AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಣಬೀರ್ ಕಪೂರ್ ಬಾಳಲ್ಲಿ ಬಂದು ಹೋದ ನಟಿಯರೆಷ್ಟು?

ರಣಬೀರ್ ಜೀವನದಲ್ಲಿ ಬಂದು ಹೋದ ಪ್ರಮುಖ ನಟಿಯರಲ್ಲಿ ದೀಪಿಕಾ ಪಡುಕೋಣೆ ಕೂಡ ಒಬ್ಬರು. 2007ರಲ್ಲಿ ಇವರ ಲವ್​ ಸ್ಟೋರಿ ಶುರುವಾಗಿ 2009ರಲ್ಲಿ ಕೊನೆ ಆಯಿತು. ಬ್ರೇಕಪ್ ಆದ ಬಳಿಕ ದೀಪಿಕಾ ಖಿನ್ನತೆಗೆ ಒಳಗಾಗಿದ್ದರು ಎನ್ನುವ ಮಾತು ಇದೆ.

ರಣಬೀರ್ ಕಪೂರ್ ಬಾಳಲ್ಲಿ ಬಂದು ಹೋದ ನಟಿಯರೆಷ್ಟು?
ರಣಬೀರ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Sep 28, 2024 | 7:52 AM

Share

ರಣಬೀರ್ ಕಪೂರ್ ಅವರು ಬಾಲಿವುಡ್​ನ ಬೇಡಿಕೆಯ ಹೀರೋ. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇದರ ಜೊತೆಗೆ ಅವರು ಲವ್ ಲೈಫ್ ಮೂಲಕ ಆಗಾಗ ಸುದ್ದಿ ಆಗಿದ್ದೂ ಇದೆ. ಈಗ ಅವರು ಆಲಿಯಾ ಭಟ್ ಅವರನ್ನು ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಾ ಇರಬಹುದು. ಆದರೆ, ಮೊದಲು ಈ ರೀತಿ ಇರಲೇ ಇಲ್ಲ. ಅವರ, ಲವರ್​ಗಳ ಪಟ್ಟಿ ತುಂಬಾನೇ ದೊಡ್ಡದಿತ್ತು. ಇಂದು (ಸೆಪ್ಟೆಂಬರ್ 28) ರಣಬಿರ್ ಜನ್ಮದಿನ. ಈ ವೇಳೆ ಅವರ ಲವ್ ಲೈಫ್ ಬಗ್ಗೆ ತಿಳಿಯೋಣ.

ಅವಂತಿಕಾ ಮಲಿಕ್: ರಣಬೀರ್ ಕಪೂರ್ ಟೀನೇಜ್​ನಲ್ಲಿರುವಾಗ ಅವಂತಿಕಾ ಜೊತೆ ಓಡಾಟ ನಡೆಸಿದ್ದರು ಎನ್ನಲಾಗಿದೆ. ಆಗ ರಣಬೀರ್ ಅವರು ನಟನೆಗೆ ಕಾಲಿಟ್ಟಿರಲಿಲ್ಲ. ಆಗಲೇ ಅವರು ಕೆಲ ವರ್ಷ ಸುತ್ತಾಟ ನಡೆಸಿದ್ದರು.

ನಂದಿತಾ ಮಹ್ತಾನಿ: ಫ್ಯಾಷನ್ ಡಿಸೈನರ್ ನಂದಿತಾ ಮಹ್ತಾನಿ ಜೊತೆ ರಣಬೀರ್ ಕಪೂರ್ ರಿಲೇಶನ್​ಶಿಪ್​ನಲ್ಲಿ ಇದ್ದರು ಎಂದು ಕೆಲವರು ವರದಿ ಮಾಡಿದರು. ಆದರೆ, ಇದನ್ನು ಅವರು ಅಲ್ಲಗಳೆಯುತ್ತಲೇ ಬಂದಿದ್ದಾರೆ.

ಸೋನಂ ಕಪೂರ್: ಬಾಲಿವುಡ್ ನಟಿ ಸೋನಂ ಕಪೂರ್ ಸಹವಾಸವನ್ನೂ ರಣಬೀರ್ ಕಪೂರ್ ಅವರು ಮಾಡಿದ್ದರು ಎಂದರೆ ನೀವು ನಂಬುತ್ತೀರಾ? ಇಬ್ಬರೂ ‘ಸಾವರಿಯಾ’ ಸಿನಿಮಾದಲ್ಲಿ ನಟಿಸಿದ್ದರು. ಇದರಿಂದ ಆಫ್ ಸ್ಕ್ರೀನ್ ಲವ್ ಶುರುವಾಗಿತ್ತು. ಆದರೆ, ಹೆಚ್ಚು ಸಮಯ ಇವರು ಇರಲಿಲ್ಲ.

ದೀಪಿಕಾ ಪಡುಕೋಣೆ: ರಣಬೀರ್ ಜೀವನದಲ್ಲಿ ಬಂದು ಹೋದ ಪ್ರಮುಖ ನಟಿಯರಲ್ಲಿ ದೀಪಿಕಾ ಪಡುಕೋಣೆ ಕೂಡ ಒಬ್ಬರು. 2007ರಲ್ಲಿ ಇವರ ಲವ್​ ಸ್ಟೋರಿ ಶುರುವಾಗಿ 2009ರಲ್ಲಿ ಕೊನೆ ಆಯಿತು. ಬ್ರೇಕಪ್ ಆದ ಬಳಿಕ ದೀಪಿಕಾ ಖಿನ್ನತೆಗೆ ಒಳಗಾಗಿದ್ದರು ಎನ್ನುವ ಮಾತು ಇದೆ. ಬ್ರೇಕಪ್ ಬಳಿಕ ಇಬ್ಬರೂ ಟಚ್​ನಲ್ಲಿ ಇದ್ದರು. ಒಟ್ಟಿಗೆ ಸಿನಿಮಾ ಕೂಡ ಮಾಡಿದರು.

ನರ್ಗಿಸ್ ಫಕ್ರಿ: ರಣಬೀರ್ ಕಪೂರ್ ಅವರು ನರ್ಗೀಸ್ ಫಕ್ರಿ ಜೊತೆ ಡೇಟ್ ಮಾಡಿದ್ದರು ಎನ್ನುವ ಮಾತಿದೆ. ಆದರೆ, ಈ ವಿಚಾರವನ್ನು ಅಧಿಕೃತವಾಗಿ ಯಾರೂ ಹೇಳಿಲ್ಲ. ಇದು ಇನ್ನೂ ಮಿಸ್ಟರಿ ಆಗಿಯೇ ಇದೆ.

ಪ್ರಿಯಾಂಕಾ ಚೋಪ್ರಾ: 2010ರಲ್ಲಿ ಪ್ರಿಯಾಂಕಾ ಚೋಪ್ರಾ ಹಾಗೂ ರಣಬೀರ್ ಕಪೂರ್ ಮಧ್ಯೆ ಏನೋ ಇತ್ತು ಎನ್ನುವ ಸುದ್ದಿ ಆಗಿತ್ತು. ಆದರೆ, ಇದಕ್ಕೆ ಪೂರಕ ಸಾಕ್ಷಿಗಳಿಲ್ಲ ಎನ್ನುತ್ತಾರೆ ಕೆಲವರು.

ಕತ್ರಿನಾ ಕೈಫ್:  ರಣಬೀರ್ ಕಪೂರ್ ಹಾಗೂ ಬಾಲಿವುಡ್ ನಟಿ ಕತ್ರಿನಾ ಕೈಫ್ ‘ಅಜಬ್ ಪ್ರೇಮ್ ಕಿ ಗಜಬ್ ಕಹಾನಿ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಇವರ ಸಂಬಂಧ ಬರೋಬ್ಬರಿ ಆರು ವರ್ಷ ಇತ್ತು. ಇವರ ಸಂಬಂಧ ಕೊನೆ ಆಗಿದ್ದು 2016ರಲ್ಲಿ. ಇವರು ಟಾಕ್ ಆಫ್ ದಿ ಟೌನ್ ಆಗಿದ್ದರು.

ಎಂಜೆಲಾ ಜಾನ್ಸನ್​: ರಣಬೀರ್ ಕಪೂರ್ ಅವರು ಮಾಡೆಲ್ ಎಂಜೆಲಾ ಜಾನ್ಸನ್ ಜೊತೆ ಸುತ್ತಾಡಿದ್ದರು. ಆದರೆ, ಇದಕ್ಕೆ ರಣಬೀರ್ ಕಪೂರ್ ಕಡೆಯಿಂದ ಯಾವುದೇ ಖಚಿತ ಮಾಹಿತಿ ಇಲ್ಲ.

ಮಹಿರಾ ಖಾನ್: ರಣಬೀರ್ ಕಪೂರ್ ಅವರ ಹೆಸರು ಪಾಕಿಸ್ತಾನಿ ನಟಿ ಮಹಿರಾ ಖಾನ್ ಜೊತೆ ತಳುಕು ಹಾಕಿಕೊಂಡಿತ್ತು. ಆದರೆ, ಈ ಸುದ್ದಿ ಹುಟ್ಟಿಕೊಳ್ಳಲು ಕಾರಣ ಏನು ಎಂಬುದು ಸರಿಯಾಗಿ ಗೊತ್ತಿಲ್ಲ.

ಇದನ್ನೂ ಓದಿ: ರಣಬೀರ್ ಕಪೂರ್ ಆಸ್ತಿ ಎಷ್ಟು? ಇದೆ ಸಾಕಷ್ಟು ಬಿಸ್ನೆಸ್

ಆಲಿಯಾ ಭಟ್: ರಣಬೀರ್ ಕಪೂರ್​ಗೆ ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ಆಲಿಯಾ ಭಟ್ ಅವರನ್ನು ಭೇಟಿ ಮಾಡಿದರು. ಆ ಬಳಿಕ ಇಬ್ಬರ ಮಧ್ಯೆ ಪ್ರೀತಿ ಆಯಿತು. 2022ರಲ್ಲಿ ಇವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅದೇ ವರ್ಷ ಮಗು ಕೂಡ ಜನಿಸಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಕೆಪಿಸಿಸಿ ಕಚೇರಿಯಲ್ಲೇ ಮೊಳಗಿತು ‘ಮುಂದಿನ ಸಿಎಂ ಡಿಕೆ ಶಿವಕುಮಾರ್’ ಘೋಷಣೆ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಹಳೆ ದ್ವೇಷಕ್ಕೆ ರೌಡಿಶೀಟರ್ ಅಪಹರಿಸಿ ಚಿತ್ರಹಿಂಸೆ: ಬೆರಳು ಕತ್ತರಿಸಿ ವಿಕೃತಿ
ಸಿಎಂ ಕುರ್ಚಿ ಕದನ: ಇಲ್ಲಿದೆ ರಾಜ್ಯ ರಾಜಕೀಯದ ಬಿಗ್​​ ಅಪ್ಡೇಟ್​!
ಸಿಎಂ ಕುರ್ಚಿ ಕದನ: ಇಲ್ಲಿದೆ ರಾಜ್ಯ ರಾಜಕೀಯದ ಬಿಗ್​​ ಅಪ್ಡೇಟ್​!
ಈ ಸರ್ಕಾರಿ ಬಸ್​​ಗಳಿಗೆ ದೇವರೇ ಗತಿ
ಈ ಸರ್ಕಾರಿ ಬಸ್​​ಗಳಿಗೆ ದೇವರೇ ಗತಿ