ಸೈಫ್ ಅಲಿ ಖಾನ್ ಕೇಳಿದ ಪ್ರಶ್ನೆಗೆ ಮೋದಿ ಕೊಟ್ಟ ಉತ್ತರ ಕೇಳಿ ಕಪೂರ್ ಕಾಂದಾನ್​ಗೆ ನಗು

Narendra Modi: ಕಪೂರ್ ಕುಟುಂಬ ಸದಸ್ಯರು ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಕಪೂರ್ ಕುಟುಂಬದ ಅಳಿಯ ಸೈಫ್ ಅಲಿ ಖಾನ್ ಸಹ ಈ ವೇಳೆ ಮೋದಿ ಅವರನ್ನು ಭೇಟಿಯಾಗಿ ಮಾತನಾಡಿದರು. ಸೈಫ್ ಅವರ ಮಾತಿಗೆ ನರೇಂದ್ರ ಮೋದಿ ನೀಡಿರುವ ಉತ್ತರ ಇದೀಗ ವೈರಲ್ ಆಗಿದೆ. ಮೋದಿ ಅವರ ಹಾಸ್ಯಪ್ರಜ್ಞೆಗೆ ಭೇಷ್ ಎನ್ನುತ್ತಿದ್ದಾರೆ ನೆಟ್ಟಿಗರು.

ಸೈಫ್ ಅಲಿ ಖಾನ್ ಕೇಳಿದ ಪ್ರಶ್ನೆಗೆ ಮೋದಿ ಕೊಟ್ಟ ಉತ್ತರ ಕೇಳಿ ಕಪೂರ್ ಕಾಂದಾನ್​ಗೆ ನಗು
ಮೋದಿ-ಸೈಫ್

Updated on: Dec 12, 2024 | 3:54 PM

ಬಾಲಿವುಡ್​ನ ತಾರಾ ಕುಟುಂಬವಾದ ಕಪೂರ್ ಕುಟುಂಬ ನಿನ್ನೆ (ಡಿಸೆಂಬರ್ 11) ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಆಗಿದ್ದಾರೆ. ಭಾರತೀಯ ಚಿತ್ರರಂಗದ ದಿಗ್ಗಜ, ರಾಜ್ ಕಪೂರ್ ಅವರ 100ನೇ ಜಯಂತಿ ಆಚರಣೆಗೆ ಕಪೂರ್ ಕುಟುಂಬ ಸಜ್ಜಾಗಿದ್ದು, ಕಾರ್ಯಕ್ರಮಕ್ಕೆ ಮೋದಿ ಅವರನ್ನು ಆಹ್ವಾನಿಸಲು ಕಪೂರ್ ಕುಟುಂಬದ ರಣ್​ಬೀರ್ ಕಪೂರ್, ಕರೀನಾ ಕಪೂರ್, ಕರಿಶ್ಮಾ ಕಪೂರ್, ರಿಧಿಕಾ ಕಪೂರ್, ನೀತು ಕಪೂರ್ ಇನ್ನೂ ಕೆಲವು ಕಪೂರ್ ಕುಟುಂಬದ ದಿಗ್ಗಜರು ಮೋದಿ ಅವರನ್ನು ಭೇಟಿ ಆಗಿದ್ದರು. ಈ ಸಮಯದಲ್ಲಿ ಮೋದಿ ಅವರೊಟ್ಟಿಗೆ ಕಪೂರ್ ಕುಟುಂಬದ ಸದಸ್ಯರು ಸಂವಾದ ಸಹ ನಡೆಸಿದರು.

ಸಂವಾದದ ವೇಳೆ ಕಪೂರ್ ಕುಟುಂಬದ ದಿಗ್ಗಜರು ಮೋದಿ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಿದರು, ಕೆಲ ಸಮಯ ಮಾತನಾಡಿದರು. ಕರೀನಾ ಕಪೂರ್ ಅವರನ್ನು ಮದುವೆಯಾಗಿ ಕಪೂರ್ ಕುಟುಂಬದ ಅಳಿಯನಾಗಿರುವ ಸೈಫ್ ಅಲಿ ಖಾನ್ ಸಹ ಈ ವೇಳೆ ಹಾಜರಿದ್ದರು. ಮೋದಿ ಅವರೊಟ್ಟಿಗಿನ ಸಂವಾದದ ವೇಳೆ, ಮಾತನಾಡಿದ ಸೈಫ್ ಅಲಿ ಖಾನ್, ‘ನಾನು ಭೇಟಿ ಮಾಡಿದ ಮೊದಲ ಪ್ರಧಾನ ಮಂತ್ರಿ ನೀವು. ನಿಮ್ಮನ್ನು ಎರಡು ಭಾರಿ ಭೇಟಿ ಮಾಡಿದ್ದೇನೆ. ನೀವು ನಮ್ಮನ್ನು ಆತ್ಮೀಯವಾಗಿ ಮಾತನಾಡಿಸಿದ್ದೀರಿ, ಭೇಟಿ ಸಹ ಆಗಿದ್ದೀರಿ. ನೀವು ಸಾಕಷ್ಟು ಶ್ರಮದ ಕೆಲಸ ಮಾಡುತ್ತಿದ್ದೀರಿ, ನಿಮ್ಮಲ್ಲಿ ಸಾಕಷ್ಟು ಎನರ್ಜಿ ಇದೆ. ಎಲ್ಲರಿಗೂ ಕೈಗೆಟುವಂತೆ ಲಭ್ಯವಿರುವುದಕ್ಕೆ, ನಿಮ್ಮ ಬಾಗಿಲುಗಳನ್ನು ತೆರೆದು ನಮ್ಮನ್ನು ಭೇಟಿ ಆಗಿದ್ದಕ್ಕೆ ನಾನು ಧನ್ಯವಾದ ಹೇಳಬಯಸುತ್ತೇನೆ’ ಎಂದರು.

ಇದನ್ನೂ ಓದಿ:ನರೇಂದ್ರ ಮೋದಿಯ ಭೇಟಿಯಾದ ಕಪೂರ್ ಕುಟುಂಬ, ಕೊಟ್ಟರು ವಿಶೇಷ ಉಡುಗೊರೆ

ಸೈಫ್ ಅಲಿ ಖಾನ್​ ಅವರ ಪ್ರೀತಿ ಪೂರ್ವಕ ಮಾತುಗಳಿಗೆ ಪ್ರತಿಕ್ರಿಯೆ ನೀಡಿದ ನರೇಂದ್ರ ಮೋದಿ, ‘ನಾನು ನಿಮ್ಮ ತಂದೆಯವರನ್ನು ಭೇಟಿ ಆಗಿದ್ದೇನೆ. ನಿಮ್ಮ ಕುಟುಂಬದ ಮೂರು ಪೀಳಿಗೆಗಳನ್ನು ಭೇಟಿ ಮಾಡುವ ಆಸೆ ನನಗೆ ಇತ್ತು, ಆದರೆ ನೀವು ನಿಮ್ಮ ಮಕ್ಕಳನ್ನು ಇಂದು ಕರೆತಂದಿಲ್ಲ’ ಎಂದರು. ಮೋದಿ ಅವರ ಉತ್ತರ ಕೇಳಿ ಎಲ್ಲರೂ ನಕ್ಕರು. ಕರೀನಾ ಕಪೂರ್, ‘ನಾವು ಮಕ್ಕಳನ್ನು ಕರೆದುಕೊಂಡು ಬರೋಣ ಎಂದು ಅಂದುಕೊಂಡಿದ್ದೇವು. ಆದರೆ ಕೊನೆಯ ಕ್ಷಣದಲ್ಲಿ ಕರೆದುಕೊಂಡು ಬರಲಾಗಲಿಲ್ಲ’ ಎಂದರು.

ಅಂದಹಾಗೆ ಸೈಫ್ ಅಲಿ ಖಾನ್​ರ ತಂದೆ ಮನ್ಸೂರ್ ಅಲಿ ಖಾನ್, ಭಾರತ ಕ್ರಿಕೆಟ್ ತಂಡದ ಆಟಗಾರರಾಗಿದ್ದರು. ಅದ್ಭುತವಾದ ಕ್ರಿಕೆಟ್ ಆಟಗಾರ ಆಗಿದ್ದ ಪಟೌಡಿ ರಾಜಕೀಯದಲ್ಲಿಯೂ ಗುರುತಿಸಿಕೊಂಡಿದ್ದರು. ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಬಾಲಿವುಡ್​ನ ಜೊತೆ ಹಾಗೂ ರಾಜಕೀಯದ ಜೊತೆ ಮನ್ಸೂರ್ ಅಲಿ ಖಾನ್ ಪಟೌಡಿ ಅವರಿಗೆ ಆತ್ಮೀಯ ಬಂಧ ಇತ್ತು. 2000 ವರೆಗೆ ಅವರು ರಾಜಕೀಯ ಇನ್ನಿತರೆ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ