AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸ್ತ್ರೀ 2’ ನಟನ ಕಿಡ್ನ್ಯಾಪ್ ಮಾಡಲು ಅವಾರ್ಡ್ ಫಂಕ್ಷನ್ ಆಯೋಜನೆ; 12 ಗಂಟೆ ಟಾರ್ಚರ್ ಅನುಭವಿಸಿ, ಹಣ ಕಳೆದುಕೊಂಡ ಕಲಾವಿದ

ಮುಂಬೈ ನಟ ಮುಷ್ತಾಖ್ ಖಾನ್ ಅವರನ್ನು ಮೀರತ್‌ನಲ್ಲಿ ನಡೆದ ಅವಾರ್ಡ್ ಕಾರ್ಯಕ್ರಮದ ಹೆಸರಿನಲ್ಲಿ ಅಪಹರಿಸಲಾಗಿದೆ. 1 ಕೋಟಿ ರೂಪಾಯಿಗಳ ಬೇಡಿಕೆಯೊಂದಿಗೆ 12 ಗಂಟೆಗಳ ಕಾಲ ಚಿತ್ರಹಿಂಸೆ ನೀಡಲಾಗಿದೆ. ಆದರೆ, ನಂತರ ಅವರು ಅಪಹರಣಕಾರರಿಂದ ತಪ್ಪಿಸಿಕೊಂಡು ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಈ ಘಟನೆ ಚರ್ಚೆ ಆಗುತ್ತಿದೆ.

‘ಸ್ತ್ರೀ 2’ ನಟನ ಕಿಡ್ನ್ಯಾಪ್ ಮಾಡಲು ಅವಾರ್ಡ್ ಫಂಕ್ಷನ್ ಆಯೋಜನೆ; 12 ಗಂಟೆ ಟಾರ್ಚರ್ ಅನುಭವಿಸಿ, ಹಣ ಕಳೆದುಕೊಂಡ ಕಲಾವಿದ
ಸ್ತ್ರೀ 2 ತಂಡ ಹಾಗೂ ಮುಷ್ತಖ್
ರಾಜೇಶ್ ದುಗ್ಗುಮನೆ
|

Updated on:Dec 11, 2024 | 10:46 AM

Share

ಜನಪ್ರಿಯತೆ ಪಡೆಯಲು, ಟಿವಿ-ಪೇಪರ್​ಗಳಲ್ಲಿ ಹೆಸರು ಬರಬೇಕು ಎಂಬ ಕಾರಣಕ್ಕೆ ಅವಾರ್ಡ್​ ಫಂಕ್ಷನ್​ಗಳನ್ನು ಮಾಡಿ, ದೊಡ್ಡ ದೊಡ್ಡ ಕಾಲಾವಿದರನ್ನು ಕರೆಸಿ, ಅವರಿಗೆ ದೊಡ್ಡ ಮೊತ್ತದ ಸಂಭಾವನೆ ಕೊಡುವುದನ್ನು ನೀವು ಕೇಳಿರುತ್ತೀರಿ. ಆದರೆ, ಇಲ್ಲಿ ಅವಾರ್ಡ್ ಕಾರ್ಯಕ್ರಮದ ಹೆಸರಲ್ಲಿ ನಟನನ್ನೇ ಕಿಡ್ನ್ಯಾಪ್ ಮಾಡಲಾಗಿದೆ. ಇದಕ್ಕಾಗಿ ಆ ನಟನಿಗೆ ಅಡ್ವಾನ್ಸ್ ಹಣ ಕೊಟ್ಟು ಅವರನ್ನು ತಮ್ಮ ಬಳಿ ಕರೆಸಿಕೊಂಡಿದ್ದಾರೆ. ಆ ಬಳಿಕ ಆಗಿದ್ದು ಮಾತ್ರ ಕರಾಳ ಅನುಭವ.

‘ವೆಲ್​ಕಮ್​’, ‘ಸ್ತ್ರೀ 2’ ಚಿತ್ರಗಳಲ್ಲಿ ನಟಿಸಿರೋ ಮುಷ್ತಖ್ ಖಾನ್ ಅವರು ಈ ರೀತಿ ಕಿಡ್ನ್ಯಾಪ್ ಆದ ಸಂತ್ರಸ್ತ. ಅವರನ್ನು ದೆಹಲಿ-ಮೀರತ್ ಹೆದ್ದಾರಿಯಲ್ಲಿ ಕಿಡ್ನ್ಯಾಪ್ ಮಾಡಲಾಗಿತ್ತು. ಬರೋಬ್ಬರಿ 12 ಗಂಟೆ ಅವರಿಗೆ ಟಾರ್ಚರ್ ನೀಡಲಾಗಿತ್ತು. ಕೋಟಿ ರೂಪಾಯಿ ಕನಸು ಕಾಣುತ್ತಿದ್ದ ಖದೀಮರಿಂದ ಇವರು ತಪ್ಪಿಸಿಕೊಂಡು ಬಂದಾಗ ಸುಸ್ತಾಗಿದ್ದರು.

ಪಕ್ಕಾ ಪ್ಲ್ಯಾನಿಂಗ್

ಮೀರತ್​ನಲ್ಲಿ ಅವಾರ್ಡ್ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ, ಅದಕ್ಕೆ ನೀವು ಬರಬೇಕು ಎಂದು ಮುಷ್ತಖ್ ಅವರಿಗೆ ಆಮಂತ್ರಣ ಬಂದಿತ್ತು. ಇಷ್ಟೇ ಆಗಿದ್ದರೆ ಅವರು ಅವಾರ್ಡ್  ಕಾರ್ಯಕ್ರಮಕ್ಕೆ ತೆರಳುವುದು ಹಾಗಿರಲಿ ಅದನ್ನು ನಂಬುತ್ತಲೂ ಇರಲಿಲ್ಲ. ಆದರೆ, ನಟನಿಗೆ ನಂಬಿಕೆ ಬರಬೇಕು ಎಂಬ ಕಾರಣಕ್ಕೆ ಫ್ಲೈಟ್ ಟಿಕೆಟ್ ಅರೇಂಜ್ ಮಾಡಿ, ಅಡ್ವಾನ್ಸ್ ಹಣವನ್ನು ಕೂಡ ಹಾಕಿದ್ದರು. ಇಷ್ಟೆಲ್ಲ ಆದಾಗ ಅನುಮಾನ ಪಡೋದು ಹೇಗೆ? ಹೀಗಾಗಿ ಮುಷ್ತಖ್ ಅವರು ಖುಷಿಯಿಂದಲೇ ಪ್ರಶಸ್ತಿ ಸಮಾರಂಭಕ್ಕೆ ಹೊರಟರು.

ಮುಷ್ತಖ್ ಮುಂಬೈನಿಂದ ದೆಹಲಿಗೆ ಪ್ರಯಾಣ ಬೆಳೆಸಿದರು. ದೆಹಲಿ ವಿಮಾನ ನಿಲ್ದಾಣ ಇಳಿಯುತ್ತಿದ್ದಂತೆ ಅವರನ್ನು ಪಿಕ್ ಮಾಡಲು ಕಾರು ಕೂಡ ಬಂತು. ಆದರೆ, ಅವರು ಮೀರತ್​ಗೆ ಬರಲಿಲ್ಲ. ಬದಲಿಗೆ ಬಿಜ್ನೋರ್ ಬಳಿ ಹೋಯಿತು. ಅಲ್ಲಿ ಕೆಲವು ಗೂಂಡಾಗಳಿಂದ ಕಿಡ್ನ್ಯಾಪ್ ಆದರು.

1 ಕೋಟಿ ರೂಪಾಯಿಗೆ ಬೇಡಿಕೆ

ಅಪಹರಣ ಮಾಡಿದ ವ್ಯಕ್ತಿಗಳು ಮುಷ್ತಖ್ ಅವರಿಂದ 1 ಕೋಟಿ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಸಣ್ಣ-ಪುಟ್ಟ ಪಾತ್ರಗಳನ್ನು ಮಾಡಿಕೊಂಡು ಜೀವನ ನಡೆಸುತ್ತಿರುವ ಇವರ ಬಳಿ 1 ಕೋಟಿ ರೂಪಾಯಿ ಎಲ್ಲಿಂದ ಬರಬೇಕು ನೀವೇ ಹೇಳಿ. ಕೊನೆಗೆ ಅವರು ನಟನಿಂದ 2 ಲಕ್ಷ ರೂಪಾಯಿ ಮಾತ್ರ ಪಡೆಯಲು ಸಾಧ್ಯವಾಯಿತು.

ಇದನ್ನೂ ಓದಿ: ಐದು ವರ್ಷಗಳವರೆಗೆ ಮಂಗಳೂರಿನಲ್ಲಿ ಬೆಳೆದಿದ್ದ ಶಾರುಖ್ ಕನ್ನಡ ಮಾತನಾಡುತ್ತಿದ್ದರು

ಸಿನಿಮೀಯ ಶೈಲಿಯಲ್ಲಿ ಎಸ್ಕೆಪ್

ಮುಷ್ತಖ್ ಕಿಡ್ನ್ಯಾಪ್ ಆಗಿದ್ದು ಒಂದು ಸಿನಿಮಾ ಕಥೆ ಇದ್ದರೆ ಅವರು ತಪ್ಪಿಸಿಕೊಂಡಿದ್ದು ಮತ್ತೊಂದು ರೋಚಕ ಕಥೆ ಎನ್ನಬಹುದು. ಇದು ಕೂಡ ಯಾವುದೇ ಸಿನಿಮಾಗಿಂತ ಕಡಿಮೆ ಇಲ್ಲ. ಮುಂಜಾನೆ ಮಸೀದಿಯಿಂದ ಪ್ರಾರ್ಥನೆ ಕೇಳುತ್ತಿದ್ದಂತೆ ಅವರು ಅಲ್ಲಿಂದ ತಪ್ಪಿಸಿಕೊಂಡರು. ಆ ಸಂದರ್ಭದಲ್ಲಿ ಎಲ್ಲರೂ ಪ್ರಾರ್ಥನೆಯಲ್ಲಿ ತೊಡಗಿದ್ದರು. ಪೊಲೀಸ್ ಠಾಣೆಗೆ ತೆರಳಿ ಅವರು ದೂರು ನೀಡಿದರು. ನಂತರ ಪೊಲೀಸರ ಸಹಾಯದಿಂದ ಮನೆಗೆ ಮರಳಿದ್ದಾರೆ. ಕೆಲವು ದಿನಗಳಲ್ಲಿ ಅವರು ಮಾಧ್ಯಮದವರ ಮುಂದೆ ಮಾತನಾಡುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:45 am, Wed, 11 December 24