ಮಹಿಳೆ ಮೇಲೆ ರವೀನಾ ಟಂಡನ್ ಹಲ್ಲೆ ಆರೋಪ: ವಿಡಿಯೋ ವೈರಲ್

|

Updated on: Jun 02, 2024 | 12:49 PM

ರವೀನಾ ಟಂಡನ್ ಕಾರು ಮೂವರು ಮಹಿಳೆಯರಿಗೆ ಗುದ್ದಿ ಗಾಯಗೊಳಸಿದೆ. ಸಂತ್ರಸ್ತ ಮಹಿಳೆಯರು ಆರೋಪಿಸಿರುವಂತೆ ರವೀನಾ ಟಂಡನ್ ಸಹ ತಮ್ಮ ಮೇಲೆ ಹಲ್ಲೆ ಮಾಡಿದರು ಎನ್ನಲಾಗುತ್ತಿದೆ. ಘಟನೆ ವಿಡಿಯೋ ವೈರಲ್ ಆಗಿದ್ದು, ರವೀನಾ ಮೇಲೆ ಕೆಲವರು ದಾಳಿಗೆ ಸಹ ಯತ್ನಿಸಿದ್ದಾರೆ.

ಮಹಿಳೆ ಮೇಲೆ ರವೀನಾ ಟಂಡನ್ ಹಲ್ಲೆ ಆರೋಪ: ವಿಡಿಯೋ ವೈರಲ್
Follow us on

ಕೆಜಿಎಫ್​ 2’ (KGF 2) ಸಿನಿಮಾದಲ್ಲಿ ಪವರ್​ಫುಲ್ ಮಹಿಳೆ ರಮಿಕಾ ಪಾತ್ರದಲ್ಲಿ ನಟಿಸಿರುವ ಬಾಲಿವುಡ್ ಸ್ಟಾರ್ ನಟಿ ರವೀನಾ ಟಂಡನ್ (Raveena Tandon), ವಿವಾದವೊಂದರಲ್ಲಿ ಸಿಲುಕಿಕೊಂಡಿದ್ದಾರೆ. ಶನಿವಾರ ರಾತ್ರಿ ರವೀನಾ ಟಂಡನ್​ರ ಕಾರು ಮೂವರು ಮಹಿಳೆಯರಿಗೆ ಗುದ್ದಿದ್ದು, ರವೀನಾರ ಕಾರನ್ನು ತಡೆದ ಕೆಲವರ ಮೇಲೆ ರವೀನಾ ಹಲ್ಲೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ವಿಡಿಯೋ ಒಂದು ಸಹ ವೈರಲ್ ಆಗಿದ್ದು, ವಿಡಿಯೋನಲ್ಲಿ ರವೀನಾ ಟಂಡನ್ ಅವರನ್ನು ಜನರು ಸುತ್ತುವರಿದಿದ್ದು, ನೂಕಾಟ ತಳ್ಳಾಟ ನಡೆಯುತ್ತಿದ್ದಂತೆ ತೋರುತ್ತಿದೆ.

ಶನಿವಾರ ತಡರಾತ್ರಿ ರವೀನಾ ಟಂಡನ್ ಪ್ರಯಾಣಿಸುತ್ತಿದ್ದ ಕಾರು ಮೂವರು ಮಹಿಳೆಯರಿಗೆ ಢಿಕ್ಕಿಯಾಗಿದೆ. ಮೂವರು ಮಹಿಳೆಯರಿಗೆ ಗಾಯಗಳಾಗಿವೆ. ಆಗ ಕೆಲವರು ಕಾರನ್ನು ತಡೆದು ಜಗಳ ಆರಂಭಿಸಿದ್ದಾರೆ. ಆಗ ಹೊರಬಂದ ರವೀನಾ, ಗಾಯಗೊಂಡಿದ್ದ ಮಹಿಳೆಯರ ಮೇಲೆ ಮತ್ತೆ ಹಲ್ಲೆ ಮಾಡಿದ್ದಾರೆ ಎಂದು ಮಹಿಳೆಯರು ಆರೋಪಿಸಿದ್ದಾರೆ.

ಈಗ ವೈರಲ್ ಆಗಿರುವ ವಿಡಿಯೋನಲ್ಲಿ ಮಹಿಳೆಯೊಬ್ಬಾಕೆ ‘ನನ್ನ ಮೂಗಿಗೆ ಗಾಯವಾಗಿ ರಕ್ತ ಸೋರುತ್ತಿದೆ, ಈಕೆ ನನಗೆ ಹೊಡೆದಿದ್ದಾಳೆ’ ಎಂದಿದ್ದಾಳೆ. ರವೀನಾ ಟಂಡನ್ ಸುತ್ತ ಸಾಕಷ್ಟು ಜನ ಸೇರಿದ್ದು, ರವೀನಾರ ಡ್ರೈವರ್ ಮೇಲೆ ಹಲ್ಲೆಗೆ ಯತ್ನಿಸುತ್ತಿದ್ದಾರೆ. ಆದರೆ ರವೀನಾ ಟಂಡನ್ ಜನರನ್ನು ತಡೆಯುವ ಪ್ರಯತ್ನದಲ್ಲಿ ನಿರತರಾಗಿರುವುದು ತಿಳಿದು ಬರುತ್ತಿದೆ. ‘ಮಾರೋ ಇಸ್ಕೋ’ ಎಂದು ಹೇಳುತ್ತಾ ರವೀನಾರ ಕಡೆಗೆ ಜನ ನುಗ್ಗಿದ್ದಾರೆ. ಆದರೆ ಗಲಾಟೆಯಲ್ಲಿ ರವೀನಾಗೆ ಏಟು ಬಿದ್ದಿದ್ದೆಯೇ ಆಕೆಯ ಡ್ರೈವರ್​ಗೆ ಏಟು ಬಿದ್ದಿದ್ದೆಯೇ ತಿಳಿದು ಬಂದಿಲ್ಲ.

ಇದನ್ನೂ ಓದಿ:ದಕ್ಷಿಣ ಭಾರತದವರ ಕೆಲಸ ಮೆಚ್ಚಿದ ‘ಕೆಜಿಎಫ್ 2’ ನಟಿ ರವೀನಾ ಟಂಡನ್

ಘಟನೆ ಬಗ್ಗೆ ವಿಡಿಯೋ ಮಾಡಿರುವ ಮೊಹಮ್ಮದ್ ಎಂಬಾತ, ತನ್ನ ತಾಯಿ, ಸಹೋದರಿ ಹಾಗೂ ಸಂಬಂಧಿ ಮೂವರು ಮಹಿಳೆಯರು ರವೀನಾರ ಮನೆಯ ಬಳಿ ವಾಕಿಂಗ್ ಮಾಡುವಾಗ ರವೀನಾರ ಕಾರು ಅವರಿಗೆ ಗುದ್ದಿದೆ. ಬಳಿಕ ರವೀನಾರ ಕಾರಿನ ಡ್ರೈವರ್ ಬಂದು ತನ್ನ ಸಹೋದರಿ ಹಾಗೂ ತಾಯಿಗೆ ಹೊಡೆದಿದ್ದಾನೆ. ಆಗ ಕೆಲವರು ಬಂದು ಪ್ರಶ್ನೆ ಮಾಡಿದಾಗ ರವೀನಾ ಕಾರಿನಿಂದ ಇಳಿದು ಬಂದು ನನ್ನ ತಾಯಿಗೆ ಹೊಡೆದಿದ್ದಾಳೆ. ರವೀನಾ ಕುಡಿದ ಮತ್ತಿನಲ್ಲಿ ಕೆಟ್ಟದಾಗಿ ಮಾತನಾಡಿದ್ದಾರೆ’ ಎಂದಿದ್ದಾನೆ.

‘ನಾನು ರವೀನಾ ವಿರುದ್ಧ ದೂರು ನೀಡಲೆಂದು ಖಾರ್ ಪೊಲೀಸ್ ಠಾಣೆಗೆ ಹೋಗಿದ್ದೆ, ಅಲ್ಲಿಯೇ ಸುಮಾರು ನಾಲ್ಕು ಗಂಟೆವರೆಗೆ ಕಾದೆ ವಿನಂತಿ ಮಾಡಿಕೊಂಡೆ ಆದರೆ ಅವರ್ಯಾರೂ ಸಹ ರವೀನಾ ವಿರುದ್ಧ ದೂರು ಸ್ವೀಕರಿಸಿಕೊಳ್ಳಲಿಲ್ಲ. ನಾನು ನ್ಯಾಯ ಪಡೆದೇ ತೀರುತ್ತೇನೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ