ಅಮಿತಾಭ್​ ಮೊಮ್ಮಗಳ ಜತೆ ಮೀಜಾನ್ ಡೇಟಿಂಗ್?​; ಬಿಗ್​ ಬಿ ಏನು ಹೇಳಿಲ್ಲ ಎಂದ ಯುವ ನಟ

| Updated By: ರಾಜೇಶ್ ದುಗ್ಗುಮನೆ

Updated on: Jul 31, 2021 | 8:41 PM

 ಮೀಜಾನ್​ ಹಾಗೂ ನವ್ಯಾ ಡೇಟಿಂಗ್​ ಮಾಡುತ್ತಿದ್ದಾರೆ ಎನ್ನುವ ಸುದ್ದಿ 2018ರಲ್ಲೇ ಹುಟ್ಟಿಕೊಂಡಿತ್ತು. ಇಬ್ಬರೂ ಸಾಕಷ್ಟು ಬಾರಿ ಒಟ್ಟಾಗಿ ಕಾಣಿಸಿಕೊಂಡಿದ್ದರು.

ಅಮಿತಾಭ್​ ಮೊಮ್ಮಗಳ ಜತೆ ಮೀಜಾನ್ ಡೇಟಿಂಗ್?​; ಬಿಗ್​ ಬಿ ಏನು ಹೇಳಿಲ್ಲ ಎಂದ ಯುವ ನಟ
ಅಮಿತಾಭ್​ ಮೊಮ್ಮಮಗಳ ಜತೆ ಮೀಜಾನ್ ಡೇಟಿಂಗ್?​; ಬಿಗ್​ ಬಿ ಏನು ಹೇಳಿಲ್ಲ ಎಂದ ಯುವ ನಟ
Follow us on

ಕಳೆದ ವರ್ಷ ಬಾಲಿವುಡ್​ಗೆ ಎಂಟ್ರಿ ನೀಡಿದ ಮೀಜಾನ್​ ಅವರು ನಟ ಅಮಿತಾಭ್​ ಬಚ್ಚನ್​ ಮೊಮ್ಮಗಳು ನವ್ಯಾ ನವೇಲಿ ಜತೆ ಡೇಟಿಂಗ್​ ಮಾಡುತ್ತಿದ್ದಾರೆ ಎನ್ನುವ ವದಂತಿ ಇದೆ. ಈ ಬಗ್ಗೆ ಈಗ ಮೀಜಾನ್​ ಉತ್ತರ ನೀಡಿದ್ದಾರೆ. ಅಲ್ಲದೆ, ಅಮಿತಾಭ್​ ಎಂದರೆ ನನಗೆ ಭಯ ಎಂದಿದ್ದಾರೆ ಅವರು.

ಮೀಜಾನ್​ ಹಾಗೂ ನವ್ಯಾ ಡೇಟಿಂಗ್​ ಮಾಡುತ್ತಿದ್ದಾರೆ ಎನ್ನುವ ಸುದ್ದಿ 2018ರಲ್ಲೇ ಹುಟ್ಟಿಕೊಂಡಿತ್ತು. ಇಬ್ಬರೂ ಸಾಕಷ್ಟು ಬಾರಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಆದರೆ, ಅವರು ಈ ಸುದ್ದಿಯನ್ನು ಅಲ್ಲಗಳೆಯುತ್ತಲೇ ಬಂದಿದ್ದಾರೆ. ಈಗ ಅವರು ಮತ್ತೊಮ್ಮೆ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ, ಅಮಿತಾಭ್​ ಈ ವಿಚಾರದ ಬಗ್ಗೆ ಹೇಳಿದ್ದೇನು ಎನ್ನುವುದನ್ನು ಕೂಡ ಮೀಜಾನ್ ಬಾಯ್ಬಿಟ್ಟಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಮೀಜಾನ್​, ‘ನಾನು ನವ್ಯಾ ಉತ್ತಮ ಗೆಳೆಯರು. ಅವಳು ಸಿನಿಮಾ ಕುಟುಂಬದಿಂದ ಬಂದವಳು. ಅವಳಿಗೆ ಎಲ್ಲವೂ ಅರ್ಥವಾಗುತ್ತದೆ. ಈ ವದಂತಿ ನಮ್ಮ ಗೆಳೆತನಕ್ಕೆ ಯಾವುದೇ ಅಡ್ಡಿಉಂಟು ಮಾಡಿಲ್ಲ’ ಎಂದಿದ್ದಾರೆ.

ನವ್ಯಾ-ಮೀಜಾನ್​ ಡೇಟಿಂಗ್​ ವದಂತಿ ಬಗ್ಗೆ ಅಮಿತಾಭ್​ ಹೇಳಿದ್ದೇನು ಎನ್ನುವ ಪ್ರಶ್ನೆ ಕೇಳಲಾಯಿತು. ಇದಕ್ಕೆ ಮೀಜಾನ್​ ಉತ್ತರ ನೀಡಿದ್ದಾರೆ. ‘ನನಗೆ ಅಮಿತಾಭ್​ ಕಂಡರೆ ಭಯ. ಅವರನ್ನು ಕಂಡರೆ ಬಹುತೇಕರಿಗೆ ಭಯ ಆಗುತ್ತದೆ ಎನ್ನುವುದು ನನ್ನ ನಂಬಿಕೆ. ಈ ವದಂತಿ ಬಗ್ಗೆ ಅಮಿತಾಭ್​ ಎಂದಿಗೂ ಪ್ರಶ್ನೆ ಮಾಡಿಲ್ಲ. ಆ ವಿಚಾರವನ್ನು ಅವರು ತೆಗೆದೇ ಇಲ್ಲ’ ಎಂದಿದ್ದಾರೆ ಅವರು.

ಸಂಜಯ್​ ಲೀಲಾ ಬನ್ಸಾಲಿ ನಿರ್ಮಾಣದ ‘ಮಲಾಲ್’​ ಸಿನಿಮಾ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಟ್ಟವರು ಮೀಜಾನ್​. ಈ ಸಿನಿಮಾ 2019ರಲ್ಲಿ ತೆರೆಗೆ ಬಂದಿತ್ತು. ಇತ್ತೀಚೆಗೆ ರಿಲೀಸ್​ ಆದ ‘ಹಂಗಾಮ 2’ ಸಿನಿಮಾದಲ್ಲೂ ಮೀಜಾನ್​ ನಟಿಸಿದ್ದಾರೆ. ಈ ಸಿನಿಮಾ ಡಿಸ್ನಿ ಪ್ಲಸ್​ ಹಾಟ್​ಸ್ಟಾರ್​ನಲ್ಲಿ ರಿಲೀಸ್​ ಆಗಿದೆ. ಶಿಲ್ಪಾ ಶೆಟ್ಟಿ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ವಿಮರ್ಶೆಯಲ್ಲಿ ಸೋತಿದೆ. ಇದು ಶಿಲ್ಪಾ ಶೆಟ್ಟಿ ಕಮ್​ಬ್ಯಾಕ್​ ಸಿನಿಮಾ ಆಗಿತ್ತು.

ಅಮಿತಾಭ್​ ಬಚ್ಚನ್​ ಹಾಗೂ ಜಯಾ ಬಚ್ಚನ್​ ದಂಪತಿ ಮಗಳು ಶ್ವೇತಾ ಬಚ್ಚನ್​. ಇವರಿಗೆ ಜನಿಸಿದ್ದು ನವ್ಯಾ. ನವ್ಯಾ ಹುಟ್ಟಿದ್ದು 1997ರಲ್ಲಿ. ಇವರು ತಮ್ಮದೇ ಉದ್ಯಮ ಹೊಂದಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ನವ್ಯಾಗೆ ಲಕ್ಷಾಂತರ ಹಿಂಬಾಲಕರಿದ್ದಾರೆ.

ಇದನ್ನೂ ಓದಿ:ರಸ್ತೆ ಅಗಲೀಕರಣದಲ್ಲಿ ನಾಶವಾಗಲಿದೆ ಅಮಿತಾಭ್​ ಬಂಗಲೆಯ ಒಂದು ಭಾಗ 

ಬಾಹುಬಲಿ ಬಜೆಟ್​ ಮೀರಿಸಲಿದೆ ಪ್ರಭಾಸ್​, ಅಮಿತಾಭ್​, ದೀಪಿಕಾ ಪಡುಕೋಣೆ ಕಾಂಬಿನೇಷನ್​ ಸಿನಿಮಾ   

Published On - 8:37 pm, Sat, 31 July 21