‘ಭೂಲ್ ಭುಲಯ್ಯ 4’ ಚಿತ್ರದಲ್ಲಿ ಅಕ್ಷಯ್ ಕುಮಾರ್; ಕಥೆ ಓಕೆ ಆದ್ರೆ ಸ್ಟಾರ್ ನಟನ ಎಂಟ್ರಿ
Akshay Kumar: ಭೂಲ್ ಭುಲಯ್ಯ 3 ಚಿತ್ರದ ಯಶಸ್ಸಿನ ನಂತರ, ಭೂಲ್ ಭುಲಯ್ಯ 4 ರ ಬಗ್ಗೆ ಚರ್ಚೆಗಳು ತೀವ್ರಗೊಂಡಿವೆ. ಅಕ್ಷಯ್ ಕುಮಾರ್ ಅವರ ಮರಳುವಿಕೆ ಕುರಿತ ಪ್ರಶ್ನೆಗೆ ನಿರ್ದೇಶಕ ಅನೀಸ್ ಬಾಜ್ಮೀ ಉತ್ತರಿಸಿದ್ದು, ಕಥೆ ಪೂರ್ಣಗೊಂಡ ನಂತರವೇ ಅವರ ಆಗಮನ ನಿರ್ಧಾರವಾಗುವುದು ಎಂದು ಹೇಳಿದ್ದಾರೆ.
‘ಭೂಲ್ ಭುಲಯ್ಯ 3’ ಸಿನಿಮಾ ವಿಮರ್ಶಕರಿಂದ ಸಾಧಾರಾಣ ಮೆಚ್ಚುಗೆ ಪಡೆಯಿತು. ಆದರೆ, ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಗಳಿಕೆ ಮಾಡಿತು. ಇದರಿಂದ ನಿರ್ಮಾಪಕರು ಸೇಫ್ ಆಗಿದ್ದಾರೆ. ಹಾಕಿದ ದುಡ್ಡಿಗೆ ಅವರಿಗೆ ಮೋಸ ಆಗಿಲ್ಲ. ಹಿಗಿರುವಾಗಲೇ ‘ಭೂಲ್ ಭುಲಯ್ಯ 4’ ಸಿನಿಮಾ ಬಗ್ಗೆ ಚರ್ಚೆ ನಡೆದಿದೆ. ‘ಭೂಲ್ ಭುಲಯ್ಯ 3’ ಸಿನಿಮಾದಲ್ಲಿ ವಿದ್ಯಾ ಬಾಲನ್ ಆಗಮನ ಆಗಿತ್ತು. ನಾಲ್ಕನೇ ಭಾಗದಲ್ಲಿ ಅಕ್ಷಯ್ ಮರಳುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ. ಇದಕ್ಕೆ ಈಗ ಉತ್ತರ ಸಿಕ್ಕಿದೆ.
ಅಕ್ಷಯ್ ಕುಮಾರ್ ಅವರು ‘ಭೂಲ್ ಭುಲಯ್ಯ’ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿರ್ವಹಿಸಿದ್ದರು. ಎರಡು ಹಾಗೂ ಮೂರನೇ ಭಾಗದಲ್ಲಿ ಅಕ್ಷಯ್ ಕುಮಾರ್ ಇರಲಿಲ್ಲ. ಕಾರ್ತಿಕ್ ಆರ್ಯನ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು. ಈಗ ನಾಲ್ಕನೇ ಭಾಗದಲ್ಲಿ ಅಕ್ಷಯ್ ಅವರು ಮರಳುತ್ತಾರಾ ಎನ್ನುವ ಪ್ರಶ್ನೆ ಕಾಡಿದೆ. ಇದಕ್ಕೆ ನಿರ್ದೇಶಕ ಅನೀಸ್ ಬಾಜ್ಮೀ ಪ್ರತಿಕ್ರಿಯಿಸಿದ್ದಾರೆ.
ಅನೀಸ್ ಹಾಗೂ ಅಕ್ಷಯ್ ಮಧ್ಯೆ ಒಳ್ಳೆಯ ಫ್ರೆಂಡ್ಶಿಪ್ ಇದೆ. ಅಕ್ಷಯ್ ಅವರ ಮರು ಆಗಮನದ ಬಗ್ಗೆ ಅವರು ಮಾತನಾಡಿದ್ದಾರೆ. ‘ಅಕ್ಷಯ್ ಕುಮಾರ್ ಜೊತೆ ಒಳ್ಳೆಯ ಗೆಳೆತನ, ಪ್ರೀತಿ ಎಲ್ಲವೂ ಇದೆ. ಆದರೆ, ಕಥೆ ಸೆಟ್ ಆಗಬೇಕು. ಅವರ ಜೊತೆ ಕೆಲಸ ಮಾಡಬೇಕು ಎಂಬ ಆಸೆ ಇದೆ’ ಎಂದಿದ್ದಾರೆ ಅವರು.
ಇದನ್ನೂ ಓದಿ:ನಾಗ ಚೈತನ್ಯ ಮಾಸ್ ಸಿನಿಮಾಕ್ಕೆ ಶ್ರೀಲೀಲಾ ನಾಯಕಿ
‘ಭೂಲ್ ಭುಲಯ್ಯ 3’ ಸಿನಿಮಾಗೆ ಕಾರ್ತಿಕ್ ಆರ್ಯನ್ ಹೀರೋ. ವಿದ್ಯಾ ಬಾಲನ್, ಮಾಧುರಿ ದೀಕ್ಷಿತ್, ತ್ರಪ್ತಿ ದಿಮ್ರಿ ಮುಖ್ಯಭೂಮಿಕೆಯಲ್ಲಿದ್ದಾರೆ. ಈ ಸಿನಿಮಾ 400 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿ ಒಟಿಟಿಯಲ್ಲಿ ಬರೋಕೆ ಸಿನಿಮಾ ಸಿದ್ಧವಾಗಿದೆ.
ಅನೀಸ್ ಬಾಜ್ಮೀ ಅವರು ‘ಭೂಲ್ ಭುಲಯ್ಯ 3’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ‘ಸಿಂಗಂ ಅಗೇನ್’ ಚಿತ್ರ ಕೂಡ ರಿಲೀಸ್ ಆಗಿತ್ತು. ಈ ಸಿನಿಮಾ ಕೂಡ ಮೆಚ್ಚುಗೆ ಪಡೆಯಿತು. ಬಾಕ್ಸ್ ಆಫೀಸ್ನಲ್ಲಿ ಎರಡೂ ಸಿನಿಮಾಗಳು ಗೆದ್ದಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:49 pm, Wed, 11 December 24