‘ಧೂಮ್ 4’ಗೆ ನಾಯಕ ಫಿಕ್ಸ್, ದಕ್ಷಿಣ ಭಾರತ ಸ್ಟಾರ್​ಗಿಲ್ಲ ಅವಕಾಶ

ಬಾಲಿವುಡ್​ನ ಅತ್ಯಂತ ಜನಪ್ರಿಯ ಸಿನಿಮಾ ಪ್ರಾಂಚೈಸಿ ಆಗಿರುವ ‘ಧೂಮ್’ ಪ್ರಾಂಚೈಸಿಯ ನಾಲ್ಕನೇ ಸಿನಿಮಾದ ಬಗ್ಗೆ ಚರ್ಚೆ ನಡೆದಿದ್ದು, ದಕ್ಷಿಣ ಭಾರತದ ಸ್ಟಾರ್ ಈ ಬಾರಿ ಧೂಮ್ 4ನ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ ಅದು ಸುಳ್ಳಾಗಿದೆ.

‘ಧೂಮ್ 4’ಗೆ ನಾಯಕ ಫಿಕ್ಸ್, ದಕ್ಷಿಣ ಭಾರತ ಸ್ಟಾರ್​ಗಿಲ್ಲ ಅವಕಾಶ
Follow us
ಮಂಜುನಾಥ ಸಿ.
|

Updated on: Sep 28, 2024 | 3:48 PM

ಬಾಲಿವುಡ್​ನ ಜನಪ್ರಿಯ ಮತ್ತು ಯಶಸ್ವಿ ಸಿನಿಮಾ ಸರಣಿ ‘ಧೂಮ್’. 20 ವರ್ಷದ ಹಿಂದೆ ಬಿಡುಗಡೆ ಆದ ಮೊದಲ ‘ಧೂಮ್’ ಸಿನಿಮಾ ಬಾಲಿವುಡ್​ನಲ್ಲಿ ವಿಲನ್​ಗಳ ಬಗ್ಗೆ ಇದ್ದ ಪರ್ಸೆಪ್ಷನ್ ಅನ್ನೇ ಬದಲಿಸಿತು. ಏಕೆಂದರೆ ಈ ಸಿನಿಮಾನಲ್ಲಿ ವಿಲನ್ನೇ ಹೀರೋ. ಅಂದರೆ ಕಳ್ಳರೇ ಈ ಸಿನಿಮಾದ ಹೀರೋಗಳು. ಈ ಹಿಂದೆ ‘ಧೂಮ್’ ಸಿನಿಮಾದಲ್ಲಿ ಜಾನ್ ಅಬ್ರಹಾಂ, ಹೃತಿಕ್ ರೋಷನ್ ಮತ್ತು ಆಮಿರ್ ಖಾನ್ ಅವರುಗಳು ವಿಲನ್​ಗಳಾಗಿ ಅಂದರೆ ಕಳ್ಳರ ಪಾತ್ರದಲ್ಲಿ ನಟಿಸಿದ್ದರು. ಈಗ ‘ಧೂಮ್ 4’ ಸಿನಿಮಾಕ್ಕೆ ಚರ್ಚೆ ಆರಂಭವಾಗಿದ್ದು ಸಿನಿಮಾದ ವಿಲನ್ ಪಾತ್ರದಲ್ಲಿ ದಕ್ಷಿಣ ಭಾರತದ ಸ್ಟಾರ್ ನಟ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಅದು ಸುಳ್ಳಾಗಿದೆ. ‘ಧೂಮ್ 4’ ಸಿನಿಮಾಕ್ಕೆ ಬಾಲಿವುಡ್ ನಟನನ್ನೇ ಮುಖ್ಯ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.

ಹೀರೋ, ವಿಲನ್, ಸೂಪರ್ ಹೀರೋ ಹೀಗೆ ಬೇರೆ ಬೇರೆ ರೀತಿಯ ಎಲ್ಲ ಪಾತ್ರಗಳಲ್ಲಿಯೂ ನಟಿಸಿ ಸೈ ಎನಿಸಿಕೊಂಡಿರುವ ತಮಿಳಿನ ಸ್ಟಾರ್ ನಟ ಸೂರ್ಯ ಅವರು ‘ಧೂಮ್4’ ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು. ಸಿನಿಮಾದ ಕತೆ ಅವರಿಗೆ ಒಪ್ಪಿಗೆ ಆಗಿದ್ದು, ಮುಂದಿನ ವರ್ಷ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ ಎನ್ನಲಾಗಿತ್ತು. ಪ್ಯಾನ್ ಇಂಡಿಯಾ ಸಿನಿಮಾ ಸಮಯದಲ್ಲಿ ‘ಧೂಮ್ 4’ಗೆ ದಕ್ಷಿಣದ ನಟನನ್ನು ಆಯ್ಕೆ ಮಾಡಿರುವುದು ಉತ್ತಮ ಬೆಳವಣಿಗೆ ಎನ್ನಲಾಗಿತ್ತು. ಆದರೆ ಅದು ಈಗ ಸುಳ್ಳಾಗಿದೆ.

ಇದನ್ನೂ ಓದಿ:Viral Video: ಧೂಮ್ರಪಾನಕ್ಕೆ ಬೆಲೆ ತೆರಬೇಕಾದಿತು… ಜಾಹೀರಾತಿನಲ್ಲಿ ನಟಿಸಿದ್ದ ಪುಟ್ಟ ಬಾಲಕಿ ಇವರೇ

‘ಧೂಮ್ 4’ ಸಿನಿಮಾಕ್ಕೆ ಬಾಲಿವುಡ್​ ಸ್ಟಾರ್ ನಟನನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಕೋವಿಡ್ ಬಳಿಕ ಸ್ಟಾರ್ ಗಿರಿಯನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿರುವ ರಣ್​ಬೀರ್ ಕಪೂರ್ ಈಗ ‘ಧೂಮ್ 4’ ಸಿನಿಮಾದ ವಿಲನ್ ಅಂದರೆ ಪ್ರಧಾನ ಪಾತ್ರಕ್ಕೆ ಆಯ್ಕೆ ಆಗಿದ್ದಾರೆ. ಅವರ ಇಮೇಜಿಗೆ ತಕ್ಕಂತೆ ಅವರ ಪಾತ್ರವನ್ನು ಹೆಣೆಯಲಾಗಿದೆಯಂತೆ. ರಣ್​ಬೀರ್ ಕಪೂರ್ ‘ಧೂಮ್ 4’ನಲ್ಲಿ ಸೈಬರ್ ಕಳ್ಳನ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾದ ಕತೆಯ ಬಗ್ಗೆ ಕಳೆದ ಕೆಲವು ತಿಂಗಳಿಂದಲೂ ರಣ್​ಬೀರ್, ಆದಿತ್ಯ ಚೋಪ್ರಾ ನಡುವೆ ಚರ್ಚೆಗಳು ನಡೆಯುತ್ತಲೇ ಇವೆಯಂತೆ. ಇದೀಗ ಇಬ್ಬರೂ ಚಿತ್ರಕತೆಗೆ ಒಪ್ಪಿಕೊಂಡಿದ್ದು, 2025 ರಲ್ಲಿ ಚಿತ್ರೀಕರಣ ಪ್ರಾರಂಭ ಆಗಲಿದೆ.

ರಣ್​ಬೀರ್ ಕಪೂರ್ ಪ್ರಸ್ತುತ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ರಾಮಾಯಣ’ ಸಿನಿಮಾದಲ್ಲಿ ರಾಮನ ಪಾತ್ರದಲ್ಲಿ ರಣ್​ಬೀರ್ ನಟಿಸುತ್ತಿದ್ದಾರೆ. ಅದಾದ ಬಳಿಕ ‘ಬ್ರಹ್ಮಾಸ್ತ್ರ 2’ ಸಿನಿಮಾದಲ್ಲಿ ಅವರು ನಟಿಸುವವರಿದ್ದಾರೆ. ಅದಾದ ಬಳಿಕ ಸಂಜಯ್ ಲೀಲಾ ಬನ್ಸಾಲಿಯ ಹೊಸ ಸಿನಿಮಾದಲ್ಲಿ ಆಲಿಯಾ ಭಟ್ ಜೊತೆಗೆ ನಟಿಸಲಿದ್ದಾರೆ. ಅದರ ಬಳಿಕ ಸಿದ್ಧಾರ್ಥ್ ಆನಂದ್ ನಿರ್ದೇಶನದ ಸಿನಿಮಾದಲ್ಲಿ ನಟಿಸುವ ಸಾಧ್ಯತೆ ಇದೆ. ಈ ಎಲ್ಲ ಸಿನಿಮಾಗಳು ಮುಗಿದ ಬಳಿಕವಷ್ಟೆ ‘ಧೂಮ್ 4’ ಪ್ರಾರಂಭ ಆಗಲಿದೆ. ಈ ಹಿಂದೆ ಜಾನ್ ಅಬ್ರಹಾಂ, ಹೃತಿಕ್ ರೋಷನ್ ಮತ್ತು ಆಮಿರ್ ಖಾನ್ ಅವರುಗಳು ಕಳ್ಳರ ಪಾತ್ರದಲ್ಲಿ ಮಿಂಚಿದ್ದಾರೆ. ಆಮಿರ್ ಖಾನ್ ಸಿನಿಮಾ ಹೊರತುಪಡಿಸಿ ಮೊದಲೆರಡು ಸಿನಿಮಾಗಳು ಭಾರಿ ದೊಡ್ಡ ಹಿಟ್ ಆಗಿದ್ದವು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ