಾಗೆ ಪ್ರಶ್ನೆ ಎದುರಾಗಿದ್ದಿದೆ.

ಇದನ್ನೂ ಓದಿ: ‘ಲವ್​ ಮಾಕ್ಟೇಲ್​ 2’ ನಟಿ ರೇಚಲ್​ ಡೇವಿಡ್​ ಹೊಸ ಚಿತ್ರ ಅನೌನ್ಸ್​; ಮಿಲಿಂದ್​ ಹೀರೋ, ಸತ್ಯ ಪ್ರಕಾಶ್​ ನಿರ್ಮಾಣ

ಮಿಲಿಂದ್ ಹಾಗೂ ಸೋಮನ್ ವಯಸ್ಸಿನ ವಿಚಾರ ಇಟ್ಟುಕೊಂಡು ಸಾಕಷ್ಟು ಟ್ರೋಲ್​ಗಳನ್ನು ಮಾಡಲಾಗಿದೆ. ಇವರ ಫೋಟೋಗಳನ್ನು ಇಟ್ಟುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಟೀಕೆ ಮಾಡಲಾಗಿದೆ. ಆದರೆ, ಈ ದಂಪತಿ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಹಾಯಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ.

Published On - 2:39 pm, Wed, 24 August 22