ಐದು ವರ್ಷಗಳವರೆಗೆ ಮಂಗಳೂರಿನಲ್ಲಿ ಬೆಳೆದಿದ್ದ ಶಾರುಖ್ ಕನ್ನಡ ಮಾತನಾಡುತ್ತಿದ್ದರು
ಶಾರುಖ್ ಖಾನ್ ಅವರ ಬಾಲ್ಯದ ಬಗ್ಗೆ ಕಡಿಮೆ ಜನರಿಗೆ ತಿಳಿದಿರುವ ರಹಸ್ಯ ಈ ಲೇಖನದಲ್ಲಿ ಇದೆ. ಅವರು ಮಂಗಳೂರಿನಲ್ಲಿ ಐದು ವರ್ಷಗಳ ಕಾಲ ವಾಸಿಸಿದ್ದರು ಎಂಬುದನ್ನು ‘ಚೆನ್ನೈ ಎಕ್ಸ್‌ಪ್ರೆಸ್’ ಸಿನಿಮಾದ ಪ್ರಚಾರದ ಸಮಯದಲ್ಲಿ ಅವರು ಬಹಿರಂಗಪಡಿಸಿದ್ದರು. ಅವರ ಅಜ್ಜಿಯೊಂದಿಗೆ ಕಳೆದ ಬಾಲ್ಯದ ನೆನಪುಗಳು ಮತ್ತು ಕನ್ನಡ ಭಾಷೆಯೊಂದಿಗಿನ ನಂಟಿನ ಬಗ್ಗೆ ಇಲ್ಲಿದೆ ವಿವರ.
ಶಾರುಖ್ ಖಾನ್ ಅವರು ಬಾಲಿವುಡ್ನಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಭಾರತದಲ್ಲಿ ಮಾತ್ರವಲ್ಲದೆ, ವಿದೇಶದಲ್ಲೂ ಅವರಿಗೆ ಸಾಕಷ್ಟು ಹೆಸರು ಇದೆ. ಶಾರುಖ್ ಖಾನ್ ಅವರು ಅನೇಕ ಬಾರಿ ಬೆಂಗಳೂರಿಗೆ ಬಂದಿದ್ದು ಇದೆ. ಅವರಿಗೆ ಮಂಗಳೂರು ಕನೆಕ್ಷನ್ ಇದೆ ಎಂಬ ವಿಚಾರ ನಿಮಗೆ ಗೊತ್ತೇ? ಆ ಬಗ್ಗೆ ಈ ಸ್ಟೋರಿಯಲ್ಲಿ ಇದೆ. ಅವರ ಬಗೆಗಿನ ಅಪರೂಪದ ಮಾಹಿತಿಯನ್ನು ನಾವು ಹಂಚಿಕೊಳ್ಳುತ್ತಿದ್ದೇವೆ.
ಶಾರುಖ್ ಖಾನ್ ಅವರು ಬೆಳೆದಿದ್ದು ಮಂಗಳೂರಿನಲ್ಲಂತೆ! ಹೌದು, ‘ಚೆನ್ನೈ ಎಕ್ಸ್‌ಪ್ರೆಸ್’ ರಿಲೀಸ್ ಸಂದರ್ಭದಲ್ಲಿ ಶಾರುಖ್ ಖಾನ್ ಈ ವಿಚಾರ ರಿವೀಲ್ ಮಾಡಿದ್ದರು. ‘ನಾನು ಹುಟ್ಟಿದ್ದು ಮಂಗಳೂರಿನಲ್ಲಿ. ಐದು ವರ್ಷಗಳವರೆಗೆ ಅಲ್ಲಿಯೇ ಇದ್ದೆ. ಆಗ ನಾನು ಕನ್ನಡ ಮಾತನಾಡುತ್ತಿದ್ದೆ’ ಎಂದು ಶಾರುಖ್ ಖಾನ್ ಅವರು 2013ರಲ್ಲಿ ಹೇಳಿದ್ದರು.
‘ನನ್ನ ತಾಯಿ ಆಂಧ್ರ ಪ್ರದೇಶದವರು. ಅವರು ಕರ್ನಾಟಕದಲ್ಲಿ ಇದ್ದರು. ಅವರಿಗೆ ನಾಲ್ಕು ಭಾಷೆ ಬರುತ್ತಿತ್ತು. ನಾನು ಐದು ವರ್ಷಗಳವರೆಗೆ ಮಂಗಳೂರಿನಲ್ಲಿ ಇದ್ದೆ. ನನ್ನ ಚಿಕ್ಕ ವಯಸ್ಸಿನ ಕೆಲವು ಫೋಟೋಗಳು ಇವೆ. ಮಂಗಳೂರಿನ ನೆನಪು ಎಂದರೆ ಅವು ಮಾತ್ರ. ಇದನ್ನು ಬಿಟ್ಟು ಅಲ್ಲಿಯ ಮತ್ಯಾವ ನೆನಪುಗಳೂ ನನಗೆ ಇಲ್ಲ’ ಎಂದು ಶಾರುಖ್ ಖಾನ್ ಹೇಳಿಕೊಂಡಿದ್ದರು.
‘ನಾನು ಐದು ವರ್ಷಗಳವರೆಗೆ ಅಜ್ಜಿಯ ಜೊತೆ ಇದ್ದೆ. ಅವರು ಮಂಗಳೂರಿನಲ್ಲಿ ಇದ್ದರು. ನನ್ನ ನೋಡಿಕೊಳ್ಳುವ ಜವಾಬ್ದಾರಿ ಅಜ್ಜಿಗೆ ವಹಿಸಲಾಗಿತ್ತು. ಬಹುಶಃ ಆ ಬಳಿಕ ಅಮ್ಮನಿಗೆ ನನ್ನ ಬಿಟ್ಟಿರಲಾಗಲಿಲ್ಲ ಎನಿಸುತ್ತದೆ. ಹೀಗಾಗಿ, ಅವರು ನನ್ನನ್ನು ಕರೆದುಕೊಂಡು ಹೋದರು’ ಎಂದಿದ್ದಾರೆ ಶಾರುಖ್ ಖಾನ್.
View this post on Instagram
ಇದನ್ನೂ ಓದಿ: Fact Check: ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಮಲಗಿರುವ ಶಾರುಖ್ ಖಾನ್ ಫೋಟೋ ವೈರಲ್
‘ಚೆನ್ನೈ ಎಕ್ಸ್‌ಪ್ರೆಸ್’ ಸಿನಿಮಾ ಪ್ರಚಾರಕ್ಕಾಗಿ ಶಾರುಖ್ ಖಾನ್ ಅವರು ಈ ವಿಚಾರವನ್ನು ಹೇಳಿದ್ದರು ಎನ್ನುವ ಚರ್ಚೆ ಆಗಿನ ಕಾಲದಲ್ಲಿ ಹುಟ್ಟಿಕೊಂಡಿತ್ತು. ಆದರೆ, ಅನೇಕರು ಇದನ್ನು ತಳ್ಳಿ ಹಾಕಿದ್ದರು. ಕಳೆದ ವರ್ಷ ಶಾರುಖ್ ಖಾನ್ ನಟನೆಯ ‘ಜವಾನ್’, ‘ಪಠಾಣ್’, ‘ಡಂಕಿ’ ಸಿನಿಮಾಗಳು ರಿಲೀಸ್ ಆಗಿ ಗೆಲುವು ಕಂಡವು. ಈ ವರ್ಷ ಅವರ ನಟನೆಯ ಯಾವುದೇ ಚಿತ್ರ ರಿಲೀಸ್ ಆಗಿಲ್ಲ, ಅನೌನ್ಸ್ ಕೂಡ ಆಗಿಲ್ಲ ಅನ್ನೋದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಅವರು ‘ಕಿಂಗ್’ ಹೆಸರಿನ ಸಿನಿಮಾದಲ್ಲಿ ನಟಿಸಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:58 am, Wed, 11 December 24