ರಣ್ಬೀರ್ ಕಪೂರ್ (Ranbir Kapoor) ನಟನೆಯ ‘ಅನಿಮಲ್’ ಸಿನಿಮಾ ಭಾರಿ ಹಿಟ್ ಆಗಿತ್ತು. ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭಾರಿ ಯಶಸ್ಸು ಗಳಿಸಿತಾದರೂ ಸಿನಿಮಾದ ಬಗ್ಗೆ ಟೀಕೆಗಳು ಬಹಳ ಕೇಳಿ ಬಂದವು. ಸಿನಿಮಾದಲ್ಲಿರುವ ಅತಿಯಾದ ಹಿಂಸೆ, ಉದ್ದೇಶಪೂರ್ವಕ ದುಷ್ಟತನ, ಪುರುಷ ಅಹಂಕಾರ, ಟಾಕ್ಸಿಕ್ ಲವ್ ಇನ್ನೂ ಹಲವು ವಿಷಯಗಳ ಬಗ್ಗೆ ಟೀಕೆ ವ್ಯಕ್ತವಾಯ್ತು. ಸಿನಿಮಾದ ಕೊನೆಯಲ್ಲಿ ರಣ್ಬೀರ್ ಮಾಡುವ ಅಸಹ್ಯಕರ ಸಂಜ್ಞೆಯೊಂದು ಸಹ ತೀವ್ರ ಟೀಕೆಗೆ ಗುರಿಯಾಗಿತ್ತು. ಆದರೆ ಅದೇ ಅನಿಮಲ್ ಸಿನಿಮಾದಲ್ಲಿ ರಣ್ಬೀರ್ ನಟಿಸಿದ್ದ ಪಾತ್ರದಲ್ಲಿ ಕ್ರಿಕೆಟಿಗ ಎಂಎಸ್ ಧೋನಿ ಕಾಣಿಸಿಕೊಂಡಿದ್ದಾರೆ.
ಹೌದು, ‘ಅನಿಮಲ್’ ಸಿನಿಮಾದಲ್ಲಿ ರಣ್ಬೀರ್ ಕಪೂರ್ ನಟಿಸಿದ್ದ ಪಾತ್ರದಲ್ಲಿ ಈಗ ಎಂಎಸ್ ಧೋನಿ ನಟಿಸಿದ್ದಾರೆ. ಅದನ್ನು ನಿರ್ದೇಶನ ಮಾಡಿರುವುದು ಸಂದೀಪ್ ರೆಡ್ಡಿ ವಂಗಾ! ಆದರೆ ಧೋನಿ ನಟಿಸಿರುವುದು ಸಿನಿಮಾದಲ್ಲಿ ಅಲ್ಲ ಬದಲಿಗೆ ಜಾಹೀರಾತಿನಲ್ಲಿ. ಹೌದು, ಐಪಿಎಲ್ ಸೀಸನ್ ಹತ್ತಿರ ಬರುತ್ತಿದ್ದಂತೆ ಕಂಪೆನಿಗಳು ಒಂದಕ್ಕಿಂತಲೂ ಒಂದು ಕ್ರಿಯಾಶೀಲ ಜಾಹೀರಾತುಗಳನ್ನು ಹೊರತರುತ್ತಿವೆ. ಈಗ ಬಂದಿರುವ ಧೋನಿ ಜಾಹೀರಾತು ಸಖತ್ ಮಜವಾಗಿದೆ.
ಎಲೆಕ್ಟ್ರಿಕ್ ಸೈಕಲ್ನ ಜಾಹೀರಾತಿನಲ್ಲಿ ಧೋನಿ ನಟಿಸಿದ್ದು, ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಅನಿಮಲ್’ ಸಿನಿಮಾದಿಂದ ಸ್ಪೂರ್ತಿ ಪಡೆದು ಈ ಜಾಹೀರಾತು ಮಾಡಲಾಗಿದೆ. ‘ಅನಿಮಲ್’ ಸಿನಿಮಾದ ಕೆಲ ಜನಪ್ರಿಯ ದೃಶ್ಯಗಳನ್ನು ಈ ಜಾಹೀರಾತಿನಲ್ಲಿ ರೀಕ್ರಿಯೇಟ್ ಮಾಡಲಾಗಿದೆ. ಆದರೆ ರಣ್ಬೀರ್ ಕಪೂರ್ ಬದಲಿಗೆ ಧೋನಿ, ರಣ್ಬೀರ್ ಮಾದರಿಯಲ್ಲಿಯೇ ನಟಿಸಿದ್ದಾರೆ. ಅವರಂತೆ ಉದ್ದ ಕೂದಲು, ಅವರು ಸಿನಿಮಾದಲ್ಲಿ ಧರಿಸಿದ್ದ ರೀತಿಯಲ್ಲೇ ಉಡುಪುಗಳನ್ನು ಧರಿಸಿದ್ದಾರೆ ಮಾತ್ರವಲ್ಲದೆ ಕೊನೆಯ ದೃಶ್ಯವಾದ ಆ ಅಸಹ್ಯಕರ ಸಂಜ್ಞೆಯನ್ನು ಸಹ ಮಾಡಿದ್ದಾರೆ!
ಇದನ್ನೂ ಓದಿ:ಆಮಿರ್ ಖಾನ್-ರಣ್ಬೀರ್ ಕಪೂರ್ ಜಗಳ, ಮಧ್ಯಸ್ಥಿಕೆ ವಹಿಸಿದ ರೋಹಿತ್ ಶರ್ಮಾ
‘ಅನಿಮಲ್’ ಸಿನಿಮಾದಲ್ಲಿ ರಣ್ಬೀರ್ ಕಪೂರ್ ತನ್ನ ಭಾವನ ಕೊಲ್ಲಲು ತನ್ನ ಗ್ಯಾಂಗ್ನ ಸದಸ್ಯರೊಟ್ಟಿಗೆ ಹೋಗುವ ದೃಶ್ಯ, ರಶ್ಮಿಕಾ ಮಂದಣ್ಣ ಅನ್ನು ಭೇಟಿ ಆಗುವ ಮುಂಚೆ ಬೈಕ್ನಲ್ಲಿ ಸ್ಟೈಲ್ ಆಗಿ ಬರುವ ದೃಶ್ಯಗಳನ್ನು ಜಾಹೀರಾತಿನಲ್ಲಿ ತೋರಿಸಲಾಗಿದೆ. ವ್ಯತ್ಯಾಸವೆಂದರೆ ಈ ದೃಶ್ಯಗಳಲ್ಲಿ ರಣ್ಬೀರ್ ಕಪೂರ್ ಕಾರು, ಮೋಟಾರ್ ಬೈಕ್ನಲ್ಲಿ ಬಂದರೆ ಧೋನಿ, ಎಲೆಕ್ಟ್ರಿಕ್ ಸೈಕಲ್ನಲ್ಲಿ ಬರುತ್ತಾರೆ. ಜಾಹೀರಾತಿನಲ್ಲಿ ಸಂದೀಪ್ ರೆಡ್ಡಿ ವಂಗಾ ಸಹ ನಟಿಸಿರುವುದು ವಿಶೇಷ. ಜಾಹೀರಾತು ಇಂದಷ್ಟೆ ಬಿಡುಗಡೆ ಆಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:04 pm, Tue, 18 March 25