55 ವರ್ಷದ ಮಿಲಿಂದ್​ ಜೊತೆ 29ರ ಬೆಡಗಿಯ ಸುಖ ಸಂಸಾರ; ಗುಟ್ಟು ತೆರೆದಿಟ್ಟ ಅಂಕಿತಾ

55 ವರ್ಷದ ಮಿಲಿಂದ್​ ಜೊತೆ 29ರ ಬೆಡಗಿಯ ಸುಖ ಸಂಸಾರ; ಗುಟ್ಟು ತೆರೆದಿಟ್ಟ ಅಂಕಿತಾ
ಮಿಲಿಂದ್​ ಸೋಮನ್​, ಅಂಕಿತಾ

ಅಂಕಿತಾ ಮತ್ತು ಮಿಲಿಂದ್​​ ಹ್ಯಾಪಿ ಆಗಿದ್ದಾರೆ ಎಂಬುದಕ್ಕೆ ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುವ ಫೋಟೋ ಮತ್ತು ವಿಡಿಯೋಗಳು ಸಾಕ್ಷಿ ಒದಗಿಸುತ್ತವೆ. 55ನೇ ವಯಸ್ಸಿನಲ್ಲಿಯೂ ಮಿಲಿಂದ್​ ಸೋಮನ್​ ಫಿಟ್​ನೆಸ್​ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ.

Madan Kumar

| Edited By: Rajesh Duggumane

Jun 10, 2021 | 4:11 PM

ಸೆಲೆಬ್ರಿಟಿಗಳ ಪ್ರೇಮ್​ ಕಹಾನಿ, ಮದುವೆ, ಸಂಸಾರ, ವಿಚ್ಛೇದನವೆಲ್ಲ ಕೆಲವೊಮ್ಮೆ ವಿಚಿತ್ರ ಆಗಿರುತ್ತವೆ. ಲೋಕದ ಜನರ ಮಾತಿಗೆಲ್ಲ ತಲೆ ಕೆಡಿಸಿಕೊಳ್ಳದೇ ತಮಗೆ ಇಷ್ಟಬಂದಂತೆ ಸಂಗಾತಿಗಳನ್ನು ಅವರು ಆಯ್ಕೆ ಮಾಡಿಕೊಳ್ಳುತ್ತಾರೆ. ವಯಸ್ಸಿನಲ್ಲಿ ಸಿಕ್ಕಾಪಟ್ಟೆ ಅಂತರ ಇರುವ ಕೆಲವು ಜೋಡಿಗಳು ಮದುವೆ ಆಗಿವೆ. ಅಂತಹ ಇನ್ನೂ ಕೆಲವರು ಪ್ರೀತಿಯಲ್ಲಿ ಮುಳುಗಿದ್ದಾರೆ. ಅರ್ಜುನ್​ ಕಪೂರ್​-ಮಲೈಕಾ ಅರೋರಾ, ಮಿಲಿಂದ್​ ಸೋಮನ್​-ಅಂಕಿತಾ ಕೊನ್ವಾರ್​ ಮುಂತಾದವರು ಈ ಮಾತಿಗೆ ಪಕ್ಕಾ ಉದಾಹರಣೆ. ಆದರೆ ಇಂಥ ಸೆಲೆಬ್ರಿಟಿಗಳು ಆಗಾಗ ಜನರಿಂದ ಟ್ರೋಲ್​ ಆಗುತ್ತಿರುತ್ತಾರೆ.

ಅಂಕಿತಾ ಕೊನ್ವರ್​ ಅವರಿಗೆ ಕೇವಲ 29 ವರ್ಷ ವಯಸ್ಸು. ಅವರ ಪತಿ ಮಿಲಿಂದ್​ ಸೋಮನ್​ಗೆ 55 ವರ್ಷ ವಯಸ್ಸು! ಇಬ್ಬರ ನಡುವೆ ಬರೋಬ್ಬರಿ 26 ವರ್ಷಗಳ ಅಂತರ ಇದೆ. ಆದರೂ ಈ ಜೋಡಿ ಸುಖವಾಗಿ ಸಂಸಾರ ಮಾಡಿಕೊಂಡಿದೆ. ಈ ವಿಚಾರದ ಬಗ್ಗೆ ಹಲವು ಬಾರಿ ಜನರಿಂದ ಅಂಕಿತಾಗೆ ಪ್ರಶ್ನೆ ಎದುರಾಗಿದೆ. ಅದನ್ನೆಲ್ಲ ಅವರು ಅಲ್ಲಲ್ಲೇ ಬಗೆಹರಿಸಿಕೊಳ್ಳುತ್ತ ಮುಂದೆ ಸಾಗುತ್ತಿದ್ದಾರೆ.

ಇತ್ತೀಚೆಗೆ ಅಂಕಿತಾ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಅಭಿಮಾನಿಗಳ ಜೊತೆ ಪ್ರಶ್ನೋತ್ತರ ನಡೆಸಿದರು. ಆಗ ಅವರಿಗೆ ಮತ್ತೆ ಅದೇ ಪ್ರಶ್ನೆ ಎದುರಾಯಿತು. ‘ವಯಸ್ಸಾದವರನ್ನು ಮದುವೆ ಆಗಬೇಡಿ ಎಂದು ಹೇಳುವ ಭಾರತೀಯ ಮನಸ್ಥಿತಿಯನ್ನು ನೀವು ಹೇಗೆ ನಿಭಾಯಿಸುತ್ತೀರಿ’ ಎಂದು ನೆಟ್ಟಿಗರೊಬ್ಬರು ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ತುಂಬ ಕೂಲ್​ ಆಗಿ ಅಂಕಿತಾ ಉತ್ತರಿಸಿದ್ದಾರೆ.

‘ಸಮಾಜದಲ್ಲಿ ಯಾವುದು ಅಸಹಜ ಆಗಿರುತ್ತದೋ ಅದರ ಬಗ್ಗೆ ಜನರು ಹೆಚ್ಚು ಮಾತನಾಡುತ್ತಾರೆ. ಅದು ಕೇವಲ ಭಾರತಕ್ಕೆ ಮಾತ್ರ ಸೀಮಿತವಲ್ಲ. ಗೊತ್ತಿಲ್ಲದ, ಹೊಸ ವಿಚಾರಗಳ ಬಗ್ಗೆ ನಾವು ಯಾವಾಗಲೂ ವಿಚಿತ್ರ ಭಾವನೆಯನ್ನೇ ಹೊಂದಿರುತ್ತೇವೆ. ನನಗೆ ಯಾವುದು ಖುಷಿ ಎನಿಸುತ್ತದೋ ಅದನ್ನೇ ನಾನು ಯಾವಾಗಲೂ ಮಾಡುತ್ತೇನೆ’ ಎಂದು ಅಂಕಿತಾ ಹೇಳಿದ್ದಾರೆ.

ಅಂಕಿತಾ ಮತ್ತು ಮಿಲಿಂದ್​​ ಹ್ಯಾಪಿ ಆಗಿದ್ದಾರೆ ಎಂಬುದಕ್ಕೆ ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳುವ ಫೋಟೋ ಮತ್ತು ವಿಡಿಯೋಗಳು ಸಾಕ್ಷಿ ಒದಗಿಸುತ್ತವೆ. 55ನೇ ವಯಸ್ಸಿನಲ್ಲಿಯೂ ಮಿಲಿಂದ್​ ಸೋಮನ್​ ಫಿಟ್​ನೆಸ್​ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಈ ವಿಚಾರದಲ್ಲಿ ಅವರು ಹದಿಹರೆಯದವರಿಗೂ ಮಾದರಿ ಆಗಿದ್ದಾರೆ.

ಇದನ್ನೂ ಓದಿ:

12 ವರ್ಷ ಹಿರಿಯ ಮಹಿಳೆ ಜತೆಗಿನ ಪ್ರೀತಿ ಬಗ್ಗೆ ಬಾಯಿ ಬಿಟ್ಟ ಅರ್ಜುನ್​ ಕಪೂರ್​; ಬೇರೆ ಕಾರಣಕ್ಕೆ ತಂದೆ ಬೋನಿ ಕಪೂರ್​ ಕಣ್ಣೀರು

Shilpa Shetty Birthday: ವಿವಾಹಿತ ಪುರುಷ ರಾಜ್​ ಕುಂದ್ರಾ ಜೊತೆ ಶಿಲ್ಪಾ ಶೆಟ್ಟಿ ಮದುವೆ ಆಗಲು ಒಪ್ಪಿದ್ದೇಕೆ?

Follow us on

Related Stories

Most Read Stories

Click on your DTH Provider to Add TV9 Kannada