ಮಾಜಿ ಬಾಯ್​ಫ್ರೆಂಡ್​ ಅನ್ನು ಕೊಂದ ಬಾಲಿವುಡ್ ನಟಿ ನರ್ಗೀಸ್ ಫಕ್ರಿ ಸಹೋದರಿ

|

Updated on: Dec 03, 2024 | 12:28 PM

Nargis Fakhri: ಬಾಲಿವುಡ್ ಹಾಟ್ ನಟಿ ನರ್ಗೀಸ್ ಫಕ್ರಿಯ ಸಹೋದರಿ ಆಲಿಯಾ ಫಕ್ರಿ ಅಮೆರಿಕದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ಮಾಜಿ ಪ್ರಿಯಕರ ಹಾಗೂ ಆತನ ಹಾಲಿ ಗೆಳತಿಯನ್ನು ಕೊಂದ ಆರೋಪ ಆಲಿಯಾ ಮೇಲಿದೆ.

ಮಾಜಿ ಬಾಯ್​ಫ್ರೆಂಡ್​ ಅನ್ನು ಕೊಂದ ಬಾಲಿವುಡ್ ನಟಿ ನರ್ಗೀಸ್ ಫಕ್ರಿ ಸಹೋದರಿ
Nargis Fakhri sister
Follow us on

ನರ್ಗೀಸ್ ಫಕ್ರಿ, ತಮ್ಮ ಗ್ಲಾಮರಸ್ ಲುಕ್​ನಿಂದ ಸಿನಿ ಪ್ರೇಮಿಗಳನ್ನು ಕೊಲ್ಲುತ್ತಿದ್ದಾರೆ ಆದರೆ ಅತ್ತ ಅಮೆರಿಕದಲ್ಲಿ ನರ್ಗೀಸ್ ಫಕ್ರಿ ಸಹೋದರಿ ತಮ್ಮ ಮಾಜಿ ಬಾಯ್​ಫ್ರೆಂಡ್ ಅನ್ನು ಕೊಂದೇ ಬಿಟ್ಟಿದ್ದಾರೆ! ನರ್ಗೀಸ್ ಫಕ್ರಿ ಸಹೋದರಿ ಆಲಿಯಾ ಫಕ್ರಿಯವನ್ನು ಅಮೆರಿಕ ಪೊಲೀಸರು ಕೊಲೆ ಆರೋಪದಲ್ಲಿ ಬಂಧಿಸಿದ್ದಾರೆ. ಆಲಿಯಾ ಫಕ್ರಿ, ತನ್ನ ಮಾಜಿ ಬಾಯ್​ಫ್ರೆಂಡ್​ ಅನ್ನು ಜೀವಂತ ಸುಟ್ಟು ಹಾಕಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ.

ಅಮೆರಿಕದ ಕ್ವೀನ್ಸ್​ನಲ್ಲಿ ವಾಸವಿರುವ ನರ್ಗೀಸ್ ಫಕ್ರಿ ಸಹೋದರಿ ಆಲಿಯಾ ಫಕ್ರಿ (43), ಕಳೆದ ತಿಂಗಳು ತನ್ನ ಮಾಜಿ ಬಾಯ್​ಫ್ರೆಂಡ್​ ಜಾಕೋಬ್ಸ್ (33)​ ಮನೆಗೆ ನುಗ್ಗಿ ಆತನ ಮನೆಯ ಕೆಳಗಿನ ಪಾರ್ಕಿಂಗ್ ಏರಿಯಾಕ್ಕೆ ಬೆಂಕಿ ಹಾಕಿದ್ದಾರೆ. ಗರಾಜ್ ಮೇಲೆ ಕೋಣೆಯಲ್ಲಿ ಮಲಗಿದ್ದ ಜಾಕೋಬ್ಸ್ ಮತ್ತು ಆತನ ಗೆಳೆತಿ ಅನಸ್ಟಾಸಿಯಾ ಎಟ್ಟಿನಿ ಸುಟ್ಟು ಕರಕಲಾಗಿದ್ದಾರೆ. ಆರೋಪದ ಮೇಲೆ ಪೊಲೀಸರು ಆಲಿಯಾ ಫಕ್ರಿಯನ್ನು ಬಂಧಿಸಿದ್ದಾರೆ.

ಇದನ್ನೂ ಓದಿ:ರಣಬೀರ್ ಕಪೂರ್ ಬಾಳಲ್ಲಿ ಬಂದು ಹೋದ ನಟಿಯರೆಷ್ಟು?

ನವೆಂಬರ್ ತಿಂಗಳಲ್ಲಿ ಘಟನೆ ನಡೆದಿದ್ದು, ತನಗೆ ಮೋಸ ಮಾಡಿದ್ದಾನೆಂದು ಆರೋಪಿಸಿ ಆಲಿಯಾ ಫಕ್ರಿ, ಅಮೆರಿಕದ ಜಮೈಕಾ ಪ್ರದೇಶದಲ್ಲಿರುವ ಮಾಜಿ ಬಾಯ್​ಫ್ರೆಂಡ್ ಜಾಕೋಬ್ಸ್ ಮನೆಗೆ ಬೆಳಿಗಿನ ಜಾವ ಬಂದ ಆಲಿಯಾ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಈ ವೇಳೆ ‘ನೀವೆಲ್ಲ ಇಂದು ಸಾಯುತ್ತೀರಿ’ ಎಂದು ಜೋರಾಗಿ ಕಿರುಚ್ಚಿದ್ದನ್ನು ನೆರೆಯ ವ್ಯಕ್ತಿ ನೋಡಿದ್ದಾರೆ ಎಂದು ಪೊಲೀಸರು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಜಾಕೋಬ್ಸ್​ನ ಗೆಳೆತಿ ಅನಸ್ಟಾಸಿಯಾ ಎಟ್ಟಿನಿ, ಜಾಕೋಬ್ಸ್​ ಅನ್ನು ಉಳಿಸಲು ಕೋಣೆಗೆ ಓಡಿದಳಾದರೂ ಅದು ಸಾಧ್ಯವಾಗಿಲ್ಲ. ಬೆಂಕಿ ತೀವ್ರವಾಗಿ ವ್ಯಾಪಿಸಿದ ಕಾರಣ ಇಬ್ಬರೂ ಮೊದಲು ಉಸಿರುಗಟ್ಟಿ ಪ್ರಜ್ಞೆ ತಪ್ಪಿದ್ದಾರೆ ಬಳಿಕ ಬೆಂಕಿಗೆ ಆಹುತಿಯಾಗಿದ್ದಾರೆ.

ಆಲಿಯಾ ಫಕ್ರಿ ಮೇಲೆ ಕೊಲೆ ಸೇರಿದಂತೆ ಕೆಲ ಇತರೆ ಆರೋಪಗಳನ್ನು ಹೊರಿಸಲಾಗಿದ್ದು, ಪ್ರಕರಣದಲ್ಲಿ ಆಲಿಯಾಗೆ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ