ರಣಬೀರ್ ಕಪೂರ್ ಆಸ್ತಿ ಎಷ್ಟು? ಇದೆ ಸಾಕಷ್ಟು ಬಿಸ್ನೆಸ್
ರಣಬೀರ್ ಕಪೂರ್ ಅವರು ರಿಯಲ್ ಎಸ್ಟೇಟ್ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಅವರು ಮುಂಬೈನ ಬಾಂದ್ರಾದಲ್ಲಿ ನಾಲ್ಕು ಬಿಎಚ್ಕೆ ಮನೆ ಹೊಂದಿದ್ದಾರೆ. ಪುಣೆಯಲ್ಲಿ 13 ಕೋಟಿಯ ಫ್ಲ್ಯಾಟ್ ಹೊಂದಿದ್ದು, ಟ್ರಂಪ್ ಟವರ್ನಲ್ಲಿ ಈ ಫ್ಲ್ಯಾಟ್ ಇದೆ.
ಬಾಲಿವುಡ್ ನಟ ರಣಬೀರ್ ಕಪೂರ್ ಅವರಿಗೆ ಇಂದು (ಸೆಪ್ಟೆಂಬರ್ 28) ಜನ್ಮದಿನ. ಕಳೆದ ವರ್ಷ ರಿಲೀಸ್ ಆದ ‘ಅನಿಮಲ್’ ಚಿತ್ರ ದೊಡ್ಡ ಮಟ್ಟದ ಯಶಸ್ಸು ಕಂಡಿತು. ಅವರು ಆರ್ಥಿಕವಾಗಿ ಸಾಕಷ್ಟು ಪ್ರಬಲರಾಗಿದ್ದಾರೆ. ಅವರು ಪ್ರತಿ ಸಿನಿಮಾಗೆ ಸಾಕಷ್ಟು ಹಣ ಪಡೆಯುತ್ತಾರೆ. ಅವರ ಆಸ್ತಿ 345 ಕೋಟಿ ರೂಪಾಯಿಗೂ ಅಧಿಕವಾಗಿ ಇದೆ.
ರಣಬೀರ್ ಕಪೂರ್ ಅವರು ಆರ್ಥಿಕವಾಗಿ ಯಶಸ್ಸು ಕಂಡಿದ್ದಾರೆ. ಅವರ ಪ್ರತಿ ವರ್ಷದ ಗಳಿಕೆ 30 ಕೋಟಿ ರೂಪಾಯಿಗೂ ಅಧಿಕವಾಗಿದೆ. ಅವರು ಪ್ರತಿ ಸಿನಿಮಾಗೆ 50 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ಈ ಮೊದಲು ರಿಲೀಸ್ ಆದ ‘ಅನಿಮಲ್’ ಚಿತ್ರಕ್ಕೆ ಅವರು ಪಡೆದಿದ್ದು 60 ಕೋಟಿ ರೂಪಾಯಿ.
ಕ್ರೀಡೆ ಬಗ್ಗೆ ಅವರಿಗೆ ಆಸಕ್ತಿ ಇದೆ. ಅವರು ಇಂಡಿಯನ್ ಸೂಪರ್ ಲೀಗ್ನಲ್ಲಿ ಮುಂಬೈ ಸಿಟಿ ಎಫ್ಸಿ ತಂಡ ಹೊಂದಿದ್ದು ಶೇ. 35 ಷೇರು ಅವರ ಬಳಿ ಇದೆ. ವಿಶೇಷ ಎಂದರೆ ಅವರಿಗೂ ಫುಟ್ಬಾಲ್ ಮೇಲೆ ಆಸಕ್ತಿ ಇದೆ. ಈ ಕಾರಣಕ್ಕೆ ಮಗಳ ಹೆಸರನ್ನು ಫುಟ್ಬಾಲ್ ಶರ್ಟ್ ಮೂಲಕ ರಿವೀಲ್ ಮಾಡಿದ್ದರು.
ಮ್ಯೂಸಿಕ್ ಸ್ಟ್ರೀಮಿಂಗ್ ಸರ್ವಿಸ್
ರಣಬೀರ್ ಕಪೂರ್ ಅವರು ಮ್ಯೂಸಿಕ್ ಸ್ಟ್ರೀಮಿಂಗ್ ಸರ್ವಿಸ್ನಲ್ಲಿ ಮಾಲೀಕತ್ವ ಹೊಂದಿದ್ದಾರೆ. ಅವರು ಸಾವನ್ ಕಂಪನಿಯ ಪಾಲುದಾರರಾಗಿದ್ದಾರೆ. 2014ರಿಂದ ರಣಬೀರ್ ಇದರ ಮಾಲಿಕತ್ವ ಹೊಂದಿದ್ದಾರೆ. ಇದರಿಂದಲೂ ಅವರಿಗೆ ಆದಾಯ ಬರುತ್ತದೆ.
ಟೆಕ್ ಇಂಡಸ್ಟ್ರಿ ಮೇಲೂ ಅವರ ಹೂಡಿಕೆ ಇದೆ. ಪುಣೆ ಮೂಲದ ಡ್ರೋನ್ ಸ್ಟಾರ್ಟ್ಅಪ್ ಕಂಪನಿ ಮೇಲೆ ಅವರು ಹಣ ಹಾಕಿದ್ದಾರೆ. ಅವರು ಇದರ ಮೇಲೆ 20 ಲಕ್ಷ ಹೂಡಿದ್ದಾರಂತೆ. ರಣಬೀರ್ ಕಪೂರ್ ಇದು ಸೇರಿ ಅನೇಕ ಕಡೆಗಳಲ್ಲಿ ಹೂಡಿಕೆ ಹೊಂದಿದ್ದಾರೆ.
ರಣಬೀರ್ ಕಪೂರ್ ಅವರು ರಿಯಲ್ ಎಸ್ಟೇಟ್ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಅವರು ಮುಂಬೈನ ಬಾಂದ್ರಾದಲ್ಲಿ ನಾಲ್ಕು ಬಿಎಚ್ಕೆ ಮನೆ ಹೊಂದಿದ್ದಾರೆ. ಪುಣೆಯಲ್ಲಿ 13 ಕೋಟಿಯ ಫ್ಲ್ಯಾಟ್ ಹೊಂದಿದ್ದು, ಟ್ರಂಪ್ ಟವರ್ನಲ್ಲಿ ಈ ಫ್ಲ್ಯಾಟ್ ಇದೆ. ಇದನ್ನು ಅವರು ಬಾಡಿಗೆ ಬಿಟ್ಟಿದ್ದು 48 ಲಕ್ಷ ರೂಪಾಯಿ ಬರುತ್ತದೆ.
ಇದನ್ನೂ ಓದಿ: ನಕಲಿ ಖಾತೆ ಸೃಷ್ಟಿಸಿಕೊಂಡಿದ್ದಾರೆ ರಣಬೀರ್ ಕಪೂರ್; ರಶ್ಮಿಕಾಗೂ ಆಗಿತ್ತು ಅಚ್ಚರಿ
ಬ್ರ್ಯಾಂಡ್ಗಳ ಪ್ರಚಾರಕ್ಕೆ ರಣಬೀರ್ ಕಪೂರ್ ಅವರು 6 ಕೋಟಿ ರೂಪಾಯಿ ಪಡೆಯುತ್ತಾರೆ. ಅವರು ಹಲವು ಬ್ರ್ಯಾಂಡ್ಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ರಣಬೀರ್ ನಿರ್ಮಾಣದಲ್ಲೂ ತೊಡಗಿದ್ದಾರೆ. ‘ಜಗ್ಗಾ ಜಾಸೂಸ್’ ಚಿತ್ರಕ್ಕೆ ಅವರು ಕೂಡ ನಿರ್ಮಾಪಕರಾಗಿದ್ದರು. ಇದರಲ್ಲಿ ಕತ್ರಿನಾ ಕೂಡ ಇದ್ದರು. ರಣಬೀರ್ ಕಪೂರ್ ಅವರು ‘ರಾಮಾಯಣ’ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಇದಲ್ಲದೆ, ‘ಲವ್ ಆ್ಯಂಡ್ ವಾರ್’ ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ. ಅವರ ಬಳಿ ದುಬಾರಿ ಕಾರುಗಳ ಕಲೆಕ್ಷನ್ ಕೂಡ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.